ನವ ದೆಹಲಿ : ಭಾರತೀಯ ದ್ವಿಚಕ್ರ ವಾಹನಗಳ ಮಾರುಕಟ್ಟೆಗೆ ಮರು ಪ್ರವೇಶ ಖಚಿತಪಡಿಸಿದ್ದು, ಎಲೆಕ್ಟ್ರಿಕ್ ಸ್ಕೂಟರ್‌ನ ಬುಕಿಂಗ್ ಆರಂಭಿಸಿದೆ. ಎಲ್‌ಎಮ್‌ಎಲ್ ಸ್ಟಾರ್ (LML STAR) ಹೆಸರಿನಲ್ಲಿ ಹೊಸ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಕೂಟರ್‌ಗೆ ಬುಕಿಂಗ್ ಮಾಡಬಹುದಾಗಿದೆ. ಆದರೆ, ಸ್ಕೂಟರ್‌ನ ಬೆಲೆ ಹಾಗೂ ಪವರ್ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ.
ಎಲ್‌ಎಮ್‌ಎಲ್ ಕಂಪನಿಯ ಪ್ರಕಾರ ಅತ್ಯುತ್ತಮ ಪ್ರಯಾಣದ ಅನುಭವಕ್ಕಾಗಿ ಎಲ್‌ಎಮ್‌ಎಲ್ ಸ್ಟಾರ್ ಅತ್ಯುತ್ತಮ ಸ್ಕೂಟರ್ ಆಗಿದೆ. ಸ್ಪೋರ್ಟಿ ಲುಕ್, ಹೊಂದಾಣಿಕೆ ಮಾಡಬಹುದಾದ ಸೀಟ್, ಇಂಟರಾಕ್ಟಿವ್ ಸ್ಕ್ರೀನ್, ಫೊಟೊ ಸೆನ್ಸಿಟಿವ್ ಹೆಡ್‌ಲ್ಯಾಂಪ್ ಸ್ಕೂಟರ್‌ನ ವಿಶೇಷತೆಯಾಗಿದೆ. ಅದೇ ರೀತಿ ೩೬೦ ಡಿಗ್ರಿ ಕ್ಯಾಮೆರಾ, ಎಲ್‌ಇಡಿ ಲೈಟ್‌ಗಳೊಂದಿಗೆ ಈ ಸ್ಕೂಟರ್ ಮಾರುಕಟ್ಟೆಗೆ ಇಳಿಯಲಿದೆ.
ಈ ಸ್ಕೂಟರ್‌ನ ಬುಕಿಂಗ್‌ಗೆ ಹಣ ಪಾವತಿ ಮಾಡಬೇಕಿಲ್ಲ. ನೇರವಾಗಿ ವೆಬ್‌ಸೈಟ್‌ಗೆ ಪ್ರವೇಶ ಮಾಡಿ ಸ್ಕೂಟರ್‌ಗೆ ಬುಕ್ ಮಾಡಬಹುದಾಗಿದೆ. “ನಮ್ಮ ಗ್ರಾಹಕರ ವಿಶ್ವಾಸವನ್ನು ವೃದ್ಧಿಸಿಕೊಳ್ಳುವ ಉದ್ದೇಶದೊಂದಿಗೆ ಹೊಸ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗುತ್ತಿದ್ದು, ಇನ್ನೆರಡು ದ್ವಿ ಚಕ್ರವಾಹನಗಳು ಮಾರುಕಟ್ಟೆಗೆ ಇಳಿಯಲಿವೆ.
ಮೂನ್‌ಶಾಟ್ ಎಲ್‌ಎಮ್‌ಎಲ್ ರಸ್ತೆಗಿಳಿಯಲಿರುವ ದ್ವಿಚಕ್ರ ವಾಹನವಾಗಿದೆ. ಇದನ್ನು ಡರ್ಟ್ ಬೈಕ್ ಎಂಬುದಾಗಿಯೂ ಕಂಪನಿ ಕರೆದಿದೆ. ಈ ಬೈಕ್ ಶೂನ್ಯದಿಂದ ೭೦ ಕಿಲೋ ಮೀಟರ್ ವೇಗವನ್ನು ನಿರೀಕ್ಷಿಸಲು ಅಸಾಧ್ಯವಾದ ವೇಗದಲ್ಲಿ ಪಡೆಯಲಿದೆ ಎಂದು ಕಂಪನಿ ಹೇಳಿದೆ. ಆದರೆ, ಅದರ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರಕಟಿಸಿಲ್ಲ. ಈ ಸ್ಕೂಟರ್‌ನಲ್ಲಿ ಪೋರ್ಟೇಬಲ್ ಬ್ಯಾಟರಿ ಹಾಗೂ ಫೈ- ಬೈ- ವೈರ್ ಟೆಕ್ನಾಲಾಜಿಯೂ ಇದೆ. ಅದೇ ರೀತಿ ಎಲ್‌ಎಮ್ಎಲ್ ಒರಿಯಾನ್ ಎಂಬ ಮತ್ತೊಂದು ಬೈಕ್ ಅನ್ನು ಪರಿಚಯಿಸಿದೆ. ಇದನ್ನು ಹೈಪರ್ ಬೈಕ್ ಎಂದು ಕಂಪನಿ ಹೇಳಿದೆ. ಇದು ನಗರ ಪ್ರಯಾಣಕ್ಕೆ ಸೂಕ್ತವಾಗಿರುವ ಬೈಕ್ ಎನ್ನಲಾಗಿದೆ.
ಇದನ್ನೂ ಓದಿ | EV TWO- Wheeler | ಅಂಬಾಸಿಡರ್ ಕಾರು ಕಂಪನಿಯಿಂದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ