Site icon Vistara News

MG Moto : ಎಂಜಿ ಹೆಕ್ಟರ್ ಬೆಲೆ 61,000 ರೂಪಾಯಿವರೆಗೆ ಏರಿಕೆ; ಶೈನ್ ವೇರಿಯೆಂಟ್​ ಬಿಡುಗಡೆ

#image_title

ಬೆಂಗಳೂರು: ಎಂಜಿ ಮೋಟಾರ್ ಇಂಡಿಯಾ (MG Moto) ತನ್ನ ಹೆಕ್ಟರ್ ಎಸ್​ಯುವಿ ಕಾರಿನ ಬೆಲೆಯನ್ನು 27,000 ರೂ.ಗಳಿಂದ ಆರಂಭಿಸಿ 61,000 ರೂ.ಗಳವರೆಗೆ ಹೆಚ್ಚಿಸಿದೆ. ಇದೇ ವೇಳೆ ಎಂಜಿ ಶೈನ್ ಎಂಬ ಹೊಸ ವೇರಿಯೆಂಟ್​ ಪರಿಚಯಿಸಿದೆ. ಇದು ಬೇಸ್ ವೇರಿಯೆಂಟ್​ ಸ್ಟೈಲ್​ಗಿಂತ ಮೇಲಿರುವ ವೇರಿಯೆಂಟ್​. 2023ರ ಜನವರಿಯಲ್ಲಿ ಫೇಸ್ ಲಿಫ್ಟೆಡ್ ಮಾದರಿಯನ್ನು ಬಿಡುಗಡೆ ಮಾಡಿದ ನಂತರ ಹೆಕ್ಟರ್ ಕಾರಿನ ಬೆಲೆ ಮೊದಲ ಬಾರಿಗೆ ಏರಿಕೆಯಾಗಿದೆ. ಏರಿಕೆಯಾಗಿದೆ. ಬೇಸ್ ವೇರಿಯೆಂಟ್​ ಸ್ಟೈಲ್ 1.5-ಲೀಟರ್ ಪೆಟ್ರೋಲ್​ ಮ್ಯಾನುಯಲ್​ ಟ್ರಾನ್ಸ್​ಮಿಷನ್​ ಕಾರಿನ ಬೆಲೆ 27,000 ರೂ.ಗಳಷ್ಟು ಏರಿಕೆಯಾಗಿದ್ದರೆ, ಇತರ ಎಲ್ಲಾ ಪೆಟ್ರೋಲ್ ವೇರಿಯೆಂಟ್​​ಗಳ ಬೆಲೆಗಳು ಏಕರೂಪದಲ್ಲಿ 36,000 ರೂ.ಗಳಷ್ಟು ಹೆಚ್ಚಾಗಿದೆ. ಏತನ್ಮಧ್ಯೆ, ಡೀಸೆಲ್ ವೇರಿಯೆಂಟ್​​ಗಳ ಬೆಲೆಯನ್ನು 61,000 ರೂ.ಗಳ ಗಮನಾರ್ಹ ಬೆಲೆ ಏರಿಕೆಯನ್ನು ಕಂಡಿದೆ.

ಎಂಜಿ ಹೆಕ್ಟರ್ ಬೆಲೆ 61,000 ರೂ.ವರೆಗೆ ಏರಿಕೆ
ಹೊಸ ಶೈನ್ ವೇರಿಯೆಂಟ್​ನ ಬೆಲೆ ರೂ.16.34 ಲಕ್ಷ ರೂಪಾಯಿ.
ಎಂಜಿ ಹೆಕ್ಟರ್ ಪ್ಲಸ್ ಎಸ್​ಯುವಿ ಕಾರಿನ ಬೆಲೆ 71,000 ರೂ.ವರೆಗೆ ಏರಿಕೆ

ಶೈನ್ ವೇರಿಯೆಂಟ್​ ಅನ್ನು ಫೇಸ್​ಲಿಫ್ಟ್​ ಬಿಡುಗಡೆ ವೇಳೆ ಮಾರುಕಟ್ಟೆಗೆ ಇಳಿಸಿರಲಿಲ್ಲ. ಇದೀಗ ಬೆಲೆ ಏರಿಕೆ ಸಂದರ್ಭದಲ್ಲಿ ಪರಿಚಯಿಸಲಾಗಿದೆ. ಈ ಮೂಲಕ ಸ್ಟೈಲ್ ಮತ್ತು ಸ್ಮಾರ್ಟ್ ವೇರಿಯೆಂಟ್​ಗಳ ನಡುವಿನ ಅಂತರವನ್ನು ನಿವಾರಿಸಲಾಗಇದೆ. ಶೈನ್ ವೇರಿಯೆಂಟ್​​ನಲ್ಲಿ ಸ್ಟೈಲ್​ ವೇರಿಯೆಂಟ್​​ಗಿಂತ ಹೆಚ್ಚುವರಿ ಫೀಚರ್​​ಗಳನ್ನು ನೀಡಲಾಗಿದೆ. ಉದಾಹರಣೆಗೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (ಸಿವಿಟಿಯಲ್ಲಿ ಮಾತ್ರ), ಎಲ್ಇಡಿ ಹೆಡ್ ಲ್ಯಾಂಪ್​​ಗಳು ಮತ್ತು ಟೈಲ್ ಲ್ಯಾಂಪ್​​ಗಳು, ಫಾಗ್ ಲ್ಯಾಂಪ್​​ಗಳು, 17 ಇಂಚಿನ ಅಲಾಯ್ ಚಕ್ರಗಳು, 10.4 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಕ್ರೂಸ್ ಕಂಟ್ರೋಲ್ ಮತ್ತು ಸಿಂಗಲ್ ಪ್ಯಾನ್ ಸನ್ ರೂಫ್ ಇತ್ಯಾದಿ ಫೀಚರ್​​ಗಳನ್ನು ನೀಡಲಾಗಿದೆ. ಆದಾಗ್ಯೂ, ಕನೆಕ್ಟೆಡ್ ಎಲ್ಇಡಿ ಟೈಲ್-ಲೈಟ್​ಗಳು, ದೊಡ್ಡ 18 ಇಂಚಿನ ಚಕ್ರಗಳು, ವಾಯ್ಸ್ ಕಮಾಂಡ್​ಗಳು, ರಿಮೋಟ್ ಮತ್ತು ಕನೆಕ್ಟೆಡ್ ಕಾರ್​ಟೆಕ್​ನಂಥ ಫೀಚರ್​​ಗಳು ಸ್ಮಾರ್ಟ್ ವೇರಿಯೆಂಟ್​​ನಲ್ಲಿ ಮಾತ್ರ ಲಭ್ಯವಿದೆ.

MG ಹೆಕ್ಟರ್ ಎಸ್​ಯುವಿಯ ಪವರ್ ಟ್ರೇನ್ ಆಯ್ಕೆಗಳು

ಹೆಕ್ಟರ್ ಸರಣಿಯಲ್ಲಿ ಯಾವುದೇ ಮೆಕ್ಯಾನಿಕಲ್​ ಅಪ್​ಡೇಟ್​ ಕೊಟ್ಟಿಲ್ಲ . 6 ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದ್ದು, 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್​ ಅನ್ನೇ ಬಳಸಲಾಗಿದೆ. ಈ ಎಂಜಿನ್ 143 ಬಿಹೆಚ್​​ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಡೀಸೆಲ್ 2.0 ಲೀಟರ್​ನ ಎಂಜಿನ್ ಸಹ ಅದೇ 170 ಬಿಹೆಚ್​ಪಿ, 350 ಎನ್ಎಂ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ ಮ್ಯಾನುಯಲ್​ ಗೇರ್​ಬಾಕ್ಸ್​ ಮಾತ್ರ ನೀಡಲಾಗಿದೆ.

ಎಂಜಿ ಹೆಕ್ಟರ್ ಪ್ಲಸ್ ಬೆಲೆ ಏರಿಕೆ

ಎಂಜಿ ಮೋಟರ್ಸ್​​ನ 6 ಮತ್ತು 7 ಸೀಟರ್ ಆಯ್ಕೆಯಿರುವ ಹೆಕ್ಟರ್ ಪ್ಲಸ್ ಎಸ್​​ಯುವಿ ಬೆಲೆಯನ್ನೂ ಹೆಚ್ಚಿಸಲಾಗಿದೆ. ಇದರ ಬೆಲೆ ಏರಿಕೆಯೂ 36,000-76,000 ರೂ.ಗಳ ನಡುವೆ ಇದೆ. ಆದಾಗ್ಯೂ ಹೆಕ್ಟರ್ ಪ್ಲಸ್​​ನಲ್ಲಿ ಶೈನ್ ಟ್ರಿಮ್ ಅನ್ನು ಪರಿಚಯಿಸಲಾಗಿಲ್ಲ. ಪವರ್ ಟ್ರೇನ್ ಈ ಲೈನ್ಅಪ್​ನಲ್ಲಿ ಯಾವುದೇ ಬದಲಾವಣೆಗಳಿಲ್ಲ.

Exit mobile version