Site icon Vistara News

Grand Vitara : ಗ್ರ್ಯಾಂಡ್​ ವಿಟಾರ ಕಾರಿನಲ್ಲಿ ಪಾದಚಾರಿಗಳ ಪ್ರಾಣ ಉಳಿಸುವ ವಿಶೇಷ ಫೀಚರ್

Grand Vitara

ನವ ದೆಹಲಿ: ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಇತ್ತೀಚೆಗೆ ತನ್ನ ಪ್ರೀಮಿಯಂ ಮಧ್ಯಮ ಗಾತ್ರದ ಎಸ್ ಯುವಿ ಗ್ರ್ಯಾಂಡ್ ವಿಟಾರಾದಲ್ಲಿ (Grand Vitara) ಅಕೌಸ್ಟಿಕ್ ವೆಹಿಕಲ್ ಅಲರ್ಟ್ ಸಿಸ್ಟಮ್ (ಎವಿಎಎಸ್) ಎಂದು ಕರೆಯುವ ನವೀನ ಸುರಕ್ಷತಾ ಫೀಚರ್​ನೊಂದಿಗೆ ಅಪ್​ಗ್ರೇಡ್​ ಮಾಡಿದೆ. ಈ ಸುಧಾರಿತ ತಂತ್ರಜ್ಞಾನವು ಸಮಯೋಚಿತ ಎಚ್ಚರಿಕೆಗಳನ್ನು ನೀಡುವ ಮೂಲಕ ಪಾದಚಾರಿಗಳ ಸುರಕ್ಷತೆಯನ್ನು ಹೆಚ್ಚಿಸಲಿದೆ. ಈ ಹೊಸ ಫೀಚರ್ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದಲ್ಲಿ ಇದೀಗಾಗಲೇ ನೀಡಿರುವ ಸುರಕ್ಷತಾ ಫೀಚರ್​ಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ.

ಎವಿಎಎಸ್ ಕಾರ್ಯವಿಧಾನವು ಸೂಕ್ಷ್ಮ ಎಚ್ಚರಿಕೆ ಶಬ್ದವನ್ನು ಹೊರಸೂಸುವ ಮೂಲಕ ಕಾರ್ಯನಿರ್ವಹಿಸುತ್ತದೆ, ಅದು ವಾಹನದಿಂದ ಐದು ಅಡಿ ವ್ಯಾಪ್ತಿಯಲ್ಲಿ ಪಾದಚಾರಿಗಳಿದ್ದರೂ ಎಚ್ಚರಿಸುತ್ತದೆ. ಇದು ಪಾದಚಾರಿಗಳು ಮತ್ತು ಹತ್ತಿರದ ವಾಹನದಲ್ಲಿರುವ ಚಾಲಕರಿಗೂ ಎಚ್ಚರಿಕೆ ನೀಡುತ್ತದೆ. ಎಲೆಕ್ಟ್ರಿಕ್ ಮತ್ತು ಪ್ಲಗ್-ಇನ್ ಎಲೆಕ್ಟ್ರಿಕ್ ವಾಹನಗಳಿಗೆ ಎವಿಎಎಸ್ ತಾಂತ್ರಿಕತೆ ಹೆಚ್ಚು ಅನುಕೂಲಕರ. ಇವಿಗಳು ಚಲನೆಯಲ್ಲಿರುವಾಗ ಕಡಿಮೆ ಶಬ್ದವನ್ನು ಹೊರಸೂಸುತ್ತವೆ. ಗ್ರ್ಯಾಂಡ್ ವಿಟಾರಾದಲ್ಲಿ ಎವಿಎಎಸ್ ಅನ್ನು ಅಳವಡಿಸುವ ಮೂಲಕ ಪಾದಚಾರಿಗಳ ಪ್ರಾಣದ ಬಗ್ಗೆ ಕಾಳಜಿ ವಹಿಸಿದೆ.

ಗ್ರ್ಯಾಂಡ್ ವಿಟಾರಾದ ಮೈಲ್ಡ್​ ಹೈಬ್ರಿಡ್ ವೇರಿಯೆಂಟ್​ಗಳ ಬೆಲೆಗಳು ಬದಲಾಗದೆ ಉಳಿದಿದ್ದರೂ, ಝೀಟಾ + ಮತ್ತು ಆಲ್ಫಾ + ವೇರಿಯೆಂಟ್​ಗಳು ಸೇರಿದಂತೆ ಸ್ಟ್ತಾಂಗ್​ ಹೈಬ್ರಿಡ್ ವೇರಿಯೆಂಟ್​​ನ ಎಕ್ಸ್ ಶೋರೂಂ ಬೆಲೆಗಳಲ್ಲಿ 4,000 ರೂ.ಗಳ ಬೆಲೆ ಏರಿಕೆಯನ್ನು ಕಂಡಿದೆ. ಝೀಟಾ ಪ್ಲಸ್ ವೇರಿಯೆಂಟ್​ ಬೆಲೆಯು ಈಗ ರೂ.18.29 ಲಕ್ಷಗಳಾಗಿದ್ದರೆ, ಆಲ್ಫಾ+ ವೇರಿಯೆಂಟ್​ ಬೆಲೆಯು ರೂ.19.79 ಲಕ್ಷಗಳಾಗಿದೆ (ಎರಡೂ ಬೆಲೆಗಳು ಎಕ್ಸ್ ಶೋರೂಂ).

ಸುಜುಕಿ ಗ್ರ್ಯಾಂಡ್ ವಿಟಾರಾ ಮಧ್ಯಮ ಗಾತ್ರದ ಎಸ್ ಯುವಿ ಸೆಗ್ಮೆಂಟ್​ನಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ತನ್ನ ಸಮೀಪದ ಪ್ರತಿಸ್ಪರ್ಧಿಯಾದ ಕಿಯಾ ಸೆಲ್ಟೋಸ್ ಅನ್ನು ಹಿಂದಿಕ್ಕಿರುವ ಗ್ರ್ಯಾಂಡ್ ವಿಟಾರಾ ದೇಶದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಮಧ್ಯಮ ಗಾತ್ರದ ಎಸ್​ಯುವಿ ಎನಿಸಿಕೊಂಡಿದೆ. ಜೂನ್ 2023ರಲ್ಲಿ, ವಾಹನವು 10,486 ಯುನಿಟ್ ಮಾರಾಟವಾಗಿವೆ. ಇದು ಹೆಚ್ಚು ಸ್ಪರ್ಧಾತ್ಮಕ ಮಧ್ಯಮ ಗಾತ್ರದ ಎಸ್​ಯುವಿ ವಿಭಾಗದಲ್ಲಿ ತನ್ನ ಸ್ಥಾನವನ್ನು ಅದರ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.

ಗ್ರ್ಯಾಂಡ್ ವಿಟಾರಾ ವರ್ಷಪೂರ್ತಿ ನಿಷ್ಠಾವಂತ ಗ್ರಾಹಕರ ನೆಲೆಯನ್ನು ಕಾಯ್ದುಕೊಂಡಿದೆ. 2022ರಿಂದ ಜೂನ್ 2023 ರವರೆಗೆ ಮಾರಾಟದ ಅಂಕಿಅಂಶಗಳನ್ನು ಸಂಯೋಜಿಸಿದರೆ, ಗ್ರ್ಯಾಂಡ್ ವಿಟಾರಾ ಒಟ್ಟು 69,758 ಯೂನಿಟ್​ಗಳು ಮಾರಾಟವಾಗಿವೆ.

ಇದನ್ನೂ ಓದಿ: Maruti Suzuki : ಮಾರುತಿ ಸುಜುಕಿ ಜಿಮ್ನಿ 5 ಡೋರ್ ಕಾರಿನ ಮೈಲೇಜ್​ ಬಹಿರಂಗ

ಹತ್ತಿರದ ಪ್ರತಿಸ್ಪರ್ಧಿಯಾದ ಕಿಯಾ ಸೆಲ್ಟೋಸ್ ಗೆ ಹೋಲಿಸಿದರೆ, ಗ್ರ್ಯಾಂಡ್ ವಿಟಾರಾ ಗಮನಾರ್ಹ ಮುನ್ನಡೆ ಕಾಯ್ದುಕೊಂಡಿದೆ. ಕಿಯಾ ಸೆಲ್ಟೋಸ್ ಈ ಅವಧಿಯಲ್ಲಿ 39,892 ಯುನಿಟ್ ಮಾರಾಟವಾಗಿವೆ. ಇದು ಗ್ರ್ಯಾಂಡ್ ವಿಟಾರಾದ ಮಾರುಕಟ್ಟೆ ಪ್ರಾಬಲ್ಯವನ್ನು ಎತ್ತಿ ತೋರಿಸುತ್ತದೆ. ಇದಲ್ಲದೆ, ಗ್ರ್ಯಾಂಡ್ ವಿಟಾರಾ ಇತರ ಮಧ್ಯಮ ಗಾತ್ರದ ಎಸ್​ಯುವಿಗಳಾದ ಫೋಕ್ಸ್ ವ್ಯಾಗನ್ ಟೈಗುನ್ ಮತ್ತು ಸ್ಕೋಡಾ ಕುಶಾಕ್ ಅನ್ನೂ ಮೀರಿಸಿದೆ.

ಕಾರಿನ ಪವರ್​ಟ್ರೇನ್​

ಗ್ರ್ಯಾಂಡ್ ವಿಟಾರಾ ಎರಡು ಪವರ್ ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. ಮೈಲ್ಡ್ ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್. ಆಲ್-ವ್ಹೀಲ್ ಡ್ರೈವ್ ಆಯ್ಕೆಯನ್ನು ಮೈಲ್ಡ್ ಹೈಬ್ರಿಡ್-ಮ್ಯಾನುವಲ್ ಟ್ರಾನ್ಸ್​ಮಿಷನ್​ ವೇರಿಯೆಂಟ್​ಗಳಿಗೆ ಮೀಸಲಾಗಿದೆ. ಉಳಿದ ವೇರಿಯೆಂಟ್​ಗಳು ಫ್ರಂಟ್-ವೀಲ್-ಚಾಲಿತವಾಗಿವೆ. ಈ ಎಂಜಿನ್ ನೊಂದಿಗೆ 5 ಸ್ಪೀಡಿನ ಮ್ಯಾನುವಲ್ ಮತ್ತು 6 ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳಿವೆ. ಮೈಲ್ಡ್ ಹೈಬ್ರಿಡ್ ಪವರ್ ಟ್ರೇನ್ 1.5-ಲೀಟರ್ 4 ಸಿಲಿಂಡರ್ ಕೆ 15 ಸಿ ಪೆಟ್ರೋಲ್ ಎಂಜಿನ್ (102 ಬಿಹೆಚ್ ಪಿ-137 ಎನ್ಎಂ) ಹೊಂದಿದೆ.

ಸ್ಟ್ರಾಂಗ್ ಹೈಬ್ರಿಡ್​ ಪವರ್​ಟ್ರೇನ್​ 1.5 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ (91 ಬಿಹೆಚ್ ಪಿ-122 ಎನ್ಎಂ) ಮತ್ತು ಎಲೆಕ್ಟ್ರಿಕ್ ಮೋಟರ್ (78 ಬಿಹೆಚ್ ಪಿ-141 ಎನ್ಎಂ) ಉತ್ಪಾದಿಸುತ್ತದೆ. ಅಂದರೆ ಗ್ರ್ಯಾಂಡ್ ವಿಟಾರಾವನ್ನು ಸುಮಾರು 25 ಕಿಲೋಮೀಟರ್ ಬ್ಯಾಟರಿಯ ಶಕ್ತಿಯಿಂದಲೇ ಓಡಿಸಬಹುದು. ಬಲವಾದ ಹೈಬ್ರಿಡ್ ಗ್ರ್ಯಾಂಡ್ ವಿಟಾರಾದ ಎಲ್ಲಾ ರೂಪಾಂತರಗಳು ಫ್ರಂಟ್​ ವೀಲ್​ ಚಾಲಿತವಾಗಿದೆ. ಇದು ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ಇದು ಲೀಟರ್ ಪೆಟ್ರೋಲ್​ಗೆ 28 ಕಿಲೋಮೀಟರ್ ಮೈಲೇಜ್​ ಕೊಡುತ್ತದೆ.

Exit mobile version