ನವ ದೆಹಲಿ: ಮಾರುತಿ ಸುಜುಕಿ ಆಲ್ಟೋ (Maruti Suzuki Alto) ಭಾರತೀಯರ ಹೃದಯಕ್ಕೆ ಬಹಳ ಹತ್ತಿರವಾದ ಕಾರು. ಇದು ಭಾರತೀಯ ಮಾರುಕಟ್ಟೆಯಲ್ಲಿ ಇರುವ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಕಾರುಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ ಮೊದಲ ತಲೆಮಾರಿನ ಮಾರುತಿ ಸುಜುಕಿ ಆಲ್ಟೋ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ 27 ಸೆಪ್ಟೆಂಬರ್ 2000 ರಂದು ಬಿಡುಗಡೆ ಮಾಡಲಾಯಿತು. ಅಲ್ಲಿಂದ ಇಲ್ಲಿನವರೆಗೂ ಈ ಕಾರಿನ ಬೇಡಿಕೆ ಒಂದಿಷ್ಟೂ ಕಡಿಮೆ ಆಗಿಲ್ಲ. ಪ್ರಸ್ತುತ ಮಾರಾಟವಾಗುತ್ತಿರುವ ಆಲ್ಟೋ ಮೂರನೇ ತಲೆಮಾರಿನದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕಾರು ಸುಮಾರು 9 ತಲೆಮಾರುಗಳನ್ನು ಕಂಡಿದೆ. ಭಾರತದಲ್ಲಿ ಕೇವಲ 3 ತಲೆಮಾರುಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ.
ಭಾರತ ಮಾರುಕಟ್ಟೆಯಲ್ಲಿ 45 ಲಕ್ಷ ಆಲ್ಟೋ ಕಾಋಉ ಮಾರಾಟದ ಮೈಲಿಗಲ್ಲನ್ನು ದಾಟಿದ್ದೇವೆ ಎಂಬುದಾಗಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಘೋಷಿಸಿದೆ, ಅಂದರೆ ಪ್ರಸ್ತುತ ಭಾರತೀಯ ರಸ್ತೆಗಳಲ್ಲಿ 45 ಲಕ್ಷಕ್ಕೂ ಹೆಚ್ಚು ಆಲ್ಟೋಗಳಿವೆ. ಆಲ್ಟೋ ಬಹುಮುಖಿ ಕಾರು. ಇದು ಭಾರತೀಯರ ಅಗತ್ಯವನ್ನು ಪರಿಣಾಮಕಾರಿಯಾಗಿ ಪೂರೈಸುವುದರಿಂದ ಅಷ್ಟೊಂದು ಮಾರಾಟವಾಗಿದ್ದಲ್ಲಿ ಆಶ್ಚರ್ಯಕರವಲ್ಲ. ನಗರದಲ್ಲಿ ಸುಲಭವಾಗಿ ಓಡಿಸಬಹುದಾದ ಈ ಕಾರು ಇಂಧನ ದಕ್ಷತೆಯ ವಿಚಾರದಲ್ಲೂ ಮುಂಚೂಣಿಯಲ್ಲಿದೆ.
ಇದನ್ನೂ ಓದಿ : Tata Punch CNG : ಎಕ್ಸ್ಟೆರ್ ಸಿಎನ್ಜಿಗೆ ಪಂಚ್ ಕೊಡಲು ಬಂದಿದೆ ಟಾಟಾ ಪಂಚ್; ಬೆಲೆ ಮತ್ತಿತರ ವಿವರ ಇಲ್ಲಿದೆ
ಕಳೆದ 2 ದಶಕಗಳಲ್ಲಿ, ಬ್ರಾಂಡ್ ಆಲ್ಟೋ ನಮ್ಮ ಗ್ರಾಹಕರೊಂದಿಗೆ ಬಲವಾದ ಭಾವನಾತ್ಮಕ ಸಂಪರ್ಕವನ್ನು ಹೊಂದಿದೆ. ಆಲ್ಟೋದ ನಂಬಲಾಗದ ಪ್ರಯಾಣದ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. 45 ಲಕ್ಷ ಗ್ರಾಹಕರ ಮೈಲಿಗಲ್ಲನ್ನು ಸಾಧಿಸುವುದು ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ಅಚಲ ನಂಬಿಕೆಗೆ ಸಾಕ್ಷಿ. ಇದು ಇಲ್ಲಿಯವರೆಗೆ ಬೇರೆ ಯಾವುದೇ ಕಾರು ಬ್ರಾಂಡ್ ಸಾಧಿಸಲು ಸಾಧ್ಯವಾಗದ ಮೈಲಿಗಲ್ಲು. ಆಲ್ಟೋ ನಿರಂತರವಾಗಿ ಆಟೋ ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ಭಾರತದ ನೆಚ್ಚಿನ ಕಾರು ಆಗಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದೆ/ ಭಾರತದ ಯುವ ಜನಸಂಖ್ಯೆ, ಹೆಚ್ಚುತ್ತಿರುವ ಆದಾಯದ ಮಟ್ಟ ಇತ್ಯಾದಿಗಳನ್ನು ಗಮನಿಸಿದರೆ. ಹೆಚ್ಚು ಆರಾಧಿಸಲ್ಪಡುವ ಆಲ್ಟೋ ಸಾಮರ್ಥ್ಯವು ಮುಂದುವರಿಯುತ್ತದೆ ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ನ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಲಿ ಮಾರುಕಟ್ಟೆಯಲ್ಲಿರುವ ಕಾರು ಹೇಗಿದೆ?
ಪ್ರಸ್ತುತ ತಲೆಮಾರಿನ ಆಲ್ಟೋ ಕೆ10 ನ ಬೆಲೆಯು ಬೇಸ್ ವೇರಿಯೆಂಟ್ಗೆ .3.99 ಲಕ್ಷ ರೂಪಾಯಿ. ಟಾಪ್ ಎಂಡ್ ವಿಎಕ್ಸ್ಐ ಸಿಎನ್ಜಿಗೆ .5.96 ರೂಪಾಯಿ. ಎರಡೂ ಬೆಲೆಗಳು ಎಕ್ಸ್ ಶೋರೂಂ ದರ. ಆಲ್ಟೋ ಕೆ 10 ಅನ್ನು 1 ಲೀಟರ್ ಡ್ಯುಯಲ್ ಜೆಟ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 66 ಬಿಹೆಚ್ ಪಿ ಮತ್ತು 89 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಕಾರಿನ ಸಿಎನ್ಜಿ ಆವೃತ್ತಿಯು 56 ಬಿಹೆಚ್ ಪಿ ಮತ್ತು 82 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕೇವಲ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನೊಂದಿಗೆ ಬರುತ್ತದೆ. ಆಲ್ಟೋ ಮೈಲೇಜ್ ಗೆ ಹೆಸರುವಾಸಿಯಾಗಿದೆ. ಪೆಟ್ರೋಲ್ ವೇರಿಯೆಂಟ್ ಪ್ರತಿ ಲೀಟರ್ ಗೆ 24.39 ಕಿ.ಮೀ ಮೈಲೇಜ್ ನೀಡುತ್ತದೆ. ಸಿಎನ್ಜಿ ವೇರಿಯೆಂಟ್ ಪ್ರತಿ ಕೆ.ಜಿ.ಗೆ 33.85 ಕಿ.ಮೀ ಮೈಲೇಜ್ ನೀಡುತ್ತದೆ.