ನವ ದೆಹಲಿ: ಹ್ಯುಂಡೈ ಮೋಟಾರ್ ತನ್ನ ಚೆನ್ನೈನ ತನ್ನ ಘಟಕದಲ್ಲಿ ಹೊಚ್ಚ ಹೊಸ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಎಕ್ಸ್‌ಟೆರ್ (Hyundai Exter) ಕಾರಿನ ಉತ್ಪಾದನೆ ಆರಂಭಿಸಿದೆ. ಜುಲೈ 10ರಂದು ಈ ಹೊಸ ಕಾರು ಭಾರತೀಯ ಮಾರುಕಟ್ಟೆಗೆ (Indian Car) ಬಿಡುಗಡೆಯಾಗಲಿದೆ. ಹೀಗಾಗಿ ಇನ್ನೂ ಮೂರು ವಾರ ಬಾಕಿ ಇರುವಂತೆಯೇ ಉತ್ಪಾದನೆ ಆರಂಭಿಸಿದೆ. ಇದು ಸಬ್‌ಕಾಂಪಾಕ್ಟ್ ಎಸ್‌ಯುವಿ (Sub compact SUV) ಸೆಗ್ಮೆಂಟ್‌ನಲ್ಲಿ ಹ್ಯುಂಡೈ ಕಂಪನಿಯ ಮೊದಲ ಕಾರು. ಕಾರಿನ ಬೆಲೆ ಜುಲೈ 10 ರಂದು ಘೋಷಣೆಯಾಗಲಿದು. 11,000 ರೂ.ಗಳ ಟೋಕನ್ ಮೊತ್ತಕ್ಕೆ ಈಗಾಗಲೇ ಬುಕಿಂಗ್ (Car Booking) ಈಗಾಗಲೇ ಪ್ರಾರಂಭವಾಗಿದೆ.
ಎಕ್ಸ್‌ಟೆರ್ (Hyundai Exter) ಗ್ರ್ಯಾಂಡ್ ಐ10 ನಿಯೋಸ್ ಮತ್ತು ಔರಾವನ್ನು ಆಧರಿಸಿ ರೂಪಿಸಿರುವ ಕಾರಾಗಿದ್ದರೂ ಎಕ್ಸ್ಟರ್ ಅವೆರಡಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿ ಕಾಣುತ್ತದೆ. ಅನೇಕ ಹ್ಯುಂಡೈ ಮಾದರಿಗಳಂತೆ, ಇದು ಮುಂಭಾಗದ ಗ್ರಿಲ್, ಸಿ-ಪಿಲ್ಲರ್ ಮತ್ತು ಟೈಲ್-ಲೈಟ್ ಪ್ಯಾರಾಮೆಟ್ರಿಕ್ ವಿನ್ಯಾಸ ಪಡೆದುಕೊಂಡಿದೆ ಎಕ್ಸ್‌ಟೆರ್ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು ಮತ್ತು ಟೈಲ್-ಲೈಟ್‌ಗಳಿಗೆ ಎಚ್‌ಮಾದರಿಯ ಸಿಗ್ನೇಚರ್ ಲುಕ್ ಹೊಂದಿದೆ. ಎಕ್ಸ್‌ಟೆರ್ ಅಲಾಯ್‌ಗಳು ವಿಶೇಷವಾಗಿದೆ. ಡೋರ್‌ಗಳ ಮೇಲೆ ಬಾಡಿ ಕ್ಲಾಡಿಂಗ್ ಇದೆ. ಇದು ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳ ಸ್ಕಿಡ್ ಪ್ಲೇಟ್‌ಗಳನ್ನೂ ಪಡೆದುಕೊಂಡಿದೆ.
ಎಕ್ಸ್‌ಟೆರ್ ಕಾರು ಹ್ಯುಂಡೈನ ಇತರ ಕಾರುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದರೂ. ಕ್ಯಾಬಿನ್ ಒಳಗೆ ಹಲವು ಹೋಲಿಕೆಗಳನ್ನು ಉಳಿಸಿಕೊಂಡಿದೆ. ಡ್ಯಾಶ್‌ಬೋ ರ್ಡ್ ವಿನ್ಯಾಸವು ಸಂಪೂರ್ಣವಾಗಿ ಹ್ಯುಂಡೈ ಲಕ್ಷಣ ಹೊಂದಿದೆ. 8-ಇಂಚಿನ ಟಚ್ ಸ್ಕ್ರೀನ್ ಕೂಡ ಇತರ ಕಾರುಗಳಂತಿದೆ. ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಪೂರ್ಣ ಡಿಜಿಟಲ್ ಘಟಕವಾಗಿದೆ, ಇದನ್ನು ಐ20 ಮತ್ತು ವೆರ್ನಾದಲ್ಲಿ ನೋಡಬಹುದು.
ಎಕ್ಸ್‌ಟೆರ್ ಸನ್‌ರೂಫ್ ಮತ್ತು ಡ್ಯಾಶ್ ಕ್ಯಾಮ್ ಅನ್ನು ಪಡೆಯುತ್ತದೆ. ಮೊದಲನೆಯದು ಧ್ವನಿ ಆದೇಶಗಳ (ವಾಯ್ಸ್ ಕಮಾಂಡ್) ಮೂಲಕ ನಿಯಂತ್ರಿಸಬಹುದಾದ ಸಿಂಗಲ್- ಪ್ಯಾನ್ ಘಟಕವಾಗಿದ್ದು ಇದು ಟಾಪ್ ಎಂಡ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಡ್ಯಾಶ್‌ಕ್ಯಾಮ್ ಕ್ಯಾಬಿನ್ ವೀಕ್ಷಣೆ ಮತ್ತು ಹೊರಗಿನ ವೀಕ್ಷಣೆ ಎರಡನ್ನೂ ಮಾಡುತ್ತದೆ. ಇದು ಮೂರು ರೆಕಾರ್ಡಿಂಗ್ ಮೋಡ್‌ಗಳನ್ನು ಹೊಂದಿದೆ.
ಇದನ್ನೂ ಓದಿ : Viral News : ನಾರಿ ಮುನಿದರೆ ಮಾರಿ! ಮಹಿಳೆಯ ಕೋಪಕ್ಕೆ ಡ್ಯೂಕ್ ಬೈಕ್ ಚಿಂದಿ!
ಎಕ್ಸ್ಟರ್ ಹ್ಯುಂಡೈನ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಅದು 83 ಬಿಎಚ್‌ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿಗೆ ಜೋಡಿಸಲಾಗಿದೆ. ಎಕ್ಸ್ಟರ್ ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ಅನ್ನು ಸಹ ಪಡೆಯುತ್ತದೆ. ಸಿಎನ್‌ಜಿಯಲ್ಲಿ ಎಂಜಿನ್ 69 ಬಿಎಚ್‌ಪಿ ಮತ್ತು 95.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಮಾತ್ರ ಇದು ಬರುತ್ತದೆ. ಎಕ್ಸ್‌ಟೆರ್ ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ನೀಡುವ ಮೊದಲ ಸಬ್ ಕಾಂಪ್ಯಾಕ್ಟ್ ಎಸ್ ಯುವಿಯಾಗಿದೆ.
ಬಿಡುಗಡೆ ಬಳಿಕ ಎಕ್ಸ್‌ಟೆರ್ ಹ್ಯುಂಡೈ ಸರಣಿಯಲ್ಲಿ ಅತ್ಯಂತ ಕೈಗೆಟುಕುವ ಎಸ್‌ಯುವಿ ಎನಿಸಿಕೊಳ್ಳಲಿದೆ. ಟಾಟಾ ಪಂಚ್, ಸಿಟ್ರೋಯೆನ್ ಸಿ3 ಮತ್ತು ಮಾರುತಿ ಸುಜುಕಿ ಇಗ್ನಿಸ್‌ಗೆ ಇದು ಪೈಪೋಟಿ ನೀಡಲಿದೆ.