ಪುಣೆ: ಭಾರತ ಮೂಲದ ಜನಪ್ರಿ ಪ್ರಯಾಣಿಕ ವಾಹನ ತಯಾರಿಕಾ ಕಂಪನಿಯಾಗಿರುವ ಮಹಿಂದ್ರಾ & ಮಹೀಂದ್ರಾ ಪುಣೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಘಟಕ ಸ್ಥಾಪಿಸಲು ಮಹಾರಾಷ್ಟ್ರ ಸರಕಾರದಿಂದ ಒಪ್ಪಿಗೆ ಪಡೆದುಕೊಂಡಿದೆ. ಮಹೀಂದ್ರಾದ ಮುಂದಿನ ಎಲ್ಲ ಇವಿ ವಾಹನಗಳು ಇಲ್ಲಿಂದಲೇ ತಯಾರಾಗಿ ಮಾರುಕಟ್ಟೆಗೆ ಇಳಿಯಲಿವೆ.
ಮಹರಾಷ್ಟ್ರ ಸರಕಾರದ ಎಲೆಕ್ಟ್ರಿಕ್ ವಾಹನಗಳ ಉತ್ತೇಜನ ಯೋಜನೆಯಡಿ ಉತ್ಪಾದನಾ ಘಟಕ ಸ್ಥಾಪಿಸಲು ಅನುಮತಿ ಸಿಕ್ಕಿದೆ. ಅಂತೆಯೇ ಮಹೀಂದ್ರಾ ಕಂಪನಿಯು ಮುಂದಿನ ಏಳು ವರ್ಷಗಳ ಅವಧಿಗೆ 10 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಈ ಘಟಕದಿಂದ ಎಕ್ಸ್ಯುವಿ ಬ್ರಾಂಡ್ನಲ್ಲಿ ಮಹೀಂದ್ರಾ ಕಾರುಗಳು ಉತ್ಪಾದನೆಗೊಂಡರೆ, ಬಿಇ ಎಂಬ ಸಬ್ ಬ್ರಾಂಡ್ ಮೂಲಕಗೂ ಕಾರುಗಳು ಉತ್ಪಾದನೆಯಾಗಲಿವೆ.
ಮಹೀಂದ್ರಾ ಆಟೋ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್ ಅವರು ಈ ಮಾಹಿತಿ ನೀಡಿದ್ದು, ಕಳೆದ 70 ವರ್ಷಗಳಿಂದ ಮಹಾರಾಷ್ಟ್ರ ನಮಗೆ ತವರೂರಾಗಿತ್ತು. ಅದರ ಮುಂದುವರಿದ ಭಾಗವಾಗಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಯೋಜನೆ ರೂಪಿಸಿದ್ದೇವೆ. ಇದರ ಮೂಲಕ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ | Tata Nexon EV | ಟಾಟಾದ ನೆಕ್ಸಾನ್ ಇವಿಯ ಆರಂಭಿಕ ಬೆಲೆ ಇನ್ನಷ್ಟು ಅಗ್ಗ; ಕಿಲೋ ಮೀಟರ್ ರೇಂಜ್ ಕೂಡ ಏರಿಕೆ