ಮುಂಬಯಿ: ಭಾರತದಲ್ಲಿ ಎಸ್‌ಯುವಿ ಕಾರುಗಳ ಮಾರುಕಟ್ಟೆಗೆ ಹೊಸ ಭಾಷ್ಯ ಬರೆದಿದ್ದ ಮಹೀಂದ್ರಾ ಕಂಪನಿಯ ಸ್ಕಾರ್ಪಿಯೊದ ಸುಧಾರಿತ ಮಾದರಿ Scorpio N ಸೋಮವಾರ ಅನಾವರಣಗೊಂಡಿತು.
ಕಾರಿನ ಒಟ್ಟು ವಿನ್ಯಾಸದಲ್ಲಿ ಭಾರೀ ಬದಲಾವಣೆ ಮಾಡಲಾಗಿದ್ದು, ಆಧುನಿಕ ಸ್ಪರ್ಷ ಕೊಡಲಾಗಿದೆ. ಡ್ಯುಯಲ್ ಪ್ರಾಜೆಕ್ಟರ್ ಹೆಡ್‌ಲ್ಯಾಂಪ್ ಇಡಲಾಗಿದ್ದು, ಡೈನಾಮಿಕ್ ಟರ್ನ್ ಇಂಟಿಕೇಟರ್ ಬಳಸಲಾಗಿದೆ. ಐದು ಗೆರೆಗಳನ್ನು ಹೊಂದಿರುವ ಮುಂಬದಿಯ ಗ್ರಿಲ್‌ನ ನಡುವೆ ಹೊಸ ಮಾದರಿಯ ಮಹೀಂದ್ರಾ ಲೋಗೊ ಅಳವಡಿಸಲಾಗಿದೆ. ಸಿ ಆಕಾರದ ಎಲ್‌ಇಡಿ ಡಿಆರ್‌ಎಲ್‌ನಿಂದ ಆವೃತ್ತಗೊಂಡಿರುವ ಫಾಗ್ ಲ್ಯಾಂಪ್ ಹೊಂದಿದ್ದು, ಬಂಪರ್‌ನ ಕೆಳಭಾಗದಲ್ಲಿ ಸಿಲ್ವರ್ ಸ್ಕಿಡ್ ಪ್ಲೇಟ್ ಅಳವಡಿಸಲಾಗಿದೆ.
ಬದಿಯಲ್ಲಿರುವ ಕಪ್ಪು ಬಣ್ಣದ ಕ್ಲಾಡಿಂಗ್, ಡೈಮೆಂಡ್ ಕಟ್ ಅಲಾಯ್ ವಿಲ್ ಎಸ್‌ಯುವಿ ನೋಟವನ್ನು ನೀಡುತ್ತದೆ. ಅದೇ ರೀತಿ ಉದ್ದನೆಯ ಟೈಲ್ ಲ್ಯಾಂಪ್ ಬಳಸಲಾಗಿದ್ದು, ರಿವರ್ಸ್ ಲೈಟ್ ಅನ್ನು ಬಂಪರ್ ಕೆಳಗಡೆ ಅಳವಡಿಸಲಾಗಿದೆ.
ಒಳ ಆವರಣದಲ್ಲಿ ಕಪ್ಪು ಹಾಗೂ ಕಂದು ಬಣ್ಣದ ಡ್ಯಯಲ್ ಟೋನ್ ವಿನ್ಯಾಸವಿದೆ. ಡ್ಯಾಶ್ ಬೋರ್ಡ್‌ನ ಮಧ್ಯಭಾಗದಲ್ಲಿ ೧೦.೨೫ ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದ್ದು, ಅಡ್ರೆನೊಕ್ಸ್ ಸಿಸ್ಟಮ್ ಬಳಸಲಾಗಿದೆ. ಸೋನಿಯ ಸೌಂಡ್ ಸಿಸ್ಟಮ್ ಬಳಸಲಾಗಿದ್ದು, ರೂಫ್ ಮೌಂಟೆಡ್ ಸರೌಂಡ್ ಮ್ಯೂಸಿಕ್ ಅನುಭವ ಪಡೆಯಬಹುದಾಗಿದೆ.
ಸುರಕ್ಷತೆ
ಆರು ಏರ್‌ಬ್ಯಾಗ್‌ಗಳು, ಐಸೋಫಿಕ್ಸ್ ಚೈಲ್ಡ್ ಮೌಂಟ್, ಟಿಪಿಎಮ್ಎಸ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್, ಇಬಿಡಿ, ಹಿಲ್ ಡೀಸೆಂಟ್ ಕಂಟ್ರೋಲ್ ವ್ಯವಸ್ಥೆ ಕಾರಿನ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲಿದೆ.
ಎಂಜಿನ್ ಸಾಮರ್ಥ್ಯ
ಸ್ಕಾರ್ಪಿಯೊ ಎನ್‌ನಲ್ಲಿ ೨.೦ ಲೀಟರ್ ಸಾಮರ್ಥ್ಯದ ಎಮ್‌ಸ್ಟಾಲೇಷನ್ ಪೆಟ್ರೋಲ್ ಹಾಗೂ ೨.೨ ಲೀಟರ್‌ನ ಎಮ್‌ಹವಾಕ್ ಎಂಜಿನ್ ಇದೆ. ೬ ಸ್ಪೀಡ್ ಮ್ಯಾನುಯೆಲ್ ಹಾಗೂ ೬ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅಳವಡಿಸಲಾಗಿದೆ.
ಇದನ್ನೂ ಓದಿ: ಭೂಲ್ ಭುಲಯ್ಯ ಯಶಸ್ಸಿನ ಖುಷಿ: ಕಾರ್ತಿಕ್ ಆರ್ಯನ್‌ಗೆ ಸಿಕ್ಕಿತು McLaren GT ಕಾರು