Site icon Vistara News

Mahindra Thar : ಜಿಮ್ನಿ ಎಫೆಕ್ಟ್​​, ಶೀಘ್ರ ರಸ್ತೆಗಿಳಿಯಲಿದೆ 5 ಡೋರ್​ನ ಮಹೀಂದ್ರಾ ಥಾರ್​

Jimny Effect, 5-door Mahindra Thar to hit the roads soon

#image_title

ನವ ದೆಹಲಿ: ಕಳೆದ ಜನವರಿಯಲ್ಲಿ ಗ್ರೇಟರ್​ ನೋಯ್ಡಾದಲ್ಲಿ ನಡೆದ ಆಟೋ ಎಕ್ಸ್​ಪೋದಲ್ಲಿ ಮಾರುತಿ ಸುಜುಕಿ ಕಂಪನಿ ಜಿಮ್ನಿ ಕಾರನ್ನು ಅನಾವರಣ ಮಾಡಿತ್ತು. ಈಗಾಗಲೇ ಕಾರಿನ ಬುಕಿಂಗ್ ಆರಂಭಗೊಂಡಿದೆ. ಭಾರತದ ಜನಪ್ರಿಯ ಆಫ್​​ರೋಡಿಂಗ್ ಕಾರು ಥಾರ್​ಗೆ ಪೈಪೋಟಿ ನೀಡುವ ಉದ್ದೇಶದಿಂದ ಈ ಕಾರನ್ನು ಮಾರುತಿ ಸುಜುಕಿ ರಸ್ತೆಗಿಳಿಸಿತ್ತು. ಇದರಿಂದ ತಕ್ಷಣವೇ ಎಚ್ಚೆತ್ತುಕೊಂಡಿರುವ ಮಹಿಂದ್ರಾ ಕಂಪನಿಯೂ 5 ಡೋರ್​ಗಳ ಥಾರ್​ (Mahindra Thar) ಕಾರನ್ನು ರಸ್ತೆಗೆ ಇಳಿಸಲು ಮುಂದಾಗಿದ್ದು, ಅದರ ಪರೀಕ್ಷೆ ನಡೆಯುತ್ತಿದೆ.

ಮಹೀಂದ್ರಾ ಕಂಪನಿ 2020ರಲ್ಲಿ ಬಿಡುಗಡೆ ಮಾಡಿರುವ ಥಾರ್​ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿತ್ತು. ಅದಕ್ಕೆ ದೊಡ್ಡ ಮಟ್ಟದ ಬೇಡಿಕೆಯೂ ಸೃಷ್ಟಿಯಾಗಿತ್ತು. ದೀರ್ಘ ಅವಧಿಯ ವೇಟಿಂಗ್​ ಪಿರಿಯೆಡ್​ (ಕಾಯುವಿಕೆ ಅವಧಿ) ಡಿಮ್ಯಾಂಡ್ ಎಷ್ಟಿದೆ ಎಂಬುದಕ್ಕೆ ಸಾಕ್ಷಿ. ಈ ಸೆಗ್ಮೆಂಟ್​ಗೆ ಬೇಡಿಕೆ ಹೆಚ್ಚಾಗಿರುವುದನ್ನು ಅರಿತಿರುವ ಸುಜುಕಿಯೂ ಜಿಮ್ನಿಯನ್ನು ರಸ್ತೆಗೆ ಇಳಿಸಿತ್ತು. ಅದೂ ಐದು ಡೋರ್​ಗಳಲ್ಲಿ. ಈ ಮೂಲಕ ತನ್ನ ಜನಪ್ರಿಯ ಬ್ರಾಂಡ್​ಗೆ ಸಡ್ಡು ಹೊಡೆಯಲು ಮುಂದಾದ ಸುಜುಕಿಗೆ ಪೈಪೋಟಿ ಕೊಡುವುದಕ್ಕೆ ಮಹೀಂದ್ರಾ ಮುಂದಾಗಿದೆ.

3 ಡೋರ್​ನ ಥಾರ್​ ಆಗಸ್ಟ್​ 15ರಂದು ಬಿಡುಗಡೆ ಮಾಡಿ, ತಕ್ಷಣವೇ ಬುಕಿಂಗ್​ ಓಪನ್​ ಮಾಡಲಾಗಿತ್ತು. ಅದೇ ರೀತಿಯಲ್ಲಿ 5 ಡೋರ್​ನ ಥಾರ್ ಕೂಡ ಮುಂದಿನ ಆಗಸ್ಟ್​​ನಲ್ಲೇ ಬಿಡುಗಡೆಯಾಗಬಹುದು ಎನ್ನಲಾಗಿದೆ.

ಇದನ್ನೂ ಓದಿ : Auto Expo 2023 | ಮಾರುತಿಯ ಬಹುನಿರೀಕ್ಷಿತ ಜಿಮ್ನಿ ಅನಾವರಣ, ಬುಕಿಂಗ್ ಆರಂಭ

ಕೆಲವು ವಾರಗಳ ಹಿಂದೆ ಮಹೀಂದ್ರಾ ರಿಯರ್ ವಿಲ್​ ಡ್ರೈವ್​ ಆವೃತ್ತಿಯ ಥಾರ್​ ಕಾರನ್ನು ಬಿಡುಗಡೆ ಮಾಡಿತ್ತು. ಕಾರಿನ ಟ್ಯಾಕ್ಸ್​ ಕಡಿಮೆ ಮಾಡುವ ಮೂಲಕ ಕಡಿಮೆ ಬೆಲೆಗೆ ನೀಡುವುದೇ ಅವರ ಉದ್ದೇಶವಾಗಿತ್ತು. ಈ ಕಾರಿನ ಬೆಲೆ 9.99 ಲಕ್ಷ ರೂಪಾಯಿಗೆ ಆರಂಭಗೊಳ್ಳುತ್ತದೆ. 5 ಡೋರ್​ನ ಮಹೀಂದ್ರಾ ಕಾರು ಕೂಡ ರಿಯರ್ ವೀಲ್​ ಡ್ರೈವ್​ ಆವೃತ್ತಿಯಲ್ಲೇ ಲಭ್ಯವಾಗಲಿದೆ.

Exit mobile version