Site icon Vistara News

Hyundai Exter : ಹ್ಯುಂಡೈ ಕಂಪನಿಯ ಹೊಚ್ಚ ಹೊಸ ಎಕ್ಸ್​ಟೆರ್​ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತೇ?

Hyundai Exter

ಬೆಂಗಳೂರು: ಟಾಟಾ ಪಂಚ್ ಮತ್ತು ಸಿಟ್ರೋನ್ ಸಿ3 ಯಂಥ ಕಾರು ಪ್ರಿಯರ ನೆಚ್ಚಿನ ಮೈಕ್ರೊ ಎಸ್​ಯುವಿ ಕಾರುಗಳಿಗೆ ನೇರ ಪ್ರತಿಸ್ಪರ್ಧಿಯಾದ ಹ್ಯುಂಡೈ ಎಕ್ಸ್​ಟೆರ್​ ಕಾರಿನ ಬೆಲೆ ಅನಾವರಣಗೊಂಡಿದೆ. ಟಾಟಾ ಪಂಚ್​​ನ ಬೆಲೆ 6 ಲಕ್ಷ ರೂಪಾಯಿಗಳಿಂದ ಪ್ರಾರಂಭವಾದರೆ, ಸಿಟ್ರೋನ್ ಸಿ3 ಹ್ಯಾಚ್ ಬ್ಯಾಕ್​ನ ಆರಂಭಿಕ ಬೆಲೆ 6.16 ಲಕ್ಷ ರೂ. ಹೊಸ ಹ್ಯುಂಡೈ ಎಕ್​ಟೆರ್​ ಕಾರಿನ ಆರಂಭಿಕ ಬೆಲೆ 5.99 ಲಕ್ಷ ರೂಪಾಯಿಗಳಾಗಿದ್ದು, ಟಾಪ್​ ಎಂಡ್​ ವೇರಿಯೆಂಟ್​ನ ಬೆಲೆ 9.31 ಲಕ್ಷ ರೂಪಾಯಿಗಳಾಗಿವೆ. (ಎಕ್ಸ್ ಶೋ ರೂಮ್​ ಬೆಲೆ) .

ತನ್ನ ಪ್ರತಿಸ್ಪರ್ಧಿಗಳಂತೆಯೇ, ಹ್ಯುಂಡೈ ಎಕ್ಸ್​ಟೆರ್​ ಕೂಡ​ ಕಾಂಪ್ಯಾಕ್ಟ್ ಹ್ಯಾಚ್ ಬ್ಯಾಕ್​​ನ ಎಲ್ಲ ಹೋಲಿಕೆಗಳನ್ನು ಹೊಂದಿವೆ. ಆದರೆ ಎತ್ತರದ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಒರಟಾದ ಸ್ಟೈಲಿಂಗ್ ಅಂಶಗಳು ಹೆಚ್ಚುಗಾರಿಕೆಯಾಗಿದೆ ಮುಂಭಾಗ ಮತ್ತು ಹಿಂಭಾಗದಲ್ಲಿ ಫಾಕ್ಸ್​ ಸ್ಕಿಡ್ ಪ್ಲೇಟ್ ಗಳು, ಬಂಪರ್​ಗಳ ಮೇಲೆ ಬಾಡಿ ಕ್ಲಾಡಿಂಗ್ ಮತ್ತು ಚಕ್ರದ ಕಮಾನುಗಳ ಮೇಲೆ ಬಾಡಿ ಮೌಲ್ಡಿಂಗ್​​ಗಳನ್ನು ಹೊಂದಿದೆ. ಎಕ್ಸ್ಟರ್ ಎಚ್​​​ಆಕಾರದ ಡೇರನ್ನಿಂಗ್ ಎಲ್ಇಡಿಗಳು ಮತ್ತು ಎಲ್ಇಡಿ ಪ್ರಾಜೆಕ್ಟರ್​ಗಳನ್ನು ಹೊಂದಿದೆ. ಸ್ಪ್ಲಿಟ್ ಹೆಡ್​ಲ್ಯಾಂಪ್​ ಸೆಟ್​ಅಪ್​ ಕೂಡ ಇದರಲ್ಲಿದೆ. ಇದು ಮುಂಭಾಗದಲ್ಲಿ ಎಚ್-ಆಕಾರದ ಎಲ್ಇಡಿ ಲೈಟ್​ಗಳನ್ನು ನೀಡಲಾಗಿದೆ.

ಇಂಟೀರಿಯರ್ ಹೇಗಿದೆ?

ಕ್ಯಾಬಿನ್ ಒಳಗೆ, ಹ್ಯುಂಡೈ ಎಕ್ಸ್ಟರ್ ಮೂರು ಒಳಾಂಗಣ ವಿನ್ಯಾಸಗಳನ್ನು ಹೊಂದಿದೆ. ಲೈಟ್ ಗ್ರೇ, ಕಾಸ್ಮಿಕ್ ಬ್ಲೂ ಮತ್ತು ಲೈಟ್ ಸೀಜ್. ಡ್ಯಾಶ್​ಬೋರ್ಡ್​ ವಿನ್ಯಾಸ ಹೊಂದಿದೆ. ಇದು ಗ್ರ್ಯಾಂಡ್ ಐ10 ನಿಯೋಸ್​ನಿಂದ ಸ್ಫೂರ್ತಿ ಪಡೆದಿದೆ. ಇದು ಐ20 ಮತ್ತು ವೆರ್ನಾದಿಂದ ಸಂಪೂರ್ಣ ಡಿಜಿಟಲ್ ಇನ್​ಸ್ಟ್ರೂಮೆಂಟ್​ ಕನ್ಸೋಲ್, ವೃತ್ತಾಕಾರದ ಎಸಿ ವೆಂಟ್​​ಗಳು, 8 ಇಂಚಿನ ಟಚ್​ಸ್ಟ್ರೀನ್​ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್​ ಕ್ಲೈಮೇಟ್​ ಕಂಟ್ರೋಲ್​, ಮತ್ತು ಗ್ರ್ಯಾಂಡ್ ಐ 10 ನಿಯೋಸ್​​ನ ಸೆಂಟರ್ ಕನ್ಸೋಲ್ ಒಳಗೊಂಡಿದೆ.

ಎಕ್ಸ್​ಟೆರ್​ ಕಾರು ಪುಶ್ ಸ್ಟಾರ್ಟ್-ಸ್ಟಾಪ್ ಬಟನ್, ಸರಿಹೊಂದಿಸಬಹುದಾದ ಡ್ರೈವರ್ ಸೀಟ್, ಸಿಂಗಲ್-ಪ್ಯಾನ್ ಸನ್ ರೂಫ್ (ಸೆಗ್ಮೆಂಟ್-ಫಸ್ಟ್), ವೈರ್ ಲೆಸ್ ಚಾರ್ಜರ್, ಕೂಲ್ಡ್ ಗ್ಲೋವ್ ಬಾಕ್ಸ್, ಹಿಂಭಾಗದ ಎಸಿ ವೆಂಟ್ ಗಳು, ಪ್ಯಾಡಲ್ ಶಿಫ್ಟರ್​ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಇನ್​ಬಿಲ್ಟ್​​ ಡ್ಯಾಶ್ ಕ್ಯಾಮ್ ಅನ್ನು ಒಳಗೊಂಡಿದೆ.

ಇದನ್ನೂ ಓದಿ : Hyundai Exter: ಹ್ಯುಂಡೈ ಕಂಪನಿಯ ಹೊಸ ಎಕ್ಸ್​ಟೆರ್​ ಕಾರಿನ ವಿನ್ಯಾಸ ಹೇಗಿದೆ?

ಟಾಪ್-ಸ್ಪೆಕ್ ಎಸ್ಎಕ್ಸ್ (ಒ) ಕನೆಕ್ಟ್ ರೂಪಾಂತರವು ಹ್ಯುಂಡೈನ ಕನೆಕ್ಟೆಡ್ ಕಾರು ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಆರು ಏರ್ ಬ್ಯಾಗ್ ಗಳು, ಇಬಿಡಿಯೊಂದಿಗೆ ಎಬಿಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಗಳು, ಹಿಂಭಾಗದ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಸೇರಿವೆ.

ಎಂಜಿನ್​ ಹೇಗಿದೆ

ಹ್ಯುಂಡೈ ಎಕ್ಸ್ಟರ್ 1.2-ಲೀಟರ್ ನಾಲ್ಕು ಸಿಲಿಂಡರ್ ನ್ಯಾಚುರಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಎಂಜಿನ್ 83 ಬಿಎಚ್​​ಪಿ ಪವರ್ ಮತ್ತು 113.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಗ್ರ್ಯಾಂಡ್ ಐ 10 ನಿಯೋಸ್, ಔರಾ, ಐ 20 ಮತ್ತು ವೆನ್ಯೂಗಳಂತಹ ಇತರ ಕಾಂಪ್ಯಾಕ್ಟ್ ಹ್ಯುಂಡೈ ಮಾದರಿಗಳಲ್ಲಿ ಕಂಡುಬರುವ ಅದೇ ಎಂಜಿನ್. ಎಕ್ಸ್​ಟೆರ್​ ಸಿಎನ್ ಜಿ ಇಂಧನ ಆಯ್ಕೆಯನ್ನು ನೀಡುತ್ತದೆ, ಸಿಎನ್​​ಜಿಮೋಡ್​​ನಲ್ಲಿ ಕಾರ್ಯನಿರ್ವಹಿಸುವಾಗ 69 ಪಿಎಸ್ ಶಕ್ತಿ ಮತ್ತು 95.2 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ.

ಅಟ್ಲಾಸ್ ವೈಟ್, ಕಾಸ್ಮಿಕ್ ಬ್ಲೂ, ಫೈರಿ ರೆಡ್, ರೇಂಜರ್ ಖಾಕಿ, ಸ್ಟಾರ್ರಿ ನೈಟ್, ಟೈಟಾನ್ ಗ್ರೇ, ಅಟ್ಲಾಸ್ ಬ್ಲ್ಯಾಕ್ ವಿತ್ ಅಬಿಸ್ ಬ್ಲ್ಯಾಕ್, ಕಾಸ್ಮಿಕ್ ಬ್ಲೂ ವಿತ್ ಅಬಿಸ್ ಬ್ಲ್ಯಾಕ್ ಮತ್ತು ರೇಂಜರ್ ಖಾಕಿ ವಿತ್ ಅಬಿಸ್ ಬ್ಲ್ಯಾಕ್ ಸೇರಿದಂತೆ ಎಕ್ಸ್ಟರ್ ಕಾರಿನಲ್ಲಿ ಗ್ರಾಹಕರು ಒಂಬತ್ತು ಬಣ್ಣದ ಆಯ್ಕೆಗಳನ್ನು ಆಯ್ಕೆ ಮಾಡಬಹುದು.

Exit mobile version