ಬೆಂಗಳೂರು : ಮಾರುತಿ ಸುಜುಕಿ (Maruti Suzuki) ಕಂಪನಿಯ ಅತ್ಯಂತ ಜನಪ್ರಿಯ ಎಸ್ಯುವಿ ಕಾರು ಬ್ರೆಜಾದ ಸಿಎನ್ಜಿ ಆವೃತ್ತಿಯ ಭಾರತದ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಪರ್ಯಾಯ ಇಂಧನ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವ ಈ ಕಾರು ಒಂದು ಕಿಲೋ ಸಿಎನ್ಜಿಗೆ 25.51 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಈ ಆಯ್ಕೆಯೊಂದಿಗೆ ಮಾರುತಿ ಸುಜುಕಿಯ ಬ್ರೇಜಾ (Maruti Suzuki) ಕಾಂಪಾಕ್ಟ್ ಎಸ್ಯುವಿಯ ಮಾರಾಟ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಕಾರಿನ ಎಲ್ಎಕ್ಸ್ಐ ವೇರಿಯೆಂಟ್ನ ಬೆಲೆ 9.14 ಲಕ್ಷ ರೂಪಾಯಿಗಳಾಗಿದ್ದು, ಝಡ್ಎಕ್ಸ್ಐ ಡ್ಯುಯಲ್ಟೋನ್ ಕಾರಿಗೆ 12.5 ಲಕ್ಷ ರೂಪಾಯಿ. (ಎಕ್ಸ್ಶೋರೂಮ್)
ಝಡ್ಎಕ್ಸ್ಐ ಮಾಡೆಲ್ನಲ್ಲಿ ಸನ್ರೂಫ್, ಕ್ರೂಸ್ ಕಂಟ್ರೋಲ್, ಸ್ಮಾರ್ಟ್ಪ್ಲೇ ಪ್ರೊ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್ಲೆಸ್ ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಕಿಲೆಸ್ ಫುಶ್ ಸ್ಟಾರ್ಟ್ ಆಯ್ಕೆ ನೀಡಲಾಗಿದೆ.
ಇದನ್ನೂ ಓದಿ : Maruti Suzuki : ಫೆಬ್ರವರಿ 2023ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ವಿವರ ಇಲ್ಲಿದೆ
ಅಪ್ಡೇಟ್ ಆಗಿರುವ ಬ್ರೆಜಾ ಕಾರನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿತ್ತು. ಹೊಸ ಎಕ್ಸ್ಟೀರಿಯರ್ ಹಾಗೂ ಇಂಟೀರಿಯರ್ ಮೂಲಕ ಈ ಕಾರು ಗ್ರಾಹಕರ ಮನ ಗೆದ್ದಿತ್ತು. ಹೀಗಾಗಿ ಮಾರಾಟದಲ್ಲಿ ದೊಡ್ಡ ಪ್ರಮಾಣದ ಪ್ರಗತಿ ಸಾಧಿಸಿತ್ತು. 1.5 ಲೀಟರ್ನ ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ, ಎಂಜಿನ್ 103 ಹಾರ್ಸ್ ಪವರ್ ಹಾಗೂ 138 ಎನ್ ಎಮ್ ಟಾರ್ಕ್ ಬಿಡುಗಡೆ ಮಾಡಿತ್ತು. ಇನ್ ಸಿಎನ್ಜಿ ಬ್ರೆಜಾ 121.5 ಎನ್ಎಮ್ ಟಾರ್ಕ್ ಹಾಗೂ 87 ಎಚ್ಪಿ ಪವರ್ ಬಿಡುಗಡೆ ಮಾಡುತ್ತದೆ. ಹೊಸ ಬ್ರೇಜಾ ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಆಯ್ಕೆಯನ್ನು ನೀಡಲಾಗುತ್ತದೆ. ಸಿಎನ್ಜಿ ಕಾರು ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ.
ಮಾರುತಿ ಸುಜುಕಿಯ ಹಿರಿಯ ಕಾರ್ಯನಿರ್ವಹಣಾಧಿಕಾರಿ ಶಶಾಂಕ್ ಶ್ರೀವಾಸ್ತವ ಸಿಎನ್ಜಿ ಕಾರು ಬಿಡುಗಡೆಯ ಕುರಿತು ಮಾತನಾಡಿ, ಮಾರುತಿ ಸುಜುಕಿಯ ಎಸ್-ಸಿಎನ್ಜಿ ಮಾಡೆಲ್ ಶೇಕಡಾ 24ರಷ್ಟು ಮಾರುಕಟ್ಟೆಯಲ್ಲಿ ಪ್ರಗತಿ ಕಂಡಿದೆ. ಎರ್ಟಿಗಾ ಹಾಗೂ ವ್ಯಾಗನ್- ಆರ್ ಕಾರುಗಳು ಕ್ರಮವಾಗಿ ಶೇಕಡಾ 57 ಹಾಗೂ 41 ಮಾರಾಟ ಕಂಡಿವೆ ಎಂಎದು ಹೇಳಿದ್ದಾರೆ.