Site icon Vistara News

EV Vehicles : ಸರಕಾರಿ ಇಲಾಖೆಯಲ್ಲಿ ಎಲೆಕ್ಟ್ರಿಕ್​ ವಾಹನಗಳನ್ನಷ್ಟೇ ಬಳಸಲು ಹಿಮಾಚಲ ಪ್ರದೇಶ ಸರಕಾರ ತೀರ್ಮಾನ

Himachal Pradesh government has decided to use only electric vehicles in government departments

#image_title

ಶಿಮ್ಲಾ: ವಾಹನಗಳ ಉಂಟು ಮಾಡುತ್ತಿರುವ ಪರಿಸರ ಮಾಲಿನ್ಯ ಅಪರಿಮಿತ ಎಂಬುದು ಅಧ್ಯಯನಗಳಿಂದ ತಿಳಿದುಬರುತ್ತಿವೆ. ಅದರಲ್ಲೂ ನಗರ ಪ್ರದೇಶಗಳ ವಾತಾವರಣವನ್ನು ವಾಹನಗಳ ಹೊಗೆ ಹದಗೆಡಿಸಿದೆ. ಬೆಂಗಳೂರಿನಂಥ ನಗರಗಳಲ್ಲಿ ಇದರ ಪರಿಣಾಮ ನೇರವಾಗಿ ಗೊತ್ತಾಗದಿದ್ದರೂ ಪರೋಕ್ಷ ಅನುಭವಕ್ಕೆ ಬರುತ್ತಿದೆ. ಆದರೆ, ಶೀತವಲಯ ಹಾಗೂ ಹಿಮದಿಂದ ಆವರಿಸಿಕೊಳ್ಳುವ ಹಿಮಾಚಲ ಪ್ರದೇಶದಲ್ಲಿ ಇದು ಬೇಗನೆ ಅರಿವಿಗೆ ಬರುತ್ತಿದೆ. ಪ್ರಾಕೃತಿಕ ಅಸಮತೋಲನಗಳು ಕಣ್ಣಿಗೆ ಕಟ್ಟುತ್ತಿವೆ. ಹೀಗಾಗಿ ಅಲ್ಲಿನ ಸರಕಾರ ಸರಕಾರಿ ವಾಹನಗಳನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್​ ವಾಹನಗಳನ್ನಾಗಿ (EV Vehicles) ಪರಿವರ್ತಿಸಲು ಮುಂದಾಗಿದೆ.

ಹಿಮಾಚಲ ಪ್ರದೇಶ ಸಾರಿಗೆ ಇಲಾಖೆಯು ಇಂಥದ್ದೊಂದು ತೀರ್ಮಾನಕ್ಕೆ ಬಂದಿದ್ದು, ಸರಕಾರಿ ಇಲಾಖೆಗಳಲ್ಲಿರುವ ಅಷ್ಟೂ ವಾಹನಗಳನ್ನು ಇವಿಗಳಾಗಿ ಪರವರ್ತಿಸುವ ಯೋಜನೆ ರೂಪಿಸಿಕೊಂಡಿದೆ. ಮೊದಲ ಹಂತದಲ್ಲಿ ಅಲ್ಲಿನ ಸರಕಾರಿ ಬಸ್​ಗಳಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ಒಟ್ಟು 300 ಇವಿ ಬಸ್​ಗಳನ್ನು ಈಗಾಗಲೇ ರಸ್ತೆಗೆ ಇಳಿಸಲಾಗಿದೆ. ಅದಕ್ಕಾಗಿ 400 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಅದೇ ರೀತಿ 2025ರ ವೇಳೆಗೆ ಎಚ್ಆರ್​ಟಿಸಿಯ ಎಲ್ಲ ಬಸ್​ಗಳನ್ನು ಇವಿ ಬಸ್​​ಗಳಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ : Union Budget 2023 : ಲೀಥಿಯಮ್​ ಬ್ಯಾಟರಿ ತಯಾರಿಗೆ ಬೆಂಬಲ, ಇನ್ನು ಮುಂದೆ ಇವಿ ವಾಹನಗಳು ಅಗ್ಗ

ಶಿಮ್ಲಾ ಸೇರಿದಂತೆ ಹಿಮಾಚಲ ಪ್ರದೇಶದ ಪ್ರಾಕೃತಿಕ ಸೌಂದರ್ಯವುಳ್ಳ ಪ್ರದೇಶಗಳಿಗೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾಹನಗಳ ಓಡಾಟ ಹೆಚ್ಚಳದಿಂದ ಅಲ್ಲಿ ಇಂಗಾಲದ ಡೈಆಕ್ಸೈಡ್​ ಸೇರಿದಂತೆ ಎಲ್ಲ ರೀತಿಯ ಅಪಾಯಕಾರಿ ರಾಸಾಯನಿಕಗಳ ಪ್ರಭಾವ ಹೆಚ್ಚಾಗಿದೆ. ಇದು ಅಲ್ಲಿನ ಪರಿಸಕ್ಕೆ ಹಾನಿ ಮಾಡುತ್ತಿದೆ. ಹೀಗಾಗಿ ಎಲೆಕ್ಟ್ರಿಕ್​ ವಾಹನಗಳನ್ನು ಬಳಸಲು ಮುಂದಾಗಿದೆ.

Exit mobile version