ಬೆಂಗಳೂರು: ಹೊಸ ವರ್ಷಕ್ಕೆ ಕಾಲಿಟ್ಟ ತಕ್ಷಣ ಹಲವಾರು ಕಂಪನಿಗಳು ತಮ್ಮ ಕಾರುಗಳ ಅಪ್ಡೇಟ್ ವರ್ಷನ್ಗಳನ್ನು ಬಿಡುಗಡೆ ಮಾಡಿವೆ. ಅಂತೆಯೇ ಕೊರಿಯಾ ಮೂಲಕ ಕಿಯಾ ಕೂಡ ತನ್ನ ಕಾಂಪ್ಯಾಕ್ಟ್ ಎಸ್ಯುವಿ ಸೋನೆಟ್ (Kia Sonet Facelift) ಅನ್ನು ಬಿಡುಗಡೆ ಮಾಡಿದೆ. 2023ರ ಡಿಸೆಂಬರ್ ನಲ್ಲಿ ಈ ಕಾರನ್ನು ಜಾಗತಿಕವಾಗಿ ಬಿಡುಗಡೆ ಮಾಡಲಾಗಿತ್ತು. ಇದೀಗ ಅದರ ಬೆಲೆಯ ಘೋಷಣೆಯೊಂದಿಗೆ ಮಾರುಕಟ್ಟೆಗೆ ಇಳಿಸಿದೆ. ಸೊನೆಟ್ ಫೇಸ್ ಲಿಫ್ಟ್ ಅನ್ನು 7.99 ಲಕ್ಷ ರೂ.ಗಳಿಂದ ಆರಂಭಿಸಿ 15.69 ಲಕ್ಷ ರೂ.ಗಳವರೆಗಿನ ಬೆಲೆಗಳೊಂದಿಗೆ ಪರಿಚಯಿಸಲಾಗಿದೆ. ಕಾರಿನ ವಿತರಣೆಗಳು ಜನವರಿ ಮಧ್ಯದ ವೇಳೆಗೆ ಪ್ರಾರಂಭವಾಗಲಿವೆ. ಕಿಕ್ಕಿರಿದ ಕಾಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಗ್ರಾಹಕರನ್ನು ಆಕರ್ಷಿಸಲು ಕಿಯಾ ಸೋನೆಟ್ ಗೆ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುವ ಜತೆಗೆ ಹಲವಾರು ಫೀಚರ್ಗಳನ್ನು ಸೇರಿಸಿದೆ.
ಕಿಯಾ ಫೇಸ್ಲಿಫ್ಟ್ನಲ್ಲಿ ಭಾರೀ ಬದಲಾವಣೆಗಳಿವೆ. ಮುಂಭಾಗದಲ್ಲಿ ಹೊಸ ಎಲ್ಇಡಿ ಹೆಡ್ ಲೈಟ್ ಗಳಿದ್ದು, ಹೊಸ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಗಳಿಂದ ಸುತ್ತುವರಿದಿದೆ. ಫೇಸ್ ಲಿಫ್ಟೆಡ್ ಸೊನೆಟ್ ಹಿಂಭಾಗದಲ್ಲಿ ಎರಡು ಸಿ-ಆಕಾರದ ಟೈಲ್ ಲ್ಯಾಂಪ್ ಗಳನ್ನು ನೀಡಲಾಗಿದೆ. ಅವುಗಳನ್ನು ಎಲ್ಇಡಿ ಲೈಟ್ ಬಾರ್ ನಿಂದ ಸಂಪರ್ಕಿಸಲಾಗಿದೆ. ಕಾಂಪ್ಯಾಕ್ಟ್ ಎಸ್ ಯುವಿಯು ಹೊಸ ಮುಂಭಾಗ ಮತ್ತು ಹಿಂಭಾಗದ ಬಂಪರ್ ಗಳನ್ನು ಮತ್ತು ರೂಫ್-ಮೌಂಟೆಡ್ ಸ್ಪಾಯ್ಲರ್ ನೀಡಲಾಗಿದೆ.
ಇಂಟೀರಿಯರ್ ವೈಶಿಷ್ಟ್ಯಗಳು
ಕಿಯಾ ಸೊನೆಟ್ ಫೇಸ್ ಲಿಫ್ಟ್ 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಇದೆ. ಇದು ಹೊಸ ಸೆಲ್ಟೋಸ್ ನಲ್ಲಿಯೂ ಇದೆ. ಕಾಂಪ್ಯಾಕ್ಟ್ ಎಸ್ ಯುವಿ 10.25-ಇಂಚಿನ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಯುನಿಟ್ ನೊಂದಿಗೆ ಮುಂದುವರಿದಿದೆ. ಆ ಪರದೆಯ ಕೆಳಗೆ ಕ್ಲೈಮೇಟ್ ಕಂಟ್ರೋರ್ಳರ್ , ಡ್ರೈವ್ ಮೋಡ್ ಗಳು ಮತ್ತು ಎಳೆತ ನಿಯಂತ್ರಣಕ್ಕಾಗಿ ನಿಯಂತ್ರಣ ಫಲಕವನ್ನು ಹೊಂದಿದೆ. ಫೇಸ್ ಲಿಫ್ಟೆಡ್ ಸೊನೆಟ್ ನೊಂದಿಗೆ ಅತಿದೊಡ್ಡ ಚರ್ಚೆಯ ವಿಷಯವೆಂದರೆ ಎಡಿಎಎಸ್ ತಂತ್ರಜ್ಞಾನ. ಈ ಫೀಚರ್ ಪ್ರಸ್ತುತ ಹ್ಯುಂಡೈ ವೆನ್ಯೂದಲ್ಲಿ ಲಭ್ಯವಿದೆ. ಸುರಕ್ಷತಾ ಅಂಶವನ್ನು ಹೆಚ್ಚಿಸಲು 6ಏರ್ ಬ್ಯಾಗ್ ಗಳು, ಹಿಲ್-ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಇಎಸ್ ಸಿ ಎಲ್ಲಾ ವೇರಿಯೆಂಟ್ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಟಾಪ್ ವೇರಿಯೆಂಟ್ಗಳಲ್ಲಿ ಕಾರ್ನರಿಂಗ್ ಲ್ಯಾಂಪ್ ಗಳು, 360-ಡಿಗ್ರಿ ಕ್ಯಾಮೆರಾ, ಕೂಲ್ಡ್ ಫ್ರಂಟ್ ಸೀಟ್ ಗಳು, ಬೋಸ್ ಆಡಿಯೊ ಸಿಸ್ಟಮ್, ಸನ್ ರೂಫ್ ನೀಡಲಾಗಿದೆ.
ಎಂಜಿನ್ ಸಾಮರ್ಥ್ಯ
ಕಿಯಾ ಸೊನೆಟ್ ಈ ಹಿಂದೆ ಲಭ್ಯವಿದ್ದ ಅದೇ ಎಂಜಿನ್ ಗಳು ಮತ್ತು ಪವರ್ ಟ್ರೇನ್ ಗಳೊಂದಿಗೆ ಮುಂದುವರಿಯುತ್ತದೆ. ಇದರ ಜತೆಗೆ ಡೀಸೆಲ್-ಮ್ಯಾನುವಲ್ ಪುನರಾಗಮನ ಮಾಡಿದೆ.. ಪೆಟ್ರೋಲ್ ಎಂಜಿನ್ ಆಯ್ಕೆಗಳು ಈ ಕೆಳಗಿನಂತಿವೆ. 83 ಬಿಹೆಚ್ ಪಿ ಸಾಮರ್ಥ್ಯದ 1.2-ಲೀಟರ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬಂದಿದೆ. 120 ಬಿಹೆಚ್ ಪಿ, 1.0-ಲೀಟರ್, ಮೂರು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ 6-ಸ್ಪೀಡ್ ಐಎಂಟಿ ಗೇರ್ ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ನೊಂದಿಗೆ ಲಭ್ಯವಿದೆ. 116 ಬಿಹೆಚ್ ಪಿ, 1.5-ಲೀಟರ್ ಡೀಸೆಲ್ ನಾಲ್ಕು ಸಿಲಿಂಡರ್ ಎಂಜಿನ್ ಆಗಿದೆ. ಇದು ಮೂರು ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಐಎಂಟಿ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ನೊಂದಿಗೆ ರಸ್ತೆ ಇಳಿಯುತ್ತದೆ.
ಲಿಫ್ಟ್ ಕಾರುಗಳು
ಕಿಯಾ ಸೊನೆಟ್ ಸಿಕ್ಕಾಪಟ್ಟೆ ಕಾರುಗಳಿರುವ ಕಾಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಸ್ಪರ್ಧಿಸುತ್ತದೆ ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ ಎಕ್ಸ್ ಯುವಿ 300 ಮತ್ತು ಇತರ ಕಾಂಪ್ಯಾಕ್ಟ್ ಎಸ್ ಯುವಿಗಳಿಗೆ ಇದು ಪೈಪೋಟಿ ನೀಡಲಿದೆ.