ಬೆಂಗಳೂರು: ಮಾರುತಿ ಸುಜುಕಿ ಕಂಪನಿಯು (Maruti Suzuki) 87,599 ಎಸ್ ಪ್ರೆಸ್ಸೊ ಮತ್ತು ಇಕೋ ಕಾರುಗಳನ್ನು ವಾಪಸ್ ಪಡೆದುಕೊಳ್ಳುವ ತೀರ್ಮಾನ ಮಾಡಿದೆ. ಸ್ಟೀರಿಂಗ್ ರಾಡ್ನ ಒಂದು ಭಾಗದಲ್ಲಿ ದೋಷ ಕಾಣಿಸಿಕೊಂಡಿರುವ ಕಾರಣ ವಾಪಸ್ ಪಡೆದು ರಿಪೇರಿ ಮಾಡಲು ನಿರ್ಧರಿಸಲಾಗಿದೆ. ರಿಪೇರಿ ಮಾಡದೇ ಹೋದರೆ ಈ ವಾಹನಗಳ ಸ್ಟೀರಿಂಗ್ ಮತ್ತು ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಕಂಪನಿ ತಿಳಿಸಿದೆ. ಹೀಗಾಗಿ ಅವುಗಳನ್ನು ವಾಪಸ್ ಪಡೆದು ದುರಸ್ತಿ ಮಾಡಿಕೊಡಲು ಕಂಪನಿ ಮುಂದಾಗಿದೆ.
ತಾಂತ್ರಿಕ ದೋಷ ಹೊಂದಿರುವ ಎಸ್ ಪ್ರೆಸ್ಸೊ ಮತ್ತು ಇಕೋ ಕಾರುಗಳನ್ನು ಜುಲೈ 5, 2021 ಮತ್ತು ಫೆಬ್ರವರಿ 15, 2023ರ ನಡುವೆ ತಯಾರಿಸಲಾಗಿದೆ ಎಂದು ಮಾರುತಿ ಸುಜುಕಿ ಹೇಳಿಕೆಯಲ್ಲಿ ತಿಳಿಸಿದೆ. ಅಂತಹ ವಾಹನಗಳಲ್ಲಿ ಬಳಸಲಾಗುವ ಸ್ಟೀರಿಂಗ್ ಟೈ ರಾಡ್ನ ಒಂದು ಭಾಗದಲ್ಲಿ ಸಂಭಾವ್ಯ ದೋಷವಿದೆ. ಇದು ಮುರಿದು ಹೋಗುವ ಸಾಧ್ಯತೆಗಳು ಇರುವ ಕಾರಣ ಅಪಘಾತಗಳಿಗೆ ಕಾರಣವಾಗಬಹುದು ಎಂದು ಕಂಪನಿ ಹೇಳಿದೆ.
ಮಾರುತಿ ತನ್ನ ಡೀಲರ್ ವರ್ಕ್ಶಾಪ್ಗಳ ಮೂಲಕ ತೊಂದರೆ ಇರುವ ಕಾರುಗಳ ಮಾಲೀಕರನ್ನು ಸಂಪರ್ಕಿಸಿ ದೋಷಪೂರಿತ ಭಾಗವನ್ನು ಬದಲಾಯಿಸಲಿದೆ.
ಮಾರುತಿ ಸುಜುಕಿ ಕಂಪನಿಯು ಈ ವರ್ಷ ನಾಲ್ಕನೇ ಬಾರಿಗೆ 1,23,351 ಕಾರುಗಳನ್ನು ಹಿಂಪಡೆದಿದೆ. ಮೊದಲನೆಯದು ಜನವರಿ 17, 2023 ರಂದು ಆಲ್ಟೋ ಕೆ 10, ಎಸ್ ಪ್ರೆಸ್ಸೊ, ಇಕೊ, ಬ್ರೆಝಾ, ಬಲೆನೊ ಮತ್ತು ಗ್ರ್ಯಾಂಡ್ ವಿಟಾರಾದ 17,362 ಕಾರುಗಳನ್ನು ವಾಪಸ್ ಪಡೆದುಕೊಂಡಿತ್ತು. (ಪೆಟ್ರೋಲ್ ಮತ್ತು ಸಿಎನ್ಜಿ ವೇರಿಯೆಂಟ್ಗಳು ಸೇರಿ ) ಏರ್ ಬ್ಯಾಟ್ ಕಂಟ್ರೋಲರ್ನಲ್ಲಿ ಸಂಭವನೀಯ ದೋಷವನ್ನು ಪರಿಶೀಲನೆ ನಡೆಸಲು ಈ ಕಾರುಗಳನ್ನು ವಾಪಸ್ ಪಡೆದುಕೊಳ್ಳಲಾಗಿತ್ತು.
ಆರು ದಿನಗಳ ನಂತರ ಜನವರಿ 23, 2023 ರಂದು 11,177 ಗ್ರ್ಯಾಂಡ್ ವಿಟಾರಾ ಎಸ್ಯುವಿಗಳಿಗೆ ಹಿಂಭಾಗದ ಸೀಟ್ ಬೆಲ್ಟ್ ಮೌಂಟಿಂಗ್ ಬ್ರಾಕೆಟ್ ಗಳಲ್ಲಿ ಸಂಭವನೀಯ ದೋಷವಿದೆಯೇ ಎಂದು ಪರಿಶೀಲಿಸಲು ಎರಡನೇ ವಾಪಸ್ ಮಾಡಲಾಯಿತು. ದೀರ್ಘಾವಧಿಯಲ್ಲಿ ಸಡಿಲಗೊಳ್ಳಬಹುದು ಮತ್ತು ಅದರ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ವಾಪಸ್ ಪಡೆದುಕೊಳ್ಳಲಾಗಿತ್ತು. ಇದೇ ವೇಳೆ ಟೊಯೊಟಾ ಕಂಪನಿಯೂ ಗ್ರ್ಯಾಂಡ್ ವಿಟಾರಾ ಕಾರಿನ ಜತೆಗೇ ನಿರ್ಮಾಣಗೊಂಡ ಹೈರೈಡರ್ ಕಾರನ್ನೂ ಸರ್ವಿಸ್ಗಾಗಿ ಪಡೆದುಕೊಂಡಿತ್ತು.
ಅಕ್ಟೋಬರ್ 27, 2016 ಮತ್ತು ನವೆಂಬರ್ 1, 2019ರ ನಡುವೆ ತಯಾರಿಸಲಾದ ಹ್ಯಾಚ್ ಬ್ಯಾಕ್ ಕಾರುಗಳ ವ್ಯಾಕ್ಯೂಮ್ ಪಂಪ್ನಲ್ಲಿ ಸಂಭವನೀಯ ದೋಷಕ್ಕಾಗಿ ವಾಪಸ್ ಪಡೆಯಲಾಗಿತ್ತು. ಈ ದೋಷದಿಂದ ವಾಹನಗಳ ಬ್ರೇಕ್ಗಳ ಮೇಲೆ ಪರಿಣಾ ಬೀರುವ ಸಾಧ್ಯತೆಗಳಿದ್ದವು.
ಇದನ್ನೂ ಒದಿ : Honda Unicorn : ಹೋಂಡಾ ಯೂನಿಕಾರ್ನ್ ಅಪ್ಡೇಟೆಡ್ ಆವೃತ್ತಿ ಬಿಡುಗಡೆ; ಏನಿದೆ ವಿಶೇಷತೆ?
2012ರಲ್ಲಿ ಸ್ವಯಂಪ್ರೇರಿತ ವಾಹನ ವಾಪಸಾತಿ ನೀತಿ ಜಾರಿಗೆ ಬಂದಾಗಿನಿಂದ ಮಾರುತಿ ಸುಜುಕಿ ಕಂಪನಿಯು ಒಟ್ಟು 8,63,901 ವಾಹನಗಳನ್ನು ಒಟ್ಟು 29 ಬಾರಿ ವಾಪಸ್ ಪಡೆದಿದೆ ಸೆಪ್ಟೆಂಬರ್ 3, 2021 ರಂದು, ಸಿಯಾಜ್, ಎರ್ಟಿಗಾ, ಎಕ್ಸ್ಎಲ್ 6, ಬ್ರೆಝಾ ಮತ್ತು ಎಸ್ಕ್ರಾಸ್ ಸೇರಿ 1,81,754 ಕಾರುಗಳನ್ನು ಹಿಂತೆಗೆದುಕೊಳ್ಳಲಾಗಿತ್ತು. ಜುಲೈ 15, 2020 ರಂದು, ವ್ಯಾಗನ್ ಆರ್ ಮತ್ತು ಬಲೆನೊದ 1,34,885 ಯುನಿಟ್ಗಳನ್ನು ದೋಷಯುಕ್ತ ಇಂಧನ ಪಂಪ್ ಬಲದಾಯಿಸಲು ಹಿಂತೆಗೆದುಕೊಳ್ಳಲಾಗಿತ್ತು.