ನವ ದೆಹಲಿ: ಕಿಯಾ ಮೋಟಾರ್ಸ್ ಇತ್ತೀಚೆಗೆ ಸೆಲ್ಟೋಸ್ (Kia Seltos) ಫೇಸ್ ಲಿಫ್ಟ್ ಕಾರನ್ನು ಬಿಡುಗಡೆ ಮಾಡಿದೆ. ಹೊಸ ಸ್ಟೈಲಿಂಗ್, ಹೆಚ್ಚಿನ ಫೀಚರ್ಗಳು ಮತ್ತು ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ನೊಂದಿಗೆ ಭಾರತದಲ್ಲ ಕಾರು ಬಿಡುಗಡೆಗೊಂಡಿದೆ. ಈಗ, ಕಂಪನಿಯು ಸೆಲ್ಟೋಸ್ನೊಂದಿಗೆ ಲಭ್ಯವಿರುವ ಪ್ರತಿಯೊಂದು ಪವರ್ ಟ್ರೇನ್ನ ಮೈಲೇಜ್ ಇದೀಗ ಅನಾವರಣಗೊಂಡಿದೆ. ಗಮನಾರ್ಹವಾಗಿ, ಸೆಲ್ಟೋಸ್ ನ ಎಲ್ಲಾ ಆವೃತ್ತಿಗಳು ಎಂಜಿನ್ ಸ್ಟಾರ್ಟ್ / ಸ್ಟಾಪ್ ವ್ಯವಸ್ಥೆಯನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ. ಇದು ಮೈಲೇಜ್ ಹೆಚ್ಚಲು ಕಾರಣವಾಗಿದೆ.
ಸೆಲ್ಟೋಸ್ ವೇರಿಯೆಂಟ್ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ನೊಂದಿಗೆ ಆರಂಭವಾಗುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ನೊಂದಿಗೆ ಲಭ್ಯವಿದೆ. ವಾಸ್ತವವಾಗಿ ಇದು ಸರಿಯಾದ ಮೂರು ಪೆಡಲ್ ಗೇರ್ ಬಾಕ್ಸ್ನೊಂದಿಗೆ ಲಭ್ಯವಿರುವ ಏಕೈಕ ಎಂಜಿನ್. 1.5 ಪೆಟ್ರೋಲ್ ಮ್ಯಾನುಯಲ್ ಟ್ರಾನ್ಸ್ಮಿಷನ್ 17.0 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಿಯಾ ಹೇಳಿಕೊಂಡಿದ್ದು, ಆಟೋಮ್ಯಾಟಿಕ್ (ಸಿವಿಟಿ) 17.7 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಿದೆ.
ಮುಂದಿನ ಎಂಜಿನ್ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 160 ಬಿಎಚ್ಪಿ ಪವರ್ ನೀಡುತ್ತದೆ. ಇದು ಈ ಸೆಗ್ಮೆಂಟ್ನ ವರ್ಗದಲ್ಲಿ ಅತ್ಯಂತ ಶಕ್ತಿಶಾಲಿ ಎಂಜಿನ್. 6 ಸ್ಪೀಡ್ ಐಎಂಟಿ ಅಥವಾ 7 ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ, ಮೊದಲನೆಯದು 17.7 ಕಿ.ಮೀ ಮೈಲೇಜ್ ಕೊಟ್ಟರೆ ಎರಡನೆಯದು 17.9 ಕಿ.ಮೀ ನೀಡುತ್ತದೆ. ಇದು ಈಗ ಉತ್ಪಾದನೆ ನಿಲ್ಲಿಸಲಾಗಿರುವ 1.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಗಿಂತ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ. ಇದು ಮ್ಯಾನುವಲ್ ಮತ್ತು ಡಿಸಿಟಿ ಗೇರ್ ಬಾಕ್ಸ್ ನೊಂದಿಗೆ ಕ್ರಮವಾಗಿ 16.1 ಕಿ.ಮೀ ಮತ್ತು 16.5 ಕಿ.ಮೀ ಮೈಲೇಜ್ ನೀಡುತ್ತಿತ್ತು.
ಇದನ್ನೂ ಓದಿ : Honda Elevate : ಹೋಂಡಾ ಕಂಪನಿಯ ಮುಂಬರುವ ಎಸ್ಯುವಿ ಕಾರಿನ ಮೈಲೇಜ್ ವಿವರ ಬಹಿರಂಗ
ಕೊನೆಯದಾಗಿ 116 ಬಿಎಚ್ಪಿ ಪವರ್ ನೀಡುವ 1.5-ಲೀಟರ್ ಡೀಸೆಲ್ ಎಂಜಿನ್ ಇದೆ. ಇದು 6-ಸ್ಪೀಡ್ ಐಎಂಟಿ ಅಥವಾ 6ನ ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಈ ಸೆಗ್ಮೆಂಟ್ನಲ್ಲಿ ಡೀಸೆಲ್ ಎಂಜಿನ್ ಪಡೆಯುವ ಎರಡು ಎಸ್ಯುವಿಗಳಲ್ಲಿ ಸೆಲ್ಟೋಸ್ ಒಂದು. ನಿರೀಕ್ಷೆಯಂತೆ ಇದು ಸೆಲ್ಟೋಸ್ ಶ್ರೇಣಿಯಲ್ಲಿ ಅತ್ಯಂತ ಪರಿಣಾಮಕಾರಿ ಎಂಜಿನ್. ಡೀಸೆಲ್-ಐಎಂಟಿ 20.7 ಕಿ.ಮೀ ಇಂಧನ ಮಿತವ್ಯಯವನ್ನು ಹೊಂದಿದ್ದರೆ, ಆಟೋಮ್ಯಾಟಿಕ್ 19.1 ಕಿ.ಮೀ ಮೈಲೇಜ್ ನೀಡುತ್ತದೆ.
ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕಿಯಾ ಸೆಲ್ಟೋಸ್ ಮೈಲೇಜ್ ಎಷ್ಟು?
ಮಧ್ಯಮ ಗಾತ್ರದ ಎಸ್ ಯುವಿ ವಿಭಾಗಕ್ಕೆ ಇತ್ತೀಚಿನ ಸೇರ್ಪಡೆ ಹೋಂಡಾ ಎಲಿವೇಟ್. ಹೋಲಿಕೆಯಲ್ಲಿ, ಹೋಂಡಾ ಪೆಟ್ರೋಲ್-ಎಂಟಿಗೆ 15.31 ಕಿ.ಮೀ ಮತ್ತು ಪೆಟ್ರೋಲ್ ಸಿವಿಟಿಗೆ 16.92 ಕಿ.ಮೀ ಇಂಧನ ದಕ್ಷತೆ ಹೊಂದಿದೆ. ಟರ್ಬೊ-ಪೆಟ್ರೋಲ್ ಎಂಜಿನ್ ಇರುವ ಕಾರುಗಳಿಗೆ ಹೋಲಿಕೆ ಮಾಡಿದರೆ ಫೋಕ್ಸ್ವ್ಯಾಗನ್ ಟೈಗುನ್ ನಲ್ಲಿರುವ 150 ಬಿಎಚ್ ಪಿ ಪವರ್ ನೀಡುವ 1.5 ಲೀಟರ್ ಟಿಎಸ್ಐ ಎಂಜಿನ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ನಲ್ಲಿ ಕ್ರಮವಾಗಿ 18.47 ಕಿ.ಮೀ ಮತ್ತು 17.88 ಕಿ.ಮೀ ಮೈಲೇಜ್ ನೀಡುತ್ತದೆ.
ಹ್ಯುಂಡೈ ಕ್ರೆಟಾ ಡೀಸೆಲ್ ಎಂಜಿನ್ ಮಿಡ್ಸೈಜ್ ಎಸ್ಯುವಿ. ಇದು ಮ್ಯಾನುವಲ್ ಗೇರ್ಬಾಕ್ಸ್ನಲ್ಲಿ 21.4 ಕಿ.ಮೀ ಮತ್ತು ಆಟೋಮ್ಯಾಟಿಕ್ನಲ್ಲಿ 18.5 ಕಿ.ಮೀ ಮೈಲೇಜ್ ನೀಡುತ್ತದೆ. ಕ್ರೆಟಾ ಮತ್ತು ಸೆಲ್ಟೋಸ್ ಎರಡೂ ಒಂದೇ ಡೀಸೆಲ್ ಎಂಜಿನ್ ಅನ್ನು ಬಳಸುತ್ತವೆ. ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಹೈರೈಡರ್ ಜೋಡಿಯು ಈ ಸೆಗ್ ಮೆಂಟಿನಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಾಗಿದ್ದ ಪೆಟ್ರೋಲ್-ಹೈಬ್ರಿಡ್ 27.97 ಕಿ.ಮೀ ಮೈಲೇಜ್ ಕೊಡುತ್ತದೆ.