Site icon Vistara News

Hyundai Creta : ಅಡ್ವೆಂಚರ್ ಪ್ರೇಮಿಗಳಿಗೆ ಇದೋ ಬಂದಿದೆ ಹ್ಯುಂಡೈನ ಎರಡು ಕಾರುಗಳು

Creta Adventure

ಬೆಂಗಳೂರು: ಹ್ಯುಂಡೈ ಕ್ರೆಟಾ ಮತ್ತು ಅಲ್ಕಾಜರ್ ಅಡ್ವೆಂಚರ್ ಎಡಿಷನ್ ಕಾರುಗಳು ಭಾರತದಲ್ಲಿ ಬಿಡುಗಡೆಗೊಂಡಿವೆ. ಅನುಕ್ರಮವಾಗಿ 15.17 ಲಕ್ಷ ರೂಪಾಯಿ ಮತ್ತು ರೂ.19.04 ಲಕ್ಷ ರೂಪಾಯಿ ಎಕ್ಸ್​ ಶೋರೂಮ್​ ಬೆಲೆಯನ್ನು ಕಾರು ಹೊಂದಿದೆ. ಕ್ರೆಟಾ ಅಡ್ವೆಂಚರ್ ಆವೃತ್ತಿಯು ಪೆಟ್ರೋಲ್ ಎಂಜಿನ್​ನೊಂದಿಗೆ ಮಾತ್ರ ಲಭ್ಯವಿದೆ. ಅಲ್ಕಾಜರ್​ ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್​ ಆಯ್ಕೆಯೊಂದಿಗೆ ಲಭ್ಯವಿದೆ. ಇದು ಅಲ್ಕಾಜರ್ ಕಾರಿನ ಮೊದಲ ಸ್ಪೆಷಲ್​ ಎಡಿಷನ್ ಆಗಿದೆ. ಕ್ರೆಟಾ ಈಗಾಗಲೇ ಸ್ಪೆಷಲ್​ ನೈಟ್ ಎಡಿಷನ್​ ಅನ್ನು ಹೊಂದಿದೆ. ಹೊಸ ಅಡ್ವೆಂಚರ್ ಆವೃತ್ತಿಗಳ ಬೆಲೆಗಳ ವಿವರವಾದ ವಿವರ ಇಲ್ಲಿದೆ.

ಏನಿದೆ ಸ್ಪೆಷಲ್​?

ಎರಡೂ ಎಸ್​​ಯುವಿಗಳು ಅಡ್ವೆಂಚರ್ ಎಡಿಷನ್​ನೊಂದಿಗೆ ಡ್ಯಾಶ್ ಕ್ಯಾಮ್ ಅನ್ನು ಪಡೆಯುತ್ತವೆ. ಇದು ಸೆಗ್ಮೆಂಟ್​ನಲ್ಲಿಯೇ ಮೊದಲ ವೈಶಿಷ್ಟ್ಯವಾಗಿದೆ. ಇದು ಎಕ್​​ಟೆರ್​ ಮತ್ತು ವೆನ್ಯೂ ಎನ್ ಲೈನ್ ಕಾರುಗಳಲ್ಲಿಯೂ ಲಭ್ಯವಿದೆ. ಇದು ಕಪ್ಪು ಬಣ್ಣದ ‘ಹ್ಯುಂಡೈ’ ಲೋಗೋ ಹಾಗೂ ಕಪ್ಪು-ಔಟ್ ಗ್ರಿಲ್ ಕೂಡ ಪಡೆದುಕೊಂಡಿದೆ. ಮುಂಭಾಗ, ಹಿಂಭಾಗ ಮತ್ತು ಸೈಡ್ ಸ್ಕಿಡ್ ಪ್ಲೇಟ್​ಗಳು, ವಿಂಗ್​ ಮಿರರ್​ಗಳು, 17 ಇಂಚಿನ ಅಲಾಯ್ ವೀಲ್​ಗಳು , ಫಾಗ್ ಲ್ಯಾಂಪ್ ಹೌಸಿಂಗ್, ಟೈಲ್ ಗೇಟ್ ಗಾರ್ನಿಶ್ (ಅಲ್ಕಾಜರ್​ನಲ್ಲ ಮಾತ್ರ ಲಭ್ಯವಿದೆ). ಸಿ-ಪಿಲ್ಲರ್ ಟ್ರಿಮ್ (ಕ್ರೆಟಾದಲ್ಲಿ ಮಾತ್ರ) ಕಪ್ಪು-ಔಟ್ ಟ್ರೀಟ್ಮೆಂಟ್​ ಪಡೆದುಕೊಂಡಿದೆ. ಮುಂಭಾಗದ ಫೆಂಡರ್ ಗಳಲ್ಲಿ ವಿಶೇಷ ‘ಅಡ್ವೆಂಚರ್’ ಆವೃತ್ತಿಯ ಬ್ಯಾಡ್ಜ್​​ಗಳನ್ನೂ ನೀಡಲಾಗಿದೆ.

ಅಡ್ವೆಂಚರ್ ಆವೃತ್ತಿ ಹೊಸ ರೇಂಜರ್ ಖಾಕಿ ಬಣ್ಣ ಆಯ್ಕೆಯನ್ನೂ ಪಡೆಯುತ್ತದೆ. ಇದು ಹೊಸ ಎಕ್ಸ್​ಟೆರ್​ ಎಸ್ ಯುವಿಯಲ್ಲಿ ಮೊದಲ ಬಾರಿಗೆ ಹ್ಯುಂಡೈನಲ್ಲಿ ನೀಡಲಾಯಿತು. ಇದಲ್ಲದೆ, ಅವು ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್ ಮತ್ತು ಟೈಟಾನ್ ಗ್ರೇ ಬಣ್ಣಗಳಲ್ಲಿಯೂ ಲಭ್ಯವಿದೆ. ಕ್ರೆಟಾ ಎರಡು ಡ್ಯುಯಲ್ಟೋ ನ್ ಬಣ್ಣಗಳನ್ನು (ಕಪ್ಪು ಚಾವಣಿಯೊಂದಿಗೆ ಅಟ್ಲಾಸ್ ವೈಟ್ ಮತ್ತು ರೇಂಜರ್ ಖಾಕಿ) ಪಡೆದರೆ, ಅಲ್ಕಾಜಾರ್ ಮೂರು (ಅಟ್ಲಾಸ್ ವೈಟ್, ರೇಂಜರ್ ಖಾಕಿ ಮತ್ತು ಟೈಟಾನ್ ಗ್ರೇ) ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಪವರ್​ ಟ್ರೇನ್ ಹೇಗಿದೆ?

ಕ್ರೆಟಾ ಅಡ್ವೆಂಚರ್ ಆವೃತ್ತಿಯನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ಮಾತ್ರ ನೀಡಲಾಗುತ್ತದೆ. ಅದು 115 ಬಿಹೆಚ್​​ಪಿ ಪವರ್​ ಮತ್ತು 144 ಎನ್ಎಂ ಟಾರ್ಕ್​ ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಎಸ್​​ಎಕ್ಸ್ ಟ್ರಿಮ್​​ನಲ್ಲಿ ಮತ್ತು ಸಿವಿಟಿಯೊಂದಿಗೆ ಎಸ್​​ಎಕ್ಸ್ (ಒ) ಟ್ರಿಮ್​ನಲ್ಲಿ ಲಭ್ಯವಿದೆ.

ಅಲ್ಕಾಜರ್​ ಅಡ್ವೆಂಚರ್ ಎಡಿಷನ್ 160 ಬಿಹೆಚ್ ಪಿ ಪವರ್​ 253 ಎನ್ಎಂ ಟಾರ್ಕ್​ ಉತ್ಪಾದಿಸುವ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 116 ಬಿಹೆಚ್​ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್​ ಉತ್ಪಾದಿಸುವ 1.5-ಲೀಟರ್ ಡೀಸೆಲ್ ಎಂಜಿನ್ ಇದೆ. ಪ್ಲಾಟಿನಂ ಟ್ರಿಮ್ ಹೊಂದಿರುವ ಅಲ್ಕಾಜರ್ ಅಡ್ವೆಂಚರ್ ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್​ಗಳಲ್ಲಿ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಮಾತ್ರ ಲಭ್ಯವಿದೆ. ಸಿಗ್ನೇಚರ್ (ಒ) ಟ್ರಿಮ್​ನಲ್ಲಿ ಅಡ್ವೆಂಚರ್ ಆವೃತ್ತಿಯು ಪೆಟ್ರೋಲ್ ಎಂಜಿನ್​ನೊಂದಿಗೆ 7-ಸ್ಪೀಡ್ ಡ್ಯುಯಲ್​ ಕ್ಲಚ್ ಆಟೋಮ್ಯಾಟಿಕ್ ಮತ್ತು ಡೀಸೆಲ್ ಎಂಜಿನ್ ನೊಂದಿಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್​ ಬಾಕ್ಸ್ ಇದೆ.

ಪ್ರತಿಸ್ಪರ್ಧಿ ಕಾರುಗಳು

ಕ್ರೆಟಾ ಅಡ್ವೆಂಚರ್ ಆವೃತ್ತಿಯು ಸ್ಕೋಡಾ ಕುಶಾಕ್ ನ ಲಾವಾ ಬ್ಲೂ ಆವೃತ್ತಿ ಮತ್ತು ಮ್ಯಾಟ್ ಆವೃತ್ತಿಗಳಿಗೆ ಮತ್ತು ಫೋಕ್ಸ್ ವ್ಯಾಗನ್ ಟೈಗು್​್ನ ನ ಜಿಟಿ ಎಡ್ಜ್ ಲಿಮಿಟೆಡ್ ಎಡಿಷನ್​​ಗೆ ಪ್ರತಿಸ್ಪರ್ಧಿಯಾಗಿದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್ ಮತ್ತು ಮುಂಬರುವ ಹೋಂಡಾ ಎಲಿವೇಟ್ ಮತ್ತು ಸಿಟ್ರೋನ್ ಸಿ 3 ಏರ್ ಕ್ರಾಸ್ ಇತರ ಕಾರುಗಳು.

ಅಲ್ಕಾಜರ್ ಅಡ್ವೆಂಚರ್ ಆವೃತ್ತಿಯುಟಾಟಾ ಸಫಾರಿಯ ಡಾರ್ಕ್, ರೆಡ್ ಡಾರ್ಕ್ ಮತ್ತು ಅಡ್ವೆಂಚರ್​ಗಳಿಗೆ ಪೈಪೋಟಿ ನೀಡುತ್ತದೆ. ಇತರ ಪ್ರತಿಸ್ಪರ್ಧಿಗಳಲ್ಲಿ ಎಂಜಿ ಹೆಕ್ಟರ್ ಪ್ಲಸ್ ಮತ್ತು ಮಹೀಂದ್ರಾ ಎಕ್ಸ್ ಯುವಿ 700 ಸೇರಿವೆ.

Exit mobile version