Site icon Vistara News

Holi 2023 : ಬಣ್ಣಗಳ ಹಬ್ಬ ಹೋಳಿಯ ವೇಳೆ ನಿಮ್ಮ ವಾಹನಗಳನ್ನು ಜೋಪಾನ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್​

How to keep your vehicles clean during Holi, the festival of colors? Here are the tips

#image_title

ಬೆಂಗಳೂರು: ಬಣ್ಣಗಳ ಹಬ್ಬ ಹೋಳಿಯನ್ನು (Holi 2023) ದೇಶಾದ್ಯಂತ ಜನರು ಸಂಭ್ರಮದಿಂದ ಆಚರಿಸುತ್ತಾರೆ. ಇದು ಭಾರತದ ಅತ್ಯಂತ ಜನಪ್ರಿಯ ಹಾಗೂ ವಿಭಿನ್ನ ಆಚರಣೆ. ಈ ಹಬ್ಬದ ವೇಳೆ ನಾನಾ ರಂಗುಗಳು ಹಾಗೂ ನೀರನ್ನು ಯಥೇಚ್ಛವಾಗಿ ಬಳಲಾಗುತ್ತಿದೆ. ನೋಡಲು ಹಾಗೂ ಆಡಲು ಇಂದು ಸಂಭ್ರಮ. ಆದರೆ, ವಾಹನಗಳ ಮಾಲೀಕರಿಗೆ ದುಃಸ್ವಪ್ನ. ಯಾಕೆಂದರೆ ಈ ಹಬ್ಬದ ಆಚರಣೆಗೆ ಬಲಿಪಶು ಎನಿಸಿಕೊಳ್ಳುವುದು ರಸ್ತೆ ಮೇಲೆ ನಿಲ್ಲಿಸಿರುವ ಕಾರು, ಬೈಕ್​ಗಳು. ಅವುಗಳಿಗೆ ಅಂಟಿರುವ ಬಣ್ಣಗಳನ್ನು ತೊಳೆಯುವುದೇ ದೊಡ್ಡ ಸಾಹಸ ಹಾಗೂ ಕೆಲವೊಂದು ಬಣ್ಣಗಳು ಪೇಂಟ್​ಗಳಿಗೂ ಹಾನಿ ಮಾಡುತ್ತವೆ. ಹಾಗಾದರೆ ಈ ಕೆಳಗಿನ ಕೆಲವೊಂದು ಟಿಪ್ಸ್​ಗಳನ್ನು ಪಾಲಿಸುವ ಮೂಲಕ ನಿಮ್ಮ ವಾಹನಗಳನ್ನು ರಂಗಿನಾಟದ ತೊಂದರೆಗೆ ಒಳಪಡದಂತೆ ನೋಡಿಕೊಳ್ಳಬಹುದು.

ಸರಿಯಾದ ಜಾಗದಲ್ಲಿ ಪಾರ್ಕ್​ ಮಾಡಿ

ಹೋಳಿ ಹಬ್ಬದ ದಿನ ಎಲ್ಲೆಲ್ಲೋ ವಾಹನಗಳನ್ನು ಪಾರ್ಕ್​ ಮಾಡಬೇಡಿ. ಸುರಕ್ಷಿತವಾದ ತಾಣ ಹಾಗೂ ಕಾಂಪೌಂಡ್ ಒಳಗೇ ನಿಲ್ಲಿಸಿ. ಜನರ ಸೇರುವ ಜಾಗದಲ್ಲಿ ನಿಮ್ಮ ಕಾರು, ಬೈಕ್ ನಿಲ್ಲಿಸುವ ಧೈರ್ಯ ತೋರಬೇಡಿ. ರಸ್ತೆಯಲ್ಲಿ ನಿಲ್ಲಿಸುವುದಾದರೂ ಜನರು ಒಂದೆಡೆ ಸೇರದ ಜಾಗವನ್ನು ಹುಡುಕಿ.

ಕವರ್​ ಹಾಕಿ

ಕಾರನ್ನು ಮನೆಯ ಕಾಂಪೌಂಡ್​ ಒಳಗೆ ತರಲಾಗುವುದಿಲ್ಲ ಎಂದಾದರೆ ಒಂದು ಕವರ್​ ಹಾಕಿಬಿಡಿ. ನಿಮ್ಮ ವಾಹನದ ಮೇಲೆ ನೇರವಾಗಿ ಬಣ್ಣದ ಓಕುಳಿ ಬೀಳದಂತೆ ನೋಡಿಕೊಳ್ಳುವ ಕವರ್​ಗಳನ್ನು ಬಳಸಿ. ಮೇಲಿನಿಂದ ಕೆಳಗಿನ ತನಕ ವಾಹನ ಸಂಪೂರ್ಣವಾಗಿ ಕವರ್ ಆಗಿದೆಯೇ ಎಂಬುದನ್ನು ಖಚಿತಪಡಿಸಿ.

ಸೀಟ್​ಗಳಿಗೆ ಪ್ಲಾಸ್ಟಿಕ್​ ಕವರ್​ ಹಾಕಿ

ಬಣ್ಣ ಹಚ್ಚುವುದಕ್ಕೆ ಅಥವಾ ಹೋಳಿ ಆಡುವುಕ್ಕೆ ಕಾರಿನಲ್ಲಿ ಹೋಗುವುದಾದರೆ ಸೀಟ್​ಗಳನ್ನು ಪ್ಲಾಸ್ಟಿಕ್​ ಕವರ್​ನಿಂದ ಮುಚ್ಚಿ. ನಿಮ್ಮ ಮೇಲೆ ಅಥವಾ ಬಟ್ಟೆಗೆ ಆಗಿರುವ ಬಣ್ಣ ಕಾರಿನ ಸೀಟಿಗೆ ತಾಗದಂತೆ ನೋಡಿಕೊಳ್ಳಿ. ಕೆಲವೊಂದು ಬಣ್ಣಗಳು ಅಂಟಿಕೊಂಡರೆ ಅದನ್ನು ತೆಗೆಯುವುದು ಅಷ್ಟೊಂದು ಸುಲಭದ ಕೆಲಸವಲ್ಲ.

ತಾತ್ಕಾಲಿಕ ಬಣ್ಣದೊಂದಿಗೆ ಆಡಿ

ವಾಹನಗಳ ಬಳಿ ಹೋಳಿ ಆಡುವುದೇ ಆಗಲಿ ಇನ್ಯಾವುದೇ ಸಂದರ್ಭದಲ್ಲಾಗಲಿ ನೈಸರ್ಗಿಕ ಬಣ್ಣಗಳನ್ನು ಬಳಸಿ. ಕೆಮಿಕಲ್​ ಹಾಕಿರುವ ಕೆಲವೊಂದು ಬಣ್ಣಗಳು ನಿಮ್ಮ ತ್ವಚೆಗೆ ಹಾನಿ ಮಾಡಿದಷ್ಟೇ ಕಾರಿನ ಪೇಂಟ್​ಗೂ ಹಾನಿ ಮಾಡುತ್ತದೆ. ಅಂಥ ಬಣ್ಣಗಳಿಂದ ಆಗಿರುವ ಡ್ಯಾಮೇಜ್​ ರಿಪೇರಿಗೆ ದೊಡ್ಡ ಮೊತ್ತವನ್ನು ವಿನಿಯೋಗಿಸಬೇಕಾಬಹುದು.

ಇದನ್ನೂ ಓದಿ : Holi Dresscode: ಸಂಭ್ರಮದ ಹೋಳಿ ಪಾರ್ಟಿಗೂ ಉಂಟು ಡ್ರೆಸ್‌ಕೋಡ್‌

ಡಿಟರ್ಜೆಂಟ್​ ಬಳಕೆ ವೇಳೆ ಎಚ್ಚರ

ವಾಹನಗಳ ಮೇಲೆ ಬಿದ್ದಿರುವ ಬಣ್ಣಗಳನ್ನು ತೆಗೆಯಲು ಕೆಲವರು ಡಿಟರ್ಜೆಂಟ್​ ಬಳಸುತ್ತಾರೆ. ಇದರಿಂದ ಪೇಂಟ್​ನ ಪಾಲಿಶ್​ ಹೋಗುವ ಸಾಧ್ಯತೆಗಳಿವೆ. ಹೀಗಾಗಿ ಬಟ್ಟೆಗೆ ಹಾಕುವ ಸೋಪ್​ ಹಾಕಿ ವಾಹನದ ರೂಪ ಕೆಡಿಸಬೇಡಿ. ಒಂದು ವೇಳೆ ನೀರಿನಲ್ಲಿ ತೊಳೆದರೂ ಹೋಗುತ್ತಿಲ್ಲ ಎಂದಾರೆ ಕಾರ ಸ್ಪಾಗಳಿಗೆ ತೆಗೆದುಕೊಂಡು ಹೋಗಿ ಸ್ವಚ್ಛ ಮಾಡಿಸಿ.

ಕುಡಿದು ವಾಹನ ಚಲಾಯಿಸಬೇಡಿ

ಹೋಳಿ ಆಚರಣೆಯ ಹುಮ್ಮಸ್ಸಿನಲ್ಲಿ ಕೆಲವರು ಮದ್ಯಪಾನ ಮಾಡುತ್ತಾರೆ. ಮದ್ಯಪಾನ ಮಾಡಿದರೂ ಕೆಲವರು ವಾಹನಗಳನ್ನು ಓಡಿಸುವ ದುಸ್ಸಾಹಸಕ್ಕೆ ಕೈ ಹಾಕುತ್ತಾರೆ. ತಪ್ಪಿಯೂ ಆ ಕೆಲಸ ಮಾಡಬೇಡಿ. ಹೋಳಿ ಆಚರಣೆ ವೇಳೆ ಅವಘಡಗಳು ಹೆಚ್ಚಾಗಿ ಪ್ರಾಣಾಪಾಯ ಉಂಟಾಗುವ ಪ್ರಸಂಗಗಳು ನಮ್ಮ ಕಣ್ಣ ಮುಂದೆಯೇ ಇರುವಾಗ ಮತ್ತದೇ ತಪ್ಪು ಮಾಡಬಾರದು.

Exit mobile version