ನವ ದೆಹಲಿ: ಜಪಾನ್ ಮೂಲದ ಕಾರು ತಯಾರಿಕಾ ಕಂಪನಿ ಹೋಂಡಾ ತನ್ನ ಪ್ರೀಮಿಯರ್ ಸೆಡಾನ್ ಕಾರು ಹೋಂಡಾ ಸಿಟಿಗೆ (Honda City ) ದೊಡ್ಡ ಮಟ್ಟದ ಡಿಸ್ಕೌಂಟ್ ಘೋಷಿಸಿದೆ. ಸುಮಾರು 70 ಸಾವಿರ ರೂಪಾಯಿ ತನಕ ಆಫರ್ ಘೋಷಣೆ ಮಾಡಿದೆ. ಯಾಕೆ ಗೊತ್ತೇ? ಹೋಂಡಾ ಸಿಟಿಯ ಫೇಸ್ಲಿಫ್ಟ್ ಕಾರು ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಇಳಿಯಲಿದ್ದು, ಹಳೆ ಕಾರಿಗೆ ಬಿಗ್ ಡಿಸ್ಕೌಂಟ್ ನೀಡಲು ಮುಂದಾಗಿದೆ. 2023ರ ಮಾರ್ಚ್ನಲ್ಲಿ ಆರನೇ ಪೀಳಿಗೆಯ ಹೋಂಡಾ ಸಿಟಿ ರಸ್ತೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ 2020ಕ್ಕೆ ಬಿಡುಗಡೆಗೊಂಡಿರುವ ಐದನೇ ಪೀಳಿಗೆಯ ಕಾರಿಗೆ ಆಫರ್ ನೀಡುತ್ತಿದೆ.
ಮ್ಯಾನುಯಲ್ ಹಾಗೂ ಸಿವಿಟಿ ಎಂಜಿನ್ ಹೊಂದಿರುವ ಕಾರಿಗೆ ದರ ರಿಯಾಯಿತಿ ದೊರೆಯುತ್ತಿದೆ. ಆದರೆ, ಮ್ಯಾನುಯಲ್ ವೇರಿಯೆಂಟ್ಗೆ ಗರಿಷ್ಠ ಆಫರ್ ದೊರೆಯಲಿದೆ. 30 ಸಾವಿರ ರೂಪಾಯಿಯ ಕ್ಯಾಶ್ ಡಿಸ್ಕೌಂಟ್ ದೊರೆಯಲಿದ್ದು, 32, 493 ರೂಪಾಯಿಯ ಆಕ್ಸೆಸರಿಗಳು ಸಿಗಲಿದೆ. 20 ಸಾವಿರ ರೂಪಾಯಿ ಎಕ್ಚೇಂಜ್ ಬೋನಸ್ ಹಾಗೂ 5 ಸಾವಿರ ರೂಪಾಯಿ ಲಾಯಲಿಟಿ ಬೋನಸ್ ಕೊಡಲಿದೆ. 8 ಸಾವಿರ ರೂಪಾಯಿ ಕಾರ್ಪೊರೇಟ್ ಡಿಸ್ಕೌಂಟ್ ಹಾಗೂ 7 ಸಾವಿರ ರೂಪಾಯಿ ಹೋಂಡಾ ಕಾರ್ ಎಕ್ಸ್ಚೇಂಜ್ ಬೋನಸ್ ದೊರೆಯಲಿದೆ.
ಇದೇ ವೇಳೆ ಸಿವಿಟಿ ಆವೃತ್ತಿಯ ಕಾರಿಗೆ 20 ಸಾವಿರ ರೂಪಾಯಿ ಡಿಸ್ಕೌಂಟ್, 21, 634 ರೂಪಾಯಿ ಆಕ್ಸೆಸರಿಗಳು ಸಿಗಲಿವೆ. 20 ಸಾವಿರ ರೂಪಾಯಿ ಎಕ್ಸ್ಚೇಂಜ್ ಬೋನಸ್, ಲಾಯಲಿಟಿ ಹಾಗೂ ಕಾರ್ಪೊರೇಟ್ ಡಿಸ್ಕೌಂಟ್ಗಳೂ ಇವೆ. ಫೆಬ್ರವರಿ ಅಂತ್ಯದ ತನಕ ಈ ಡಿಸ್ಕೌಂಟ್ ಚಾಲ್ತಿಯಲ್ಲಿರುತ್ತದೆ.
ಹೊಸ ಹೋಂಡಾ ಸಿಟಿಯ ವಿಶೇಷತೆಗಳೇನು?
ಹೊಸ ವಿನ್ಯಾಸದ ಬಂಪರ್, ಗ್ರಿಲ್, ಕ್ರೋಮ್ ಬಾರ್ ಸೇರಿದಂತೆ ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಇಂಟೀರಿಯರ್ನ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳ ನಿರೀಕ್ಷೆಯಿಲ್ಲ. ಆದರೆ ಹೆಚ್ಚುವರಿ ಫೀಚರ್ಗಳು ದೊರೆಯಬಹುದು ಎನ್ನಲಾಗಿದೆ.
ಇದನ್ನೂ ಓದಿ : Honda Amaze | ಇನ್ನು ಮುಂದೆ ಹೋಂಡಾ ಅಮೇಜ್ನಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಇರುವುದಿಲ್ಲ; ಕಾರಣವೇನು?
ಕೇಂದ್ರ ಸರಕಾರ ಹೊಸ ಎಂಜಿನ್ ನಿರ್ಮಾಣದಲ್ಲಿ ಹೊಸ ಮಾನದಂಡಗಳನ್ನು ಪ್ರಕಟಿಸಿದೆ. ಹೀಗಾಗಿ ಡೀಸೆಲ್ ಆವೃತ್ತಿಯ ಹೋಂಡಾ ಸಿಟಿ ಕಾರು ಲಭ್ಯವಿರದು. ಆದರೆ, ಹೆಚ್ಚುವರಿ ಮೈಲೇಜ್ಗಾಗಿ ಹೈಬ್ರಿಡ್ ಕಾರನ್ನು ಮಾರಾಟಕ್ಕೆ ಇಳಿಸುವ ಸಾಧ್ಯತೆಗಳಿವೆ.