ಮುಂಬಯಿ: ಮಾರುತಿ ಸುಜುಕಿ ಕಂಪನಿಯು ಎಲ್ಲ ಕಾರುಗಳನ್ನು ಬಿಎಸ್6 ಎರಡನೇ ಹಂತದ ಮಾನದಂಡಗಳನ್ನು ಅಳಡಿಸಿಕೊಂಡಿದೆ. ಹೀಗಾಗಿ ಮಾರುತಿ ಕಂಪನಿಯ ಕಾರುಗಳಲ್ಲಿ ರಿಯಲ್ ಟೈಮ್ ಡ್ರೈವಿಂಗ್ ಎಮಿಷನ್ (ಆರ್ಡಿಇ) ಸಿಸ್ಟಮ್ ಇರುತ್ತದೆ ಹಾಗೂ ಇ20 ಪೆಟ್ರೋಲ್ನಲ್ಲೂ ಚಲಿಸುತ್ತದೆ. ಅದೇ ರೀತಿ ತನ್ನ ಎಲ್ಲ ಸಣ್ಣ ಕಾರುಗಳು ಹಾಗೂ ಎಸ್ಯುವಿಗಳಲ್ಲಿ ಹೆಚ್ಚುವರಿ ಸುರಕ್ಷತಾ ಫೀಚರ್ಗಳನ್ನೂ ನೀಡಿದೆ. ಪ್ರಮುಖವಾಗಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ಸಿ) ಫೀಚರ್ ನೀಡಲಾಗಿದೆ.
ಇಎಸ್ಸಿ ಸಿಸ್ಟಮ್ ಆಧುನಿಕ ಸುರಕ್ಷತಾ ತಾಂತ್ರಿಕತೆಯಾಗಿದ್ದು ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡರೆ ನಿಯಂತ್ರಣ ಮಾಡಲು ನೆರವಾಗುತ್ತದೆ. ಎಂಜಿನ್ ಶಕ್ತಿ ಹಾಗೂ ಬ್ರೇಕಿಂಗ್ ಅನ್ನು ನಾಲ್ಕು ಚಕ್ರಗಳಿಗೆ ಬೇಕಾದಷ್ಟು ಮಾತ್ರ ನೀಡುವ ಮೂಲಕ ವಾಹನ ನಿಯಂತ್ರಣ ತಪ್ಪದಂತೆ ನೋಡಿಕೊಳ್ಳುತ್ತದೆ. ಇದರಿಂದ ಚಾಲಕರಿಗೆ ವಾಹನದ ಮೇಲೆ ನಿಯಂತ್ರಣ ಸಾಧಿಸಲು ಸುಲಭವಾಗುತ್ತದೆ. ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪದಂತೆ ಹಾಗೂ ಏಕಾಏಕಿ ತಿರುವು ಪಡೆದುಕೊಂಡಾ ಜಾರಿ ಹೋಗದಂತೆ ಈ ವ್ಯವಸ್ಥೆ ನೋಡಿಕೊಳ್ಳುತ್ತದೆ.
ಇಎಸ್ಸಿ ವ್ಯವಸ್ಥೆಯನ್ನು ಅರೆನಾ ಹಾಗೂ ನೆಕ್ಸಾದಲ್ಲಿ ಮಾರಾಟ ಮಾಡಲಾಗುವ ಎಲ್ಲ ಕಾರುಗಳಿಗೆ ನೀಡುವುದಾಗಿ ಮಾರುತಿ ಸುಜುಕಿ ಹೇಳಿದೆ. ಆಲ್ಟೊ, ಎಸ್ಪ್ರೆಸೊ ಗ್ರಾಂಡ್ ವಿಟಾರದವರೆಗಿನ ಕಾರುಗಳಲ್ಲಿ ಈ ಫೀಚರ್ ಗ್ರಾಹಕರಿಗೆ ಸಿಗಲಿದೆ.
ಫ್ರಾಂಕ್ಸ್ ಕಾರು ಹೇಗಿದೆ?
ಮಾರುತಿ ಸುಜುಕಿ ಕಂಪನಿಯ ಬಹುನಿರೀಕ್ಷಿತ ಕಾಂಪ್ಯಾಕ್ಟ್ ಎಸ್ಯುವಿ ಕಾರು ಫ್ರಾಂಕ್ಸ್ ಕಾರು ಭಾರತದ ಮಾರುಕಟ್ಟೆಗೆ ಇಳಿದಿದೆ. ಟಾಟಾ ಮೋಟಾರ್ಸ್ನ ಪಂಚ್ ಹಾಗೂ ಸಿಟ್ರಾನ್ ಕಂಪನಿಯ ಸಿ3ಗೆ ಪೈಪೋಟಿ ಒಡ್ಡಲೆಂದೇ ರಸ್ತೆಗಿಳಿಸಿರುವ ಈ ಕಾರಿನ ಬುಕಿಂಗ್ ಆರಂಭಗೊಂಡಿದೆ. 7.44 ಲಕ್ಷ ರೂಪಾಯಿಂದ ಆರಂಭಗೊಂಡು 13.13 ಲಕ್ಷ ರೂಪಾಯಿ ಬೆಲೆ ಇದಕ್ಕೆ ನಿಗದಿ ಮಾಡಲಾಗಿದೆ. (ಎಕ್ಸ್ ಶೋರೂಮ್ ಬೆಲೆ). 11 ಸಾವಿರ ರೂಪಾಯಿ ಪಾವತಿ ಮಾಡಿ ಗ್ರಾಹಕರು ಕಾರನ್ನು ಬುಕ್ ಮಾಡಿಕೊಳ್ಳಬಹುದು. ಅದೇ ರೀತಿ ಮಾಸಿಕ 17,378 ರೂಪಾಯಿ ಪಾವತಿ ಮಾಡಿಯೂ ಕಾರನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಕಂಪನಿ ಹೇಳಿದೆ.
ಮಾರುತಿ ಸುಜುಕಿಯ ನೆಕ್ಸಾ ಶೋರೂಮ್ಗಳಲ್ಲಿ ಈ ಕಾರು ಲಭ್ಯವಿರುತ್ತದೆ. ಸಿಗ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್, ಝೀಟಾ ಮತ್ತು ಆಲ್ಫಾ ಎಂಬ ಐದು ವೇರಿಯೆಂಟ್ಗಳಲ್ಲಿ ಕಾರು ಲಭ್ಯವಿದೆ. 1.2 ಕೆ. ಸೀರಿಸ್ನ ಡ್ಯುಯಲ್ ಜೆಟ್ ಎಂಜಿನ್ ಹಾಗೂ 1.0 ಲೀಟರ್ನ ಟರ್ಬೊ ಬೂಸ್ಟರ್ಜೆಟ್ ಸೀರಿಸ್ನಲ್ಲಿ ಕಾರುಗಳು ಲಭ್ಯವಿದೆ. ಎರಡು ಎಂಜಿನ್ ಆಯ್ಕೆಯಲ್ಲೂ ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಿದೆ.
ಬಣ್ಣಗಳ ಆಯ್ಕೆ
ಫ್ರಾಂಕ್ಸ್ ಕಾರು 10 ಮೊಮೊಟೋನ್ ಹಾಗೂ ಡ್ಯುಯಲ್ ಟೋನ್ ಪೇಂಟ್ ಆಯ್ಕೆಯೊಂದಿಗೆ ಬಿಡುಗಡೆಗೊಂಡಿದೆ. ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವ್, ಗ್ರಾಂಡ್ಯುರ್ ಗ್ರೇ, ಬ್ಲ್ಯೂಯಿಶ್ ಬ್ಲ್ಯಾಕ್, ಸೆಲೆಸ್ಟಿಯಲ್ ಬ್ಲ್ಯೂ, ಆಪ್ಲೆಂಟ್ ರೆಡ್, ಅರ್ತನ್ ಬ್ರೌನ್ ಬಣ್ಣಗಳ ಜತೆಗೆ ಡ್ಯುಯಲ್ ಟೋನ್ ಪೇಂಟ್ಗಳು ಲಭ್ಯವಿದೆ.
ಫೀಚರ್ಗಳೇನು?
ಫ್ರಾಂಕ್ಸ್ ಕಾರಿನಲ್ಲಿ 2022ರಲ್ಲಿ ಬಿಡುಗಡೆಯಾದ ಬಲೆನೊ ಕಾರಿನ ಎಲ್ಲ ಫೀಚರ್ಗಳಿವೆ. ಹೆಡ್ಅಪ್ ಡಿಸ್ಪ್ಲೇ, 9 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ನಾಲ್ಕು ಸ್ಪೀಕರ್ ಹಾಗೂ ಎರಡು ಟ್ವೀಟರ್, ಸುಜುಕಿ ಕನೆಕ್ಟ್ ಟೆಲಿಮ್ಯಾಟಿಕ್ಸ್, ಆಂಡ್ರಾಯ್ಡ್ ಆಟೋ ಹಾಗೂ ಆ್ಯಪಲ್ ಕಾರ್ಪ್ಲೇ, ವೈರ್ಲೆಸ್ ಫೋನ್ ಚಾರ್ಜಿಂಗ್, ಎಂಜಿನ್ ಸ್ಟಾರ್ಟ್-ಸ್ಟಾಪ್, ಕ್ರೂಸ್ ಕಂಟ್ರೋಲ್ ಫೀಚರ್ಗಳನ್ನು ನೀಡಲಾಗಿದೆ.
ಕಾರಿನ ವಿನ್ಯಾಸ ಗ್ರಾಂಡ್ ವಿಟಾರದ ರೀತಿಯಲ್ಲಿದೆ. ಕ್ರೋಮ್ ಬಾರ್, ಎಕ್ಸಾಗಾನಲ್ ಗ್ರಿಲ್, ಫಾಕ್ಸ್ ಸ್ಕಿಡ್ ಪ್ಲೇಟ್ ಕಾರು ಅತ್ಯಾಕರ್ಷಕವಾಗಿ ಕಾಣುವಂತೆ ಮಾಡಿದೆ. 16 ಇಂಚಿನ ಡ್ಯುಯಲ್ ಕಟ್ ಅಲಾಯ್ ವೀಲ್ ನೀಡಲಾಗಿದೆ. ಹಿಂಬದಿಯಲ್ಲಿ ಎಲ್ಇಡಿ ಬ್ಲಾಕ್ ಟೈಲ್ ಲ್ಯಾಂಪ್, ಎಲ್ಇಡಿ ಸ್ಟ್ರಿಪ್ ಹಾಗೂ ಇಂಟಿಗ್ರೆಟೆಡ್ ಸ್ಪಾಯಿಲರ್ ಅನ್ನು ಹಿಂದೆ ಕೊಡಲಾಗಿದೆ.
ಎಂಜಿನ್ ಹೇಗಿದೆ?
ಹೊಚ್ಚ ಹೊಸ 1.0 ಲೀಟರ್ನ ಟರ್ಬೊ ಬೂಸ್ಟರ್ಜೆಟ್ ಎಂಜಿನ್ 99 ಬಿಎಚ್ಪಿ ಪವರ್ ಹಾಗೂ 147 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಅದೇ ರೀತಿ 1.2 ಲೀಟರ್ನ ಎಂಜಿನ್ ಆಯ್ಕೆಯನ್ನೂ ಗ್ರಾಹಕರಿಗೆ ನೀಡಲಾಗಿದೆ. ಇದು 89 ಬಿಎಚ್ಪಿ ಪವರ್ ಹಾಗೂ 113 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಐದು ಸ್ಪೀಡ್ನ ಮ್ಯಾನುಯಲ್, ಐದು ಸ್ಪೀಡ್ನ ಎಜಿಎಸ್ ಹಾಗೂ 6 ಸ್ಪೀಡ್ನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿದೆ.
ಸೇಫ್ಟಿ ಫೀಚರ್ಗಳು
ಸುಜುಕಿಯ ಹಿಯರ್ಟೆಕ್ಟ್ ಫ್ಲಾಟ್ಫಾರ್ಮ್ ಮೇಲೆ ಕಾರನ್ನು ನಿರ್ಮಿಸಲಾಗಿದೆ. ಆರು ಏರ್ಬ್ಯಾಗ್ಗಳು, ತ್ರಿ ಪಾಯಿಂಟ್ ಇಎಲ್ಆರ್ ಸೀಟ್ಬೆಲ್ಟ್, ಇಎಸ್ಪಿ ಹಾಗೂ ಹಿಲ್ ರೋಡ್ ಅಸಿಸ್ಟ್ ಹಾಗೂ ರೋಲ್ಓವರ್ ಮಿಟಿಗೇಷನ್, ಎಬಿಎಸ್ ಮತ್ತು ಇಬಿಡಿ ಫೀಚರ್ಗಳಿವೆ.
ಇದನ್ನೂ ಓದಿ : Maruti Suzuki : 25.51 ಕಿಲೋ ಮೀಟರ್ ಮೈಲೇಜ್ ಕೊಡುವ ಮಾರುತಿ ಸುಜುಕಿ ಬ್ರೆಜಾ ಬಿಡುಗಡೆ
ಗಾತ್ರ ಎಷ್ಟಿದೆ?
ಮಾರುತಿ ಸುಜುಕಿ ಫ್ರಾಂಕ್ಸ್ 3,995 ಮಿಲಿ ಮೀಟರ್ ಉದ್ದವಿದೆ. 1756 ಎಮ್ಎಮ್ ಅಗಲ, 1550 ಎತ್ತರ ಹೊಂದಿದೆ. ವೀಲ್ಬೇಸ್ 2520 ಮಿಲಿ ಮೀಟರ್. ಕಾರು ಇನ್ನಷ್ಟು ಅಕರ್ಷಕವಾಗಿ ಕಾಣುವಂತೆ ಆಕ್ಸೆಸರಿ ಪ್ಯಾಕೇಜ್ಗಳನ್ನೂ ಮಾರುತಿ ನೀಡಿದೆ. ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್, ಕೆಂಪು ಬಣ್ಣದ ಇನ್ಸರ್ಟ್ಗಳು, ಸೈಡ್ ಸ್ಕಿಡ್ ಪ್ಲೇಟ್ಗಳು, ಒಆರ್ವಿಎಮ್ ಕವರ್ಗಳನ್ನು ನೀಡಲಾಗಿದೆ.
ಪ್ರತಿಸ್ಪರ್ಧಿ ಕಾರುಗಳು
ಟಾಟಾದ ಪಂಚ್, ಸಿಟ್ರಾನ್ ಸಿ3, ರೆನೊ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಫ್ರಾಂಕ್ಸ್ ಕಾರಿನ ಪ್ರತಿಸ್ಪರ್ಧಿಗಳಾಗಿ