ನವ ದೆಹಲಿ : ಭಾರತದ ಮುಂಚೂಣಿ ಪ್ರಯಾಣಿಕರ ವಾಹನಗಳ ತಯಾರಿಕಾ ಕಂಪನಿಯ ಮಾರುತಿ ಸುಜುಕಿ ಶನಿವಾರ (ಅಕ್ಟೋಬರ್ ೨೯ರಂದು) ೨೦೨೨ರ ಆಗಸ್ಟ್ ೩ರಿಂದ ಸೆಪ್ಟೆಂಬರ್ ೧ರ ಒಳಗೆ ಉತ್ಪಾದನೆಯಾಗಿರುವ 9,925 ವ್ಯಾಗನ್-ಆರ್, ಸಿಲೆರಿಯೊ ಹಾಗೂ ಇಗ್ನಿಸ್ ಕಾರುಗಳನ್ನು ವಾಪಸ್ ಪಡೆದುಕೊಂಡಿದೆ. ಈ ಕಾರುಗಳು ಹಿಂಬದಿ ಚಕ್ರಗಳ ಬ್ರೇಕ್ ಅಸೆಂಬ್ಲಿ ಪಿನ್‌ನಲ್ಲಿ ಸಮಸ್ಯೆ ಉಂಟಾಗಿರುವ ಕಾರಣ ಕಾರನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.
ಕಂಪನಿ ಹೇಳಿರುವ ಅವಧಿಯಲ್ಲಿ ಉತ್ಪಾದನೆಗೊಂಡಿರುವ ಕಾರಿನ ಹಿಂಬದಿ ಬ್ರೇಕ್‌ನಲ್ಲಿ ಸಮಸ್ಯೆ ಉಂಟಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಷ್ಟೂ ಕಾರುಗಳನ್ನು ವಾಪಸ್ ಪಡೆದುಕೊಂಡು ದುರಸ್ತಿ ಮಾಡಿಕೊಡಲ ಕಂಪನಿ ತೀರ್ಮಾನಿಸಿದೆ.
“ಕಾರಿನ ಬ್ರೇಕ್ ಪಿನ್‌ನಲ್ಲಿ ಸಮಸ್ಯೆ ಕಂಡು ಬಂದ ಕಾರಣ ವಿಚಿತ್ರ ಸದ್ದು ಹೊರಡುತ್ತಿತ್ತು. ದೀರ್ಘ ಅವಧಿಯಲ್ಲಿ ಬ್ರೇಕ್‌ನ ಕೆಲಸಕ್ಕೆ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಇತ್ತು. ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರುಗಳನ್ನು ವಾಪಸ್ ಪಡೆದುಕೊಂಡು ಉಚಿತವಾಗಿ ದುರಸ್ತಿ ಮಾಡಿಕೊಡಲು ತೀರ್ಮಾನಿಸಲಾಗಿದೆ,” ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಬ್ರೇಕ್ ಕಿಟ್ ಬದಲಾವಣೆಯನ್ನು ಕಂಪನಿಯ ಅಧಿಕೃತ ವರ್ಕ್‌ಶಾಪ್‌ಗಳಲ್ಲಿ ಮಾತ್ರ ಮಾಡಿಸಿಕೊಳ್ಳಬೇಕು ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ | MG Motor | ಭಾರತದಲ್ಲಿ ಅಗ್ಗದ ದರದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಇಳಿಸುವ ಸೂಚನೆ ಕೊಟ್ಟ ಎಮ್‌ಜಿ ಮೋಟಾರ್