ಚೆನ್ನೈ: ಭಾರತದ ಜನಪ್ರಿಯ ಬೈಕ್ ತಯಾರಿಕಾ ಕಂಪನಿ ರಾಯಲ್ ಎನ್ಫೀಲ್ಡ್ (Royal Enfield) ಆಗಸ್ಟ್ 30ರ ಆಸುಪಾಸಿನಲ್ಲಿ ಹೊಸ ಬೈಕ್ ಒಂದನ್ನು ರಸ್ತೆಗಿಳಿಸುವ ಸೂಚನೆ ನೀಡಿದೆ. ಆಗಸ್ಟ್ 30ರಿಂದ ಸೆಪ್ಟೆಂಬರ್ 1ರವರೆಗೆ ನಿಮ್ಮ ದಿನಾಂಕ ಕಾಯ್ದಿರಿಸಿ ಎಂದು ರಾಯಲ್ ಎನ್ಫೀಲ್ಡ್ ಹೇಳಿದೆ. ಈ ವೇಳೆ ಹಳೆಯ ಮೋಟಾರ್ ಸೈಕಲ್ ಬಿಡುಗಡೆ ಮಾಡುತ್ತೇವೆ ಎಂಬುದಾಗಿಯೂ ಬರೆದುಕೊಂದಿದೆ. ಆದರೆ, ಇದು ಖಂಡಿತವಾಗಿಯೂ ಹಳೆಯ ಬೈಕ್ ಅಲ್ಲ. ಹೊಸ ಬುಲೆಟ್ 350 ಆಗಿರಬಹುದು ಎಂದು ಅಂದಾಜಿಸಲಾಗಿದೆ. ಐತಿಹಾಸಿಕ ಬುಲೆಟ್ 1931ರಿಂದ ಉತ್ಪಾದನೆಯಲ್ಲಿದೆ. ಇದೀಗ ರಾಯಲ್ ಎನ್ಫೀಲ್ಡ್ ಬೈಕ್ಗಳು ಹೊಸ ಜೆ ಫ್ಲ್ಯಾಟ್ಫಾರ್ಮ್ ನಿರ್ಮಾಣಗೊಳ್ಳುತ್ತಿದೆ. ಕ್ಲಾಸಿಕ್, ಮೀಟಿಯೋರ್ ಮತ್ತು ಹಂಟರ್ 350 ಈ ಸಾಲಿನಲ್ಲಿರುವ ಬೈಕ್ಗಳು ಇದೀಗ, ಹೊಸ ಬೈಕ್ ರಸ್ತೆಗಿಳಿಯವ ಸೂಚನೆ ನೀಡಿದೆ ಕಂಪನಿ.
ಹೊಸದಾಗಿ ರಸ್ತೆಗಿಳಿಯಲಿರುವ ಬುಲೆಟ್ 346 ಸಿಸಿ ಯುಸಿಇ ಎಂಜಿನ್ ಬಳಸುವ ಕೊನೆಯ ಮಾದರಿ ಎನಿಸಿಕೊಂಡಿದೆ. ಈ ಮೋಟಾರ್ ರಾಯಲ್ ಎನ್ಫೀಲ್ಡ್ ಬೈಕ್ಗೆ ಹೆಚ್ಚು ಬೇಡಿಕೆ ಉಂಟು ಮಾಡಿತು. ಈ ಎಂಜಿನ್ ಅನ್ನು 2010 ರಲ್ಲಿ ಮೊದಲ ಬಾರಿಗೆ ಪರಿಚಯಿಸಿದಾಗ ಅದು ಬಹುಬೇಡಿಕೆ ಪಡೆದುಕೊಂಡಿತು. ಇದೀಗ ಹೊಸ ಬುಲೆಟ್ 349 ಸಿಸಿ ಜೆ-ಪ್ಲಾಟ್ ಫಾರ್ಮ್ ಎಂಜಿನ್ ಹೊಂದಿರಲಿದೆ ಎಂದು ಕಂಪನಿ ಹೇಳಿದೆ.
ಎಂಜಿನ್ ಮತ್ತು ಮತ್ತಿತರ ನೋಟಗಳನ್ನು ನೋಡಿದರೆ ಹೊಸ ಬುಲೆಟ್ ಹಾಲಿ ರಸ್ತೆಯಲ್ಲಿರುವ ಕ್ಲಾಸಿಕ್ 350ಗೆ ಹೆಚ್ಚು ಹೋಲುತ್ತದೆ. ಆದರೆ, ಇಲ್ಲಿ ವ್ಯತ್ಯಾಸಗಳೆಂದರೆ ಸಿಂಗಲ್-ಪೀಸ್ ಸೀಟ್, ವಿಭಿನ್ನ ಟೈಲ್ ಲ್ಯಾಂಪ್ ಮತ್ತು ಹೆಡ್ ಲೈಟ್ ಮೇಲೆ ಹುಡ್ ಕಾಣಿಸುತ್ತಿದೆ. ಈ ಎಂಜಿನ್ ಇತರ ಎಲ್ಲಾ ಜೆ-ಪ್ಲಾಟ್ ಫಾರ್ಮ್ ಮಾದರಿಗಳಲ್ಲಿರುವಂತೆಯೇ 20 ಬಿಹೆಚ್ ಪಿ ಮತ್ತು 27 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ ಎಂದು ನಿರೀಕ್ಷಿಸಬಹುದು. ಬೈಕ್ನ ಚಾಸಿಸ್ ಕ್ಲಾಸಿಕ್ ನಂತೆಯೇ ಇರುತ್ತದೆ.
ಇದನ್ನೂ ಓದಿ : Maruti Suzuki Brezza : ಸುದ್ದಿಯಿಲ್ಲದೆ ಬ್ರೆಜಾ ಕಾರಿನಲ್ಲಿ ಬದಲಾವಣೆ ಮಾಡಿದ ಮಾರುತಿ ಸುಜುಕಿ
ಬುಲೆಟ್ ಬೈಕ್ನ ಬೆಲೆ ಮತ್ತು ಮತ್ತು ಅದರ ನೋಟ ಹೆಚ್ಚು ಆಸಕ್ತಿಕಾರಕಾಗಿದೆ. ಕಳೆದ ವರ್ಷ ಹಂಟರ್ ಬಿಡುಗಡೆಯಾಗುವ ಮೊದಲು ಕ್ಲಾಸಿಕ್ ಬುಲೆಟ್ ರಾಯಲ್ ಎನ್ಫೀಲ್ಡ್ ಸರಣಿ ಆರಂಭಿಕ ಬೈಕ್ ಎನಿಸಕೊಂಡಿತ್ತು. ಹಂಟರ್ ಅತ್ಯಂತ ಕೈಗೆಟುಕುವ ಬೆಲೆಯ ಬುಲೆಟ್ ಬೈಕ್ ಎನಿಸಿಕೊಂಡಿದೆ. ಹಂಟರ್ ಬೆಲೆ .1.5 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ. (ಎಕ್ಸ್ ಶೋ ರೂಮ್). ಈ ಎಂಟ್ರಿ ಲೆವೆಲ್ ಸ್ಥಾನವನ್ನು ಆಕ್ರಮಿಸಿಕೊಂಡಿರುವುದರಿಂದ, ಹೊಸ ಬುಲೆಟ್ನ ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಮೂಡಿದೆ. ಏತನ್ಮಧ್ಯೆ, ಕ್ಲಾಸಿಕ್ 1.93 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಹೀಗಾಗಿ ಹಂಟರ್ ಮತ್ತು ಕ್ಲಾಸಿಕ್ ನಡುವಿನ ಅಂತರವನ್ನು ಹೊಸ ಬೈಕ್ ತುಂಬಬಹುದು ಎಂದು ಹೇಳಲಾಗಿದೆ.