ನವ ದೆಹಲಿ: ಮಾರುತಿ ಸುಜುಕಿಯ ಮುಂಬರುವ ಹೊಸ ಎಂಪಿವಿಗೆ ‘ಇನ್ವಿಕ್ಟೊ’ ಎಂದು ಹೆಸರಿಡುವುದಾಗಿ ಮಾರುತಿ ಸುಜುಕಿ ಇತ್ತೀಚಿಗೆ ಬಿಎಸ್ಇ ಫೈಲಿಂಗ್ಗೆ ತಿಳಿಸಿದೆ. ಇನ್ವಿಕ್ಟೋ ಜುಲೈ 5 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದ್ದು, ಜೂನ್ 19ಕ್ಕೆ ಬುಕಿಂಗ್ ಕೂಡ ಆರಂಭವಾಗುವ ನಿರೀಕ್ಷೆಯಿದೆ. ಟೊಯೋಟಾ ಕಂಪನಿಯ ಇನ್ನೋವಾ ಹೈಕ್ರಾಸ್ ಆಧರಿಸಿ ಇನ್ವಿಕ್ಟೊ ತಯಾರಾಗಲಿದೆ. ಟೋಯೊಟೊ ಕಂಪನಿಯೇ ಇದನ್ನು ತಯಾರಿಸಿ ಪೂರೈಸಲಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿಯ ಹೊಸ ಫ್ಲ್ಯಾಗ್ ಶಿಪ್ ಮಾಡೆಲ್ ಆಗಿರಲಿದೆ.
ಮಾರುತಿ ಸುಜುಕಿಯ ಇನ್ವಿಕ್ಟೊ ಕಾರಿನ ಚಿತ್ರಗಳು ಈಗಾಗಲೇ ಆನ್ಲೈನ್ನಲ್ಲಿ ಕಾಣಿಸಿಕೊಂಡಿವೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕಾರಣ ಅದರ ಬಗ್ಗೆ ಜನರ ಕೌತುಕು ಕೂಡ ಹೆಚ್ಚಿದೆ. ಟೊಯೊಟಾದ ಹೈಕ್ರಾಸ್ನ ಪ್ರತಿಕೃತಿಯಂತಿರುವ ಮಾರುತಿ ಇನ್ವಿಕ್ಟೋ ಹೊಸ ಫ್ರಂಟ್ ಬಂಪರ್ ಮತ್ತು ಗ್ರಿಲ್, ಹೊಸ ಹೆಡ್ ಲ್ಯಾಂಪ್ ಗಳು ಮತ್ತು ಟೈಲ್ ಲ್ಯಾಂಪ್ಗಳನ್ನು ಹೊಂದಿವೆ. ವಿಭಿನ್ನ ರೀತಿಯ ಅಲಾಯ್ ವ್ಹೀಲ್ ವಿನ್ಯಾಸವನ್ನು ಅದು ಹೊಂದಿದೆ. ಅದರ ಜತೆಗೆ ಕೆಲವೊಂದು ಸ್ಟೈಲಿಂಗ್ ಬದಲಾವಣೆಗಳನ್ನೂ ಮಾಡಲಾಗಿದೆ. ಇಂಟೀಯರ್ನಲ್ಲೂ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದೆ.
ಉತ್ಪನ್ನದ ವಿಚಾರಕ್ಕೆ ಬಂದಾಗ ಇನ್ವಿಕ್ಟೋ ಬ್ರಾಂಡ್ ಕಡಿಮೆ ಪ್ರಮಾಣದಲ್ಲಿ ಉತ್ಪನ್ನವಾಗಲಿದೆ ಎಂದು ಮಾರುತಿ ಈ ಹಿಂದೆ ಹೇಳಿತ್ತು. ಪ್ರಮುಖವಾಗಿ ಇಂಗಾಲದ ಡೈಆಕ್ಸೈಡ್ ಕಡಿಮೆ ಪ್ರಮಾಣದಲ್ಲಿ ಉಗುಳುವ ವಾಹನದ ಕಡೆಗೆ ಗಮನ ಕೊಡಲಾಗಿದೆ. ಹೀಗಾಗಿ ಹೈಬ್ರಿಡ್ ಎಂಜಿನ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನೋವಾ ಹೈಕ್ರಾಸ್ ಮತ್ತು ಇನ್ವಿಕ್ಟೊ ಎರಡನ್ನೂ ಒಂದೇ ಉತ್ಪಾದನಾ ಘಟಕದಲ್ಲಿ ತಯಾರಾಗುವ ಕಾರಣ ಕಾಯುವಿಕೆ ಅವಧಿ (ವೇಟಿಂಗ್ ಪಿರಿಯೆಡ್) ದೀರ್ಘವಾಗಿದೆ. ಆದಾಗ್ಯೂ, ಆರ್ಡರ್ ಬ್ಯಾಕ್ಲಾಗ್ ಕಡಿಮೆ ಮಾಡುವ ಉದ್ದೇಶದಿಂದ ಟೊಯೊಟಾ ಕಂಪನಿ ಉತ್ಪದನಾ ಘಟಕದಲ್ಲಿ ಮೂರನೇ ಶಿಫ್ಟ್ ಕೂಡ ಸೇರಿಸಿದೆ.
ಇನ್ವಿಕ್ಟೊ ಎಂಪಿವಿ ಪವರ್ ಟ್ರೇನ್, ಇಂಧನ ದಕ್ಷತೆ
ಟೊಯೊಟಾ ಇನ್ನೋವಾ ಹೈಕ್ರಾಸ್ನಂತೆಯೇ ಮಾರುತಿ ಸುಜುಕಿ ಇನ್ವಿಕ್ಟೊದಲ್ಲಿ ಅದೇ ಪವರ್ ಟ್ರೇನ್ ಆಯ್ಕೆಗಳನ್ನು ನೀಡಲಿದೆ. ಹೆಚ್ಚಿನ ರೂಪಾಂತರಗಳು ಸಹಜವಾಗಿ 183 ಬಿಎಚ್ಪಿ, 2.0-ಲೀಟರ್ ಹೈಬ್ರಿಡ್ ಪವರ್ ಟ್ರೇನ್ ಅನ್ನು ಪಡೆಯುತ್ತವೆ. ಇದು ಇನ್ನೋವಾ ಹೈಕ್ರಾಸ್ನ ಇಂಧನ ಮಿತವ್ಯಯದ ಯೋಜನೆಯ ಭಾಗವಾಗಿರುತ್ತದೆ. ರಿಯಲ್ ವರ್ಲ್ಡ್ನಲ್ಲಿ 13- 16 ಕಿ.ಮೀ ಮೈಲೇಜ್ ನೀಡುತ್ತದೆ. ಅದು ಅಲ್ಲದಿದ್ದರೆ ಮಾರುತಿಯ 2.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಸಿಗುವ ಸಾಧ್ಯತೆಗಳಿವೆ. ಇದು 173 ಬಿಎಚ್ಪಿ ಪವರ್ ಬಿಡುಗಡೆ ಮಾಡಬಹುದು. ಇದರೊಂದಿಗೆ ಸಿವಿಟಿ ಗೇರ್ಬಾಕ್ಸ್ ಕೂಡ ಇರಬಹುದು.
ಇದನ್ನೂ ಓದಿ : Hero Passion Plus : ಹೀರೊ ಪ್ಯಾಶನ್ ಪ್ಲಸ್ ಮರು ಬಿಡುಗಡೆ; ಬೆಲೆ, ಫೀಚರ್ ಇತ್ಯಾದಿ ಮಾಹಿತಿಗಳು ಇಲ್ಲಿವೆ
ಇನ್ವಿಕ್ಟೋ ಇನ್ನೋವಾ ಹೈಕ್ರಾಸ್ ನಂತೆಯೇ ಏಳು ಮತ್ತು ಎಂಟು ಆಸನಗಳ ಸಂರಚನೆ ಹೊಂದಿರುವ ನಿರೀಕ್ಷೆಯಿದೆ. ಮುಂದಿನ ತಿಂಗಳು ಬಿಡುಗಡೆಯಾದ ನಂತರ ಇನ್ವಿಕ್ಟೋ ಪ್ರೀಮಿಯಂ ಎಂಪಿವಿ ವಿಭಾಗದಲ್ಲಿ ಸ್ಥಾನ ಕಂಡುಕೊಳ್ಳಲಿದೆ.
ಬೆಲೆ ಎಷ್ಟಿರಬಹುದು?
ಮಾರುತಿ ಸುಜುಕಿಯ ಇನ್ವಿಕ್ಟೊ ಇನ್ನೋವಾ ಹೈಕ್ರಾಸ್ಗಿಂತ ಸಣ್ಣ ಪ್ರಮಾಣದಲ್ಲಿ ಹೆಚ್ಚು ಬೆಲೆ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಯಾಕೆಂದರೆ ಹೈಕ್ರಾಸ್ನ ಮಾದರಿಯನ್ನು ಹಂಚಿಕೊಳ್ಳುವ ಕಾರಣ ಟೊಯೋಟಾ ಕಂಪನಿಗೆ ಗೌರವ ಧನ ಕೊಡಬೇಕಾಗುತ್ತದೆ. ಇನ್ನೋವಾ ಹೈಕ್ರಾಸ್ ನ ಪೆಟ್ರೋಲ್ ವೇರಿಯೆಂಟ್ಗಳ ಬೆಲೆ ರೂ.18.55 ಲಕ್ಷದಿಂದ ರೂ.19.45 ಲಕ್ಷಗಳಾಗಿದ್ದರೆ, ಹೈಬ್ರಿಡ್ ಕಾರುಗಳ ಬೆಲೆಯು ರೂ.25.03 ಲಕ್ಷದಿಂದ ರೂ.29.99 ಲಕ್ಷ ರೂಪಾಯಿ ತನಕ ಇದೆ. ಇನ್ವಿಕ್ಟೊ ಇದಕ್ಕಿಂತ ಹೆಚ್ಚು ಬೆಲೆ ಹೊಂದಿರಬಹುದು ಎನ್ನಲಾಗಿದೆ. ಇದು ಮಾರುತಿಯ ನೆಕ್ಸಾ ಶೋ ರೂಮ್ಗಳಮ್ಮಿ ಮಾರಾಟವಾಗಲಿವೆ.