Site icon Vistara News

Hyundai Motor : ಹೊಸ ಪೀಳಿಗೆಯ ಹ್ಯುಂಡೈ ವೆರ್ನಾ ಬಿಡುಗಡೆ; ಬೆಲೆ, ಫೀಚರ್​ಗಳ ಬಗ್ಗೆ ಇಲ್ಲಿದ ಮಾಹಿತಿ

New Generation Hyundai Verna Launched; Here is the information about the price, features

#image_title

ನವ ದೆಹಲಿ: ದಕ್ಷಿಣ ಕೊರಿಯಾ ಮೂಲದ ಕಂಪನಿಯ ಹ್ಯುಂಡೈ ಮೋಟಾರ್​ (Hyundai Motor) ತನ್ನ ಜನಪ್ರಿಯ ಸೆಡಾನ್​ ಕಾರು ವೆರ್ನಾದ ನೂತನ ಆವೃತ್ತಿಯನ್ನು ಮಂಗಳವಾರ (ಮಾರ್ಚ್​ 21ರಂದು) ಬಿಡುಗಡೆ ಮಾಡಿದೆ. ಕಾರಿನ ಆರಂಭಿಕ ಬೆಲೆ 10.89 ಲಕ್ಷ ರೂಪಾಯಿಗಳಾಗಿದ್ದು, ಟಾಪ್​ ಎಂಡ್​ ವೇರಿಯೆಂಟ್​ಗೆ 17.38 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಹೊಸ ಕಾರಿನಲ್ಲಿ ಎಡಿಎಎಸ್ ಫೀಚರ್ ಸೇರ್ಪಡೆಯಾಗಿದೆ. ಆದರೆ ಡೀಸೆಲ್​ ವೇರಿಯೆಂಟ್​ ಕಾರನ್ನು ಬಿಡುಗಡೆ ಮಾಡಿಲ್ಲ. ಬಿಡುಗಡೆಗೆ ಮೊದಲೇ ಕಂಪನಿ ಬುಕಿಂಗ್​ ಆರಂಭ ಮಾಡಿತ್ತು. ಅಂತೆಯೇ ಮಂಗಳವಾರಕ್ಕೆ 8000 ಮಂದಿ ಆಸಕ್ತಿ ತೋರಿದ್ದಾರೆ. ಗ್ರಾಹಕರು 25 ಸಾವಿರ ರೂಪಾಯಿ ಪಾವತಿ ಮಾಡಿ ಅನ್​ಲೈನ್ ಅಥವಾ ಶೋ ರೂಮ್​ಗೆ ತೆರಳಿ ಕಾರನ್ನು ಬುಕ್ ಮಾಡಬಹುದು ಎಂದು ಹ್ಯುಂಡೈ ಮೋಟಾರ್​ ಹೇಳಿದೆ.

ಎಷ್ಟು ದೊಡ್ಡದಿದೆ ಹೊಸ ಸೆಡಾನ್​?

ಹೊಸ ಹ್ಯುಂಡೈ ವೆರ್ನಾ 1765 ಎಮ್​ಎಮ್​ (mili meter) ಅಗಲವಿದ್ದು, 2670 ಎಮ್​ಎಮ್​ ವೀಲ್​ ಬೇಸ್​ ಹೊಂದಿದೆ. ಕಾರಿನ ಒಟ್ಟಾರೆ ಉದ್ದ 4535 ಎಮ್​ಎಮ್​ ಹಾಗೂ 1, 475 ಎಮ್ಎಮ್​ ಎತ್ತರವಿದೆ. ಹೊಸ ವೆರ್ನಾದಲ್ಲಿ 528 ಲೀಟರ್​ ಬೂಟ್​ ಸ್ಪೇಸ್​ (ಡಿಕ್ಕಿ ಜಾಗ) ನೀಡಲಾಗಿದೆ.

ಬಣ್ಣಗಳು ಯಾವುದು?

ಇಎಕ್ಸ್​, ಎಸ್, ಎಸ್​ಎಕ್ಸ್, ಹಾಗೂ ಎಸ್ಎಕ್​ (ಓ) ಎಂಬ ನಾಲ್ಕು ವೇರಿಯೆಂಟ್​ಗಳಲ್ಲಿ ಕಾರು ಲಭ್ಯವಿದೆ. ಅದೇ ರೀತಿ 7 ಸಿಂಗಲ್​ ಟೋನ್​, ಎರಡು ಡ್ಯುಯಲ್​ ಟೋನ್ ಕಲರ್ ಆಯ್ಕೆ ನೀಡಲಾಗಿದೆ. ಬ್ಲ್ಯಾಕ್​ ಆ್ಯಂಡ್​ ಬೀಗ್​ ಹಾಗೂ ಬ್ಲ್ಯಾಕ್​ ಆ್ಯಂಡ್ ರೆಡ್​ ಎಂಬ ಎರಡು ಬಣ್ಣಗಳ ಇಂಟೀರಿಯರ್​ ಹೊಂದಿದೆ.

ವಿನ್ಯಾಸ ಹೇಗಿದೆ?

ಹ್ಯುಂಡೈ ಕಂಪನಿಯ ಸೆನ್ಸ್ಯುಯಸ್​ ಸ್ಪೋರ್ಟಿ ಲುಕ್​ ಅನ್ನು ವೆರ್ನಾ ಕಾರು ಕೂಡ ಹೊಂದಿದೆ. ಸ್ಪ್ಲಿಟ್​ ಹೆಡ್​ ಲ್ಯಾಂಪ್​ ಸೆಟ್​ಅಪ್​, ಪ್ಯಾರಾಮೆಟ್ರಿಕ್​ ಜ್ಯುಯೆಲ್​ ಗ್ರಿಲ್​, ಫುಲ್​ ವಿಡ್ತ್​ ಎಲ್​ಇಡಿ ಡಿಆರ್​ಎಲ್​ ಸ್ಟ್ರಿಪ್​ ಬಾನೆಟ್ ಹಾಗೂ ಬಂಪರ್​ ಅನ್ನು ಪ್ರತ್ಯೇಕಿಸುತ್ತದೆ. ಸ್ಟ್ರಾಂಗ್​ ಕ್ಯಾರೆಕ್ಟರ್​ ಲೈನ್​ನೊಂದಿಗೆ ಸೈಡ್​ಪ್ರೊಫೈಲ್​ ಅತ್ಯಾಕರ್ಷಕವಾಗಿ ಕಾಣುತ್ತದೆ ಹಾಗೂ 16 ಇಂಚಿನ ಡೈಮಂಡ್​ ಕಟ್​ ಅಲಾಯ್ ವೀಲ್​ ಹೊಂದಿದೆ.

ಹಿಂಭಾಗದಲ್ಲಿ ಎಚ್ ಆಕೃತಿಯ ಕನೆಕ್ಟೆಡ್​ ಟೈಲ್ ಲ್ಯಾಂಪ್, ಎಲ್​ಇಡಿ ಲೈಟ್ ಬಾರ್​ ಹಿಂಭಾಗವನ್ನು ಪೂರ್ತಿ ಆವರಿಸಿಕೊಂಡಿದೆ. ಅದೇ ರೀತಿ ಡ್ಯುಯಲ್ ಟೋನ್​ ಬಂಪರ್​​ ಕೂಡ ಇದೆ.

ಹೊಸ ವೆರ್ನಾದ ಕ್ಯಾಬಿನ್​ನಲ್ಲಿ ಎರಡು ಟಚ್​ ಸ್ಕ್ರೀನ್ ಸೆಟ್​ಅಪ್​ ಹೊಂದಿದೆ. 10.25 ಇಂಚಿನ ಎಚ್​ಡಿ ಟಚ್​ ಸ್ಕ್ರೀನ್​ ಹಾಗೂ 10.25 ಇಂಚಿನ ಡಿಜಿಟಲ್​ ಇನ್​ಸ್ಟ್ರುಮೆಂಟ್ ಕ್ಲಸ್ಟರ್​ ಹೊಂದಿದೆ. 64 ಆಂಬಿಯೆಂಟ್ ಕಲರ್ ಲೈಟ್, ಪವರ್ ಅಡ್ಜೆಸ್ಟೆಬಲ್​ ಡ್ರೈವಿಂಗ್​ ಸೀಟ್​, ವೆಂಟಿಲೇಟೆಡ್ ಫ್ರಂಟ್ ಸೀಟ್ ಹೊಂದಿದೆ.

ಇದನ್ನೂ ಓದಿ : Oscar 2023 : ನಾಟು ನಾಟು ಹಾಡಿಗೆ ಡಾನ್ಸ್​ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ

10.25 ಇಂಚಿನ ಇನ್ಪೋಟೈನ್​​ಮೆಂಟ್​ ಸಿಸ್ಟಮ್​ನಲ್ಲಿ ಆಂಡ್ರಾಯ್ಡ್​ ಅಟೋ ಹಾಗೂ ಆ್ಯಪಲ್​ ಕಾರ್ ಪ್ಲೇ, ಬ್ಲೂ ಟೂತ್​ ಕನೆಕ್ಟಿವಿಟಿ ಸಿಸ್ಟಮ್​ ಹೊಂದಿದೆ. ಹಿಂದಿ ಹಾಗೂ ಇಂಗ್ಲಿಷ್​ ವಾಯ್ಸ್​ ಕಮಾಂಡ್​ ಮೂಲಕ ಸನ್​ರೂಫ್​, ವೆಂಟಿಲೇಟೆಡ್​ ಸೀಟ್, ಎಸಿ ಆನ್ ಮತ್ತಿತರ ಕೆಲಸಗಳನ್ನು ಮಾಡಲು ಸಾಧ್ಯವಿದೆ.

ಸೇಫ್ಟಿ ಎಷ್ಟಿದೆ?

ಹೊಸ ವೆರ್ನಾ ಡ್ರೈವರ್​ ಅಸಿಸ್ಟನ್ಸ್​ ಸಿಸ್ಟಮ್​ ಹೊಂದಿದೆ. ಆಟೋನೊಮಸ್​ ಎಮರ್ಜೆನ್ಸಿ ಬ್ರೇಕಿಂಗ್​, ಲೇನ್​ ಕೀಪ್​ ಅಸಿಸ್ಟ್​​, ಅಡಾಪ್ಟಿವ್​ ಕ್ರೂಸ್​ ಕಂಟ್ರೋಲ್​, ಸೇಫ್​ ಎಕ್ಸಿಟ್ ವಾರ್ನಿಂಗ್​ ಇತ್ಯಾದಿ ಫೀಚ್​ಗಳನ್ನು ಇದು ಹೊಂದಿದೆ. ಆರು ಏರ್​ ಬ್ಯಾಗ್​, ಎಬಿಎಸ್​ ವಿತ್​ ಇಬಿಡಿ, ಟ್ರ್ಯಾಕ್ಷನ್​ ಕಂಟ್ರೋಲ್​, ಟಿಪಿಎಮ್​ಎಸ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್​ ಸೆನ್ಸರ್​ ಹೊಂದಿದೆ.

ಎಂಜಿನ್​ ಸಾಮರ್ಥ್ಯ?

ಹೊಸ ಹ್ಯುಂಡೈ ಎಂಜಿನ್​ ಬಿಎಸ್​2 ಫೇಸ್​ 2ನ ಮಾನದಂಡಗಳಾದ ಆರ್​ಡಿಇ ಹಾಗೂ ಎ20 ಪೆಟ್ರೋಲ್ ಆಯ್ಕೆಗಳನ್ನು ಹೊಂದಿದೆ. 1.5 ಲೀಟರ್​ನ ಪೆಟ್ರೋಲ್​ ಎಂಜಿನ್​ 115 ಪಿಎಸ್​ ಪವರ್​ ಹಾಗೂ 144 ಎನ್​ಎಮ್​ ಟಾರ್ಕ್​​ ಬಿಡುಗಡೆ ಮಾಡುತ್ತದೆ. 1.5 ಲೀಟರ್​ನ ಟರ್ಬೊ ಪೆಟ್ರೋಲ್​ ಎಂಜಿನ್​ 160 ಪಿಎಸ್ ಪವರ್​ ಹಾಗೂ 253 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಆರು ಸ್ಪೀಡ್​ನ ಮ್ಯಾನುಯಲ್​ ಗೇರ್​ ಬಾಕ್ಸ್​ ಹಾಗೂ 7 ಸ್ಪೀಡ್​ನ ಡಿಸಿಟಿ ಗೇರ್​ ಬಾಕ್ಸ್​ಗಳನ್ನು ಹೊಸ ವೆರ್ನಾ ಹೊಂದಿದೆ. ಡೀಸೆಲ್​ ಎಂಜಿನ್​ನ ಕಾರುಗಳನ್ನು ಹ್ಯುಂಡೈ ಬಿಡುಗಡೆ ಮಾಡಿಲ್ಲ.

ಮೈಲೇಜ್​ ಎಷ್ಟು?

1.5 ಲೀಟರ್​ನ ಎಮ್​ಪಿಐ ಪೆಟ್ರೋಲ್​ ಎಂಜಿನ್​ 18.60 ಕಿಲೋ ಮೀಟರ್​​ ಮೈಲೇಜ್​ ನೀಡುತ್ತದೆ ಎಂದು ಕಂಪನಿ ಹೇಳಿದೆ. ಐವಿಟಿ ಗೇರ್​ ಬಾಕ್ಸ್ ಹೊಂದಿರುವ ಕಾರುಗಳು 19.60 ಕಿಲೋ ಮೀಟರ್​ ಮೈಲೇಜ್​ ಕೊಡುತ್ತದೆ. ಜಿಡಿಐ ಎಂಜಿನ್​ ಹಾಗೂ ಮ್ಯಾನುಯಲ್​ ಗೇರ್​ ಬಾಕ್ಸ್​ ಹೊಂದಿರು ಕಾರು 20 ಕಿಲೋ ಮೀಟರ್​ ಹಾಗೂ ಡಿಸಿಟಿ ಗೇರ್​ ಬಾಕ್ಸ್​ ಹೊಂದಿರುವ ಕಾರು 20.60 ಕಿಲೋ ಮೀಟರ್​ ಮೈಲೇಜ್​ ನೀಡುತ್ತದೆ ಎಂದು ಕಂಪನಿ ಹೇಳುತ್ತದೆ.

Exit mobile version