ನವ ದೆಹಲಿ : ಹ್ಯುಂಡೈ ಇಂಡಿಯಾದ (Hyundai Motor) ಮುಂದಿನ ಯೋಜನೆಯಾಗಿರುವ ಎಕ್ಸ್ಟೆರ್ ಮೈಕ್ರೊ ಎಸ್ಯುವಿ ಕಾರು ಜುಲೈ ಮಧ್ಯದ ವೇಳೆಗೆ ಮಾರುಕಟ್ಟೆಗೆ ಎಂಟ್ರಿಯಾಗಲಿದೆ ಎಂದು ಹೇಳಲಾಗಿದೆ. ಕಂಪನಿಯು ಈಗಾಗಲೇ ಎಸ್ಯುವಿನ ನೋಟವನ್ನು ಭಾಗಶಃ ಪ್ರದರ್ಶಿಸಿದ್ದು, ಬುಕಿಂಗ್ ಕೂಡ ಆರಂಭಿಸಿದೆ. ಇದೀಗ ಜುಲೈ ಆರಂಭದಲ್ಲಿ ಉತ್ಪಾದನೆ ಆರಂಭಗೊಂಡು ಆ ತಿಂಗಳ ಮಧ್ಯ ಭಾಗದಲ್ಲಿ ಮಾರುಕಟ್ಟೆಗೆ ತಲುಪಲಿದೆ ಎಂದು ಹೇಳಲಾಗಿದೆ. ಎಕ್ಸ್ಟೆರ್ ಎಸ್ಯುವಿ ವೆನ್ಯೂಗಿಂತ ಮೊದಲು ಲಭ್ಯವಾಗುವ ಕಾರಾಗಲಿದ್ದು, ಕಡಿಮೆ ಬೆಲೆಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.
ಎಕ್ಸ್ಟೆರ್ ಕಾರು ಇತರ ಹ್ಯುಂಡೈ ಕಾರುಗಳಿಗೆ ಸಾಮ್ಯತೆ ಹೊಂದಿರಲಿದೆ. ಪ್ಲಾಟ್ ಫಾರ್ಮ್, ಪೆಟ್ರೋಲ್ (ಎಂಟಿ ಮತ್ತು ಎಎಂಟಿ) ಮತ್ತು ಸಿಎನ್ಜಿ ಆಯ್ಕೆಯನ್ನು 1.2-ಲೀಟರ್ನ ಪೆಟ್ರೋಲ್ ಎಂಜಿನ್ನಲ್ಲಿ ಲಭ್ಯವಾಗಲಿದೆ. ಎಂಜಿನ್ ಮತ್ತು ಕೆಲವು ಒಳಾಂಗಣ ವಿನ್ಯಾ ಗ್ರ್ಯಾಂಡ್ ಐ 10 ನಿಯೋಸ್ ಮತ್ತು ಔರಾದಿಂದ ಪಡೆದಿರಲಾಗುತ್ತದೆ. ಎಕ್ಸ್ಟೆರ್ ಕಾರು ಇಎಕ್ಸ್, ಎಸ್, ಎಸ್ಎಕ್ಸ್, ಎಸ್ಎಕ್ಸ್ (ಒ) ಮತ್ತು ಟಾಪ್-ಸ್ಪೆಕ್ ಎಸ್ಎಕ್ಸ್ (ಒ) ಕನೆಕ್ಟ್ ಎಂಬ ಐದು ಟ್ರಿಮ್ ಹಂತಗಳಲ್ಲಿ ಲಭ್ಯವಾಗಲಿದೆ. ಹ್ಯುಂಡೈ ಇತ್ತೀಚೆಗೆ ಎಕ್ಸ್ಟೆರ್ ಕಾರುಗಳಲ್ಲಿ ಆರು ಏರ್ಬ್ಯಾಗ್ಗಳು ಸೇರಿದಂತೆ ಹಲವಾರು ಸುರಕ್ಷತಾ ಮಾನದಂಡಗಳನ್ನು ಹೊಂದಿದೆ.
ಎಕ್ಸ್ಟೆರ್ ಅನ್ನು ಭಾಗಶಃ ತೋರಿಸಿರುವ ಹೊರತಾಗಿಯೂ ಎಸ್ಯುವಿಯ ಇತ್ತೀಚಿನ ಸ್ಪೈ ಶಾಟ್ಗಳು ಬಹಿರಂಗಗೊಂಡಿವೆ. ಎಕ್ಸ್ಟೆರ್ ಹ್ಯುಂಡೈನಲ್ಲಿ ಪ್ಯಾರಾಮೆಟ್ರಿಕ್ ವಿನ್ಯಾಸ ಭಾಷೆಯನ್ನು ಅನುಸರಿಸಲಾಗಿದೆ. ಆದಾಗ್ಯೂ ಜಾಗತಿಕವಾಗಿ ಹೊಸ ಮಾದರಿಗಳಲ್ಲಿ ಕಂಡು ಬಂದಿದೆ. ಬಾಕ್ಸಿ ವಿನ್ಯಾಸ, ಆಕರ್ಷಕ ನೋಟ ಮತ್ತು ಎಚ್-ಮಾದರಿಯ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಹಾಗೂ ಸ್ಪ್ಲಿಟ್ ಹೆಡ್ಲ್ಯಾಂಪ್ ಸೆಟಪ್ ಆಕರ್ಷಕ ಎನಿಸಿದೆ.
ಇದನ್ನೂ ಓದಿ : Bajaj Pulser : ಹೊಸ ಮಾಡೆಲ್ನ ಬಜಾಜ್ ಪಲ್ಸರ್ ಬೈಕ್ ಭಾರತದಲ್ಲಿ ಬಿಡುಗಡೆ, ಬೆಲೆಯೂ ಏರಿಕೆ
ಹ್ಯುಂಡೈನ ಈ ಚಿಕ್ಕ ಎಸ್ ಯುವಿಯು ದಪ್ಪ ಕ್ಲಾಡಿಂಗ್ನೊಂದಿಗೆ ವೃತ್ತಾಕಾರದ ವೀಲ್ ಆರ್ಚಸ್ಗಳನ್ನು ಹೊಂದಿದೆ. ಸ್ಟೈಲಿಶ್, ಡ್ಯುಯಲ್-ಟೋನ್ ಅಲಾಯ್ ವಿಲ್ಗಳು, ರೂಫ್ ರೇಲ್ಸ್ಗಳು, ಸಿಪಿಲ್ಲರ್ ಗಾಗಿ ವಿನ್ಯಾಸಗೊಳಿಸಿದ ಫಿನಿಶ್ ಮತ್ತು ಫ್ಲೋಟಿಂಗ್ ರೂಫ್ ಎಫೆಕ್ಸ್ನೊಂದಿಗೆ ಡ್ಯುಯಲ್-ಟೋನ್ ಪೇಂಟ್ ಆಯ್ಕೆಗಳಿವೆ. ಹಿಂಭಾಗದಲ್ಲಿ ನೇರವಾದ ಟೈಲ್ ಗೇಟ್, ಶಾರ್ಕ್-ಫಿನ್ ಆಂಟೆನಾ, ಸಣ್ಣ ಬಿಲ್ಟ್ ಇನ್ ಸ್ಪಾಯ್ಲರ್ ಮತ್ತು ಎಚ್-ಮಾದರಿಯ ಎಲ್ಇಡಿ ಲೈಟಿಂಗ್ ಇದೆ.
ಹ್ಯುಂಡೈ ಎಕ್ಸ್ಟರ್: ಬಿಡುಗಡೆ ಮತ್ತು ಡೆಲಿವರಿ
ಎಕ್ಸ್ಟೈರ್ ಜುಲೈ ಆರಂಭದಲ್ಲಿ ಜುಲೈ ಮಧ್ಯದ ವೇಳೆಗೆ ಬೆಲೆ ಪ್ರಕಟಣೆಯಾಗಲಿದೆ. ದೇಶಾದ್ಯಂತ ಹೆಚ್ಚಿನ ಹ್ಯುಂಡೈ ಶೋರೂಮ್ಗಳಲ್ಲಿ ಆಗಸ್ಟ್ ಆರಂಭದಲ್ಲಿ ವಿತರಣೆಗಳು ಪ್ರಾರಂಭವಾಗುತ್ತವೆ ಎಂದು ನಿರೀಕ್ಷಿಸಲಾಗಿದೆ.