ಬೆಂಗಳೂರು: 2023 ರ ದ್ವಿತೀಯಾರ್ಧವು ಆರಂಭಗೊಂಡಿದೆ. ಅಂತೆಯೇ ಜುಲೈ ತಿಂಗಳ ಆರಂಭದಲ್ಲಿ ಎರಡು ಕಾರುಗಳು (New Cars) ಬಿಡುಗಡೆಯಾಗಲಿದ್ದು. ಮತ್ತೊಂದು ಪದಾರ್ಪಣೆ ಮಾಡಲಿದೆ. ತಿಂಗಳ ಅಂತ್ಯದಲ್ಲಿ ಐಷಾರಾಮಿ ಕಾರೊಂದರ ಬಿಡಗಡೆಯೂ ಇದೆ. ಅವುಗಳೆಂದರೆ ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಇನ್ವಿಕ್ಟೊ, ಹ್ಯುಂಡೈ ಎಕ್ಸ್ಟೆರ್ ಹಾಗೂ ಮರ್ಸಿಡೀಸ್ ಬೆಂಜ್ ಜಿಎಲ್ಸಿ. ಕಿಯಾ ತನ್ನ ಮಧ್ಯಮ ಗಾತ್ರದ ಎಸ್ಯುವಿ ಸೆಲ್ಟೋಸ್ಗೆ ಹೊಸ ಸ್ಪರ್ಶ ನೀಡಿ ಬಿಡುಗಡೆ ಮಾಡಲು ಮುಂದಾಗಿದ್ದರೆ ಮಾರುತಿ ಮೊದಲ ಬಾರಿಗೆ ಪ್ರೀಮಿಯಂ ಎಂಪಿವಿಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಇಳಿಯಲಿದೆ. ಇದೇ ವೇಳೆ ಹ್ಯುಂಡೈ ತನ್ನ ಅತ್ಯಂತ ಸಣ್ಣ ಮತ್ತು ಅತ್ಯಂತ ಕೈಗೆಟುಕುವ ಎಸ್ ಯುವಿ ಎಕ್ಸ್ಟೆರ್ ಅನ್ನು ಭಾರತಕ್ಕೆ ಪರಿಚಯಿಸಲಿದೆ. ಮರ್ಸಿಡೀಸ್ ತನ್ನ ಐಷಾರಾಮಿ ವಿಭಾಗ ಜಿಎಲ್ಸಿಯ ಫೇಸ್ಲಿಸ್ಟ್ ಕಾರನ್ನು ಗ್ರಾಹಕರಿಗೆ ಪರಿಚಯಿಸಲಿದೆ.
ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್
ಜೂನ್ 2022 ರಿಂದ ಜಾಗತಿಕವಾಗಿ ಅಸ್ತಿತ್ವದಲ್ಲಿರುವ ಸೆಲ್ಟೋಸ್ ಫೇಸ್ ಲಿಫ್ಟ್ ಈ ತಿಂಗಳು ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ ಬಹುನಿರೀಕ್ಷಿತ ಫೇಸ್ ಲಿಫ್ಟ್ ಕಾಸ್ಮೆಟಿಕ್ ಮತ್ತು ವೈಶಿಷ್ಟ್ಯ ನವೀಕರಣಗಳು ಮತ್ತು ಹೊಸ ಪವರ್ ಟ್ರೇನ್ನೊಂದಿಗೆ ಬರಲಿದೆ. ಇದು ಪ್ರಮುಖವಾಗಿ ಸುಧಾರಿt ಮುಂಭಾಗ ಮತ್ತು ಹಿಂಭಾಗದ ವಿನ್ಯಾಸ ಹೊಂದಿದೆ. ಟ್ವಿನ್ ಕನೆಕ್ಟೆಡ್ ಇನ್ಫೋಟೈನ್ ಮೆಂಟ್ ಸ್ಕ್ರೀನ್ ಗಳೊಂದಿಗೆ ಹೊಸ ಇಂಟೀರಿಯರ್ ಕೂಡ ಇದೆ. ಎಡಿಎಎಸ್ (ADAS) ಸೂಟ್ ಅನ್ನು ಫೇಸ್ಲಿಫ್ಟ್ ಸೆಲ್ಟೋಸ್ಗೆ ಸೇರಿಸಲಾಘಿದೆ. 115 ಬಿಹೆಚ್ಪಿ ಪರವ್ ಬಿಡುಗಡೆ ಮಾಡುವ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಇನ್ನು ಮುಂದೆ ಲಭ್ಯವಿರುವುದಿಲ್ಲ. ಬದಲಾಗಿ ವೆರ್ನಾ ಮತ್ತು ಕರೆನ್ಸ್ ಕಾರಿನಲ್ಲಿ ಬರುವ 160 ಬಿಹೆಚ್ಪಿ ಪವರ್ ಬಿಡುಗಡೆ ಮಾಡುವ 1.5-ಲೀಟರ್ ಟರ್ಬೊ-ಪೆಟ್ರೋಲ್ ಮಾತ್ರ ಲಭ್ಯವಿರುತ್ತದೆ.
ಮಾರುತಿ ಸುಜುಕಿ ಇನ್ವಿಕ್ಟೊ
ಇನ್ವಿಕ್ಟೊ ಕಾರಿನ ಬ್ಯಾಜ್ ಎಂಜಿನಿಯರ್ ಟೊಯೊಟಾ ಇನ್ನೋವಾ ಹೈಕ್ರಾಸ್. ಆದರೆ ಮಾರುತಿ ತನ್ನ ಪ್ರಮುಖ ಎಂಪಿವಿಗಾಗಿ ಹೈಬ್ರಿಡ್ ಎಂಜಿನ್ ಮಾತ್ರ ನೀಡಲಿದೆ. ಇನ್ವಿಕ್ಟೋ 183 ಬಿಹೆಚ್ಪಿ ಪವರ್ ನೀಡುವ 2.0-ಲೀಟರ್ ಪೆಟ್ರೋಲ್ ಹೈಬ್ರಿಡ್ ಪವರ್ ಟ್ರೇನ್ ಅನ್ನು ಮಾತ್ರ ಹೊಂದಿರುತ್ತದೆ. ಕಾರಿನ ಕೆಲವೊಂದು ಫೋಟೋಗಳು ಅಂತರ್ಜಾದಲ್ಲಿ ಓಡಾಡುತ್ತಿವೆ. ಅದರ ಪ್ರಕಾರ ಕನಿಷ್ಠ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಆದರೆ, ಇಂಟೀಯರ್ಗೆ ಹೊಸ ಟಚ್ ನೀಡಲಾಗಿದೆ. ಇನ್ವಿಕ್ಟೋಗೆ ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸುವ ಸಲುವಾಗಿ ಮಾರುತಿ ಎಡಿಎಎಸ್ ಸೂಟ್ ಮತ್ತು ಇತರ ಕೆಲವು ಹೈ-ಎಂಡ್ ಫೀಚರ್ಗಳನ್ನು ಕೈ ಬಿಡುವ ಸಾಧ್ಯತೆಯಿದೆ.
ಹ್ಯುಂಡೈ ಎಕ್ಸ್ಟೆರ್
ಗ್ರ್ಯಾಂಡ್ ಐ 10 ನಿಯೋಸ್ ಮತ್ತು ಔರಾಗಳೊಂದಿಗೆ ಫ್ಲ್ಯಾಟ್ಫಾರ್ಮ್ ಹಂಚಿಕೊಂಡಿರುವ ಹ್ಯುಂಡೈ ಎಕ್ಸ್ಟೆರ್ ಟಾಟಾ ಪಂಚ್ ಮತ್ತು ಸಿಟ್ರೋಯೆನ್ ಸಿ 3 ಗೆ ಪ್ರತಿಸ್ಪರ್ಧಿಯಾಗಲಿದೆ. ಇದು ಬ್ರಾಂಡ್ ನ ಅತ್ಯಂತ ಚಿಕ್ಕ ಎಸ್ ಯುವಿಯಾಗಲಿದ್ದರೂ, ವಿಶಿಷ್ಟ ಎಸ್ಯುವಿ ಸ್ಟೈಲಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ನೇರ ಮತ್ತು ಬಾಕ್ಸ್ ನಿಲುವು ಮತ್ತು ಸುತ್ತಲೂ ಪ್ರಮುಖ ಬಾಡಿ ಕ್ಲಾಡಿಂಗ್ ಹೊಂದಿದೆ. ವಿಶಿಷ್ಟವಾಗಿ ಆಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಡ್ಯಾಶ್ಕ್ಯಾಮ್ಪ ಡೆಯುತ್ತದೆ. ಪವರ್ ಟ್ರೇನ್ ಆಯ್ಕೆಗಳ ವಿವರ ಗೊತ್ತಾಗಿದ್ದು, ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಗಳೊಂದಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಇರುತ್ತದೆ. ಫ್ಯಾಕ್ಟರಿ ಫಿಡೆಡ್ ಸಿಎನ್ ಜಿ ಕಿಟ್ ಸಹ ಇರುತ್ತದೆ.
ಮರ್ಸಿಡೀಸ್ ಬೆಂಜ್ ಜಿಎಲ್ಸಿ
ನಿರ್ದಿಷ್ಟ ದಿನಾಂಕವನ್ನು ಇನ್ನೂ ದೃಢಪಡಿಸಲಾಗಿಲ್ಲವಾದರೂ, ಮರ್ಸಿಡಿಸ್ ಎರಡನೇ ಪೀಳಿಗೆಯ ಜಿಎಲ್ಸಿಯನ್ನು ಈ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡಲಿದೆ. 50,000 ರೂ.ಗಳ ಟೋಕನ್ ಮೊತ್ತಕ್ಕೆ ಈಗಾಗಲೇ ಬುಕಿಂಗ್ ನಡೆಯುತ್ತಿದೆ. ಮೂಲಗಳ ಪ್ರಕಾರ ಮರ್ಸಿಡಿಸ್ ಜಿಎಲ್ಸಿ 200 ಅನ್ನು 2.0-ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ಮತ್ತು ಜಿಎಲ್ ಸಿ 220ಡಿ ಅನ್ನು 2.0-ಲೀಟರ್ ಡೀಸೆಲ್ ಎಂಜಿನ್ ನೊಂದಿಗೆ ಬಿಡುಗಡೆ ಬಿಡುಗಡೆ ಮಾಡಲಿದೆ. ಇವು ಕ್ರಮವಾಗಿ 204 ಬಿಎಚ್ಪಿ / 320 ಎನ್ಎಂ ಟಾರ್ಕ್ ಮತ್ತು 197 ಬಿಎಚ್ಪಿ / 440 ಎನ್ಎಂ ಅನ್ನು ಉತ್ಪಾದಿಸುತ್ತವೆ. ಎರಡೂ ವೇರಿಯೆಂಟ್ಗಳಲ್ಲಿ 48 ವಿ ಇಂಟಿಗ್ರೇಟೆಡ್ ಸ್ಟಾರ್ಟ್ ಮೋಟರ್ ಅನ್ನು ಹೊಂದಿರಲಿದ್ದು, ಇದು ಹೆಚ್ಚುವರಿ 23 ಬಿಹೆಚ್ಪಿ ಒದಗಿಸುತ್ತದೆ.
ಇದನ್ನೂ ಓದಿ : Viral News : ಚಲಿಸುತ್ತಿದ್ದ ಬಸ್ನಲ್ಲೇ ಯುವತಿಯೊಂದಿಗೆ ಲೈಂಗಿಕ ಕ್ರಿಯೆ; ಮಜಾ ಮಾಡಿದ ಕಂಡೆಕ್ಟರ್ ವಜಾ!
ಹೊಸ ಜಿಎಲ್ ಸಿ ದೊಡ್ಡದಾಗಿದೆ ಮತ್ತು ಹೆಚ್ಚು ಐಷಾರಾಮಿ ಮತ್ತು ಟೆಕ್ಕಿ ಇಂಟೀರಿಯರ್ ಹೊಂದಿದೆ. ಇನ್ಸ್ ಟ್ರೂಮೆಂಟ್ ಕ್ಲಸ್ಟರ್ಗೆ 12.3 ಇಂಚಿನ ಘಟಕ ಮತ್ತು ಇನ್ಫೋಟೈನ್ ಮೆಂಟ್ ಗಾಗಿ 11.9 ಇಂಚಿನ ಪೋರ್ಟ್ರೇಟ್ ಆಧಾರಿತ ಟಚ್ ಸ್ಕ್ರೀನ್ ಹೊಂದಿದೆ.
ಇನ್ಯಾವ ಕಾರುಗಳ ಬಿಡುಗಡೆ
ಮುಂಬರುವ ತಿಂಗಳುಗಳಲ್ಲಿ ಇನ್ನೂ ಹೆಚ್ಚಿನ ಎಸ್ ಯುವಿಗಳು ಬರಲಿವೆ. ಮಧ್ಯಮ ಗಾತ್ರದ ಎಸ್ ಯುವಿ ವಿಭಾಗದಲ್ಲಿ ಹೋಂಡಾ ಎಲಿವೇಟ್ ಮತ್ತು ಸಿಟ್ರೋನ್ ಸಿ 3 ಏರ್ ಕ್ರಾಸ್ ನೊಂದಿಗೆ ಎರಡು ಹೊಸ ಪ್ರವೇಶಗಳನ್ನು ಕಾಣಲಿದೆ. ಟಾಟಾ ತನ್ನ ಎಲ್ಲಾ ಮೂರು ಎಸ್ ಯುವಿಗಳಾದ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿಯನ್ನು ಅಪ್ಗ್ರೇಡ್ ಮಾಡಲಿದೆ. ವರ್ಷದ ಕೊನೆಯಲ್ಲಿ, ಫೋರ್ಸ್ ಗೂರ್ಖಾ 5-ಡೋರ್ ಮತ್ತು ಪಂಚ್ ಸಿಎನ್ಜಿಯ ಸಹ ನೋಡುವ ಸಾಧ್ಯತೆಯಿದೆ.