Site icon Vistara News

Maduri Dixit : 3 ಕೋಟಿ ರೂಪಾಯಿಯ ಪೋರ್ಶೆ ಕಾರು ಖರೀದಿಸಿದ ಮಾಧುರಿ ದಿಕ್ಷಿತ್​

madhuri-dixit-bought-a-porsche-car-worth-rs-3-crore

#image_title

ಮುಂಬಯಿ: ಬಾಲಿವುಡ್ ನಟಿ ಮಾಧುರಿ ದಿಕ್ಷಿತ್ ವಿಶ್ವದ ಅತಿ ವೇಗದ ಸೂಪರ್ ಕಾರುಗಳಲ್ಲಿ ಒಂದಾದ ಪೋರ್ಶೆ 911 ಟರ್ಬೊ ಎಸ್​ ಕಾರನ್ನೂ ಖರೀದಿಸಿದ್ದಾರೆ. ಈ ಕಾರಿಗೆ 3.08 ಕೋಟಿ ರೂಪಾಯಿ ಬೆಲೆಯಿದೆ. ನಟಿ ಹಾಗೂ ಅವರ ಪತಿ ಉದ್ಯಮಿ ಶ್ರೀರಾಮ್​ ನೇನೆ ಅವರು ಇತ್ತೀಚೆಗೆ ಕಾರನ್ನು ಡೆಲಿವರಿ ಪಡೆದುಕೊಂಡಿದ್ದಾರೆ. ಇದು ಪೋರ್ಶೆ ಕಂಪನಿಯ ಅತ್ಯಂತ ದುಬಾರಿ ಹಾಗೂ ಉತ್ಕೃಷ್ಟ ದರ್ಜೆಯ ಕಾರಾಗಿದೆ. ಮಾದುರಿ ಅವರು ಮುಂಬಯಿಯ ರಸ್ತೆಗಳಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ.

ಮಾಧುರಿ ದಿಕ್ಷಿತ್ ಅವರು ಖರೀದಿ ಮಾಡಿರುವ ಪೋರ್ಶೆ 911 ಕಾರಿನಲ್ಲಿ 6 ಸಿಲಿಂಡರ್​​ನ ಟ್ವನ್​ ಟರ್ಬೊಚಾರ್ಜ್ಡ್​​ ಎಂಜಿನ್​ ಇದೆ. ಎಂಟು ಸ್ಪೀಡ್​ನ ಆಟೋಮ್ಯಾಟಿಕ್ ಗೇರ್​ ಬಾಕ್ಸ್​ ಇದರಲ್ಲಿದೆ. ಇದು ಗರಿಷ್ಠ 650 ಪಿಎಸ್​ ಪವರ್​ ಹಾಗೂ 800 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಈ ಕಾರಿನ ಪವರ್​ ಕಾರಿನ ನಾಲ್ಕೂ ಚಕ್ರಗಳಿವೆ ರವಾನೆಯಾಗುತ್ತವೆ. ಈ ಕಾರು ಗರಿಷ್ಠ 330 ಕಿಲೋ ಮೀಟರ್​ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಕೇವಲ 2/6 ಸೆಕೆಂಡ್​​ಗಳಲ್ಲಿ ಸೊನ್ನೆಯಿಂದ 100 ಕಿಲೋ ಮೀಟರ್ ವೇಗ ಪಡೆಯುತ್ತದೆ. ಮಾದುರಿ ದಿಕ್ಷಿತ್​ ಖರೀದಿ ಮಾಡಿರುವ ಕಾರು ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿರುವ ಪೋರ್ಶೆ 911 ಕಾರಿಗಿಂತ ಹೆಚ್ಚು ಶಕ್ತಿಯುತವಾಗಿದೆ.

ಪೋರ್ಶೆ ಕಾರಿನ ಇಂಟೀರಿಯರ್​ ಅತ್ಯಾಕರ್ಷಕವಾಗಿದೆ. ಸಂಪೂರ್ಣವಾಗಿ ಲೆದರ್ ಹಾಗೂ ಕಾರ್ಬನ್​ ಪೈಬರ್​ನಿಂದ ನಿರ್ಮಿಸಲಾಗಿದೆ. 18 ರೀತಿಯಲ್ಲಿ ಅಜೆಸ್ಟ್​ ಮಾಡಬಹುದಾದ ಸೀಟ್​ಗಳು ಇದರಲ್ಲಿವೆ. ಗುಣಮಟ್ಟದ ಲೋಗೊ ಮತ್ತು ಗ್ರಾಫಿಕ್​ಗಳು ಇನ್​ಸ್ಡ್ರುಮೆಂಟಲ್​ ಪ್ಯಾನೆಲ್​ ಹಾಗೂ ಅತ್ಯಾಕರ್ಷಕ ಫೀಚರ್​ಗಳು ಇದರಲ್ಲಿವೆ.

ಇದನ್ನೂ ಓದಿ : Maruti Suzuki : 25.51 ಕಿಲೋ ಮೀಟರ್​ ಮೈಲೇಜ್​ ಕೊಡುವ ಮಾರುತಿ ಸುಜುಕಿ ಬ್ರೆಜಾ ಬಿಡುಗಡೆ

ಈ ಕಾರಿನ ಸೆಂಟರ್​ ಸ್ಕ್ರೀನ್​ 10.9 ಇಂಚಿನ ಪಿಸಿಎಮ್​ ಸಿಸ್ಟಮ್​ಗಳಿವೆ. ಜಿಟಿ ಸ್ಪೋರ್ಟ್ಸ್​​ ಸ್ಟೀರಿಂಗ್​ ವೀಲ್​, ಬೋಸ್ ಸರೌಂಡ್​​ ಆಡಿಯೊ ಸಿಸ್ಟಮ್​ ಇನ್ನಿತ್ಯಾದಿ ವ್ಯವಸ್ಥೆಗಳನ್ನು ನೀಡಲಾಗದೆ.

Exit mobile version