ಮುಂಬಯಿ: ಹೋಂಡಾ ಮೋಟಾರ್ ಸೈಕಲ್ ಕಂಪನಿಯ (Honda Motorcycle) 350 ಸಿಸಿ ಸಾಮರ್ಥ್ಯದ ಸಿಬಿ350 ಹಾಗೂ ಸಿಬಿ350ಆರ್ಎಸ್ ಬೈಕ್ನ 2023ರ ಆವೃತ್ತಿ ಭಾರತದಲ್ಲಿ ಬಿಡುಗಡೆಯಾಯಿತು. ಎರಡೂ ಬೈಕ್ಗಳ ಎಂಜಿನ್ನಲ್ಲಿ ಒಬಿಡಿ2 ತಾಂತ್ರಿಕತೆ ಅಳವಡಿಸಲಾಗಿದೆ. ಬೈಕ್ನ ಬೆಲೆ ಅನುಕ್ರಮವಾಗಿ 2.10 ಲಕ್ಷ ರೂಪಾಯಿ ಹಾಗೂ 2.15 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. (ಎಕ್ಸ್ ಶೋರೂಮ್ ಬೆಲೆ).
ಎರಡೂ ಬೈಕ್ಗಳು ಮೂರು ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಡಿಎಲ್ಎಕ್ಸ್, ಡಿಎಲ್ಎಕ್ಸ್ ಪ್ರೊ ಮೊದಲೆರಡು ವೇರಿಯೆಂಟ್ಗಳಾಗಿದ್ದು ಸಿಬಿ350ಯಲ್ಲಿ ಡಿಎಲ್ಎಕ್ಸ್ ಪ್ರೊ ಕ್ರೋಮ್ ಹಾಗೂ ಸಿಬಿ350 ಆರ್ಎಸ್ನಲ್ಲಿ ಡಿಎಲ್ಎಕ್ಸ್ ಪ್ರೊ ಡ್ಯುಯಲ್ ಎಂಬ ಟಾಪ್ ವೇರಿಯೆಂಟ್ಗಳಿವೆ.
ಇದನ್ನೂ ಓದಿ : Honda Car : ಪಾಕಿಸ್ತಾನದ ಉತ್ಪಾದನಾ ಘಟಕ ಸ್ಥಗಿತಗೊಳಿಸಿದ ಹೋಂಡಾ
ಎರಡೂ ಬೈಕ್ಗಳಲ್ಲಿ ಹಿಂದಿನ ಆವೃತ್ತಿಯಲ್ಲಿದ್ದ ಡಿಜಿಟಲ್ ಕ್ಲಸ್ಟರ್ ಹಾಗೂ ಹೋಂಡಾ ಸೆಲೆಕ್ಟೇಬಲ್ ಟಾರ್ಕ್ ಕಂಟ್ರೋಲ್ ವ್ಯವಸ್ಥೆ ನೀಡಲಾಗಿದೆ. ಆದರೆ, ಸಿಬಿ350 ಆರ್ಎಸ್ನಲ್ಲಿ ಹೋಂಡಾ ಸ್ಮಾರ್ಟ್ ಕಂಟ್ರೋಲ್ ಸಿಸ್ಟಮ್ ಫೀಚರ್ ನೀಡಲಾಗಿದ್ದರೆ, ಸಿಬಿ350ಯಲ್ಲಿ ಹೊಸ ಮಾದರಿ ಸ್ಪ್ಲಿಟ್ ಸೀಟ್ ಆಯ್ಕೆಯನ್ನೂ ಕೊಡಲಾಗಿದೆ.
ಎಂಜಿನ್ ಸಾಮರ್ಥ್ಯವೇನು
ಎರಡೂ ಬೈಕ್ನಲ್ಲಿ ಸಿಂಗಲ್ ಸಿಲಿಂಡರ್ ಏರ್ಕೂಲ್ಡ್ ಎಂಜಿನ್ ಹೊಂದಿದ್ದು 350 ಸಿಸಿ ಸಾಮರ್ಥ್ಯ ಹೊಂದಿದೆ. ಇದು 3000 ಆರ್ಪಿಎಮ್ನಲ್ಲಿ 20.78 ಬಿಎಚ್ಪಿ ಪವರ್ ಹಾಗೂ 30 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. 5 ಸ್ಪೀಡ್ನ ಗೇರ್ ಬಾಕ್ಸ್ ಇದರಲ್ಲಿದ್ದು ಸ್ಲಿಪ್ ಆ್ಯಂಡ್ ಅಸಿಸ್ಟ್ ಕ್ಲಚ್ ಇದೆ.
ಬೈಕ್ನ ಮುಂಭಾಗದಲ್ಲಿ 310 ಎಮ್ಎಮ್ ಡಿಸ್ಕ್ ಬ್ರೇಕ್ ಹಾಗೂ ಹಿಂಬದಿ 240 ಎಮ್ಎಮ್ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಹೋಂಡಾ ಮೋಟಾರ್ಸೈಕಲ್ ಕಂಪನಿ ತನ್ನ ಮೋಟಾರ್ ಸೈಕಲ್ಗಳಿಗೆ ಕಸ್ಟಮೈಸ್ಡ್ ಕಿಟ್ಗಳನ್ನು ಬಿಡುಗಡೆ ಮಾಡಿದೆ. ಕಂಫರ್ಟ್ ಕಿಟ್, ಟೂರರ್ ಕಿಟ್, ಕೆಫೆ ರೇಸರ್ ಕಿಟ್ ಹಾಗೂ ಸೋಲೋ ಕಿಟ್ಗಳು ಇಲ್ಲಿ ಲಭ್ಯವಿದೆ. ಈ ಆಕ್ಸೆಸರಿಗಳಿಗೂ ಒಂದು ವರ್ಷ ಬ್ರಾಂಡ್ ವಾರಂಟಿ ನೀಡಲಾಗಿದೆ.