Site icon Vistara News

Maruti Suzuki : ಮಾರುತಿಯ 5 ಡೋರ್​ ಜಿಮ್ನಿ ಬಿಡುಗಡೆ, ಮಹೀಂದ್ರಾ ಥಾರ್​ಗೆ ಪೈಪೋಟಿ ಖಚಿತ

Maruti Suzuki Jimny 5 door

#image_title

ನವ ದೆಹಲಿ: ಮಾರುತಿ ಸುಜು (Maruti Suzuki)ಕಿ ಕಂಪನಿಯು ತನ್ನ ಬಹುನಿರೀಕ್ಷಿತ ಜಿಮ್ನಿ ಎಸ್​​ಯುವಿಯನ್ನು (Jimny) ಭಾರತದಲ್ಲಿ ಬಿಡುಗಡೆಗೊಳಿಸಿದೆ. ಎಂಟ್ರಿ ಲೆವೆಲ್ ಝೀಟಾ ವೇರಿಯೆಂಟ್​ನ ಬೆಲೆಯು ಭಾರತದ ಎಕ್ಸ್ ಶೋರೂಂ ರೂ.12.74 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್​ ಎಂಡ್​ ಕಾರಿನ ಬೆಲೆಯು 15.5 ಲಕ್ಷ ರೂಪಾಯಿ . ಆಟೋ ಎಕ್ಸ್ ಪೋ 2023ರಲ್ಲಿ ಬಿಡುಗಡೆಯಾದಾಗಿನಿಂದ ಜಿಮ್ನಿಯ ಬುಕಿಂಗ್ ನಡೆಯುತ್ತಿದೆ ಮತ್ತು ಕಂಪನಿಯು ಈಗಾಗಲೇ 30,000ಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದೆ. ಡೀಲರ್ ಮೂಲಗಳ ಪ್ರಕಾರ ಜೂನ್ ಮಧ್ಯದಿಂದ ಹಂತಹಂತವಾಗಿ ವಿತರಣೆಗಳು ಪ್ರಾರಂಭವಾಗುತ್ತವೆ.

ನಮ್ಮ ಮಾರುಕಟ್ಟೆಗಾಗಿ ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಐದು ಡೋರ್​ಗಳ ಜಿಮ್ನಿಯನ್ನು ಪಡೆದ ಮೊದಲ ದೇಶ ಭಾರತ. ಜಿಮ್ನಿಯನ್ನು ಮಾರುತಿಯ ಗುರುಗ್ರಾಮ್ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಅಲ್ಲಿಂದಲೇ ಇತರ ದೇಶಗಳಿಗೆ ರಫ್ತು ಮಾಡಲಾಗುವುದು. ಗ್ರಾಹಕರು ಮಾಸಿಕ 33,550 ರೂಪಾಯಿ ಚಂದಾದಾರಿಕೆ ಮೂಲಕ ಜಿಮ್ನಿಯನ್ನು ತಮ್ಮದಾಗಿಸಿಕೊಳ್ಳಬಹುದು ಎಂದ ಕಂಪನಿ ಹೇಳಿದೆ.

ಮಾರುತಿ ಸುಜುಕಿ ಜಿಮ್ನಿ ಪವರ್ ಟ್ರೇನ್

ಜಿಮ್ನಿ ಎಸ್​ಯುವಿಯಲ್ಲಿ 1.5 ಲೀಟರಿನ 4 ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಇದೆ. ಇಉ 105 ಬಿಎಚ್​​ಪಿ ಪವರ್, ಹಾಗೂ 134 ಎನ್​ಎಂ ಟಾರ್ಕ್​ ಬಿಡುಗಡೆ ಮಾಡುತ್ತದೆ. 5 ಸ್ಪೀಡ್​ನ ಮ್ಯಾನುಯಲ್​ ಅಥವಾ 4 ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್​ಬಾಕ್ಸ್​ ಆಯ್ಕೆಯಿದೆ. ಮಾರುತಿ ತನ್ನೆಲ್ಲ ಕಾರುಗಳಿಗೆ ಕೆ15 ಸಿ ಎಂಜಿನ್ ಬಳಸುತ್ತಿರುವ ನಡುವೆಯೇ ಜಿಮ್ನಿಯಲ್ಲಿ ಹಳೆಯ ಕೆ 15ಬಿ ಎಂಜಿನ್ ಅನ್ನು ಬಳಸುತ್ತದೆ. ಜಿಮ್ನಿ ಮ್ಯಾನುವಲ್ ಗೇರ್​ಬಾಕ್ಸ್ ಹೊಂದಿರುವ ಕಾರು 16.94 ಕಿ.ಮೀ ಮೈಲೇಜ್​ ಕೊಟ್ಟರೆ, ಆಟೋಮ್ಯಾಟಿಕ್​ ಗೇರ್​ಬಾಕ್ಸ್ ಹೊಂದಿರುವ ಕಾರು 16.39 ಕಿ.ಮೀ ಮೈಲೇಜ್ ನೀಡುತ್ತದೆ.

ಜಿಮ್ನಿಯ ಆಫ್​ರೋಡ್​ಗೆ ಸಂಬಂಧಿಸಿ ಹೇಳುವುದಾದರೆ ಆಲ್​​ಗ್ರಿಪ್​ ಪ್ರೊ 4ಡಬ್ಲ್ಯೂಡಿ ಸಿಸ್ಟಂ ಅನ್ನು ಮ್ಯಾನುವಲ್ ಗೇರ್​ಬಾಕ್ಸ್​ನಲ್ಲಿ ನೀಡಲಾಗಿದೆ. ಅದೇ ರೀತಿ 2WD-ಹೈ, 4WD-ಹೈ ಮತ್ತು 4WD-ಲೊ ಮೋಡ್​ನೊಂದಿಗೆ ನೀಡಲಾಗಿದೆ. ಲ್ಯಾಡರ್​​ ಫ್ರೇಮ್​ ಚಾಸಿಸ್​ ಅನ್ನು ಇದು ಹೊಂದಿ್ದು. 3ಲಿಂಕ್ ಬಲಿಷ್ಠ ಆಕ್ಸಲ್ ಸಸ್ಪೆನ್ಷನ್​ ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಕೊಡಲಾಗಿದೆ. ಜಿಮ್ನಿ 5 ಡೋರ್ ಕಾರು 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಮಾರುತಿ ಸುಜುಕಿ ಜಿಮ್ನಿಯ ವೈಶಿಷ್ಟ್ಯಗಳು

ಸ್ವಯಂಚಾಲಿತ ಎಲ್ಇಡಿ ಹೆಡ್ ಲ್ಯಾಂಪ್​​ಗಳು, 9.0 ಇಂಚಿನ ಸ್ಮಾರ್ಟ್ ಪ್ಲೇ ಪ್ರೊ + ಇನ್ಫೋಟೈನ್​ಮೆಂಟ್​ ಸಿಸ್ಟಮ್, ಸ್ವಯಂಚಾಲಿತ ಕ್ಲೈಮೇಟ್​ ಕಂಟ್ರೋಲ್​, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರ, ವೈರ್ ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೇರಿದಂತೆ ಜಿಮ್ನಿಯ ಆಲ್ಫಾ ಟ್ರಿಮ್ ಗರಿಷ್ಠ ಫೀಚರ್​ಗಳನ್ನು ಪಡೆದುಕೊಂಡಿವೆ. ಆರು ಏರ್ ಬ್ಯಾಗ್​​ಗಳು, ಇಎಸ್ಪಿ ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಒಳಗೊಂಡಿರುವ ಸುರಕ್ಷತಾ ಫೀಚರ್​ಗಳನ್ನು ಎಲ್ಲ ವೇರಿಯೆಂಟ್​​ಗಳಲ್ಲಿ ನೀಡಲಾಗಿದೆ.

ಜಿಮ್ನಿ ಒಟ್ಟು ಏಳು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ, ಅವುಗಳಲ್ಲಿ ಎರಡು ಡ್ಯುಯಲ್ ಟೋನ್. ಐದು ಬಾಗಿಲುಗಳ ಹೊರತಾಗಿಯೂ, ಜಿಮ್ನಿ ಇನ್ನೂ ನಾಲ್ಕು ಆಸನಗಳ ಮಾದರಿಯಾಗಿದೆ.

ಇಂಟೀರಿಯರ್ ವಿಚಾರಕ್ಕೆ ಬಂದರೆ ಡ್ಯಾಶ್ಬೋರ್ಡ್ ಸಂಪೂರ್ಣ ಕಪ್ಪು ಥೀಮ್ ಅನ್ನು ಹೊಂದಿದೆ. ಪ್ರಯಾಣಿಕರ ಸೀಟಿನ ಬದಿಯಲ್ಲಿ ಡ್ಯಾಶ್​ಬೋರ್ಡ್​ ಮೌಂಟೆಡ್​​ ಗ್ರಾಬ್ ಹ್ಯಾಂಡಲ್​​ಗಳಿವೆ. ಮಾರುತಿ ಸ್ವಿಫ್ಟ್​​ನಲ್ಲಿರುವ ಕೆಲವೊಂದು ಫೀಚರ್​​ಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಥಾರ್ ನಲ್ಲಿರುವಂತೆ, ಪವರ್ ವಿಂಡೋಗಳನ್ನು ನಿರ್ವಹಿಸುವ ಬಟನ್ ಗಳು ಮುಂಭಾಗದ ಎರಡು ಆಸನಗಳ ನಡುವೆ ಇವೆ.

ಮಾರುತಿ ಸುಜುಕಿ ಜಿಮ್ನಿ ವಿನ್ಯಾಸ

ಮಾರುತಿ ಜಿಮ್ನಿ 5 ಓಡರ್​​ 3,985 ಎಂಎಂ ಉದ್ದ ಮತ್ತು 2,590 ಎಂಎಂ ವೀಲ್​ಬೇಸ್​ ಹೊಂದಿದೆ. ಇದು 3 ಡೋರ್ ಜಿಮ್ನಿಗಿಂತ ಮಾದರಿಗಿಂತ 340 ಎಂಎಂ ಉದ್ದವಾಗಿದೆ. 1,645 ಎಂಎಂ ಅಗಲ ಮತ್ತು 1,720 ಎಂಎಂ ಎತ್ತರ ಹೊಂದಿದೆ. ನೇರವಾದ ಪಿಲ್ಲರ್​​ಗಳು , ಕ್ಲೀನ್​ ಸರ್ಫೇಸಿಂಗ್, ವೃತ್ತಾಕಾರದ ಹೆಡ್ ಲ್ಯಾಂಪ್​​ಗಳು, ಸ್ಲ್ಯಾಟೆಡ್ ಗ್ರಿಲ್, ಚಂಕಿ ಆಫ್-ರೋಡ್ ಟೈರ್​​ಗಳು, ಫ್ಲೇರ್ಡ್ ವ್ಹೀಲ್ ಕಮಾನುಗಳು ಮತ್ತು ಟೈಲ್ ಗೇಟ್- ಮೌಂಟೆಡ್ ಸ್ಪೇರ್ ಟೈರ್ ಜಿಮ್ನಿಯ ನೋಟವನ್ನು ಹೆಚ್ಚಿಸಿದೆ. ಜಿಮ್ನಿ 5 ಡೋರ್ ಕಾರು 15 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದು, 195/80 ಸೆಕ್ಷನ್ ಟೈರ್​​ಗಳನ್ನು ಬಳಸಲಾಗಿದೆ.

ಮಾರುತಿ ಸುಜುಕಿ ಜಿಮ್ನಿ ಪ್ರತಿಸ್ಪರ್ಧಿ

ಜಿಮ್ನಿ ಭಾರತದಲ್ಲಿ ಆಫ್-ರೋಡರ್​ಗಳ ಆಕರ್ಷಣೆಗೆ ಪೂರಕವಾಗಿದೆ. ನೇರ ಪ್ರತಿಸ್ಪರ್ಧಿ ಅಲ್ಲದಿದ್ದರೂ ಬೆಲೆ ಮತ್ತು ವಿನ್ಯಾಸದ ಕಾರಣಕ್ಕೆ ಮಹೀಂದ್ರಾ ಥಾರ್ (10.54 ಲಕ್ಷ – ರೂ. 16.77 ಲಕ್ಷ ರೂಪಾಯಿ ಬೆಲೆ) ಮತ್ತು ಫೋರ್ಸ್ ಗೂರ್ಖಾ (15.10 ಲಕ್ಷ ರೂಪಾಯಿ ಬೆಲೆ) ಜಿಮ್ನಿಯ ಪ್ರತಿಸ್ಪರ್ಧಿ ಕಾರುಗಳು.

Exit mobile version