ನವ ದೆಹಲಿ: ಹುಂಡೈ ಮೋಟಾರ್ನ (Hyundai Motor) ಏಳು ಸೀಟ್ನ ಕಾರು ಆಲ್ಕಜಾರ್ 1.5 ಲೀಟರ್ ಹೊಸ ಟರ್ಬೊ ಎಂಜಿನ್ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ಅಪ್ಡೇಟ್ನೊಂದಿಗೆ ರಸ್ತೆಗಿಳಿದಿರುವ ಈ ಕಾರಿನ ಬೆಲೆ 16.75 ಲಕ್ಷ ರೂಪಾಯಿಯಿಂದ ಆರಂಭಗೊಂಡು 20.25 ಲಕ್ಷ ರೂಪಾಯಿ ತನಕ (ಎಕ್ಸ್ಶೋರೂಮ್) ಇದೆ. ಪ್ರೆಸ್ಟೀಸ್, ಪ್ಲಾಟಿನಮ್, ಪ್ಲಾಟಿನಮ್ (ಒ), ಸಿಗ್ನೇಚರ್ (ಓ) ಎಂಬ ನಾಲ್ಕು ವೇರಿಯಂಟ್ನಲ್ಲಿ ಕಾರು ಲಭ್ಯವಿದೆ.
ಹೊಸ 1.5 ಲೀಟರ್ ಟರ್ಬೊ ಎಂಜಿನ್ ಆರ್ಡಿಇ ಮಾನದಂಡಕ್ಕೆ ಪೂರಕವಾಗಿದೆ. ಇದು 4000 ಆರ್ಪಿಎಮ್ನಲ್ಲಿ 116 ಪಿಎಸ್ ಪವರ್ ಹಾಗೂ 1500ರಿಂದ 2750 ಆರ್ಪಿಎಮ್ನಲ್ಲಿ 250 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಹುಂಡೈ ಅಲ್ಕಜಾರ್ ಕಾರಿನಲ್ಲಿ ಈಗ 1.5 ಲೀಟರ್ ಜಿಡಿಐ ಪೆಟ್ರೋಲ್ ಎಂಜಿನ್ ಆರ್ಡಿಇ ಹಾಗೂ ಇ20 ಪೆಟ್ರೋಲ್ ಕೂಡ ಬಳಸಬಹುದಾಗಿದೆ. 6 ಸ್ಪೀಡ್ನ ಮ್ಯಾನುಯಲ್ ಹಾಗೂ ಏಳು ಸ್ಪೀಡ್ನ ಡಿಸಿಟಿ ಟ್ರಾನ್ಸ್ಮಿಷನ್ ಆಯ್ಕೆ ಇದೆ.
ಪೆಟ್ರೊಲ್ ಎಂಜಿನ್ 5,500 ಆರ್ಪಿಎಮ್ನಲ್ಲಿ 160 ಪಿಎಸ್ ಪವರ್ ಹಾಗೂ 3500 ಆರ್ಪಿಎಮ್ನಲ್ಲಿ 253 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಪೆಟ್ರೋಲ್ ಕಾರಿನಲ್ಲಿ 17.5 ಲೀಟರ್ ಮೈಲೇಜ್ ನೀಡಿದರೆ ಆಟೋಮ್ಯಾಟಿಕ್ ಕಾರು 18 ಕಿಲೋ ಮೀಟರ್ ನೀಡುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : Royal Enfield : 2017ರಿಂದ 2021ರವರೆಗಿನ ಹಿಮಾಲಯನ್ ಬೈಕ್ ವಾಪಸ್ ಪಡೆದ ರಾಯಲ್ ಎನ್ಫೀಲ್ಡ್
ವಿನ್ಯಾಸ ಬದಲು
2023ರ ಹುಂಡೈ ಆಲ್ಕಜಾರ್ ಕಾರಿನ ವಿನ್ಯಾಸವನ್ನೂ ಬದಲಿಸಲಾಗಿದೆ. ಸುಧಾರಿತ ಫ್ರಂಟ್ ಗ್ರಿಲ್, ಹೊಸ ಪಡಲ್ ಲ್ಯಾಂಪ್ ನೀಡಲಾಗಿದೆ. ಆರು ಏರ್ಬ್ಯಾಗ್ಗಳು ಹಾಗೂ ಐಡಲ್ ಸ್ಟಾರ್ಟ್ ಸ್ಟಾಪ್ ಆಯ್ಕೆ ನೀಡಲಾಗಿದೆ.