ಬೆಂಗಳೂರು: ಎಸ್ಯುವಿಗಳು ಭಾರತೀಯ ಮಾರುಕಟ್ಟೆಯಲ್ಲಿ ಕ್ರೇಜ್ ಅನ್ನು ಹುಟ್ಟಿಸಿವೆ. ಮಧ್ಯಮ ಗಾತ್ರದ ಎಸ್ ಯುವಿಗಳು ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಇದು ಭಾರತೀಯ ಮಾರುಕಟ್ಟೆಯ ಸ್ಪರ್ಧಾತ್ಮಕ ವಿಭಾಗಗಳಲ್ಲಿ ಒಂದು ಆದರೆ ಕೆಲವು ವರ್ಷಗಳ ಹಿಂದೆ ಎಸ್ಯುವಿಗಳಲ್ಲಿ ಡೀಸೆಲ್ ಎಂಜಿನ್ಗಳೇ ಹೆಚ್ಚಿದ್ದವು. ಈಗ ಡೀಸೆಲ್ ಎಂಜಿನ್ಗಳು ಅಪ್ರಸ್ತುತ ಹಾಗೂ ನಿಷೇಧದ ಸಂಭಾವ್ಯ ಬೆದರಿಕೆ ಎದುರಿಸುತ್ತಿದೆ. ಹೀಗಾಗಿ ಪೆಟ್ರೋಲ್ ಎಂಜಿನ್ಗಳೇ ಬರುತ್ತಿವೆ. ಕಿಯಾ ಸೆಲ್ಟೋಸ್ ಮತ್ತು ಕ್ರೆಟಾ ಬಿಟ್ಟರೆ ಮಿಡ್ಸೈಜ್ ಎಸ್ಯುವಿಯಲ್ಲಿ ಡೀಸೆಲ್ ಆಯ್ಕೆಗಳು ಇಲ್ಲ. ಪೆಟ್ರೋಲ್ ಎಂಜಿನ್ ಆಯ್ಕೆ ಹೆಚ್ಚಾದಂತೆ ಮೈಲೇಜ್ ವಿಚಾರವೂ ಚರ್ಚೆಗೆ ಬಂದಿದೆ. ಡೀಸೆಲ್ಗಿಂತ ಪೆಟ್ರೋಲ್ ಕಡಿಮೆ ಮೈಲೇಜ್ ನೀಡುವ ಕಾರಣ ಯಾವ ಕಾರನ್ನು ತೆಗದುಕೊಂಡರೆ ಹೆಚ್ಚು ಮೈಲೇಜ್ ಸಿಗುತ್ತದೆ ಎಂಬ ಚರ್ಚೆಗಳು ಆರಂಭವಾಗಿದೆ. ಹೀಗಾಗಿ ಈ ಕೆಳಗೆ ಕೆಲವೊಂದು ಉತ್ತಮ ಮೈಲೇಜ್ ಕೊಡುವ ಕಾರುಗಳನ್ನು ಪಟ್ಟಿ ಮಾಡಿದ್ದೇವೆ. ನೋಡಿ ನಿಮಗೆ ಯಾವ ಕಾರು ಬೇಕು ಎಂಬುದನ್ನು ಖಚಿತಪಡಿಸಿ.
ಹೋಂಡಾ ಎಲಿವೇಟ್ – 16.11 ಕಿ.ಮೀ.
ಹೊಂಡಾದ ಇನ್ನೇನು ಬಿಡುಗಡೆಯಾಗಲಿರುವ ಈ ಕಾರಿನ ಬೆಲೆಗಳನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ, ಹೋಂಡಾ ತನ್ನ ಹೊಸ ಎಸ್ಯುವಿಯ ಮೈಲೇಝ್ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಕಾರು ಪ್ರತಿ ಲೀಟರ್ಗೆ 16.11 ಕಿ.ಮೀ ಸರಾಸರಿ ಮೈಲೇಜ್ ಹೊಂದಿದೆ. ಎಲಿವೇಟ್ 121 ಬಿಎಚ್ಪಿ. 1.5-ಲೀಟರ, ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 6 ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ನೊಂದಿಗೆ ನೀಡಲಾಗುತ್ತದೆ.
ಸ್ಕೋಡಾ ಕುಶಾಕ್ 1.0 ಟಿಎಸ್ಐ – 16.83 ಕಿ.ಮೀ.
ಸ್ಕೋಡಾ ಕಂಪನಿಯ ಕುಶಾಕ್ 1.0-ಲೀಟರ್ ಮೂರು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 115 ಬಿಎಚ್ಪಿ ಪವರ್ ಬಿಡುಗಡೆ ಮಾಡುತ್ತದೆ. ಇಂದು ಎಂಟ್ರಿ ಲೆವೆಲ್ ಎಂಜಿನ್. ಆದರೆ ಅದರ ಕಾರ್ಯಕ್ಷಮತೆ ಅತ್ಯುತ್ತಮವಾಗಿದೆ. ಇದು ಸರಾಸರಿ 16.83 ಕಿ.ಮೀ. ಮೈಲೇಜ್ ಕೊಡುತ್ತದೆ. 6 ಸ್ಪೀಡ್ ಮ್ಯಾನುವಲ್ ಅಥವಾ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರೊಂದಿಗೆ ಬರುತ್ತದೆ. ಇದು ಸ್ಟಾರ್ಟ್ / ಸ್ಟಾಪ್ ಟೆಕ್ನಾಲಜಿಯನ್ನೂ ಹೊಂದಿದೆ.
ಹ್ಯುಂಡೈ ಕ್ರೆಟಾ 1.5 – 16.85 ಕಿ.ಮೀ.
ಕ್ರೆಟಾದಲ್ಲಿ ಏಕೈಕ ಪೆಟ್ರೋಲ್ 1.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ನಾಲ್ಕು ಸಿಲಿಂಡರ್ ಎಂಜಿನ್ ಇದೆ. ಇದು ಎಂಜಿನ್ 115 ಬಿಎಚ್ಪಿ ಪವರ್ ಬಿಡುಗಡೆ ಮಾಡುತ್ತದೆ. 6-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದಕ್ಕೆ ಜೋಡಿಸಲಾಗಿದೆ. ಹಿಂದೆ ಇದ್ದ 1.4 ಲೀಟರ್ ಟರ್ಬೊ-ಪೆಟ್ರೋಲ್ ಇನ್ನು ಮುಂದೆ ಲಭ್ಯವಿಲ್ಲ. 6 ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೀಡಲಾಗಿದ್ದು, ಸರಾಸರಿ 16.85 ಕಿ.ಮೀ ಮೈಲೇಜ್ ನೀಡುತ್ತದೆ.
ಕಿಯಾ ಸೆಲ್ಟೋಸ್- 17.35 ಕಿ.ಮೀ.
ಕಿಯಾ ಸೆಲ್ಟೋಸ್ 1.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ ಇದು ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ರಸ್ತೆಗೆ ಇಳಿದಿದೆ. ಇತ್ತೀಚೆಗೆ ಈ ಕಾರಿನ ಫೇಸ್ಲಿಫ್ಟ್ ಬಿಡುಗಡೆಗೊಂಡಿದ್ದು ಮೈಲೇಜ್ ಕೂಡ ಹೆಚ್ಚಾಗಿದೆ. ಹಿಂದೆ 16.65 ಕಿ.ಮೀ ಮೈಲೇಜ್ ಕೊಡುತ್ತಿದ್ದರೆ ಈಗ 17.35 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ.
ಕಿಯಾ ಸೆಲ್ಟೋಸ್ 1.5 ಟರ್ಬೊ – 17.8 ಕಿ.ಮೀ.
1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 160 ಬಿಚ್ಪಿ ಪವರ್ ಬಿಡುಗಡೆ ಮಾಡುತ್ತದೆ. 6 ಸ್ಪೀಡ್ ಐಎಂಟಿ ಅಥವಾ 7 ಸ್ಪೀಡ್ ಡಿಸಿಟಿಯೊಂದಿಗೆ ನೀಡಲಾಗುವ ಈ ಕಾರು ಅತ್ಯಂತ ಶಕ್ತಿ ಶಾಲಿ ಎಂಜಿನ್ ಹೊಂದಿದೆ. ಇದರ ಸರಾಸರಿ ಇಂಧನ ದಕ್ಷತೆ 18.8 ಕಿ.ಮೀ
ಸ್ಕೋಡಾ ಕುಶಾಕ್ 1.5 ಟಿಎಸ್ಐ – 17.83 ಕಿ.ಮೀ.
1.5-ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ-ಪೆಟ್ರೋಲ್ ಮೋಟರ್ 6-ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ನೊಂದಿಗೆ ಜೋಡಿಸಲಾಗಿದೆ. ಕುಶಾಕ್ 1.5 ಟಿಎಸ್ಐ ಸರಾಸರಿ 17.83 ಕಿ.ಮೀ ಸರಾಸರಿ ಮೈಲೇಜ್ ನೀಡುತ್ತದೆ. ಇದು ಸ್ಟಾರ್ಟ್, ಸ್ಟಾಪ್ ಟೆಕ್ನಾಲಜಿ ಹೊಂದಿದೆ. ಇದರಲ್ಲಿ ಎಂಜಿನ್ ಸಿಲಿಂಡರ್ ನಿಷ್ಕ್ರೀಯಗೊಳಿಸುವ ಆಯ್ಕೆಯಿದೆ. ಲೋಡ್ ಕಡಿಮೆಯಾದ ತಕ್ಷಣ ಎರಡು ಸಿಲಿಂಡರ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.
ಫೋಕ್ಸ್ ವ್ಯಾಗನ್ ಟೈಗನ್ 1.5 ಟಿಎಸ್ ಐ – 18.18 ಕಿ.ಮೀ.
ಫೋಕ್ಸ್ ವ್ಯಾಗನ್ ಟೈಗುನ್ ಅದೇ 150 ಬಿಎಚ್ಪಿ ಪವರ್ ಬಿಡುಗಡೆ ಮಾಡುವ 1.5-ಲೀಟರ್ ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಮೋಟರ್ ಹೊಂದಿದೆ. ಅದೇ ಗೇರ್ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್ಬಾಕ್ಸ್ ಹೊಂದಿದೆ. ಇದು 18.18 ಮೈಲೇಜ್ ನೀಡುತ್ತದೆ. ಟೈಗುನ್ ಕೂಡ ನಿಷ್ಕ್ರಿಯ ಸ್ಟಾರ್ಟ್ / ಸ್ಟಾಪ್ ತಾಂತ್ರಿಕತೆ ಹೊಂದಿದೆ.
ಫೋಕ್ಸ್ ವ್ಯಾಗನ್ ಟೈಗನ್ 1.0 ಟಿಎಸ್ ಐ – 18.23 ಕಿ.ಮೀ.
ಕುಶಾಕ್ ನಂತೆಯೇ, ಟೈಗುನ್ ಕಾರಿನ 1.0-ಲೀಟರ್ ಮೂರು ಸಿಲಿಂಡರ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳೊಂದಿಗೆ ನೀಡಲಾಗಿದೆ. ಇದು ಸ್ಟಾರ್ಟ್ / ಸ್ಟಾಪ್ ತಂತ್ರಜ್ಞಾನವನ್ನು ಪಡೆಯುತ್ತದೆ. ಟೈಗುನ್ 18.23 ಕಿ.ಮೀ ಮೈಲೇಜ್ ನೀಡುತ್ತದೆ.
ಇದನ್ನೂ ಓದಿ : Maruti Suzuki : 87,599 ಎಸ್ ಪ್ರೆಸ್ಸೊ, ಇಕೋ ಕಾರುಗಳನ್ನು ವಾಪಸ್ ಪಡೆದುಕೊಂಡ ಮಾರುತಿ ಸುಜುಕಿ
ಮಾರುತಿ ಗ್ರ್ಯಾಂಡ್ ವಿಟಾರಾ/ ಟೊಯೊಟಾ ಹೈರೈಡರ್ 1.5 ಪೆಟ್ರೋಲ್ – 21.12 ಕಿ.ಮೀ.
ಎರಡೂ ಕಾರುಗಳು 1.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಸ್ಮಾರ್ಟ್ ಹೈಬ್ರಿಡ್ ಕಾರುಗಳು. ಎರಡೂ ಕಂಪನಿ ಸರಾಸರಿ 21.12 ಕಿ.ಮೀ ಮೈಲೇಜ್ ಘೋಷಿಸಿದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜತೆ ನೀಡಲಾಗಿದೆ.
ಗ್ರ್ಯಾಂಡ್ ವಿಟಾರಾ/ ಹೈರೈಡರ್ 1.5 ಸ್ಟ್ರಾಂಗ್-ಹೈಬ್ರಿಡ್ – 27.97 ಕಿ.ಮೀ.
ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ಕಾರುಗಳು 27.97 ಕಿ.ಮೀ ಮೈಲೇಜ್ನೊಂದಿಗೆ ಸೆಗ್ಮೆಂಟ್ನಲ್ಲಿ ಅಗ್ರಸ್ಥಾನದಲ್ಲಿವೆ. ಎರಡೂ ಎಸ್ ಯುವಿಗಳು 1.5-ಲೀಟರ್, ನಾಲ್ಕು ಸಿಲಿಂಡರ್, ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಜೋಡಿಸಲಾಗಿದೆ. ಇ ಸಿವಿಟಿ ಗೇರ್ ಬಾಕ್ಸ್ ಇದರಲ್ಲಿದೆ. ಹೀಗಾಗಿ ಗರಿಷ್ಠ ಮೈಲೇಜ್ ಸಾಧಿಸಲಾಗಿದೆ.