ತಿರುವನಂತಪುರ: ಕಾನೂನಿನ ಅರಿವು ಇದ್ದೂ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ಬಿಡುವುದು ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಅದೊಂದು ಅಪಾಯಕಾರಿ ಕೃತ್ಯ ಎಂದು ಗೊತ್ತಿದ್ದರೂ ತಮ್ಮವರು ಎಂಬ ಕಾರಣಕ್ಕೆ ಮಕ್ಕಳಿಗೆ ಬೈಕ್ ಅಥವಾ ಕಾರು ಚಾಲನೆ ಮಾಡಲು ಬಿಡುತ್ತಾರೆ. ಇದೊಂದು ಗಂಭೀರ ಸಮಸ್ಯೆಯಾಗಿ ಪರಿವರ್ತಿತಗೊಂಡಿದೆ. ದೇಶದ ಅನೇಕ ಭಾಗಗಳಲ್ಲಿ, ಮಕ್ಕಳು ಸಾರ್ವಜನಿಕ ರಸ್ತೆಗಳಲ್ಲಿ ಸ್ಕೂಟರ್ ಮತ್ತು ಕಾರುಗಳನ್ನು ಓಡಿಸುವುದೇ ಇದಕ್ಕೆ ಉದಾಹರಣೆ. ಅಪ್ರಾಪ್ತ ವಯಸ್ಸಿನ ಮಕ್ಕಳ ವಾಹನ ಚಾಲನೆ ಅಥವಾ ಸವಾರಿ ಕಾನೂನುಬಾಹಿರ. ವಾಹನ ಮಾಲೀಕರಿಗೆ ಸುಲಭವಾಗಿ ಕಾನೂನು ತೊಡಕುಗಳು ಉಂಟಾಗಬಹುದು. ಪೊಲೀಸರು ವಾಹನವನ್ನು ವಶಪಡಿಸಿಕೊಂಡು ಮಾಲೀಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು. ಇಂತಹ ಒಂದು ಘಟನೆಯಲ್ಲಿ ಕೇರಳ ಹೈಕೋರ್ಟ್ ತನ್ನ ಅಪ್ರಾಪ್ತ ಸಹೋದರನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ವ್ಯಕ್ತಿಗೆ ನ್ಯಾಯಾಲಯ ಏಳು ತಿಂಗಳು ಜೈಲು ಶಿಕ್ಷೆ ಮತ್ತು 34,000 ರೂ.ಗಳ ದಂಡ ವಿಧಿಸಿದೆ.
ಕೇರಳ ರಾಜ್ಯ ಮತ್ತು ರೋಶನ್ ಶಿಜು ಪ್ರಕರಣದಲ್ಲಿ, ಎರ್ನಾಕುಲಂ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನೈನಾ ಕೆ.ವಿ ಈ ತೀರ್ಪು ನೀಡಿದ್ದಾರೆ. ಅಪ್ರಾಪ್ತ ಬಾಲಕ ಸವಾರಿ ಮಾಡುತ್ತಿದ್ದ ವಾಹನದ ನೋಂದಣಿಯನ್ನು 12 ತಿಂಗಳ ಅವಧಿಗೆ ರದ್ದುಗೊಳಿಸಿದ್ದಾರೆ. ಅಪ್ರಾಪ್ತ ವಯಸ್ಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ವ್ಯಕ್ತಿಯ ಚಾಲನಾ ಪರವಾನಗಿಯನ್ನು ಸಹ 3 ತಿಂಗಳವರೆಗೆ ಅಮಾನತುಗೊಳಿಲಾಗಿದೆ. ಬಾಲಕ ಚಲಾಯಿಸಿದ ಬೈಕ್ನಲ್ಲಿ ನಂಬರ್ ಪ್ಲೇಟ್ ಕೂಡ ಇಲ್ಲದಿರುವುದು ಕೂಡ ತಪ್ಪು ಎಂಬುದಾಗಿ ನ್ಯಾಯಾಧೀಶರು ಹೇಳಿದ್ದಾರೆ.
ಇದನ್ನೂ ಓದಿ : Viral News: ಹೆಣ್ಣು ಮಗು ಹೆತ್ತ ಮಂಗಳಮುಖಿ ಪುರುಷ! ಇದೆಲ್ಲ ಹೇಗಾಯ್ತು?
ದ್ವಿಚಕ್ರ ವಾಹನದಲ್ಲಿ ಸೀರೆ ಗಾರ್ಡ್, ಟರ್ನ್ ಇಂಡಿಕೇಟರ್ಗಳು ಅಥವಾ ರಿಯರ್ ವ್ಯೂ ಮಿರರ್ಗಳಲ್ಲಿ ಎಂದು ಅಧಿಕಾರಿಗಳು ನ್ಯಾಯಾಲಯದ ಮುಂದೆ ಹೇಳಿದ್ದರು. ಈ ಪ್ರಕರಣದ ಆರೋಪಿಗೆ ಬಾಲಾಪರಾಧಿಗಳ ಅಪರಾಧಗಳಿಗೆ ಸಂಬಂಧಿಸಿದ ಸೆಕ್ಷನ್ 199 ಎ, ಸೆಕ್ಷನ್ 199 (4) ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಸೆಕ್ಷನ್ 180ರ ಪ್ರಕಾರ ಅನಧಿಕೃತ ವ್ಯಕ್ತಿಗಳಿಗೆ ವಾಹನಗಳನ್ನು ಓಡಿಸಲು ನೀಡಿದ ಅಪರಾಧಕ್ಕೆ ದಂಡ ವಿಧಿಸಲಾಗಿದೆ.
ಈ ತಪ್ಪು ಮಾಡಬೇಡಿ
ನಿಮ್ಮ ಅಪ್ರಾಪ್ತ ವಯಸ್ಸಿನ ಒಡಹುಟ್ಟಿದವರು ಅಥವಾ ಮಗುವನ್ನು ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಓಡಿಸಲು ಅಥವಾ ಸವಾರಿ ಮಾಡಲು ಏಕೆ ಅನುಮತಿಸಬಾರದು ಎಂಬುದಕ್ಕೆ ಈ ಪ್ರಕರಣವು ಸೂಕ್ತ ಉದಾಹರಣೆಯಾಗಿದೆ. ಕಾನೂನು ಗೊತ್ತಿದ್ದರೂ ಕೆಲವು ತಮ್ಮ ಮಕ್ಕಳಿಗೆ ಸಾರ್ವಜನಿಕ ರಸ್ತೆಗಳಲ್ಲಿ ಕಾರುಗಳನ್ನು ಓಡಿಸಲು ಅವಕಾಶ ನೀಡುತ್ತಾರೆ ಮತ್ತು ಅದರ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ಉಲ್ಲಂಘನೆಗಳು ಅಧಿಕಾರಿಗಳ ಗಮನಕ್ಕೆ ಬರುವುದಿಲ್ಲ. ನಿಮ್ಮ ಮಗು ಮೋಟಾರ್ ಸೈಕಲ್ ಚಾಲನೆ ಅಥವಾ ಸವಾರಿಯನ್ನು ಅಭ್ಯಾಸ ಮಾಡಬೇಕೆಂದು ನೀವು ನಿಜವಾಗಿಯೂ ಬಯಸಿದರೆ, ಅದನ್ನು ಖಾಸಗಿ ಆಸ್ತಿ ಅಥವಾ ಟ್ರ್ಯಾಕ್ ನಲ್ಲಿ ಮಾಡಬಹುದು. ಮಕ್ಕಳನ್ನು ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸಲು ಅನುಮತಿಸುವ ಮೂಲಕ, ಪೋಷಕರು ತಮ್ಮ ಸ್ವಂತ ಮಗುವಿನ ಜೀವಕ್ಕೆ ಮಾತ್ರವಲ್ಲದೆ ಇತರ ರಸ್ತೆ ಬಳಕೆದಾರರ ಜೀವಕ್ಕೂ ಅಪಾಯವನ್ನುಂಟು ಮಾಡುತ್ತಿದ್ದಾರೆ. ಡ್ರೈವಿಂಗ್ ಅಥವಾ ರೈಡಿಂಗ್ ಜವಾಬ್ದಾರಿಯುತ ಕಾರ್ಯವಾಗಿದೆ, ಮತ್ತು ಭಾರತದಲ್ಲಿ ಚಾಲನಾ ಪರವಾನಗಿ ಪಡೆಯಲು ಕಾನೂನುಬದ್ಧ ವಯಸ್ಸು 18 ವರ್ಷಗಳು.