Site icon Vistara News

Maruti Suzuki : ಹೊಸ ಎಂಪಿವಿ ಕಾರು ಇನ್ವಿಕ್ಟೊ ಹೈಬ್ರಿಡ್​ ಅವತಾರದಲ್ಲಿ ಮಾತ್ರ ಲಭ್ಯ

Maruti Suzuki Invicto

#image_title

ನವ ದೆಹಲಿ : ಮಾರುತಿ ಸುಜುಕಿ ಕಂಪನಿಯು (Maruti Suzuki) ತನ್ನ ಮುಂಬರುವ ಇನ್ವಿಕ್ಟೋ ಎಂಪಿವಿ ಕಾರಿನ ಬುಕ್ಕಿಂಗ್ ಅನ್ನು 25,000 ರೂ.ಗಳಿಗೆ ಆರಂಭಿಸಿದೆ. ಇನ್ವಿಕ್ಟೊ ಟೊಯೊಟಾ ಇನ್ನೋವಾ ಹೈಕ್ರಾಸ್​ನ ಎಂಜಿನಿಯರಿಂಗ್​ ಅನ್ನು ಪಡೆದುಕೊಂಡಿದೆ. ಆದರೆ, ಮಾರುತಿ ಸುಜುಕಿ ಕಂಪನಿ ಪೆಟ್ರೋಲ್-ಹೈಬ್ರಿಡ್ ಪವರ್ ಎಂಜಿನ್ ಅನ್ನು ಮಾತ್ರ ಬಳಸಿಕೊಳ್ಳಲು ನಿರ್ಧರಿಸಿದೆ. ಅಂದರೆ ಹೊಸ ಎಂಪಿವಿ 2.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆಯುವುದಿಲ್ಲ. ಬದಲಾಗಿ ಗ್ರಾಹಕರು ಹೈಬ್ರಿಡ್​ ಎಂಜಿನ್ ಒಂದೇ ಆಯ್ಕೆಯನ್ನು ಹೊಂದಿರುತ್ತಾರೆ. ಈ ಮೂಲಕ ಪರಿಸರ ಸ್ನೇಹಿ ತಾಂತ್ರಿಕತೆಯನ್ನು ಮಾತ್ರ ಅಳವಡಿಸಿಕೊಳ್ಳುವುದಕ್ಕೆ ಮುಂದಾಗಿದೆ.

ಇನ್ವಿಕ್ಟೊದಲ್ಲಿಎಲೆಕ್ಟ್ರಿಕ್ ಮೋಟರ್​ನೊಂದಿಗೆ ಜೋಡಿಸಲಾದ 2.0 ಲೀಟರ್ ಅಟ್ಕಿನ್ಸನ್​ ಸೈಕಲ್ ಪೆಟ್ರೋಲ್ ಎಂಜಿನ್ ಮಾತ್ರ ಇರುತ್ತದೆ. ಜತೆಗೆ ಇ ಸಿವಿಟಿ ಗೇರ್ ಬಾಕ್ಸ್ ಗೆ ಇರುತ್ತದೆ. ಪೆಟ್ರೋಲ್​ ಹೈ ಬ್ರಿಡ್ ಆಗಿರುವುದರಿಂದ, ಮ್ಯಾನುವಲ್ ಗೇರ್ ಬಾಕ್ಸ್ ಸಹ ಲಭ್ಯವಿರುವುದಿಲ್ಲ. ಈ ಮೂಲಕ ಆಟೊಮ್ಯಾಟಿಕ್​ ಗೇರ್​ ಬಾಕ್ಸ್ ಆಯ್ಕೆಯೊಂದಿಗೆ ಬರುವ ಮಾರುತಿ ಸುಜುಕಿಯ ಮೊದಲ ಕಾರು ಎನಿಸಿಕೊಳ್ಳಲಿದೆ.

ಮಾರುತಿ ಸುಜುಕಿ ಅಧ್ಯಕ್ಷ ಆರ್ ಸಿ ಭಾರ್ಗವ್​ ಅವರು ಟೊಯೊಟಾದಿಂದ ಹೈಬ್ರಿಡ್ ಪವರ್ ಟ್ರೇನ್ ಅನ್ನು ಮಾತ್ರ ಪಡೆಯುವ ಸುಳಿವು ನೀಡಿದ್ದಾರೆ. ಬೆಲೆಯ ದೃಷ್ಟಿಯಿಂದ ಹೈಬ್ರಿಡ್​ ಆಯ್ಕೆಯು ಉತ್ತಮವಾಗಿದೆ ಎಮದು ಅವರು ಭಾರ್ಗವ ಅವರು ಹೇಳಿದ್ದರು. ಕಡಿಮೆ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿ ಮಾಡುವ ಹೊಸ ಎಂಜಿನ್​ಗಳ ಭವಿಷ್ಯದ ಆಯ್ಕೆಯಾಗಿರಲಿದೆ ಎಂದು ಅವರು ಹೇಳಿದ್ದರು.

ಪ್ರೀಮಿಯಮ್ ಫೀಲ್​

ಮಾರುತಿ ಹೊಸ ಎಂಪಿವಿಯನ್ನು ಪ್ರೀಮಿಯಮ್ ಕಾರು ಎಂದೇ ಬಿಂಬಿಸುತ್ತಿದೆ. ಹೀಗಾಗಿ ದುಬಾರಿ ಹೈಬ್ರಿಡ್ ತಂತ್ರಜ್ಞಾನವನ್ನು ಅದಕ್ಕೆ ಸಮರ್ಥನೆಯಾಗಿ ಬಳಸಿಕೊಳ್ಳಲಿದೆ. ಇದು ನೆಕ್ಸಾ ಶೋರೂಮ್​ ಮೂಲಕ ಮಾರಾಟವಾಗಲಿರುವ ಫುಲ್​ ಲೋಡೆಡ್ ವಾಹನ ಎಂದು ಹೇಳಿಕೊಳ್ಳುವ ಇರಾದೆಯನ್ನೂ ಹೊಂದಿದೆ. ಮಾರುತಿ ಸುಜುಕಿ ಈಗಾಗಲೇ ಗ್ರಾಂಡ್​ ವಿಟಾರದ ಮೂಲಕ ಫುಲ್​ ಸೈಜ್​ ಎಸ್​ಯುವಿಯನ್ನು ಬಿಡುಗಡೆ ಮಾಡಿದೆ. ಅದನ್ನೇ ಮೂರು ಸಾಲಿನ ಸೀಟ್​ಗಳ ಆವೃತ್ತಿಯಾಗಿ ಬಿಡುವ ಮುನ್ಸೂಚನೆಯನ್ನೂ ನೀಡಿದೆ. ಹೀಗಾಗಿ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್​ ಎಂಜಿನ್​ ಆಯ್ಕೆಯನ್ನು ನೀಡಿಲ್ಲ.

ಇದನ್ನೂ ಓದಿ : Maruti Suzuki : ಮಾರುತಿ ಕಂಪನಿಯ ಅತಿ ದೊಡ್ಡ ಕಾರಿನ ಬುಕಿಂಗ್​ ಆರಂಭ

ಮಾರುತಿ ಸುಜುಕಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಕೂಡ ಇತ್ತೀಚಿನ ಮಾಧ್ಯಮ ಸಂವಾದದಲ್ಲಿ, ಇನ್ವಿಕ್ಟೋದ ಬೆಲೆ 20 ಲಕ್ಷ ರೂಪಾಯಿಗಳಿಗಿಂತ ಮೇಲಿರಲಿದೆ ಎಂದು ಹೇಳಿದ್ದರು. ಇನ್ನೋವಾ ಹೈಕ್ರಾಸ್ ಪೆಟ್ರೋಲ್ ಕಾರಿನ ಎಕ್ಸ್ ಶೋರೂಂ ದರ 18.55 ಲಕ್ಷದಿಂದ 19.45 ಲಕ್ಷ ರೂಪಾಯಿ. ಹೈಬ್ರಿಡ್​ ಇನ್ವಿಕ್ಟೊ ಅದಕ್ಕಿಂತ ಅಧಿಕ ಬೆಲೆಯನ್ನು ಹೊಂದಿರಲಿದೆ.

ಇನ್ವಿಕ್ಟೊ ಪ್ರತಿಸ್ಪರ್ಧಿಗಳು

ಟೊಯೊಟಾ ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್​ ಕಾರನ್ನು ಬೆಂಗಳೂರಿನ ಬಿಡದಿಯಲ್ಲಿರುವ ಟೋಯೋಟಾ ಘಟಕದಲ್ಲಿ ಏಕಕಾಳಕ್ಕೆ ಉತ್ಪಾದಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಹೈ ಕ್ರಾಸ್​ ಮತ್ತು ಇನ್ವಿಕ್ಟೊ ಕೂಡ ಅಲ್ಲೇ ತಯಾರಾಗಲಿದೆ. ಹೊಸ ಇನ್ವಿಕ್ಟೊ ಕಾರಿಗೆ ಹೈಕ್ರಾಸ್​ ಕಾರೇ ನಿಜವಾದ ಪ್ರತಿಸ್ಪರ್ಧಿ. ಬೆಲೆ ಎಷ್ಟು ನಿಗದಿಯಾಗುತ್ತದೆ ಎಂಬುದರ ಮೇಲೆ ಪೈಪೋಟಿ ನಿರೀಕ್ಷೆ ಮಾಡಬಹುದು.

Exit mobile version