Site icon Vistara News

Hero Motocorp : ಮತ್ತೆ ರಸ್ತೆಗಿಳಿಯಲಿದೆ ಜನಪ್ರಿಯ ಬೈಕ್​ ಕರೀಷ್ಮಾ

karishma-a-popular-bike-of-yesteryear-is-going-to-hit-the-road-again

#image_title

ಬೆಂಗಳೂರು: ಒಂದು ಕಾಲದಲ್ಲಿ ಭಾರತದ ಬೈಕ್​ಗಳ ಮಾರುಕಟ್ಟೆಯಲ್ಲಿ ಕಣ್ಮನ ಸೆಳೆದಿದ್ದ ಹೀರೊ ಹೋಂಡಾ ಕರೀಷ್ಮಾ ಮತ್ತೆ ರಸ್ತೆಗಿಳಿಯಲಿದೆ ಎಂಬ ಗುಸುಗುಸು ಸುದ್ದಿ ಹರಡುತ್ತಿದೆ. 100 ಸಿಸಿಯ ಬೈಕ್​ಗಳೇ ಹೆಚ್ಚಿದ್ದ ಕಾಲದಲ್ಲಿ 223 ಸಿಸಿ ಪವರ್​ನೊಂದಿಗೆ ಬಂದಿದ್ದ ಈ ಬೈಕ್​ ಯುವಕರ ಮನಗೆದ್ದಿತ್ತು. 2007ರಲ್ಲಿ ಮಾರುಕಟ್ಟೆಗೆ ಇಳಿದ ಬಳಿಕ ಆಗಿನ ಕಾಲದ ಯುವ ಮನಸ್ಸುಗಳ ನೆಚ್ಚಿನ ಬೈಕ್​ ಎನಿಸಿಕೊಂಡಿತ್ತು,. ಆದರೆ, ಬಜಾಜ್​ನ ಪಲ್ಸರ್​ ಸೇರಿದಂತೆ ನಾನಾ ಕಂಪನಿಗಳ ಪ್ರವೇಶ ಬಳಿಕ ಬೇಡಿಕೆ ಇಳಿಸಿಕೊಂಡಿತ್ತು.

ಹೀರೊ ಮತ್ತು ಹೋಂಡಾ ಕಂಪನಿಯ ಒಪ್ಪಂದ ಕೊನೆಯಾದ ಬಳಿಕವೂ ಹೀರೊ ಕಂಪನಿ ಈ ಬೈಕ್​ ಮಾರಾಟವನ್ನು ಮುಂದುವರಿಸಿತ್ತು. ಆದರೆ, ಹೆಚ್ಚು ದಿನಗಳ ಕಾಲ ಅದಕ್ಕೆ ಆದ್ಯತೆ ನೀಡದ ಕಾರಣ ಇತಿಹಾಸದ ಪುಟ ಸೇರಿಕೊಂಡಿತ್ತು. ಕೆಲವು ದಿನಗಳ ಇಹಿಂದೆ ಹೀರೋ ಕಂಪನಿಯು ಕರೀಷ್ಮಾ ಬೈಕ್​ನ ಟ್ರೇಡ್​ ಮಾರ್ಕ್​ ಪಡೆಯುವುದಕ್ಕೆ ಅರ್ಜಿ ಸಲ್ಲಿಸಿದ್ದು ಸುದ್ದಿಯಾಗಿತ್ತು. ಎರಡೂ ಕರೀಷ್ಮಾ ಬೈಕ್​ಗೆ ಸಂಬಂಧಿಸಿದ್ದು ಎನ್ನಲಾಗಿದೆ. ಹೀಗಾಗಿ ತಕ್ಷಣಕ್ಕೆ ಅಲ್ಲದಿದ್ದರೂ ಸ್ವಲ್ಪ ದಿನಗಳ ಬಳಿಕ ಮಾರುಕಟ್ಟೆಗೆ ಇಳಿಯುವುದು ಖಾತ್ರಿ ಎನಿಸಿದೆ.

ಹೀರೊ ಕಂಪನಿ ಸಲ್ಲಿಕೆ ಮಾಡಿರುವ ಟ್ರೇಡ್​ ಮಾರ್ಕ್​ ಇಂತಿದೆ. ಕರೀಷ್ಮಾ ಎಕ್ಸ್​ಎಮ್​ಆರ್​ ಹಾಗೂ ಕರೀಷ್ಮಾ ಎಕ್ಸ್​ಎಮ್​ಆರ್​ 210. ಹೀಗಾಗಿ ಮಾರುಕಟ್ಟೆಗೆ ಇಳಿಯಲಿರುವ ಕರೀಷ್ಮಾ ಬೈಕ್ 210 ಸಿಸಿ ಇರಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಂದು ಅದು ಕೇವಲ ಊಹೆಯಷ್ಟೇ. ಮಾಡೆಲ್​ ಸಂಖ್ಯೆಯನ್ನು ಆ ರೀತಿ ಇಡುವ ಸಾಧ್ಯತೆಗಳು ಕೂಡ ಇದೆ ಎನ್ನಲಾಗಿದೆ.

ಇದನ್ನೂ ಓದಿ : Hero MotoCorp : ಏಪ್ರಿಲ್​ 1ರಿಂದ ಹೀರೊ ಕಂಪನಿಯ ಬೈಕ್​ಗಳ ಬೆಲೆ ಏಕಕಾಲಕ್ಕೆ ಏರಿಕೆ; ಕಾರಣ ಇಲ್ಲಿದೆ ಕೇಳಿ

ಹೀರೊ ಕಂಪನಿಯು ಈಗಾಗಲೇ ಮಾರುಕಟ್ಟೆಯಲ್ಲಿ 200 ಸಿಸಿಯ ಎಕ್ಸ್​ಪಲ್ಸ್​ ಬೈಕ್​ ಅನ್ನು ಹೊಂದಿದೆ. ಹೀಗಾಗಿ ಕರೀಷ್ಮಾ ಕೂಡ ಇದೇ ಎಂಜಿನ್​ನೊಂದಿಗೆ ಬರಲಿದೆ. ಆದರೆ, ಬೋರ್​ ಮತ್ತು ಸ್ಟ್ರೋಕ್ ಹೆಚ್ಚಿಸುವ ಮೂಲಕ ಅದನ್ನು 210ಕ್ಕೆ ಏರಿಕೆ ಮಾಡುವ ಸಾಧ್ಯತೆಗಳು ಕೂಡ ಇದೆ. ಎಂಜಿನ್​ ಲಿಕ್ವಿಡ್​ ಕೂಲ್ಡ್​ ಆಗಿರಬಹುದು ಎಂದು ಹೇಳಲಾಗುತ್ತಿದೆ.

ಹೀರೋ ಹೋಂಡಾದ ಕರಿಷ್ಮಾ ಅತ್ಯಂತ ಕ್ಷಿಪ್ರಗತಿಯ ಪವರ್​ಫುಲ್​ ಬೈಕ್​ ಎಂಜಿನ್​ ಎಂಬ ಖ್ಯಾತಿ ಹೊಂದಿತ್ತು. ಅದೇ ಮಾದರಿಯನ್ನು ಹೊಸ ಮಾಡೆಲ್​ನಲ್ಲಿಯೂ ಉಳಿಸಿಕೊಳ್ಳುವ ಸಾಧ್ಯತೆಗಳು ಇವೆ. ಹೊಸ ಬೈಕ್​ ಕೆಟಿಎಮ್​ 210 ಮತ್ತು ಸುಜುಕಿಯ ಜಿಕ್ಸರ್​ ಎಸ್​ಎಫ್​ 250ಗೆ ಸ್ಪರ್ಧೆ ನೀಡುವ ಸಾಧ್ಯತೆಗಳಿವೆ.

Exit mobile version