Site icon Vistara News

Hond Dio 125 : ಹೋಂಡಾ ಡಿಯೋ 125 ಸ್ಕೂಟರ್ ಬಿಡುಗಡೆ, ಬೆಲೆ ಮತ್ತಿತರ ಮಾಹಿತಿ ಇಲ್ಲಿದೆ…

Honda Dio 125

ಬೆಂಗಳೂರು: ಜಪಾನ್​ ಮೂಲದ ಹೋಂಡಾ ಮೋಟಾರ್​ ಸೈಕಲ್​ನ ಜನಪ್ರಿಯ ಸ್ಕೂಟರ್​​ ಡಿಯೋ 125 ಭಾರತದಲ್ಲಿ ಬಿಡುಗಡೆಗೊಂಡಿದೆ. ಹೋಂಡಾ ಕಂಪನಿಯು ತನ್ನ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಸ್ಕೂಟರ್​ನ ಟೀಸರ್​ಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಅಭಿಮಾನಿಗಳಿಗೆ ಸ್ಕೂಟನ್​ನ ದರ್ಶನ ನೀಡಲಾಗಿದೆ. ಹೊಸ ಸ್ಕೂಟರ್​​ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ 83,400, 91,300 ರೂಪಾಯಿ.

ಡಿಯೋ 125 ಸ್ಕೂಟರ್​ನಲ್ಲಿ ತನ್ನದೇ ಬ್ರಾಂಡ್​ ಗ್ರಾಜಿಯಾ ಮತ್ತು ಆಕ್ಟಿವಾ 125 ಸ್ಕೂಟರ್​ಗೆ ಬಳಸಿರುವ ಎಂಜಿನ್ ಅಳವಡಿಸಲಾಗಿದೆ. ಎಂಜಿನ್ ಸಾಮರ್ಥ್ಯದ ಕುರಿತು ಯಾವುದೇ ಮಾಹಿತಿ ನೀಡದಿದ್ದರೂ ಇತರ ಎರಡು ಸ್ಕೂಟಗಳಂತೆಯೇ 8.3 ಬಿಎಚ್​​ಪಿ ಮತ್ತು 10.4 ಎನ್ಎಂ ಟಾರ್ಕ್​ ಬಿಡುಗಡೆ ಮಾಡುವುದು ಖಚಿತ. ಅಂಡರ್​ಬೋನ್​ ಪ್ರೇಮ್​ ಬಳಕೆ ನಿಲ್ಲಿಸಲಾಗಿದ್ದು, ಟೆಲಿಸ್ಕೋಪಿಕ್ ಫೋರ್ಕ್ / ಮೊನೊಶಾಕ್ ಸೆಟ್ ಅಪ್ ನೀಡಲಾಗಿದೆ. ಇದರೆಲ್ಲರ ಪರಿಣಾಮವಾಗಿ ಹೊಸ ಡಿಯೊ 125 ಸ್ಕೂಟರ್​ 171 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದೆ.

ಡಿಯೋ 125 ಸ್ಕೂಟರ್, ದೇಶದ ಇತರ 125 ಸಿಸಿ ಸ್ಕೂಟರ್​​ಗಳಂತೆ, ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಆಯ್ಕೆಯೊಂದಿಗೆ ಬರುತ್ತದೆ, ಮಾರಾಟವಾಗುತ್ತಿರುವ ಇತರ ಎಲ್ಲಾ ಹೋಂಡಾ ಸ್ಕೂಟರ್ ಗಳಂತೆ, ಡಿಯೋ 125 ಸ್ಕೂಟರ್​ನಲ್ಲಿ 12-ಇಂಚಿನ / 10-ಇಂಚಿನ (ಫ್ರಂಟ್ / ರಿಯರ್) ವ್ಹೀಲ್ ಸೆಟಪ್​​ಗಳಿವೆ.

ಹೋಂಡಾ ಡಿಯೋ 125 ವಿಶೇಷತೆಗಳು

ಡಿಯೋ 125 ಸ್ಕೂಟರ್​ನಲ್ಲಿ ಸ್ಟಾರ್ಟ್/ಸ್ಟಾಪ್ ಸಿಸ್ಟಮ್, ಸೈಲೆಂಟ್ ಸ್ಟಾರ್ಟರ್, ಡಿಜಿಟಲ್ ಡ್ಯಾಶ್ ಮತ್ತು ಎಲ್ಇಡಿ ಹೆಡ್​ಲೈಟ್​ನಂಥ ಫೀಚರ್​ಗಳಿವೆ. ಸಹಜವಾಗಿ ಸ್ಕೂಟರ್ ಗಳನ್ನು ಇತರ ಎಲ್ಲಕ್ಕಿಂತ ದ್ವಿಚಕ್ರವಾಹನಕ್ಕಿಂತ ಹೆಚ್ಚಾಗಿ ದೈನಂದಿನ ಓಡಾಟಕ್ಕೆ ಬಳಸಲಾಗುತ್ತದೆ. ಡಿಯೋ 125 ಸ್ಕೂಟರ್​ನಲ್ಲಿ 18 ಲೀಟರ್ ಅಂಡರ್ ಸೀಟ್ ಬೂಟ್ ಮತ್ತು ಹೊರಗಡೆ ಫ್ಯೂಯಲ್ ಫಿಲ್ಲರ್ ಕ್ಯಾಪ್ ಇದೆ. ಇದನ್ನು ನಿಯಂತ್ರಿಸಲು ಡ್ಯುಯಲ್-ಫಂಕ್ಷನ್ ಸ್ವಿಚ್ ಆಯ್ಕೆ ನೀಡಲಾಗಿದೆ.

ಇದದನ್ನೂ ಓದಿ : Honda Elevate : ಹೊಸ ಎಸ್​ಯುವಿಯ ಬುಕಿಂಗ್ ಜುಲೈ 3ರಿಂದ ಆರಂಭ, ಟೋಕನ್​ ಮೊತ್ತ ಇತ್ಯಾದಿ ವಿವರ ಇಲ್ಲಿದೆ

ಡಿಯೋ 125 ಸ್ಕೂಟರ್ ಅನ್ನು 10 ವರ್ಷಗಳ ವಾರಂಟಿಯೊಂದಿಗೆ ಖರೀದಿಸಬಹುದು. ಮೊದಲ 3 ವರ್ಷಗಳ ಸ್ಟಾಂಡರ್ಡ್​ ವಾರಂಟಿ ಮತ್ತು ಗ್ರಾಹಕರು ಬಯಸಿದರೆ ಇನ್ನೂ 7 ವರ್ಷಗಳವರೆಗೆ ವಿಸ್ತರಿಸಬಹುದು.

ಬೆಲೆ ಮತ್ತು ಪ್ರತಿಸ್ಪರ್ಧೆ

ಹೋಂಡಾ ಡಿಯೋ 125 ಸ್ಟ್ಯಾಂಡರ್ಡ್ ವೇರಿಯೆಂಟ್​ ಬೆಲೆಯು 83,400 ರೂಪಾಯಿಗಳಾದರೆ, ಸ್ಮಾರ್ಟ್ ವೇರಿಯೆಂಟ್​​ಗೆ 91,300 ರೂಪಾಯಿಗಳು. ಸುಜುಕಿ ಅವೆನಿಸ್ (87,800 – 92,300 ರೂಪಾಯಿ) ಮತ್ತು ಯಮಹಾ ರೇ ಝಡ್ಆರ್ 125 ಫೈ-ಹೈಬ್ರಿಡ್ ( 84,230 – ರೂ. 91,330 ರೂಪಾಯಿ) ನಂತಹ ಜಪಾನ್​ ಮೂಲದ ಇತರ 125 ಸಿಸಿ ಸ್ಕೂಟರ್ ಗಳು ಇದಕ್ಕೆ ಪ್ರತಿಸ್ಪರ್ಧಿಗಳಾಗಿವೆ. ಈ ಬೆಲೆಯಲ್ಲಿ, ಡಿಯೋ 125 ತನ್ನ ಜಪಾನಿನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕುತ್ತದೆ ಹಾಗೂ ಡಿಸ್ಕ್ ಬ್ರೇಕ್ ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ.

Exit mobile version