ನವದೆಹಲಿ: ಭಾರತದ ಜನಪ್ರಿಯ ಕಾರು ಬ್ರಾಂಡ್ ಮಾರುತಿ ಸುಜುಕಿ ತನ್ನ ಪ್ರೀಮಿಯರ್ ಹ್ಯಾಚ್ಬ್ಯಾಕ್ ಇಗ್ನಿಸ್ನ (Maruti Ignis) ಬೆಲೆ ಏರಿಕೆ ಮಾಡಿದೆ. ತಕ್ಷಣದಲ್ಲೇ ಕಾರಿನ ಬೆಲೆಯಲ್ಲಿ 27 ಸಾವಿರ ರೂಪಾಯಿ ಏರಿಕೆಯಾಗಿದ್ದು, ಆರಂಭಿಕ ಬೆಲೆ 5.55 ಲಕ್ಷ ರೂಪಾಯಿಗಳಾಗಿವೆ (ಎಕ್ಸ್ಶೋ ರೂಮ್ ಬೆಲೆ). ಇದೇ ವೇಳೆ ಕಾರಿನಲ್ಲಿ ಕೆಲವೊಂದು ಸೇಫ್ಟಿ ಫೀಚರ್ಗಳನ್ನೂ ನೀಡಲಾಗಿದೆ. ಅದೇ ರೀತಿ ಹೊಸ ಪರಿಸರ ಸ್ನೇಹಿ ಫೀಚರ್ಗಳಾದ ರಿಯರ್ ಡ್ರೈವಿಂಗ್ ಎಮಿಷನ್ (ಆರ್ಡಿಇ) ಹಾಗೂ ಎ20 ಪೆಟ್ರೋಲ್ ಆಯ್ಕೆಯನ್ನು ನೀಡಲಾಗಿದೆ.
ಇದನ್ನೂ ಓದಿ : Maruti Suzuki : 40ನೇ ವರ್ಷದ ಸಂಭ್ರಮಾಚರಣೆಗೆ ಬ್ಲ್ಯಾಕ್ ಎಡಿಷನ್ ಕಾರುಗಳನ್ನು ರಸ್ತೆಗಿಳಿಸಿದ ಮಾರುತಿ ಸುಜುಕಿ
ಭಾರತ ಸರಕಾರವು ಮುಂದಿನ ಹಣಕಾಸು ವರ್ಷದಿಂದ ಬಿಎಸ್6 ಮಾನದಂಡಗಳಲ್ಲಿ ಕೆಲವೊಂದು ಬದಲಾವಣೆ ಮಾಡಲು ಸೂಚಿಸಿದೆ. ಆರ್ಡಿಇ ಹಾಗೂ ಇ20 ಪೆಟ್ರೋಲ್ ಕಡ್ಡಾಯ ಎನಿಸಿಕೊಂಡಿದೆ. ಈ ಎರಡು ಫೀಚರ್ಗಳ ಜತೆಗೆ ಇಗ್ನಿಸ್ನಲ್ಲಿ ಇಎಸ್ಪಿ, ಹಿಲ್ಹೋಲ್ಡ್ ಅಸಿಸ್ಟ್ನಂಥ ಸೇಫ್ಟಿ ಫೀಚರ್ಗಳನ್ನೂ ನೀಡಲಾಗಿದೆ. ಹೀಗಾಗಿ ಬೆಲೆಯನ್ನೂ ಹೆಚ್ಚಿಸಲಾಗಿದೆ.
ಮಾರುತಿ ಸುಜುಕಿಯ ಇಗ್ನಿಸ್ ಕಾರು 1.2 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 81 ಬಿಎಚ್ಪಿ ಪವರ್ ಹಾಗೂ 113 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ 5 ಸ್ಪೀಡ್ನ ಮ್ಯಾನುಯಲ್ ಹಾಗೂ4 ಸ್ಪೀಡ್ನ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಿದೆ.
ಈ ಕಾರು 3700 ಎಮ್ಎಮ್ ಉದ್ದ ಹಾಗೂ 1690 ಎಮ್ಎಮ್ ಅಗಲವಿದೆ. ಇದು 1595 ಎಮ್ಎಮ್ ಎತ್ತರವಿದೆ. 15 ಇಂಚಿನ ಅಲಾಯ್ ವೀಲ್ ಲಭ್ಯವಿದ್ದು, ಮುಂದೆ ಹಾಗೂ ಹಿಂದೆ ಆಕರ್ಷಣೆಗಾಗಿ ಸ್ಕಿಡ್ ಪ್ಲೇಟ್ ನೀಡಲಾಗಿದೆ.