ನವ ದೆಹಲಿ: ನೇಕೆಡ್ ಟಿವಿಎಸ್ ಅಪಾಚೆ ಆರ್ ಆರ್ 310 ಅನ್ನು ಈಗ ಒಂದೆರಡು ಬಾರಿ ಸ್ಪಾಟ್ ಟೆಸ್ಟ್ ಮಾಡಿರುವುದು ಭಾರತೀಯ ದ್ವಿಚಕ್ರವಾಹನ ಕ್ಷೇತ್ರ ಗಮಿಸಿದೆ. ಆದರೆ ಆ ಬೈಕ್ ಎಂದು ಬಿಡಗಡೆಯಾಗಲಿದೆ ಎಂಬುದರ ಮಾಹಿತಿ ಇನ್ನೂ ಸಿಕ್ಕಿಲ್ಲ. ಏತನ್ಮಧ್ಯೆ, ಟಿವಿಎಸ್ ಕಂಪನಿಯು ಸೆಪ್ಟೆಂಬರ್ 6 ರಂದು ಹೊಸ ಬೈಕ್ ಬಿಡುಗಡೆಯ ಸುದ್ದಿಯನ್ನು ಪ್ರಕಟಿಸಿದೆ. ಈ ಆಹ್ವಾನ ನೇಕೆಡ್ ಆರ್ ಆರ್ 310 ಬೈಕ್ನದ್ದು ಆಗಿರಬಹುದು ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.
ಇಲ್ಲಿಯವರೆಗೆ ಸ್ಪೈ ಶಾಟ್ ಗಳಲ್ಲಿ ನೋಡಿದ ಪ್ರಕಾರ , ನೇಕೆಡ್ ಟಿವಿಎಸ್ ಅಪಾಚೆ ಆರ್ ಆರ್ 310 ಬೈಕ್ ಬಿಎಂಡಬ್ಲ್ಯು ಜಿ 310 ಆರ್ ಗಿಂತ ವಿಭಿನ್ನವಾದ ಸ್ಟೈಲಿಂಗ್ನಲ್ಲಿ ನಿರ್ಮಿಸಲಾಗಿದೆ ಎಂಬುದು ಸ್ಪಷ್ಟ. ಈ ಬೈಕ್ ತೀಕ್ಷ್ಣವಾದ ಟೇಲ್ ಬಾಗ ಹೊಂದಿದ್ದು, ಕೆಟಿಎಂ 1290 ಸೂಪರ್ ಡ್ಯೂಕ್ ಅನ್ನು ನೆನಪಿಸುತ್ತದೆ. ಟೈಲ್ ವಿಭಾಗವು ವಿಭೀನ್ನ ವಿನ್ಯಾಸವನ್ನು ಹೊಂದಿದ್ದು, ನಂಬರ್ ಪ್ಲೇಟ್ ಮತ್ತು ಇಂಡಿಕೇಟರ್ ಗಳನ್ನು ಹೊಂದಿರುವ ದೊಡ್ಡ ಟೈರ್ ಹಗ್ಗರ್ ಅನ್ನು ಹೊಂದಿದೆ.
ಬೈಕಿನ ಎಕ್ಸಾಸ್ಟ್ ಪ್ರಸ್ತುತ ಆರ್ ಆರ್ 310 ಅನ್ನು ಹೋಲುತ್ತದೆ. ಅದೇ ರೀತಿಯ ಎಂಜಿನ್ಇ ಬಳಸಿರುವುದು ಇಲ್ಲಿ ಸ್ಪಷ್ಟವಾಗಿದೆ. ಈ ಲಿಕ್ವಿಡ್ ಕೂಲ್ಡ್ 312 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆರ್ ಆರ್ 310 ಬೈಕಿ 34 ಬಿಹೆಚ್ಪಿ ಪವರ್ ಹಾಗೂ 27.3 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ.
ಇದನ್ನೂ ಓದಿ : Tata Altroz CNG : ಮೈಲೇಜ್ ರೇಸ್ನಲ್ಲಿ ಬಲೆನೊ ಮುಂದೆ ಸೋತ ಆಲ್ಟ್ರೊಜ್ ಸಿಎನ್ಜಿ ಕಾರು!
ಅಂತಿಮ ಹೆಸರು ಕೂಡ ರಹಸ್ಯವಾಗಿ ಉಳಿದಿದೆ. ಟಿವಿಎಸ್ ಇತ್ತೀಚೆಗೆ ಅಪಾಚೆ ಆರ್ ಟಿಎಕ್ಸ್ ಎಂಬ ಹೆಸರನ್ನು ಟ್ರೇಡ್ ಮಾರ್ಕ್ ಮಾಡಿದೆ ಮತ್ತು ಅದನ್ನು ಮುಂಬರುವ ಬೈಕ್ ನಲ್ಲಿ ಬಳಸಬಹುದು ಎಂದು ಹೇಳಲಾಗಿದೆ. ಈ ಮಾಹಿತಿ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಬಹಿರಂಗವಾಗಲಿದೆ.
ಓಲಾ ಎಸ್ 1 ಪ್ರೊ ಜೆನ್ 2 ಸ್ಕೂಟರ್ ಬಿಡುಗಡೆ
ಓಲಾ ಎಲೆಕ್ಟ್ರಿಕ್ ಹೊಸ ಸುದ್ದಿಯೊಂದನ್ನು ಕೊಟ್ಟಿದೆ. ಅದೇನೆಂದರೆ ಹೊಸ ಎಂಟ್ರಿ ಲೆವೆಲ್ ಉತ್ಪನ್ನವಾದ ಎಸ್ 1 ಎಕ್ಸ್ ಬಿಡುಗಡೆ. ಇದಲ್ಲದೆ, ಇದು ಎರಡನೇ ತಲೆಮಾರಿನ ಎಸ್ 1 ಪ್ರೊ ಅನ್ನು ಸಹ ಹೊರತಂದಿದೆ, ಇದರ ಬೆಲೆ 1.48 ಲಕ್ಷ ರೂ. ಎರಡನೇ ತಲೆಮಾರಿನ ಎಸ್ 1 ಪ್ರೊ ಅನ್ನು ಹೊಸ ಎಸ್ 1 ಎಕ್ಸ್ ಮತ್ತು ಎಸ್ 1 ಏರ್ ಆಧಾರಿತ ಅದೇ ಜೆನ್ 2 ಪ್ಲಾಟ್ ಫಾರ್ಮ್ನಲ್ಲಿ ನಿರ್ಮಿಸಲಾಗಿದೆ.
ಹೊಸ ಪ್ಲಾಟ್ ಫಾರ್ಮ್ನಲ್ಲಿ ನಿರ್ಮಿಸಲಾಗುತ್ತಿರುವುದರಿಂದ, ಕಂಪನಿಯು ತನ್ನ ಚೊಚ್ಚಲ ಉತ್ಪನ್ನಕ್ಕಿಂತ ಹಲವಾರು ಸುಧಾರಣೆಗಳನ್ನು ನೀಡಿದೆ ಎಂದು ಹೇಳುತ್ತದೆ. ಮೋಟರ್ ಬದಲಾವಣೆಯ ಇದರಲ್ಲಿ ಪ್ರಮುಖವಾದದ್ದು. ಇದು ಈ ಹಿಂದೆ 5.5 ಕಿಲೋವ್ಯಾಟ್ ನಿರಂತರ ಮತ್ತು 8.5 ಕಿಲೋವ್ಯಾಟ್ ಗರಿಷ್ಠ ಔಟ್ಪುಟ್ ನೀಡುತ್ತಿತ್ತು. ಹೊಸ ಮೋಟಾರ್ 5 ಕಿಲೋವ್ಯಾಟ್ ನಿರಂತರ ಮತ್ತು 11 ಕಿಲೋವ್ಯಾಟ್ ಗರಿಷ್ಠ ಔಟ್ಪುಟ್ ನೀಡುತ್ತದೆ. ಇದರ ಪರಿಣಾಮವಾಗಿ, ಟಾಪ್ ಸ್ಪೀಡ್ 116 ಕಿ.ಮೀ ನಿಂದ 120 ಕಿ.ಮೀ ಗೆ ಏರಿದೆ. 0-40 ಕಿ.ಮೀ ವೇಗ ಪಡೆಯುವ ಸಮಯವು 2.9 ಸೆಕೆಂಡುಗಳಿಂದ 2.6 ಸೆಕೆಂಡುಗಳಿಗೆ ಇಳಿದಿದೆ.
ಓಲಾ ಎಸ್ 1 ಪ್ರೊ ಜೆನ್ 2 ಶ್ರೇಣಿ
ಬ್ಯಾಟರಿ ಸಾಮರ್ಥ್ಯವು ಒಂದೇ ಆಗಿದ್ದರೂ, 4 ಕಿಲೋವ್ಯಾಟ್ನ ಓಲಾ ಬ್ಯಾಟರಿ ಪ್ಯಾಕ್ ಮತ್ತು ದಕ್ಷತೆಯಲ್ಲಿ ಸುಧಾರಣೆಗಳನ್ನು ಮಾಡಿದೆ ಎಂದು ಹೇಳಲಾಗಿದೆ ಇದರ ಪರಿಣಾಮವಾಗಿ, ರೇಂಜ್ಗಳ ಅಂಕಿಗಳು ಸ್ವಲ್ಪ ಹೆಚ್ಚಳವನ್ನು ಕಂಡಿವೆ. ಪ್ರಮಾಣೀಕೃತ ರೇಂಜ್ 181 ಕಿ.ಮೀ.ನಿಂದ 195 ಕಿ.ಮೀ.ಗೆ ಏರಿದೆ. ಇಕೋ ಮೋಡ್ ನಲ್ಲಿ ನೈಜ ವ್ಯಾಪ್ತಿಯು 170 ಕಿ.ಮೀ.ನಿಂದ 180 ಕಿ.ಮೀ.ಗೆ ಏರಿದೆ. ಆದಾಗ್ಯೂ, ಚಾರ್ಜಿಂಗ್ ಸಮಯವು ಒಂದೇ ಆಗಿರುತ್ತದೆ – 6.5 ಗಂಟೆಗಳಲ್ಲಿ 0-100 ಪ್ರತಿಶತ ಚಾರ್ಜ್ ಆಗುತ್ತದೆ.