ಬೆಂಗಳೂರು: ಭಾರತದ ಅತಿ ದೊಡ್ಡ ಕಾರು ತಯಾರಿಕ ಕಂಪನಿ ಮಾರುತಿ ಸುಜುಕಿ ತನ್ನ ಬ್ರೆಜಾ ಕಾಂಪ್ಯಾಕ್ಟ್ ಎಸ್ ಯುವಿ ಕಾರಿನಲ್ಲಿ ಸದ್ದಿಲ್ಲದ ಬದಲಾವಣೆಯೊಂದನ್ನು ಮಾಡಿದೆ. ಈ ಬಗ್ಗೆ ಯಾವುದೇ ಪ್ರಕಟಣೆ ಹೊರಡಿಸಿಲ್ಲವಾದರೂ ಕಂಪನಿಯ ವೆಬ್ಸೈಟ್ನಲ್ಲಿ ಹಾಗೂ ಬ್ರೌಷರ್ನಲ್ಲಿ ವಿವರ ಬಹಿರಂಗಗೊಂಡಿದೆ. ಮಾರುತಿ ಸುಜುಕಿ ಮಂಪನಿ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಬ್ರೇಜಾ ವೇರಿಯೆಂಟ್ಗಳಿಂದ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ತೆಗೆದುಹಾಕಿದೆ. ಈ ಮೂಲಕ ತನ್ನ ಜನಪ್ರಿಯ ಉತ್ನನ್ನದ ಪವರ್ಟ್ರೇನ್ ಅನ್ನು ಬದಲಾಯಿಸಿದೆ. ಇದರ ಪರಿಣಾಮವಾಗಿ ವಾಹನದ ಮೈಲೇಜ್ ಇಳಿಕೆಯಾಗಿದೆ. ಹಿಂದೆ 20.15 ಕಿ.ಮೀ ಮೈಲೇಜ್ ಕೊಡುತ್ತಿದ್ದರೆ ಇದೀಗ 17.38 ಕಿ.ಮೀಗೆ ಸೀಮಿತಗೊಂಡಿದೆ.
ಬ್ರೆಝಾ ಕಾರಿನಲ್ಲಿ ಈಗ ಎಲ್ಲ ಪ್ರಯಾಣಿಕರಿಗೆ ಸೀಟ್-ಬೆಲ್ಟ್ ಅಲರ್ಟ್ ನೀಡುತ್ತದೆ. ಹಿಂದೆ ಈ ಸೆಕ್ಯುರಿಟಿ ಅಲರ್ಟ್ ಮುಂಭಾಗದ ಸೀಟ್ಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ ಎಲ್ಲಾ ಸೀಟ್ಗಳ ಪ್ರಯಾಣಿಕರಿಗೆ ಅಲರ್ಟ್ ನೀಡುತ್ತದೆ. ಇದು ಹೊಸ ಮಾರುತಿ ಸುಜುಕಿಯ ಮಾಡೆಲ್ಗಳಾದ ಫ್ರಾಂಕ್ಸ್ ಮತ್ತು ಜಿಮ್ನಿಗಳಲ್ಲಿ ಈಗಾಗಲೇ ಅಳವಡಿಕೆಗೊಂಡಿದೆ.
ಇದೇ ವೇಳೆ ಸಿಎನ್ಜಿ ವೇರಿಯೆಂಟ್ನಿಂದಳೂ ಕೆಲವು ಸೆಕ್ಯುರಿಟಿ ಫೀಚರ್ಗಳನ್ನು ತೆಗೆದುಹಾಕಲಾಗಿದೆ. ಬ್ರೆಝಾ ಸಿಎನ್ಜಿ ಕಾರಿನಲ್ಲಿ ಮುಂದೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ಪಿ) ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಇರುವುದಿಲ್ಲ . ಆದರೆ ಉಳಿದ ಫೀಚರ್ಗಳನ್ನು ಬದಲಾಯಿಸಿಲ್ಲ. ಇದು 360 ಡಿಗ್ರಿ ಕ್ಯಾಮೆರಾ, ಹೆಡ್ಸ್-ಅಪ್ ಡಿಸ್ಪ್ಲೇ, ಆರು ಏರ್ಬ್ಯಾಗ್ಗಳು, ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಹೊಂದಿರುವ 9 ಇಂಚಿನ ಸ್ಮಾರ್ಟ್ ಪ್ರೊ + ಟಚ್ಸ್ಕ್ರೀಣ್ ಅರ್ಕಮಿಸ್- ಟ್ಯೂನ್ಡ್ ಸ್ಪೀಕರ್ ಸಿಸ್ಟಮ್, ವೈರ್ಲೆಸ್ ಚಾರ್ಜಿಂಗ್ ಮತ್ತು ಸಿಂಗಲ್-ಪ್ಯಾನ್ ಸನ್ರೂಫ್ ಅನ್ನು ಪಡೆಯುತ್ತದೆ.
ಪವರ್ಟ್ರೇನ್ ಈಗ ಹೇಗಿದೆ?
ಮಾರುತಿ ಸುಜುಕಿ ತನ್ನ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಬ್ರೆಝಾದ ಮ್ಯಾನುವಲ್ ಗೇರ್ ಬಾಕ್ಸ್ ವೇರಿಯೆಂಟ್ಗಳಿಂದ ತೆಗೆದುಹಾಕಿದೆ. ಆದರೆ ಆಟೋಮ್ಯಾಟಿಕ್ ಗೇರ್ಬಾಕ್ಸ್ ಇರುವ ಕಾರುಗಳಿಗೆ ಇನ್ನೂ ಈ ತಂತ್ರಜ್ಞಾನವನ್ನು ಉಳಿಸುತ್ತದೆ. ಸಿಎನ್ಜಿ ಆವೃತ್ತಿಗೆ ಇದು ಮೊದಲೇ ಇರಲಿಲ್ಲ.
ಇದನ್ನೂ ಓದಿ : Tata Altroz : ಟಾಟಾ ಆಲ್ಟ್ರೋಜ್ನಲ್ಲಿ ಎರಡು ಹೊಸ ವೇರಿಯೆಂಟ್ಗಳ ಪರಿಚಯ; ಏನೇನಿವೆ ಫೀಚರ್ಗಳು?
ಬ್ರೆಜಾದಲ್ಲಿರುವ 1.5-ಲೀಟರ್ ಪೆಟ್ರೋಲ್ ಎಂಜಿನ್ 103 ಬಿಎಚ್ಪಿ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.. ಸಿಎನ್ಜಿ ಆವೃತ್ತಿಯು ಅದೇ ಎಂಜಿನ್ ಅನ್ನು ಪಡೆಯುತ್ತದೆ. ಆದರೆ ಸಿಎನ್ ಜಿ ಮೋಡ್ ನಲ್ಲಿ 87.8 ಬಿಹೆಚ್ ಪಿ ಮತ್ತು 121.5 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಪೆಟ್ರೋಲ್ ಮೋಡ್ನಲ್ಲಿ 100.6 ಬಿಎಚ್ಪಿ ಮತ್ತು 136 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಎನ್ಜಿ ಆವೃತ್ತಿಯು 5-ಸ್ಪೀಡ್ ಮ್ಯಾನುವಲ್ ಅನ್ನು ಮಾತ್ರ ಪಡೆದರೆ, ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕೂಡ ಪಡೆಯುತ್ತದೆ.
ಮೈಲ್ಡ್- ಹೈಬ್ರಿಡ್ ತಂತ್ರಜ್ಞಾನದೊಂದಿಗೆ, ಬ್ರೆಝಾ ಮ್ಯಾನುವಲ್ 20.15 ಕಿ.ಮೀ ವರೆಗ ಇಂಧನ ದಕ್ಷತೆಯನ್ನು ನೀಡುತ್ತಿತ್ತು. ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ತೆಗೆದುಹಾಕುವುದರೊಂದಿಗೆ, ಬ್ರೆಝಾ ಮ್ಯಾನುವಲ್ ಈಗ 17.38 ಕಿ.ಮೀ ಇಂಧನ ದಕ್ಷತೆ ಉಳಿಸಿಕೊಂಡಿದೆ. ಇದು 2.77 ಕಿ.ಮೀ ವರೆಗೆ ಕಡಿತವಾಗಿದೆ.
ಪ್ರತಿ ಸ್ಪರ್ಧಿ ಕಾರುಗಳು ಯಾವುದು?
ಬ್ರೆಜಾ ಈಗ ಕೆಲವು ಫೀಚರ್ಗಳನ್ನು ಕಳೆದುಕೊಂಡಿದ್ದರೂ, ಬ್ರೆಜಾದಲ್ಲಿ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇದು ಎಲ್ಎಕ್ಸ್ಐ ಎಂಟಿ ರೂಪಾಂತರಕ್ಕೆ 8.29 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ ಮತ್ತು ಜಡ್ಎಕ್ಸ್ಐ+ ಎಟಿ ವೇರಿಯೆಂಟ್ಗೆ 13.98 ಲಕ್ಷ ರೂ.ಗಳವರೆಗೆ ಹೋಗುತ್ತದೆ. ಮಾರುತಿ ಸುಜುಕಿ ಫ್ರಾಂಕ್ಸ್, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್ ಯುವಿ 300, ಟಾಟಾ ನೆಕ್ಸಾನ್, ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾರುಗಳಿಗೆ ಬ್ರೆಜಾ ಪೈಪೋಟಿ ನೀಡುತ್ತದೆ.