Site icon Vistara News

Maruti Suzuki : ಇನ್ವಿಕ್ಟೊ ಹೈಬ್ರಿಡ್​ ಎಮ್​ಪಿವಿ ಬಿಡುಗಡೆ; ದರ ಸೇರಿದಂತೆ ಎಲ್ಲ ಮಾಹಿತಿಗಳು ಇಲ್ಲಿದೆ

Maruti Suzuki Invicto

ನವ ದೆಹಲಿ : ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ (Maruti Suzuki) ಇಂಡಿಯಾ ಲಿಮಿಟೆಡ್ (ಎಂಎಸ್ಐಎಲ್) ಅಂತಿಮವಾಗಿ ತನ್ನ ಅತ್ಯಂತ ದುಬಾರಿ ಕಾರು ಇನ್ವಿಕ್ಟೊ ಪ್ರೀಮಿಯಂ ಹೈಬ್ರಿಡ್ ಎಸ್​ಯವಿಯನ್ನು ಬಿಡುಗಡೆ ಮಾಡಿದೆ. ಈ ಪ್ರೀಮಿಯಂ ಎಂಪಿವಿ ಮಾರುತಿ ಸುಜುಕಿಯ ಜಪಾನಿನ ಆಟೋಮೋಟಿವ್ ಪಾಲುದಾರ ಟೊಯೊಟಾ ಇನ್ನೋವಾ ಹೈಕ್ರಾಸ್ ಫ್ಲಾಟ್​ಫಾರ್ಮ್​ ಆಧರಿಸಿದೆ. ಕಂಪನಿಯು ಹೊಸ ಇನ್ವಿಕ್ಟೋ ಹೈಬ್ರಿಡ್ ಎಂಪಿವಿಯನ್ನು 24.79 ಲಕ್ಷ (ಎಕ್ಸ್ ಶೋ ರೂಂ) ರೂಪಾಯಿ ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿದೆ. ಟಾಪ್ ಎಂಡ್ ವೇರಿಯೆಂಟ್​ ಬೆಲೆ 28.42 ಲಕ್ಷ ರೂಪಾಯಿ ಇದೆ. ಈ ಮೂಲಕ ಪ್ರಿಮಿಯಮ್ ಖರೀದಿದಾರರನ್ನು ಕಂಡುಕೊಳ್ಳುವ ಗುರಿಯನ್ನು ಹೊಂದಿದೆ.

ಮಾರುತಿ ಸುಜುಕಿ ಇನ್ವಿಕ್ಟೋದ ಎಕ್ಸ್​ಟೀರಿಯರ್​ ಟೊಯೊಟಾ ಇನ್ನೋವಾ ಹೈಕ್ರಾಸ್​ಗೆ ಗಮನಾರ್ಹ ಹೋಲಿಕೆಯನ್ನು ಹೊಂದಿದೆ. ಏಕೆಂದರೆ ಇದು ಅದೇ ಪ್ಲಾಟ್ ಫಾರ್ಮ್ ಅನ್ನು ಆಧರಿಸಿ ನಿರ್ಮಿಸಿದ ಕಾರಾಗಿದೆ. ವಿಶೇಷವೆಂದರೆ, ಇನ್ವಿಕ್ಟೋದಲ್ಲಿ ಕೆಲವು ಬದಲಾವಣೆಗಳಿವೆ. ಇದರಲ್ಲಿ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದಿಂದ ಪ್ರೇರಿತವಾದ ಪರಿಷ್ಕೃತ ಫ್ರಂಟ್ ಗ್ರಿಲ್ ಹಾಕಲಾಗಿದೆ. ಗ್ರಿಲ್ ಅನ್ನು ಮಧ್ಯದಲ್ಲಿ ಎರಡು ಕ್ರೋಮ್ ಬಾರ್ ಗಳ ಮೂಲಕ ಎತ್ತರಿಸಲಾಗಿದೆ. ಟೊಯೊಟಾ ಮೊನಿಕರ್ ಅನ್ನು ಐಕಾನಿಕ್ ಸುಜು ಲೋಗೊದೊಂದಿಗೆ ಬದಲಾಯಿಸಲಾಗಿದೆ. ಹೆಚ್ಚುವರಿಯಾಗಿ, ಮುಂಭಾಗದ ಬಂಪರ್ ಅನ್ನು ಹೆಚ್ಚು ವಿಶಿಷ್ಟ ನೋಟ ಹೆಚ್ಚಿಸುವ ರೀತಿಯಲ್ಲಿ ತಿರುಚಲಾಗಿದೆ.

ಟೊಯೊಟಾ ಫಾರ್ಚೂನರ್ ಲೆಜೆಂಡರ್ ಕಾರಿನಲ್ಲಿ ಕಂಡುಬರುವ 17 ಇಂಚಿನ ಡೈಮಂಡ್-ಕಟ್ ಅಲಾಯ್ ಚಕ್ರಗಳನ್ನು ಇನ್ವಿಕ್ಟೊ ಹೊಂದಿದೆ. ಹಿಂಭಾಗದಲ್ಲಿ, ಎಂಪಿವಿ ಇನ್ನೋವಾ ಹೈಕ್ರಾಸ್ ನ ಒಟ್ಟಾರೆ ವಿನ್ಯಾಸವನ್ನು ಉಳಿಸಿಕೊಂಡಿದೆ. ಟೈಲ್ ಲೈಟ್ ಗಳನ್ನು ಹೊರತುಪಡಿಸಿ ಇದು ಈಗ ಗಾಢ ಬಣ್ಣವನ್ನು ಹೊಂದಿದೆ. ಇನ್ವಿಕ್ಟೋ 4,755 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,795 ಎಂಎಂ ಎತ್ತರ ಮತ್ತು 2,850 ಎಂಎಂ ವ್ಹೀಲ್ ಬೇಸ್ ಹೊಂದಿದೆ.

ಇಂಟೀರಿಯರ್​ ಹೇಗಿದೆ?

ಮಾರುತಿ ಸುಜುಕಿ ಇನ್ವಿಕ್ಟೋ ಕಾರಿನ ಒಳಗೆ ಸಂಸ್ಕರಿಸಿದ ಮತ್ತು ವೈಶಿಷ್ಟ್ಯಭರಿತ ಕ್ಯಾಬಿನ್ ಇದೆ. ಹೊರಾಂಗಣದಂತೆ ಡ್ಯಾಶ್ ಬೋರ್ಡ್ ನ ವಿನ್ಯಾಸವು ಹೆಚ್ಚಾಗಿ ನ್ನೋವಾ ಹೈಕ್ರಾಸ್ ಗೆ ಹೋಲುತ್ತದೆ. ಇನ್ವಿಕ್ಟೊ ಪ್ರೀಮಿಯಂ ಸೌಲಭ್ಯಗಳಾದ ವೆಂಟಿಲೇಟೆಡ್ ಫ್ರಂಟ್ ಸೀಟ್​​ಗಳು, ವೈರ್​ಲೆಸ್​​ ಚಾರ್ಜರ್, ಪನೋರಮಿಕ್ ಸನ್ ರೂಫ್, 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್​ಮೆಂಟ್​ ಸಿಸ್ಟಮ್​, ವೈರ್ ಲೆಸ್ ಆ್ಯಪರ್​ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಇಂಟಿಗ್ರೇಷನ್ ಮತ್ತು ಫುಲ್​ ಟಿಎಫ್​ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ನೀಡಿದೆ. ಇನ್ವಿಕ್ಟೋ 239 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಮೂರನೇ ಸಾಲನ್ನು ಮಡಚುವ ಮೂಲಕ 690 ಲೀಟರ್​ವರೆಗೆ ವಿಸ್ತರಿಸಬಹುದು.

ಪವರ್​ಟ್ರೇನ್​ ಏನು?

ಇನ್ವಿಕ್ಟೋದ ಪವರ್ ಟ್ರೇನ್ ದೃಢವಾದ ಹೈಬ್ರಿಡ್ ಎಂಜಿನ್ ಒಳಗೊಂಡಿದೆ. ಇದು 2.0-ಲೀಟರ್, ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್ ಜತೆಗೆ ಜೋಡಿಸಲಾಗಿದೆ. ಎರಡೂ ಮೋಟಾರ್​ ಸೇರಿ 184 ಬಿಎಚ್​ಪಿ ಪವರ್​ ಬಿಡುಗಡೆ ಮಾಡುತ್ತದೆ. ಇ-ಸಿವಿಟಿಯೊಂದಿಗೆ ಜೋಡಿಸಲಾಗಿದೆ. ಇನ್ವಿಕ್ಟೋ ಈಗ ಹೈಬ್ರಿಡ್ ಮತ್ತು ಸ್ವಯಂಚಾಲಿತ ವೇರಿಯೆಂಟ್​ಗಳಲ್ಲಿ ಮಾತ್ರ ಲಭ್ಯವಿರುವ ಮೊದಲ ಮಾರುತಿ ಸುಜುಕಿ ಕಾರಾಗಿದೆ. ಇನ್ವಿಕ್ಟೋ ಶಕ್ತಿಯುತ ಹೈಬ್ರಿಡ್ ಜೊತೆಗೆ ಎಲೆಕ್ಟ್ರಿಕ್-ಮಾತ್ರ ಮೋಡ್ ನೊಂದಿಗೆ ಬರುತ್ತದೆ. ಇದು 0ಯಿಂದ 100 ಕಿ.ಮೀ ವೇಗವನ್ನು 9.5 ಸೆಕೆಂಡುಗಳಲ್ಲಿ ತಲುಪುತ್ತದೆ. ಇದು 23.24 ಕಿ.ಮೀ ಮೈಲೇಜ್​ ಕೊಡುತ್ತದೆ ಮಾರುತಿ ಸುಜುಕಿ ಇನ್ವಿಕ್ಟೊ ಮೊನೊಕಾಕ್ ಚಾಸಿಸ್ ಅನ್ನು ಆಧರಿಸಿದೆ. ಇದು ಟೊಯೊಟಾದ ಟಿಎನ್​ಜಿಎ-ಸಿ ‘ಹೈ’ ಫ್ಲ್ಯಾಟ್​​ಫಾರ್ಮ್​ ಬಳಸುತ್ತದೆ.

ಇದನ್ನೂ ಓದಿ : Kia Seltos : ಕಿಯಾ ಸೆಲ್ಟೋಸ್ ಫೇಸ್​ಲಿಫ್ಟ್​ ಅನಾವರಣ; ಜುಲೈ14ರಂದು ಬುಕಿಂಗ್ ಆರಂಭ

ಸುರಕ್ಷತೆಯ ವಿಷಯಕ್ಕೆ ಬಂದರೆ ಮಾರುತಿ ಸುಜುಕಿ ಇನ್ವಿಕ್ಟೋ ಅನೇಕ ಫೀಚರ್​​ಗಳನ್ನು ಹೊಂದಿದೆ. ಏರ್ ಬ್ಯಾಗ್ ಗಳು, ಇಬಿಡಿಯೊಂದಿಗೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಸಮಗ್ರ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

Exit mobile version