ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ ಸ್ಕಾರ್ಪಿಯೊ ಎನ್ (Mahindra Scorpio N ) ಝಡ್ 8 ಸೆಲೆಕ್ಟ್ ಮತ್ತು ಝಡ್ 8 ಈಗ ವೈರ್ ಲೆಸ್ ಚಾರ್ಜರ್ ಮತ್ತು ಸೆಂಟರ್ ಕನ್ಸೋಲ್ ಹೊಸ ಹೈ-ಗ್ಲೋಸ್ ಫಿನಿಶ್ ಪಡೆದುಕೊಂಡಿದೆ. ಏತನ್ಮಧ್ಯೆ, ರೇಂಜ್-ಟಾಪಿಂಗ್ ಝಡ್ 8 ಎಲ್ ಈಗ ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಆಟೋ-ಡಿಮ್ಮಿಂಗ್ ರಿಯರ್ ವ್ಯೂ ಮಿರರ್, ಆ್ಯಕ್ಟಿವ್ ಕೂಲಿಂಗ್ ಹೊಂದಿರುವ ವೈರ್ ಲೆಸ್ ಚಾರ್ಜಿಂಗ್ ಪ್ಯಾಡ್ ಮತ್ತು ಸೆಂಟರ್ ಕನ್ಸೋಲ್ ಗಾಗಿ ಹೈ-ಗ್ಲೋಸ್ ಫಿನಿಶ್ ಪಡೆದುಕೊಂಡಿದೆ. ಇದಲ್ಲದೆ, ಈ ಹಿಂದೆ ಕೇವಲ ಝಡ್ 8 ಸೆಲೆಕ್ಟ್ ಗೆ ಸೀಮಿತವಾಗಿದ್ದ ಮಿಡ್ ನೈಟ್ ಬ್ಲ್ಯಾಕ್ ಬಣ್ಣವನ್ನು ಈಗ ಎಲ್ಲಾ ಝಡ್ 8 ಟ್ರಿಮ್ ಗಳಲ್ಲಿ ಕೊಡಲಾಗಿದೆ.
ಒಳ್ಳೆಯ ವಿಷಯವೆಂದರೆ ಈ ಫೀಚರ್ಗಳ ಸೇರ್ಪಡೆಗಳು ಯಾವುದೇ ಹೆಚ್ಚುವರಿ ದರವಿಲ್ಲದೆ ಗ್ರಾಹಕರಿಗೆ ಸಿಗುತ್ತದೆ. ಝಡ್8 ಸೆಲೆಕ್ಟ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.17.10 ಲಕ್ಷಗಳಾದರೆ, ಝಡ್8 ಮಾದರಿಯ ಬೆಲೆಯು ರೂ.18.74 ಲಕ್ಷಗಳಾಗಿದೆ. ಮಹೀಂದ್ರಾ ಇತ್ತೀಚೆಗೆ ಸ್ಕಾರ್ಪಿಯೋ ಎನ್ ಶ್ರೇಣಿಯ ಬೆಲೆಗಳನ್ನು ಸುಮಾರು 10,000 ರೂ.ಗಳಷ್ಟು ಹೆಚ್ಚಿಸಿದೆ.
ಸ್ಕಾರ್ಪಿಯೋ ಎನ್ ನ ಉಪಕರಣಗಳ ಪಟ್ಟಿ ಬದಲಾಗದೆ ಉಳಿದಿದೆ. ಟಾಪ್-ಸ್ಪೆಕ್ ಝಡ್ 8 ಎಲ್ ನಲ್ಲಿ 6 ಏರ್ ಬ್ಯಾಗ್ ಗಳು, 7 ಇಂಚಿನ ಟಚ್ ಸ್ಕ್ರೀನ್, ಪವರ್ ಚಾಲಿತ ಡ್ರೈವರ್ ಸೀಟ್, ಸನ್ ರೂಫ್, 18 ಇಂಚಿನ ಅಲಾಯ್ಸ್, ಸೋನಿ ಆಡಿಯೊ ಸಿಸ್ಟಮ್, ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾ ಮತ್ತು ಡ್ರೈವರ್ ಮಂಪರು ಪತ್ತೆ ವ್ಯವಸ್ಥೆಯನ್ನು ಹೊಂದಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ನಿಂದ ಚಾಲನೆ ಪಡೆಯುತ್ತದೆ. ಪ್ರತಿಯೊಂದೂ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಆದಾಗ್ಯೂ, 4 ಡಬ್ಲ್ಯುಡಿ ಆಯ್ಕೆಯು ಕೇವಲ ಡೀಸೆಲ್ ಎಂಜಿನ್ ಇರುವ ಕಾರಿಗೆ ಸೀಮಿತವಾಗಿದೆ.