ಮುಂಬಯಿ : ಸತತವಾಗಿ ಟೀಸರ್ಗಳನ್ನು ಬಿಡುಗಡೆ ಮಾಡಿದ್ದ ಹುಂಡೈ ಮೋಟಾರ್ಸ್ ಇದೀಗ ತನ್ನ ಬಹುನಿರೀಕ್ಷಿತ ಕಾಂಪಾಕ್ಟ್ ಎಸ್ಯವಿ ಎಕ್ಸ್ಟೆರ್ ಕಾರನ್ನು ಅನಾವರಣ ಮಾಡಿದೆ. ಹ್ಯುಂಡೈ ಎಕ್ಸ್ಟೆರ್ನ ಹೊರ ವಿನ್ಯಾಸವನ್ನು ಮಾತ್ರ ತೋರಿಸಿಲಾಗಿದ್ದು, ಎಂಜಿನ್ ಆಯ್ಕೆ ಮತ್ತು ಐದು ವೇರಿಯೆಂಟ್ಗಳಲ್ಲಿ ಲಭ್ಯ ಎಂಬುದಾಗಿಯೂ ಹೇಳಿದೆ. ಇದೇ ವೇಳೆ 11,000 ರೂ.ಗಳ ಟೋಕನ್ ಮೊತ್ತಕ್ಕೆ ಬುಕಿಂಗ್ ಮಾಡಿಕೊಳ್ಳಬಹುದು ಎಂಬುದಾಗಿಯೂ ಹೇಳಿದೆ.
ಹೊಚ್ಚ ಹೊಸ ಎಕ್ಸ್ಟೆರ್ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಲಭ್ಯವಿರುತ್ತದೆ. ಈ ಎಂಜಿನ್ ಗ್ರ್ಯಾಂಡ್ ಐ 10 ನಿಯೋಸ್, ಔರಾ, ಐ 20 ಮತ್ತು ವೆನ್ಯೂಗಳಲ್ಲಿ ಲಭ್ಯವಿದೆ. ಈ ಎಂಜಿನ್ 83 ಬಿಎಚ್ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗಿದೆ. 5 ಸ್ಪೀಡ್ಬ ಮ್ಯಾನುಯಲ್ ಮತ್ತು ಎಎಂಟಿ ಗೇರ್ ಬಾಕ್ಸ್ನೊಂದಿಗೆ ರಸ್ತೆಗೆ ಇಳಿಯುತ್ತದೆ ಎಂದು ಕಂಪನಿ ಹೇಳಿದೆ. ಬಿಡುಗಡೆಯ ಸಮಯದಲ್ಲಿ, ಹ್ಯುಂಡೈ ನಿಯೋಸ್ ಮತ್ತು ಔರಾದ ಮಾದರಿಯಲ್ಲೇ ಫ್ಯಾಕ್ಟರಿ ಫಿಟೆಡ್ ಸಿಎನ್ಜಿ ಕಿಟ್ ಕೂಡ ಲಭ್ಯವಿರುತ್ತದೆ. ಹೊಸ ಕಾಂಪಾಕ್ಟ್ ಎಸ್ಯುವಿನ ಔರಾ ಮತ್ತು ನಿಯೋಸ್ನ ಫ್ಲಾಟ್ಫಾರ್ಮ್ ಹಂಚಿಕೊಂಡಿದೆ ಎನ್ನಲಾಗಿದೆ.
ಎಕ್ಸ್ಟೆರ್ ಕಾರು ಇಎಕ್ಸ್, ಎಸ್, ಎಸ್ಎಕ್ಸ್, ಎಸ್ಎಕ್ಸ್ (ಒ) ಮತ್ತು ಎಸ್ಎಕ್ಸ್ (ಒ) ಕನೆಕ್ಟ್ ಎಂಬ ಐದು ವೇರಿಯೆಂಟ್ಗಳಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿದೆ. ಟಾಪ್ ಎಂಡ್ ಟ್ರಿಮ್ ಕನೆಕ್ಟೆಡ್ ಕಾರ್ ವೈಶಿಷ್ಟ್ಯಗಳೊಂದಿಗೆ ರಸ್ತೆಗಳಿಯಲಿದೆ ಎಂದು ಹೇಳಲಾಗಿದೆ.
ಹ್ಯುಂಡೈ ಎಕ್ಸ್ಟೈರ್ ಎಕ್ಸ್ಟೀರಿಯರ್ ಹೇಗಿದೆ?
ಹ್ಯುಂಡೈ ಈಗಎಕ್ಸ್ಟೆರ್ನ ಹೊರ ವಿನ್ಯಾಸವನ್ನು ಮಾತ್ರ ಬಹಿರಂಗ ಪಡಿಸಿದೆ. ದಕ್ಷಿಣ ಕೊರಿಯಾದಲ್ಲಿ ಎಸ್ಯುವಿಯ ಪರಿಕ್ಷೆಗಳು ನಡೆಯುತ್ತಿದ್ದು, ಕೆಲವೊಂದು ಚಿತ್ರಗಳು ಲಭ್ಯವಿದೆ. ಅದರಂತೆಯೇ ಈ ಕಾರು ಮಾರುಕಟ್ಟೆಗೆ ಇಳಿಯಬಹುದು ಎನ್ನಲಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಹ್ಯುಂಡೈ ಕಂಪನಿಯು ‘ರೇಂಜರ್ ಖಾಕಿ’ ಎಂಬ ಹೊಸ ಬಣ್ಣದ ಆಯ್ಕೆಯನ್ನು ನೀಡಲು ಆರಂಭಿಸಿದೆ. ಅದು ಎಕ್ಸ್ಟೈರ್ ಮೂಲಕ ಭಾರತದಲ್ಲಿ ಲಭ್ಯವಾಗಲಿದೆ.
ಭಾರತದಲ್ಲಿರುವ ಇತರ ಹ್ಯುಂಡೈ ಕಾರುಗಳಂತೆ ಇದು ಬಾಕ್ಸಿ ಲುಕ್ ಹೊಂದಿರಲಿದೆ. ಇದು ಎಚ್-ಮಾದರಿಯ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್, ಸ್ಪ್ಲಿಟ್ ಹೆಡ್ಲ್ಯಾಂಪ್ ಸೆಟ್ಅಪ್ ಹೊಂದಿದೆ. ಮುಂಭಾಗದಲ್ಲಿ ಅಗಲವಾದ, ಕಪ್ಪು ಗ್ರಿಲ್ ಮತ್ತು ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್ಗಳಿವೆ.
ಇದನ್ನೂ ಓದಿ : Tata Motors : ಹ್ಯಾರಿಯರ್, ಸಫಾರಿ, ಆಲ್ಟ್ರೋಜ್ ಮೇಲೆ 35,000 ರೂಪಾಯಿ ರಿಯಾಯಿತಿ
ಪ್ರೊಫೈಲ್ ವಿಚಾರಕ್ಕೆ ಬಂದಾಗ ಹ್ಯುಂಡೈನ ಅತ್ಯಂತ ಚಿಕ್ಕ ಎಸ್ಯುವಿ ಎಂದೆನಿಸಿರುವ ಎಕ್ಸ್ಟೆರ್ನ ಉದ್ದಗಲಕ್ಕೂ ದಪ್ಪ ಕ್ಲಾಡಿಂಗ್ ಇದೆ. ಡ್ಯುಯಲ್-ಟೋನ್ ಅಲಾಯ್ ವೀಲ್ಗಳು, ರೂಫ್ ರೇಲ್ಸ್, ಟೆಕ್ಸ್ಚರ್ ಫಿನಿಶ್ ಹೊಂದಿರುವ ಸಿ-ಪಿಲ್ಲರ್, ಫ್ಲೋಟಿಂಗ್ ರೂಫ್ ಎಫೆಕ್ಟ್ ಮತ್ತು ಡ್ಯುಯಲ್-ಟೋನ್ ಪೇಂಟ್ ಆಯ್ಕೆಗಳಿವೆ.
ನೇರವಾದ ಟೈಲ್ ಗೇಟ್, ಶಾರ್ಕ್ ಫಿನ್ ಆಂಟೆನಾ ಮತ್ತು ಹಿಂಭಾಗದ ಗಾಜಿನ ಮೇಲೆ ಇರಿಸಲಾದ ಸಣ್ಣ ಬಿಲ್ಟ್ಇನ್ ಸ್ಪಾಯ್ಲರ್ ಇದೆ. ಟೈಲ್ ಲ್ಯಾಂಪ್ ಗಳು ಎಚ್-ಮಾದರಿಯ ಎಲ್ಇಡಿ ಲೈಟಿಂಗ್ ಹೊಂದಿದೆ. ಹಿಂಭಾಗದ ಬಂಪರ್ ಎತ್ತರ ಮತ್ತು ಸಮತಟ್ಟಾಗಿದೆ. ಸ್ಕಿಡ್ ಪ್ಲೇಟ್ ನೊಂದಿಗೆ ಡ್ಯುಯಲ್-ಟೋನ್ ಕೂಡ ಕೊಡಲಾಗಿದೆ.
ಬಿಡುಗಡೆ ಎಂದು?
ಜುಲೈ ಕೊನೆಯಲ್ಲಿ ಅಥವಾ ಆಗಸ್ಟ್ ಆರಂಭದಲ್ಲಿ ಎಕ್ಸ್ಟೆರ್ ಎಸ್ಯುವಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಆ ವೇಳೆ ದರವೂ ಘೋಷಣೆಯಾಗಬಹುದು. ಈ ಎಸ್ಯುವಿ ವೆನ್ಯೂಗಿಂತ ಕೆಳಗಿನ ಸೆಗ್ಮೆಂಟ್ನಲ್ಲಿ ಲಭ್ಯವಾಗಲಿರುವ ಕಾರಣ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗಬಹುದು. ಭಾರತದಲ್ಲಿ ಟಾಟಾ ಪಂಚ್ ಮತ್ತು ಸಿಟ್ರೋನ್ಸಿ 3 ಕಾರಿಗೆ ಸ್ಪರ್ಧೆಯೊಡ್ಡಲಿದೆ.