Site icon Vistara News

Jawa Yezdi : ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ನ ಜಾವಾ 42 ಬಾಬರ್ ರೆಡ್ ಶೀನ್‌ ಬಿಡುಗಡೆ

Jawa Yezdi

ಬೆಂಗಳೂರು: ಕಾರ್ಯಕ್ಷಮತೆ- ಕ್ಲಾಸಿಕ್ ಮೋಟಾರ್‌ಸೈಕಲ್‌ಗಳಿಗೆ ಹೆಸರುವಾಸಿಯಾಗಿರುವ ಪ್ರಮುಖ ಬೈಕ್ ತಯಾರಕರಾದ ಜಾವಾ ಯೆಜ್ಡಿ (Jawa Yezdi) ಮೋಟಾರ್‌ ಸೈಕಲ್ಸ್ ಇಂದು ಮುಂಬೈನಲ್ಲಿ ನಡೆದ ಆಲ್ ಯು ಕ್ಯಾನ್ ಸ್ಟ್ರೀಟ್ ಫೆಸ್ಟಿವಲ್ (ಎವೈಸಿಎಸ್) ನಲ್ಲಿ ಅತ್ಯಾಕರ್ಷಕವಾದ ಜಾವಾ 42 ಬಾಬರ್ ರೆಡ್ ಶೀನ್ ಅನ್ನು ಬಿಡುಗಡೆ ಮಾಡಿದೆ. ರೂ.2.29 ಲಕ್ಷ ಬೆಲೆಯನ್ನು (ಎಕ್ಸ್ ಶೋ ರೂಂ ದೆಹಲಿ) ಹೊಂದಿರುವ ಮತ್ತು ವೇರಿಯಂಟ್ ಗಳಲ್ಲಿ ಅಗ್ರ ಸ್ಥಾನ ಪಡೆದಿರುವ ರೆಡ್ ಶೀನ್ ಜನಪ್ರಿಯ ಬ್ಲ್ಯಾಕ್ ಮಿರರ್ ಎಡಿಷನ್ ಗೆ ಹೊಸ ಸೇರ್ಪಡೆ ಆಗಿದೆ.

ಫ್ಯಾಷನ್, ಸಂಗೀತ ಮತ್ತು ಕಲೆಯೊಂದಿಗೆ ಆಚರಿಸುವ ಎವೈಸಿಎಸ್ ಫೆಸ್ಟಿವಲ್ ನಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮವು ರೋಮಾಂಚಕ ಜೀವನಶೈಲಿ ಮತ್ತು ಮೋಟಾರ್‌ಸೈಕ್ಲಿಂಗ್ ಪೋಷಿಸುವ ಜಾವಾ ಯೆಜ್ಡಿ ಮೋಟಾರ್‌ಸೈಕಲ್‌ನ ಬದ್ಧತೆಗೆ ಸಾಕ್ಷಿಯಾಗಿದೆ.

ಜಾವಾ 42 ಬಾಬರ್‌ನ ಯಶಸ್ಸಿನ ಬಳಿಕ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಕಂಪನಿಯು ಜಾವಾ 42 ರೆಡ್ ಶೀನ್ ಮೂಲಕ ತನ್ನ ಬಾಬರ್ ವಿಭಾಗದ ನಾಯಕತ್ವವನ್ನು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ. ಆಕರ್ಷಕವಾದ ಕೆಂಪು ಬಣ್ಣದ ಫ್ಯುಯಲ್ ಟ್ಯಾಂಕ್ ಅನ್ನು ಹೊಂದಿರುವ ಈ ಹೊಸ ವೇರಿಯಂಟ್ ಬೋಲ್ಡ್ ಆಗಿದೆ ಮತ್ತು ವಿಶಿಷ್ಟ ರೀತಿಯ ರೈಡ್ ಆನಂದಿಸುವ ಕಿರಿ ವಯಸ್ಸಿನ ಸವಾರರ ಗಮನ ಸೆಳೆಯಲೆಂದೇ ವಿನ್ಯಾಸ ಮಾಡಲಾಗಿದೆ.

ವಿನ್ಯಾಸ ಹೇಗಿದೆ?

ರೆಡ್ ಶೀನ್ ಬೈಕ್ ಅಪೂರ್ವವಾದ ಕ್ರೋಮ್ ಫಿನಿಶ್ ಹೊಂದಿರುವ ಟ್ಯಾಂಕ್ ಮತ್ತು ಡೈಮಂಡ್- ಕಟ್ ಅಲಾಯ್ ವೀಲ್ ಗಳನ್ನು ಹೊಂದಿದೆ. ಜೊತೆಗೆ ಈ ಬೈಕ್ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಇದರ ಶಕ್ತಿಶಾಲಿ 334 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ 29.9 ಪಿಎಸ್ ಮತ್ತು 30ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮೃದುವಾದ ಮತ್ತು ನಿಖರವಾದ ಆರು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಈ ಬೈಕ್ ಹೊಂದಿದೆ. ಅಸಿಸ್ಟ್ ಆ್ಯಂಡ್​ ಸ್ಲಿಪ್ ಕ್ಲಚ್, ಏಳು- ಹಂತದ ಪ್ರೀ- ಲೋಡ್ ಅಡ್ಜಸ್ಟೇಬಲ್ ರೇರ್ ಮೊನೊ- ಶಾಕ್, ಎರಡು- ಹಂತದ ಅಡ್ಜಸ್ಟೇಬಲ್ ಸೀಟ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಡಿಜಿಟಲ್ ಕನ್ಸೋಲ್ ಮತ್ತು ಪೂರ್ಣ ಎಲ್ಇಡಿ ಲೈಟಿಂಗ್ ಅನ್ನು ಒದಗಿಸುವ ಮೂಲಕ ರೈಡರ್ ಗಳಿಗೆ ಉತ್ತಮ ಸೌಕರ್ಯವನ್ನು ಒದಗಿಸಲಾಗಿದೆ.

ಜಾವಾ 42 ಬಾಬರ್ ಅದ್ಭುತವಾದ ಯಶಸ್ಸನ್ನು ಕಂಡಿದೆ ಮತ್ತು ರೆಡ್ ಶೀನ್‌ ಅನ್ನು ಪರಿಚಯ ಮಾಡುವ ಮೂಲಕ ನಮ್ಮ ಕುಟುಂಬವನ್ನು ವಿಸ್ತರಣೆ ಮಾಡಲು ನಾವು ಸಂತೋಷ ಹೊಂದಿದ್ದೇವೆ ಎಂದು ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಸಿಇಓ ಆಶಿಶ್ ಸಿಂಗ್ ಜೋಶಿ ಹೇಳಿದ್ದಾರೆ. ಮಾತು ಮುಂದುವರಿಸುತ್ತಾ ಅವರು, “ಈ ಅತ್ಯಾಕರ್ಷಕ ವೇರಿಯಂಟ್ ಬಾಬರ್ ವಿಭಾಗಕ್ಕೆ ಅತ್ಯಪೂರ್ವ ಶಕ್ತಿ ಮತ್ತು ಹುಮ್ಮಸ್ಸನ್ನು ತುಂಬಲಿದೆ. ತಮ್ಮ ವಿಶೇಷತೆಯನ್ನು ಪ್ರತಿಬಿಂಬಿಸುವ ಮೋಟಾರ್‌ಸೈಕಲ್ ಗೆ ಹಂಬಲಿಸುವ ಹೊಸ ತಲೆಮಾರಿನ ಸವಾರರಿಗಾಗಿ ಈ ಬೈಕ್ ಅನ್ನು ವಿನ್ಯಾಸ ಗೊಳಿಸಲಾಗಿದೆ. ಆಲ್ ಯು ಕ್ಯಾನ್ ಸ್ಟ್ರೀಟ್ ಫೆಸ್ಟಿವಲ್‌ನಲ್ಲಿ ಬಿಡುಗಡೆ ಮಾಡುವುದರ ಮೂಲಕ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ನ ಸ್ವಯಂ ಅಭಿವ್ಯಕ್ತಿ ಮತ್ತು ರೈಡ್ ಮೇಲಿನ ಪ್ರೀತಿಯನ್ನು ಆಚರಿಸುವ ಸಂಸ್ಕೃತಿಯನ್ನು ಪೋಷಣೆ ಮಾಡುವ ಬದ್ಧತೆಯು ಸಾಕಾರಗೊಂಡಿದೆ” ಎಂದು ಹೇಳಿದರು.

ಇದನ್ನೂ ಓದಿ: Magnite GEZA CVT : ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ನಿಸ್ಸಾನ್

42 ಬಾಬರ್ ರೆಡ್ ಶೀನ್ ಬಿಡುಗಡೆ ಮಾಡುವ ಮೂಲಕ ಕಂಪನಿಯು ಅತ್ಯಾಧುನಿಕ ಶೈಲಿ ಮತ್ತು ಕಾಲಾತೀತ ಪರಂಪರೆ ಎರಡನ್ನೂ ಹೊಂದಿರುವ ಮೋಟಾರ್‌ಸೈಕಲ್ ಅನ್ನು ಬಯಸುವ ಜೆನ್- ಝಡ್ ಗ್ರಾಹಕರಿಂದ ಅಪಾರ ಆಸಕ್ತಿಯನ್ನು ನಿರೀಕ್ಷೆ ಮಾಡುತ್ತಿದೆ. ಬೀದಿಗಳಲ್ಲಿ ಚಲಿಸುವ ತಮ್ಮ ಬೈಕ್ ಅನ್ನು ತಿರುಗಿ ನೋಡಬೇಕು ಎಂದು ಬಯಸುವ ಸವಾರರಿಗೆ ರೆಡ್ ಶೀನ್ ಅತ್ಯುತ್ತಮ ಆಯ್ಕೆಯಾಗಿದೆ. ಜಾವಾ 42 ಬಾಬರ್ ಜೊತೆಗೆ ಇತ್ತೀಚೆಗೆ ಪರಿಷ್ಕರಣೆ ಮಾಡಿದ ಜಾವಾ ಪೆರಾಕ್ ಮೂಲಕ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಪ್ರಸ್ತುತ ‘ಫ್ಯಾಕ್ಟರಿ ಕಸ್ಟಮ್’ ಪೋರ್ಟ್ ಪೋಲಿಯೋವನ್ನು ಒದಗಿಸುತ್ತಿದೆ. ಅವುಗಳೊಂದಿಗೆ ಜಾವಾ 350, ಜಾವಾ 42, ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಅನ್ನು ಒಳಗೊಂಡಿರುವ ಆಕರ್ಷಕ ಉತ್ಪನ್ನ ಶ್ರೇಣಿಯನ್ನು ಕಂಪನಿಯು ಗ್ರಾಹಕರಿಗೆ ಒದಗಿಸುತ್ತಿದೆ.

ಜಾವಾ ಪೆರಾಕ್ ಮತ್ತು ವಿವಿಧ ಜಾವಾ 42 ಬಾಬರ್ ವೇರಿಯಂಟ್ ಗಳ (ಎಕ್ಸ್ ಶೋ ರೂಂ ದೆಹಲಿ) ಬೆಲೆ ಈ ಕೆಳಗಿನಂತಿದೆ:

Exit mobile version