ಮುಂಬಯಿ: ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಕಂಪನಿ ಶುಕ್ರವಾರ (ಮಾರ್ಚ್ 31ರಂದು) ಎಸ್ಪಿ 125 ಬೈಕ್ನ ಸುಧಾರಿತ ಆವೃತ್ತಿಯನ್ನು ಭಾರತದ ರಸ್ತೆ ಇಳಿಸಿತು. ಇದರ ಆರಂಭಿಕ ಬೆಲೆ 85,131 ರೂಪಾಯಿಗಳಾಗಿದ್ದು, ಡಿಸ್ಕ್ ಬ್ರೇಕ್ ವೇರಿಯೆಂಟ್ ಬೈಕ್ನ ಬೆಲೆ 89,131 ರೂಪಾಯಿಗಳು. (ಇದು ನವ ದೆಹಲಿಯ ಎಕ್ಸ್ ಶೋರೂಮ್ ಬೆಲೆಯಾಗಿದೆ). ಪ್ರಮುಖವಾಗಿ ಇದು ಒಬಿಡಿ2 (ಆನ್ ಬೋರ್ಡ್ ಡಯಾಗ್ನಾಸ್ಟಿಕ್) ತಾಂತ್ರಿಕತೆಯನ್ನು ಹೊಂದಿದೆ. ಕೇಂದ್ರ ಸರಕಾರ ಬಿಎಸ್6 ಎರಡನೇ ಹಂತದ ಮಾನದಂಡದಲ್ಲಿ ಈ ನಿಯಮವನ್ನು ಕಡ್ಡಾಯಗೊಳಿಸಿದೆ.
2023ನೇ ಆವೃತ್ತಿಯ ಹೊಂಡಾ ಎಸ್ಪಿಯ ಫೀಚರ್ಗಳೇನು?
ಹೊಸ ಹೋಂಡಾ ಎಸ್ಪಿ 125 ಎಲ್ಇಡಿ ಡಿಸಿ ಹೆಡ್ಲೈಟ್ನೊಂದಿಗೆ ರಸ್ತೆಗೆ ಇಳಿದಿದೆ. 5 ಸ್ಪೋಕ್ನ ಸ್ಪ್ಲಿಟ್ ಅಲಾಯ್ ವೀಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ನಲ್ಲಿ ರಿಯಲ್ ಟೈಮ್ ಮೈಲೇಜ್ ಕೂಡ ನೋಡಲು ಸಾಧ್ಯವಿದೆ. ಅದೇ ರೀತಿ ಡಿಸ್ಟಾನ್ಸ್ ಟು ಎಂಪ್ಟಿ ಫೀಚರ್ಗಳು ಕೂಡ ಇವೆ. ಈ ಬೈಕ್ನಲ್ಲಿ ಎಂಜಿನ್ ಸ್ಟಾರ್ಟ್, ಸ್ಟಾಪ್ ಸ್ವಿಚ್ ಕೂಡ ಬಂದಿದೆ. ಇಸಿಒ ಇಂಡಿಕೇಟರ್, ಗೇರ್ ಪೊಸಿಷನ್ ಇಂಡಿಕೇಟರ್ ಸೇರಿದಂತೆ ಹಲವು ಫೀಚರ್ಗಳನ್ನು ಈ ಬೈಕ್ ಹೊಂದಿದೆ.
ಬಣ್ಣದ ಆಯ್ಕೆಗಳೇನು?
ಐದು ಬಣ್ಣಗಳಲ್ಲಿ ಹೋಂಡಾ ಶೈನ್ ಬಣ್ಣಗಳ ಆಯ್ಕೆಯೊಂದಿಗೆ ಮಾರುಕಟ್ಟೆಯಲ್ಲಿದೆ. ಬ್ಲ್ಯಾಕ್, ಇಂಪೀರಿಯಲ್ ರೆಡ್ ಮೆಟಾಲಿಕ್, ಪರ್ಲ್ ಸಿರೆನ್ ಬ್ಲ್ಯೂ, ಮೇಟ್ ಆಕ್ಸಿಸ್, ಮೆಟಾಲಿಕ್ ಮತ್ತು ಮ್ಯಾಟ್ ಮಾರ್ವೆಲ್ ಬ್ಲ್ಯೂ ಮೆಟಾಲಿಕ್ ಎಂಬ ಬಣ್ಣದಲ್ಲಿ ಲಭ್ಯವಿದೆ.
ಎಂಜಿನ್ ಸಾಮರ್ಥ್ಯವೇನು?
ಹೋಂಡಾ ಎಸ್ಪಿ 125 ಬೈಕ್ನಲ್ಲಿ ಒಬಿಡಿ ಫೀಚರ್ ಇರುವ 125 ಸಿಸಿಯ ಎಂಜಿನ್ ಇದೆ. ಇದು ಎನ್ಹಾನ್ಸ್ಮೆಂಟ್ ಸ್ಮಾರ್ಟ್ ಪವರ್ ಅಯ್ಕೆಯನ್ನೂ ಹೊಂದಿದೆ. ಇದು ಗರಿಷ್ಠ 10.72 ಬಿಎಚ್ಪಿ ಪವರ್ ಹಾಗೂ 10.9 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ ಐದು ಸ್ಪೀಡ್ನ ಗೇರ್ ಬಾಕ್ಸ್ ಇದೆ.
ಬ್ರೇಕ್ ಮತ್ತು ಸಸ್ಪೆನ್ಷನ್
ಹೋಂಡಾ ಎಸ್ಪಿ ಬೈಕ್ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಇದ್ದು, ಹಿಂಭಾಗದಲ್ಲಿ ಡ್ಯಯಲ್ ಶಾಕ್ ಅಬ್ಸಾರ್ಬರ್ ಹೊಂದಿದೆ. ಹೊಸ ಎಸ್ಪಿ ಬೈಕ್ನಲ್ಲಿ ಫ್ರಂಟ್ ಮೌಂಟೆಡ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇದೆ. ಜತೆಗೆ ಕಾಂಬಿ ಬ್ರೇಕ್ ಸಿಸ್ಟಮ್ ಕೂಡ ಹೆಚ್ಚುವರಿಯಾಗಿ ದೊರೆಯುತ್ತದೆ.