ನವ ದೆಹಲಿ: ಮಾರುತಿ ಸುಜುಕಿಯ ಕಾರುಗಳಿಗೆ ಭಾರತದಲ್ಲಿ ಬಲು ಡಿಮ್ಯಾಂಡ್. ಹೀಗಾಗಿ ಒಟ್ಟು ಮಾರಾಟದಲ್ಲಿ ಗರಿಷ್ಠ ಪಾಲು ಪಡೆದುಕೊಂಡಿದೆ. ಭಾರತದ ಯಶಸ್ವಿ ಕಾರು ತಯಾರಕ ಕಂಪನಿಯಾಗಿರುವ ಸುಜುಕಿ ಇದೀಗ 40ನೇ ವರ್ಷದ ಸಂಭ್ರಮದಲ್ಲಿದೆ. ಇದೇ ನಿಟ್ಟಿನಲ್ಲಿ ತನ್ನ ಅರೆನಾ ಶೋರೂಮ್ಗಳ ಮೂಲಕ ಮಾರಾಟ ಮಾಡುವ ಕಾರುಗಳಲ್ಲಿ ಬ್ಲ್ಯಾಕ್ ಎಡಿಷನ್ ಆಯ್ಕೆ ನೀಡಲು ಮುಂದಾಗಿದೆ. ಆಲ್ಟೊದಿಂದ ಹಿಡಿದು ಸಬ್ಕಾಂಪಾಕ್ಟ್ ಎಸ್‌ಯುವಿ ಬ್ರೆಜಾ ತನಕ ಎಲ್ಲ ಕಾರುಗಳಲ್ಲಿ ಈ ಆಯ್ಕೆ ಸಿಗಲಿದೆ.
ಮಾರುತಿ ಸುಜುಕಿ ಕಂಪನಿ ಕಳೆದ ಜನವರಿಯಲ್ಲಿ ನೆಕ್ಸಾ ಶೋರೂಮ್ಗಳ ಮೂಲಕ ಮಾರಾಟ ಮಾಡುವ ಕಾರುಗಳಲ್ಲಿ ಬ್ಲ್ಯಾಕ್ ಎಡಿಷನ್ ನೀಡಿತ್ತು. ಇದೀಗ ಅರೆನಾದಲ್ಲಿ ಸಿಗುವ ವ್ಯಾಗನ್ಆರ್, ಸೆಲೆರಿಯೊ, ಸ್ವಿಫ್ಟ್, ಡಿಸೈರ್, ಎಸ್ಪ್ರೆಸೊ, ಎರ್ಟಿಗಾ ಕಾರುಗಳು ಬ್ಲ್ಯಾಕ್ ಎಡಿಷನ್ನಲ್ಲಿ ಸಿಗಲಿದೆ. ಇದರಲ್ಲಿ ಕಾಸ್ಮೆಟಿಕ್ ಅಪ್ಡೇಟ್ಗಳನ್ನು ಮಾತ್ರ ಮಾಡಲಾಗಿದೆ. ತಾಂತ್ರಿಕ ಬದಲಾವಣೆಗಳೇನೂ ಮಾಡಿಲ್ಲ.
ಬ್ಲ್ಯಾಕ್ ಎಡಿಷನ್ ಕಾರುಗಳ ಜತೆಗೆ ವಿಶೇಷ ಆಕ್ಸೆಸರಿಗಳ ಪ್ಯಾಕೇಜ್ ಅನ್ನು ನೀಡಿದೆ. ಬಂಪರ್ ಕಾರ್ನರ್ ಪ್ರೊಟೆಕ್ಟರ್, ವಿಂಡೊ ವೈಸರ್, ಫ್ಲೋರ್ ಮ್ಯಾಟ್, ಎಕ್ಸ್ಟೀರಿಯರ್ ಗಾರ್ನಿಶ್, ಸೀಟ್ ಕವರ್, ಕುಶನ್ಗಳನ್ನು ಇದು ಒಳಗೊಂಡಿದೆ. ಈ ಅಕ್ಸೆಸರಿಗಳು ಪ್ಯಾಕೇಜ್ 14,990 ರೂಪಾಯಿಂದ ಆರಂಭಗೊಂಡು 35,990 ರೂಪಾಯಿ ತನಕವಿದೆ.
ಇದನ್ನೂ ಓದಿ: Maruti Suzuki : ಮಾರುತಿ ಸುಜುಕಿಯಿಂದ 11,000 ಗ್ರಾಂಡ್ ವಿಟಾರಾ ಎಸ್‌ಯುವಿ ಹಿಂತೆಗೆತ, ನಿಮ್ಮ ಕಾರು ಇದೆಯೇ ಪರಿಶೀಲಿಸಿ
ಮಾರುತಿ ಸುಜುಕಿಯ ಅರೆನಾದಲ್ಲಿ ಗರಿಷ್ಠ ಪ್ರಮಾಣದ ಕಾರುಗಳು ಮಾರಾಟವಾಗುತ್ತವೆ. ಆದರೆ ನೆಕ್ಸಾ ಡೀಲರ್ಶಿಪ್ನಲ್ಲಿ ಪ್ರೀಮಿಯಮ್ ಕಾರುಗಳನ್ನು ಮಾರಾಟ ಮಾಡಲಾಗುತ್ತದೆ.