ಮುಂಬಯಿ: ಮಾರುತಿ ಸುಜುಕಿ ಕಂಪನಿಯು (Maruti Suzuki) ಮೊದಲ ಬಾರಿಗೆ ಜಿಮ್ನಿ 5 ಡೋರ್ ಕಾರನ್ನು 2023ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಹೊಸ ಜಿಮ್ನಿ 5-ಡೋರ್ ನ ಅನೇಕ ವಿವರಗಳನ್ನು ಹೇಳಲಾಗಿದ್ದು, ಅದರ ಇಂಧನ ದಕ್ಷತೆಯ ವಿವರ ಹೇಳಿರಲಿಲ್ಲ. ಆದಾಗ್ಯೂ, ಮಾರುತಿ ಸುಜುಕಿ ಜೂನ್ನಲ್ಲಿ ಬಿಡುಗಡೆಯಾಗುವ ಮೊದಲು ಕಾರ್ಯಕ್ಷಮತೆ ಪರೀಕ್ಷೆಯನ್ನು ಮಾಡಿದೆ. ಅದರ ಪ್ರಕಾರ ಮೈಲೇಜ್ ಈ ರೀತಿ ಇದೆ.
ಜಿಮ್ನಿ 5ಡೋರ್ ಕಾರಿನಲ್ಲಿ 1.5 ಲೀಟರ್ ಕೆ15ಬಿ ಎಂಜಿನ್ ಅಳವಡಿಸಲಾಗಿದೆ. ಇದು 105 ಬಿಎಚ್ಪಿ ಮತ್ತು 134.2 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತಿದೆ. 5ಸ್ಪೀಡ್ ಮ್ಯಾನುಯಲ್ ಅಥವಾ 4ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೀಡಲಾಗಿದೆ. ಇದು ಫೋರ್ ವೀಲ್ ಡ್ರೈವ್ ಆಯ್ಕೆ ಹೊಂದಿದೆ. ಜಿಮ್ನಿ 5 ಡೋರ್ ಝೀಟಾ ಮತ್ತು ಆಲ್ಫಾ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ.
ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಜಿಮ್ನಿ 5 ಡೋರ್ ಆವೃತ್ತಿಯು 16.94 ಕಿ.ಮೀ ಮೈಲೇಜ್ ನೀಡುತ್ತದೆ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆವೃತ್ತಿಯು 16.39 ಕಿ.ಮೀ ಮೈಲೇಜ್ ಕೊಡುತ್ತದೆ. 40 ಲೀಟರ್ ಫ್ಯೂಯಲ್ ಟ್ಯಾಂಕ್ ಹೊಂದಿರುವ ಜಿಮ್ನಿ ಮ್ಯಾನುವಲ್ ಗೇರ್ಬಾಕ್ಸ್ ವಾಹದನ ಟ್ಯಾಂಕ್ ಒಂದು ಬಾರಿ ಭರ್ತಿ ಮಾಡಿದರೆ 678 ಕಿ.ಮೀ ದೂರವನ್ನು ಕ್ರಮಿಸಲು ಸಾಧ್ಯ. ಆಟೋಮ್ಯಾಟಿಕ್ ಆವೃತ್ತಿಯಲ್ಲಿ 656 ಕಿ.ಮೀವರೆಗೆ ಪ್ರಯಾಣ ಮಾಡಬಹುದು.
ಜಿಮ್ನಿ ಕಾಯುವಿಕೆ ಅವಧಿ
ಈ ಎಸ್ಯುವಿಗಾಗಿ ಬುಕಿಂಗ್ ಪ್ರಕ್ರಿಯೆಗೆ ವರ್ಷದ ಆರಂಭದಲ್ಲಿ ಚಾಲನೆ ನೀಡಲಾಗಿತ್ತು. ಅಂತೆಯೇ ಮಾರುತಿ ಸುಜುಕಿ ಕಂಒನಿಯು ಸುಮಾರು 30,000 ಬುಕಿಂಗ್ ಗಳನ್ನು ಪಡೆದುಕೊಂಡಿದೆ. ಮ್ಯಾನುವಲ್ ವೇರಿಯೆಂಟ್ಗಳಿಗೆ ಬಿಡುಗಡೆಯಾದ ನಂತರ ಆರು ತಿಂಗಳವರೆಗೆ ವೇಟಿಂಗ್ ಪಿರಿಯೆಡ್ ನಿಗದಿ ಮಾಡಲಾಗಿದೆ. ಆಟೋಮ್ಯಾಟಿಕ್ ಗೇರ್ಬಾಕ್ಸ್ ಹೊಂದಿರುವ ಕಾರಿನ ವೇಟಿಂಗ್ ಪೀರಿಯೆಡ್ ಎಂಟು ತಿಂಗಳು.
ಇದನ್ನೂ ಓದಿ: Mahindra Thar : ವಿಶ್ವ ಚಾಂಪಿಯನ್ನಿಖತ್ಗೆ ಥಾರ್ ಕಾರು ಗಿಫ್ಟ್ ಕೊಟ್ಟ ಮಹೀಂದ್ರಾ
ಈ ತಿಂಗಳ ಆರಂಭದಲ್ಲಿ, ಮಾರುತಿ ಸುಜುಕಿ ಗುರುಗ್ರಾಮ್ ನಲ್ಲಿರುವ ತನ್ನ ಘಟಕದಿಂದ ಮೊದಲ ಜಿಮ್ನಿ 5-ಡೋರ್ ಅನ್ನು ಹೊರತಂದಿತ್ತು. ಜಿಮ್ನಿ 5 ಡೋರ್ ಬೆಲೆಗಳನ್ನು ಜೂನ್ ಮೊದಲ ವಾರದಲ್ಲಿ ಘೋಷಿಸಲಾಗುವುದು ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಬೆಲೆ ಎಷ್ಟು?
ಮಾರುತಿ ಸುಜುಕಿ 5 ಡೋರ್ ಕಾರಿನ ಬೆಲೆಗಳು ರೂ.10 ಲಕ್ಷದಿಂದ ರೂ.12 ಲಕ್ಷಗಳವರೆಗೆ (ಎಕ್ಸ್ ಶೋ ರೂಂ) ಇರಬಹುದು ಎನ್ನಲಾಗಿದೆ. ಜಿಮ್ನಿ 5 ಡೋರ್ ಕಾರಿಗೆ ಪ್ರತಿಸ್ಪರ್ಧಿ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಇಲ್ಲ. ಅದರೂ ಆಫ್-ರೋಡ್ ಸಾಮರ್ಥ್ಯ ಗಮನಿಸಿದರೆ, ಇದು ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾ ಕಾರಿಗೆ ಪೈಪೋಟಿ ಕೊಡಬಹುದು.