Site icon Vistara News

Indian Cars : ರೆನೊ ಕ್ವಿಡ್, ಟ್ರೈಬರ್, ಕೈಗರ್​ಗೆ ಭರ್ಜರಿ ಡಿಸ್ಕೌಂಟ್​, ಇಲ್ಲಿದೆ ವಿವರ

Huge discount on Renault Kwid, Triber, Kygar, here are the details

#image_title

ಬೆಂಗಳೂರು: ರೆನೊ ಕಂಪನಿಯು ತನ್ನ ಕ್ವಿಡ್ ಹ್ಯಾಚ್ ಬ್ಯಾಕ್, ಟ್ರೈಬರ್ ಎಂಪಿವಿ ಮತ್ತು ಕೈಗರ್ ಎಸ್ ಯುವಿಗಳ ಮೇಲೆ 2023ರ ಮೇ ತಿಂಗಳಲ್ಲಿ 62,000 ರೂ.ಗಳವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಅಚ್ಚರಿಯೆಂದರೆ, ಎಲ್ಲಾ ಮೂರು ಕಾರುಗಳ 2022ರಲ್ಲಿ ಉತ್ಪಾದನೆಯಾದ ಮಾಡೆಲ್​ಗಳು ಹಾಗೂ 2023 ಮಾಡೆಲ್​ಗಳು ಮತ್ತು ಬಿಎಸ್ 6 ಫೇಸ್ 2-ಕಾಂಪ್ಲೈಂಟ್ ಮಾದರಿಗಳ ಮೇಲೂ ಆಫರ್​ ನೀಡುತ್ತಿದೆ. ಹಾಗಾದರೆ ಈ ಕಾರುಗಳಿಗೆ ಎಷ್ಟು ಆಫರ್​ ಸಿಗುತ್ತದೆ ಎಂಬುದನ್ನು ನೋಡೋಣ,

ರಿನೊ ಟ್ರೈಬರ್​​ (Renault Triber)

ಟ್ರೈಬರ್ ಎಮ್​ಪಿವಿ ಸೆಗ್ಮೆಂಟ್​​ನ ಏಕೈಕ ಸಬ್ -4 ಮೀ ಕಾರು. ಈ ಕಾರು 7 ಪ್ರಯಾಣಿಕರಿಗೆ ಆಸನಗಳನ್ನು ಹೊಂದಿದೆ. ಹೆಚ್ಚು ಲಗೇಜ್ ಇದ್ದರೆ ಮೂರನೇ ಸಾಲಿನ ಸೀಟ್​ಗಳನ್ನು ಸಂಪೂರ್ಣವಾಗಿ ತೆಗೆದಿರುವ ಆಯ್ಕೆಯನ್ನು ನೀಡುತ್ತದೆ. 1.0 ಲೀಟರಿನ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಇದು ಹೊಂದಿದ್ದು 72 ಬಿಎಚ್ಪಿ ಪವರ್ ಹಾಗೂ 96 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿ 5-ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಟ್ರಾನ್ಸ್​ಮಿಷನ್​ ಇದೆ.

ಈ ಕಾರಿನ 2022 ಮಾಡೆಲ್​ಗಳ ಮೇಲೆ 62,000 ರೂ.ಗಳವರೆಗೆ ರಿಯಾಯಿತಿ ಘೋಷಿಸಿದೆ ರೆನೊ. ಇದರಲ್ಲಿ 25,000 ರೂ.ಗಳವರೆಗೆ ನಗದು ರಿಯಾಯಿತಿ, 25,000 ರೂ.ಗಳವರೆಗೆ ವಿನಿಮಯ ಬೋನಸ್ (ಎಕ್ಸ್​ಚೇಂಜ್​ ಬೋಸನ್​) ಮತ್ತು 12,000 ರೂ.ಗಳವರೆಗೆ ಕಾರ್ಪೊರೇಟ್ ರಿಯಾಯಿತಿ ಸೇರಿಕೊಂಡಿವೆ. ಹೆಚ್ಚುವರಿಯಾಗಿ, ಗ್ರಾಹಕರು ರೆನೊ ಸ್ಕ್ರ್ಯಾಪೇಜ್ ಯೋಜನೆಯಡಿ 10,000 ರೂ.ಗಳವರೆಗೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದು.

2023ರ ಮಾಡೆಲ್​ನಗೆ ಟ್ರೈಬರ್ 52,000 ರೂ.ಗಳವರೆಗೆ ರಿಯಾಯತಿ ಘೋಷಿಸಲಾಗಿದೆ. ಇದರಲ್ಲಿ 15,000 ರೂ.ಗಳವರೆಗೆ ನಗದು ರಿಯಾಯಿತಿಯೂ ಸೇರಿಕೊಂಡಿದೆ. ಅಂತೆಯೇ, ಟ್ರೈಬರ್ ಬಿಎಸ್ 6 ಫೇಸ್ 2-ಕಾಂಪ್ಲೈಂಟ್ ಮಾದರಿಗೆ 42,000 ರೂ.ಗಳವರೆಗೆ ಡಿಸ್ಕೌಂಟ್​ ನೀಡಲಾಗಿದೆ. ಇದರಲ್ಲಿ 10,000 ರೂ.ಗಳವರೆಗೆ ನಗದು ರಿಯಾಯಿತಿ ಇದೆ. ಟ್ರೈಬರ್​ ಕಾರಿನ ಇತರ ಎಲ್ಲಾ ಪ್ರಯೋಜನಗಳು ಒಂದೇ ರೀತಿಯದ್ದು. 25,000 ರೂ.ಗಳವರೆಗೆ ವಿನಿಮಯ ಬೋನಸ್, ಕಾರ್ಪೊರೇಟ್ ರಿಯಾಯಿತಿಯಾಗಿ 12,000 ರೂಪಾಯಿ ಹಾಗೂ ಸ್ಕ್ರ್ಯಾಪೇಜ್ ಯೋಜನೆಯಡಿ 10,000 ರೂಪಾಯಿ ಪ್ರಯೋಜನ ದೊರೆಯುತ್ತದೆ.

ರೆನೊ ಕೈಗರ್​ (Renault Kiger)

ರೆನೊ ಕಂಪನಿಯ ಪೋರ್ಟ್​ಪೊಲಿಯೊದಲ್ಲಿರುವ ಏಕೈಕ ಎಸ್ಯುವಿಯಾದ ಕೈಗರ್​. ಇದು ದೊಡ್ಡ ಗಾತ್ರದ, ಹೆಚ್ಚು ಸ್ಥಳಾವಕಾಶ ಹೊಂದಿರುವ ಹಾಗೂ ಸುಸಜ್ಜಿತ ಕಾಂಪ್ಯಾಕ್ಟ್ ಕ್ರಾಸ್ ಓವರ್ ಆಗಿದೆ. ಇದು ಎರಡು 1.0-ಲೀಟರ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 72 ಬಿಎಚ್​ಪಿ ಪವರ್​ 96 ಎನ್ಎಂ ಟಾರ್ಕ್​​ ಬಿಡುಗಡೆ ಮಾಡುತ್ತದೆ. ಇದರ ಟರ್ಬೊ ಎಂಜಿನ್ ಅವೃತ್ತಿಯು 100 ಬಿಎಚ್​ಪಿ ಪವರ್ ಹಾಗೂ 160 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಎರಡರಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್​ಬಾಕ್ಸ್​ ಇದೆ. ನ್ಯಾಚುರಲ್​ ಆಸ್ಪರೇಟೆಡ್​ ಪೆಟ್ರೋಲ್ ಎಂಜಿನ್​ನಲ್ಲಿ ಎಎಂಟಿ ಗೇರ್​ ಬಾಕ್ಸ್ ಇದ್ದರೆ ಎರಡನೆಯದರಲ್ಲಿ ಸಿವಿಟಿಯನ್ನು ಆಯ್ಕೆಯಿದೆ.

2022 ಮತ್ತು 2023ರ ಕೈಗರ್ ಕಾರುಗಳ ಮೇಲೆ ರೂ.62,000ಗಳವರೆಗೆ ರಿಯಾಯಿತಿ ಘೋಷಿಸಲಾಗಿದೆ. ಇದರಲ್ಲಿ 25,000 ರೂ.ಗಳವರೆಗೆ ನಗದು ರಿಯಾಯಿತಿ, 25,000 ರೂ.ಗಳವರೆಗೆ ವಿನಿಮಯ ಬೋನಸ್ ಮತ್ತು 12,000 ರೂ.ಗಳವರೆಗೆ ಕಾರ್ಪೊರೇಟ್ ರಿಯಾಯಿತಿ ಸೇರಿವೆ. ಸ್ಕ್ರ್ಯಾಪೇಜ್ ಯೋಜನೆಯ 10,000 ರೂ. ಇದಕ್ಕೆ ಲಭ್ಯವಿದೆ.

ಇದನ್ನೂ ಓದಿ : Maruti Suzuki : ಮಾರುತಿ ಸುಜುಕಿಗೆ ಹೊಸ ದಾಖಲೆಯ 1 ಲಕ್ಷ ಕೋಟಿ ರೂ. ಆದಾಯ

ಬಿಎಸ್ 6 ಫೇಸ್ 2-ಕಾಂಪ್ಲೈಂಟ್ ಮಾದರಿಗೆ 25,000 ರೂ.ಗಳವರೆಗೆ ನಗದು ರಿಯಾಯಿತಿ (ಕೆಲವು ವೇರಿಯೆಂಟ್​ಗಳು 10,000 ರೂ.ಗಳವರೆಗೆ ರಿಯಾಯಿತಿಗಳನ್ನು ಪಡೆಯುತ್ತವೆ), 20,000 ರೂ.ಗಳವರೆಗೆ ವಿನಿಮಯ ಬೋನಸ್ (ಆಯ್ದ ವೇರಿಯೆಂಟ್​ಗಳಿಗೆ 15,000 ರೂ.ಗಳವರೆಗೆ) ಮತ್ತು ಕಾರ್ಪೊರೇಟ್ ರಿಯಾಯಿತಿ ಸೇರಿದಂತೆ 52,000 ರೂ.ಗಳವರೆಗೆ ರಿಯಾಯಿತಿಯನ್ನು ನೀಡಲಾಗಿದೆ.

ರೆನೊ ಕ್ವಿಡ್​ Renault Kwid

ರೆನಾಲ್ಟ್ ನ ಅತ್ಯಂತ ಚಿಕ್ಕ ಕಾರು ಕ್ವಿಡ್ ಈಗ 1.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ಈ ಎಂಜಿನ್​ 68 ಬಿಎಚ್​​ಪಿ ಪವರ್​ ಮತ್ತು 91 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡ್​ನ ಮ್ಯಾನುಯಲ್ ಅಥವಾ ಎಎಂಟಿಗೆ ಟ್ರಾನ್ಸ್​ಮಿಷನ್​ ಇದೆ. ಬಿಎಸ್ 6 ಫೇಸ್ 2 ಮಾನದಂಡಗಳ ಜಾರಿಯಾದ ಬಳಿಕ 800 ಸಿಸಿ ಕ್ವಿಡ್ ಲಭ್ಯವಿಲ್ಲ.

2022 ರ ಮಾಡೆಲ್​ನ ಕ್ವಿಡ್​ಗೆ 57,000 ರೂಪಾಯಿಗಳವರೆಗೆ ಡಿಸ್ಕೌಂಟ್ ನೀಡಲಾಗಿದೆ. 25,000 ರೂ.ಗಳವರೆಗೆ ನಗದು ರಿಯಾಯಿತಿ ಸೇರಿಕೊಂಡಿದೆ (ಕೆಲವು ವೇರಿಯೆಂಟ್​​ಗಳು 20,000 ರೂ.ಗಳವರೆಗೆ ರಿಯಾಯಿತಿಗಳನ್ನು ಪಡೆಯುತ್ತವೆ). 20,000 ರೂ.ಗಳವರೆಗೆ ವಿನಿಮಯ ಲಾಭ ಮತ್ತು 12,000 ರೂ.ಗಳವರೆಗೆ ಕಾರ್ಪೊರೇಟ್ ರಿಯಾಯಿತಿಗಳು ಸೇರಿಕೊಂಡಿವೆ.

ಕ್ವಿಡ್ ನ ಬಿಎಸ್ 6 ಫೇಸ್ 2-ಕಾಂಪ್ಲೈಂಟ್ ಮಾದರಿಗಳ ಮೇಲೆ ರೆನಾಲ್ಟ್ 27,000 ರೂ.ಗಳವರೆಗೆ ರಿಯಾಯಿತಿ ಇದೆ. 5,000 ರೂ.ವರೆಗೆ ನಗದು ರಿಯಾಯಿತಿ, 10,000 ರೂ.ಗಳವರೆಗೆ ವಿನಿಮಯ ಪ್ರಯೋಜನಗಳು ಮತ್ತು 12,000 ರೂ.ಗಳವರೆಗೆ ಕಾರ್ಪೊರೇಟ್ ರಿಯಾಯಿತಿಗಳು ಸೇರಿಕೊಂಡಿವೆ.

Exit mobile version