ನವ ದೆಹಲಿ : ಬ್ರಿಟನ್ ಮೂಲದ ಚೀನಾ ಕಂಪನಿ ಎಮ್‌ಜಿ ಹೆಕ್ಟರ್, ಭಾರತದ ಕಾರು ಮಾರುಕಟ್ಟೆಗೆ ಸಣ್ಣ ಗಾತ್ರದ ಎಲೆಕ್ಟ್ರಿಕ್ ಕಾರೊಂದನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು ಭಾರತದ ಅತ್ಯಂತ ಕಡಿಮೆ ಬೆಲೆಯ ಕಾರು ಎನಿಸಿಕೊಳ್ಳಲಿದೆ. ತನ್ನ ಸಹ ಬ್ರಾಂಡ್ ಏರ್ ಇವಿ ಮೂಲಕ ಈ ಕಾರನ್ನು ತಯಾರಿಸಿ ಭಾರತದಲ್ಲಿ ಮಾರಾಟ ಮಾಡುವುದು ಕಂಪನಿಯ ಉದ್ದೇಶವಾಗಿದೆ. ಈ ಕಾರಿಗೆ ಇ೨೩೦ ಎಂದು ಹೆಸರಿಸಲಾಗಿದ್ದು, ಇಂಡೋನೇಷ್ಯಾದಲ್ಲಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಭಾರತದ ರಸ್ತೆಗೆ ಪೂರಕವಾಗಿ ಕೆಲವೊಂದು ಬದಲಾವಣೆ ನಿರೀಕ್ಷಿಸಲಾಗಿದೆ.
ಮುಂದಿನ ವರ್ಷ ಈ ಕಾರನ್ನು ಭಾರತದ ರಸ್ತೆಗೆ ಇಳಿಸುತ್ತೇವೆ ಎಂದು ಕಂಪನಿ ಹೇಳಿದೆ. ಆದರೆ, ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್ಸ್ (ಜಿಎಸ್‌ಇವಿ) ಪ್ಲಾಟ್‌ಫಾರಂನಂತೆ ಈ ಕಾರು ನಿರ್ಮಾಣಗೊಂಡಿದೆ. ಭಾರತದ ತಾಪಮಾನ ಹೆಚ್ಚಿರುವ ಪ್ರದೇಶಕ್ಕೆ ಅನುಕೂಲವಾಗುವಂತೆಯೂ ಇದರ ಬ್ಯಾಟರಿಯನ್ನು ನಿರ್ವಹಣೆ ಮಾಡಲಾಗುತ್ತದೆ.
ಇ೨೩೦ ಸಣ್ಣ ಗಾತ್ರದ ಕಾರಾಗಿದ್ದು, ನಗರದ ಪ್ರಯಾಣಕ್ಕೆ ಸೂಕ್ತವಾಗುವಂತೆ ವಿನ್ಯಾಸ ಮಾಡಲಾಗಿದೆ. ಕಾರಿನಲ್ಲಿ ಅಗಲವಾಗಿರುವ ಎರಡು ಡೋರ್‌ಗಳು ಮಾತ್ರ ಇದ್ದು, ನಾಲ್ಕು ಮಂದಿಯ ಪ್ರಯಾಣಕ್ಕೆ ಅನುಕೂಲಕರವಾಗಿದೆ.
ಕ್ಯಾರಿನ ಬ್ಯಾಟರಿ ಸಾಮರ್ಥ್ಯ ಇನ್ನೂ ಗೊತ್ತಿಲ್ಲ. ಆದರೆ, ೨೦ರಿಂದ ೨೫ ಕಿಲೋ ವ್ಯಾಟ್ ಬ್ಯಾಟರಿ ಬಳಸುವ ಸಾಧ್ಯತೆಗಳಿವೆ. ಹೀಗಾಗಿ ಸರಿ ಸುಮಾರು ೧೫೦ ಕಿ.ಮೀ ರೇಂಜ್ ಓಡಬಹುದು ಎನ್ನಲಾಗಿದೆ. ೪೦ ಬಿಎಚ್‌ಪಿ ಪವರ್ ಬಿಡುಗಡೆ ಮಾಡುವ ಮೋಟರ್ ಬಳಸುವ ಸಾಧ್ಯತೆಗಳಿವೆ.
ಇದನ್ನೂ ಓದಿ | EV TWO- Wheeler | ಅಂಬಾಸಿಡರ್ ಕಾರು ಕಂಪನಿಯಿಂದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ