ನವ ದೆಹಲಿ: ಭಾರತೀಯ ಮೂಲಕ ಮೋಟಾರ್ಸೈಕಲ್ ಕಂಪನಿಯಾಗಿರುವ ಹೀರೊ ಮೋಟೊಕಾರ್ಪ್ನ (Hero Motocorp) ಜನಪ್ರಿಯ ಬೈಕ್ ಹೀರೋ ಎಕ್ಸ್ ಪಲ್ಸ್ 200 4ವಿ ಸುಧಾರಿತ ಆವೃತ್ತಿ ಭಾರತದಲ್ಲಿ ಬಿಡುಗಡೆಗೊಂಡಿದೆ. ಆರಂಭಿಕ ಆವೃತ್ತಿಯ ಎಕ್ಸ್ ಪಲ್ಸ್ 200 4ವಿ ಬೈಕ್ನ ಎಕ್ಸ್ಶೋ ರೂಮ್ ಬೆಲೆ 1.44 ಲಕ್ಷ ರೂಪಾಯಿಗಳಾಗಿದ್ದು, ರ್ಯಾಲಿ ಆವೃತ್ತಿಯ ಬೈಕ್ನ ಬೆಲೆ 1.51 ಲಕ್ಷ ರೂಪಾಯಿಗಳು. ಈ ಬಾರಿ ರ್ಯಾಲಿ ಎಡಿಷನ್ ಹೆಸರು ಬದಲಿಸಲಾಗಿದ್ದು, ಎಕ್ಸ್ ಪಲ್ಸ್ 200 4ವಿ ಪ್ರೊ ಎಂದು ಮರುನಾಮಕರಣ ಮಾಡಲಾಗಿದೆ.
ಸುಧಾರಿನ ಆವೃತ್ತಿಯ ಎಕ್ಸ್ ಪಲ್ಸ್ 200 4ವಿ ಮೋಟಾರ್ ಸೈಕಲ್ನಲ್ಲಿ ಗಮನಾರ್ಹ ಬದಲಾವಣೆ ಮಾಡಲಾಗಿದೆ. ಇವುಗಳಲ್ಲಿ ಹೊಸ ಹಾಗೂ ಮರುವಿನ್ಯಾಸಗೊಳಿಸಿದ ಎಲ್ಇಡಿ ಹೆಡ್ಲೈಟ್ ಹಿಂದಿಗಿಂತ ಪ್ರಕಾಶಮಾನವಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ 60 ಎಂಎಂ ಎತ್ತರದ ವಿಂಡ್ಸ್ಕ್ರೀನ್ ಹೊಸ ಲುಕ್ ನೀಡುತ್ತಿದೆ. ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿ ಕಾಣುವ ಹೊಸ ಸ್ವಿಚ್ ಗೇರ್ ಮತ್ತು ಕಪ್ಪು ಬಣ್ಣವನ್ನು ಹೊಂದಿರುವ ಮರುವಿನ್ಯಾಸಗೊಳಿಸಿದ ದೊಡ್ಡ ಹ್ಯಾಂಡ್ ಗಾರ್ಡ್ಗಳ ಬೈಕ್ನ ನೋಟವನ್ನೇ ಬದಲಿಸಿದೆ.
200 ಸಿಸಿ ಆಯಿಲ್-ಕೂಲ್ಡ್ ಎಂಜಿನ್ ಈಗ ಒಬಿಡಿ -2 ಕಾಂಪ್ಲೈಂಟ್ ಮತ್ತು ಇ20-ಕಂಪ್ಯಾಟಿಬಲ್ ಆಗಿದೆ. ಇದು ಹಳೆಯ ಆವೃತ್ತಿಯಂತೆಯೇ 19.1 ಬಿಎಚ್ಪಿ ಪವರ್ ಹಾಗೂ 17.35 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸದಾಗಿ ಈ ಬೈಕ್ನಲ್ಲಿ ಸಿಂಗಲ್-ಚಾನೆಲ್ ಎಬಿಎಸ್ ಆಯ್ಕೆ ನೀಡಲಾಗಿದೆ. ರೋಡ್, ಆಫ್-ರೋಡ್ ಮತ್ತು ರ್ಯಾಲಿ ಎಂಬ ಮೂರು ರೈಡ್ ಮೋಡ್ಗಳನ್ನು ಕೊಡಲಾಗಿದೆ.
ಹೀರೋ ರೈಡರ್ಸ್ ಟ್ರಿಯಾಂಗಲ್ನಲ್ಲೂ ಬದಲಾವಣೆ ಮಾಡಿದೆ. ಪೂಟ್ ಪೆಗ್ಗಳು ಈಗ ಮೊದಲಿಗಿಂತ 35 ಎಂಎಂ ಕಡಿಮೆಗೊಳಿಸಲಾಗಿದೆ. ಆದರೆ, ರಿಯರ್ ಸೆಟ್ ಅನ್ನು 8 ಎಮ್ಎಮ್ ಎತ್ತರಕ್ಕೆ ಏರಿಸಲಾಗಿದೆ. ಈ ಮೂಲಕ ಸವಾರನಿಗೆ ಹೆಚ್ಚು ಸ್ಥಳಾವಕಾಶ ನೀಡಲಾಗಿದೆ. ಯುಎಸ್ಬಿ ಚಾರ್ಜರ್ ಅನ್ನು ಕಾಕ್ಪೀಟ್ ಬಳಿ ನೀಡಲಾಗಿದ್ದು ಎತ್ತರಿಸಿದ ಜಾಗದಲ್ಲಿ ನೀಡಲಾಗಿದೆ.
ಪ್ರೊ ವೇರಿಯೆಂಟ್ ಸ್ಟ್ಯಾಂಡರ್ಡ್ ಫಿಟ್ಮೆಂಟ್ ಆಗಿ ರ್ಯಾಲಿ ಕಿಟ್ ಹೊಂದಿದೆ. ದೀರ್ಘ ಪ್ರಯಾಣಕ್ಕೆ ಅನುಕೂಲಕರವಾಗಿರುವ ಸಸ್ಪೆನ್ಷನ್ ಬೆಂಚ್-ಶೈಲಿಯ ಸೀಟ್ ಮತ್ತು ಹ್ಯಾಂಡಲ್ ಬಾರ್ ರೈಸರ್ಗಳು ಸೇರಿಕೊಂಡಿವೆ.