Site icon Vistara News

Nissan Motor India : ನಿಸಾನ್ ಕಂಪನಿಯಿಂದ ಗ್ರಾಹಕರಿಗೆ ಉಚಿತ ವಾಹನ ತಪಾಸಣೆ ಶಿಬಿರ

Nissan Car

ಬೆಂಗಳೂರು: ನಿಸಾನ್ ಮೋಟರ್ ಇಂಡಿಯಾ ಪ್ರೈ.ಲಿ. (Nissan India) ಕಂಪನಿಯು ತನ್ನ ಗ್ರಾಹಕರಿಗೆ ಜುಲೈ 15ರಿಂದ ಸೆಪ್ಟೆಂಬರ್‌ 15ರವರೆಗೆ ಮುಂಗಾರು ಅವಧಿಯ ವಾಹನಗಳ ಉಚಿತ ತಪಾಸಣಾ ಶಿಬಿರ ಆಯೋಜಿಸಿದೆ. ಈ ಶಿಬಿರವು ನಿಸಾನ್ ಹಾಗೂ ಡಾಟ್ಸನ್ ವಾಹನಗಳಿಗೆ ಅಗತ್ಯ ಸೇವೆ ಒದಗಿಸುವ ಕಂಪನಿಯ ಅಧಿಕೃತ ಸರ್ವಿಸ್​ ಸೆಂಟರ್​ಗಳಲ್ಲಿ ನಡೆಯಲಿವೆ. ಗ್ರಾಹಕರು ತಮ್ಮ ನಿಸಾನ್ ಕನೆಕ್ಟ್‌ ಆ್ಯಪ್ ಮೂಲಕ ಅಥವಾ ನಿಸಾನ್ ಇಂಡಿಯಾ ವೆಬ್‌ಸೈಟ್‌ನ ಮೂಲಕ ಈ ಶಿಬಿರದಲ್ಲಿ ತಮ್ಮ ವಾಹನ ತಪಾಸಣೆ ಸಮಯ ಕಾಯ್ದಿರಿಸಬಹುದು ಎಂದು ಕಂಪನಿಯು ಹೇಳಿದೆ.

ಮುಂಗಾರು ತಪಾಸಣಾ ಶಿಬಿರದಲ್ಲಿ ವಾಹನದ 30 ಅಂಶಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ಇದರಲ್ಲಿ ಚಿತವಾಗಿ ಬ್ಯಾಟರಿಯ ತಪಾಸಣೆ, ವಾಹನದ ಹೊರಮೈ ಹಾಗೂ ಒಳಾಂಗಣದ ಪರಿಶೀಲನೆ, ವಾಹನದ ಅಡಿಭಾಗದ ಪರಿಶೀಲನೆ, ರಸ್ತೆಯಲ್ಲಿ ಸಂಚರಿಸುವಾಗ ಅನುಭವ ಹೇಗಿರುತ್ತದೆ ಎಂಬುದರ ತಪಾಸಣೆ ಹಾಗೂ ಇವುಗಳಿಗೆ ಪೂರಕವಾಗಿ ವಾಹನದ ಹೊರಮೈ ಸ್ವಚ್ಛಗೊಳಿಸುವ ಸೇವೆಗಳು ಇರುತ್ತವೆ. ಗ್ರಾಹಕರಿಗೆ ವೈಪರ್ ಬ್ಲೇಡ್‌ಗಳ ಮೇಲೆ ಶೇಕಡ 10ರವರೆಗೆ ರಿಯಾಯಿತಿ ಸಿಗಲಿದೆ. ಬ್ರೇಕ್ ಪ್ಯಾಡ್ ಬದಲಾವಣೆ ಒಳಗೊಂಡಂತೆ, ರಿಪೇರಿ ಕೆಲಸಗಳಿಗೆ ಶೇಕಡ 20ರವರೆಗೆ ರಿಯಾಯಿತಿ ಸಿಗಲಿದೆ.

‘ನಮ್ಮ ಕಾರುಗಳ ಮಾಲೀಕತ್ವ ಹೊಂದುವುದು ಗ್ರಾಹಕರ ಪಾಲಿಗೆ ಹೆಚ್ಚು ಅರ್ಥಪೂರ್ಣವಾಗಿರುವಂತೆ ಮಾಡುತ್ತಿರುವುದು ನಮ್ಮ ಪಾಲಿಗೆ ಹೆಮ್ಮೆಯ ಸಂಗತಿ. ಇದು ನಮಗೆ ಪ್ರತ್ಯೇಕ ಅಸ್ಮಿತೆಯೊಂದನ್ನು ನೀಡಿದೆ. ನಿಸಾನ್ ಕಂಪನಿಯು ತನ್ನ ಗ್ರಾಹಕರಿಗೆ ವಾಹನ ಮಾರಾಟ ನಂತರದ ಸೇವೆಗಳನ್ನು ಅತ್ಯುನ್ನತ ಮಟ್ಟದಲ್ಲಿ ಒದಗಿಸುತ್ತಿದೆ. ಮುಂಗಾರು ಶಿಬಿರ ಎಂಬುದು ಕಂಪನಿಯು ಗ್ರಾಹಕರಿಗೆ ಒದಗಿಸುತ್ತಿರುವ ಇಂತಹ ಸೇವೆಗಳ ಭಾಗ. ವಾಹನದ ಮಾಲೀಕರಾಗಿ ಗ್ರಾಹಕರಿಗೆ ಯಾವ ರಗಳೆಗಳೂ ಇರಬಾರದು. ಈ ಶಿಬಿರವು ಗ್ರಾಹಕರ ನಿರೀಕ್ಷೆಗಳನ್ನು ಮೀರಿ ನಿಲ್ಲುವಂತಿದೆ’ ಎಂದು ನಿಸಾನ್ ಮೋಟರ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಹೇಳಿದ್ದಾರೆ.

ಎಕ್ಸ್​ಪ್ರೆಸ್​ ಸರ್ವಿಸ್​

ಮನೆಬಾಗಿಲಿನಲ್ಲಿ ಸೇವೆ ಪಡೆಯುವ ಅವಕಾಶ ಮತ್ತು ನಿಸಾನ್ ಕಾರುಗಳನ್ನು ಡೀಲರ್‌ಶಿಪ್ ಕೇಂದ್ರಗಳಿಗೆ ಕೊಂಡೊಯ್ಯುವ, ಅಲ್ಲಿಂದ ಮನೆಗೆ ವಾಪಸ್ ತಂದುಕೊಡುವ ಸೇವೆಗಳನ್ನು ನಿಸಾನ್ ಕಂಪನಿಯು ಆರಂಭಿಸಿದೆ. ಸಮಗ್ರ ಸೇವೆಗಳನ್ನು 90 ನಿಮಿಷಗಳಲ್ಲಿ ಒದಗಿಸುವ ‘ನಿಸಾನ್ ಎಕ್ಸ್‌ಪ್ರೆಸ್ ಸರ್ವಿಸ್’ ಕೊಡುಗೆಯನ್ನು ಕೂಡ ಕಂಪನಿ ಒದಗಿಸುತ್ತಿದೆ. ಕಾರಿನ ಮಾಲೀಕತ್ವದ ಅವಧಿಯಲ್ಲಿ ಯಾವ ಸಮಸ್ಯೆಯೂ ಎದುರಾಗದಂತೆ ನೋಡಿಕೊಳ್ಳುವ ನಿಸಾನ್‌ನ ಸೇವೆಗಳನ್ನು ಗ್ರಾಹಕರು ಬಹಳ ಮೆಚ್ಚಿಕೊಂಡಿದ್ದಾರೆ. ಹಿಂದಿನ ಬಾರಿ ನಡೆದಿದ್ದ ಉಚಿತ ಮುಂಗಾರು ಶಿಬಿರಕ್ಕೆ ಭಾರಿ ಸ್ಪಂದನ ಸಿಕ್ಕಿತ್ತು. ಆಗ 12 ಸಾವಿರಕ್ಕಿಂತ ಹೆಚ್ಚು ಗ್ರಾಹಕರು ಇದರ ಪ್ರಯೋಜನ ಪಡೆದಿದ್ದರು.

ಇದನ್ನೂ ಓದಿ : Viral News : ಶೋರೂಮ್​ನಿಂದ ಫೋಕ್ಸ್​ವ್ಯಾಗನ್​ ಕಾರನ್ನು ಕದ್ದ, ಪೆಟ್ರೋಲ್ ಹಾಕಲು ಹೋಗಿ ಸಿಕ್ಕಿ ಬಿದ್ದ!

ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು, ಅವರ ನಿರೀಕ್ಷೆಗಳನ್ನು ಮೀರಲು ಕಂಪನಿಯು ತನ್ನ ವಿತರಣಾ ಜಾಲದ ಸಾಮರ್ಥ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವುದನ್ನು ಮುಂದುವರಿಸುತ್ತದೆ. ಇದಕ್ಕೆ ಪೂರಕವಾಗಿ ನಾವು ಗ್ರಾಹಕ ಸ್ಪಂದನ ಕೇಂದ್ರಗಳನ್ನು 2022–23ರ ಹಣಕಾಸು ವರ್ಷದಲ್ಲಿ ಹೆಚ್ಚು ಮಾಡಿದ್ದೇವೆ. ಅಂದರೆ, ಇಂತಹ ಕೇಂದ್ರಗಳ ಸಂಖ್ಯೆಯನ್ನು 19ರಷ್ಟು ಜಾಸ್ತಿ ಮಾಡಲಾಗಿದೆ. ಇದರಲ್ಲಿ 14 ಶೋರೂಂಗಳು, ಐದು ಸೇವಾ ಕಾರ್ಯಾಗಾರಗಳು ಸೇರಿವೆ. ಇವೆಲ್ಲ ದೇಶದ ಉತ್ತರ ಹಾಗೂ ದಕ್ಷಿಣ ಭಾಗಗಳ ಪ್ರಮುಖ ನಗರಗಳಲ್ಲಿ, ಪ್ರಮುಖ ಪ್ರದೇಶಗಳಲ್ಲಿ ಇವೆ.

Exit mobile version