Site icon Vistara News

Nissan India : ನಿಸ್ಸಾನ್​ ಮ್ಯಾಗ್ನೈಟ್​ ಗೆಜಾ ವಿಶೇಷ ಆವೃತ್ತಿಯ ಬುಕಿಂಗ್​ ಆರಂಭ, ಮೇ26ಕ್ಕೆ ಅನಾವರಣ

Nissan Magnite Geza Special Edition

#image_title

ಬೆಂಗಳೂರು: ನಿಸ್ಸಾನ್ ಇಂಡಿಯಾ ಮ್ಯಾಗ್ನೈಟ್ ಸಬ್ ಕಾಂಪ್ಯಾಕ್ಟ್ ಎಸ್​ಯುವಿಯ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ನಿಸ್ಸಾನ್ ಮ್ಯಾಗ್ನೈಟ್ ಗೆಜಾ ಸ್ಪೆಷಲ್ ಎಡಿಷನ್ ಎಂದು ಹೆಸರಿಸಲಾಗಿರುವ ವೇರಿಯೆಂಟ್​ ಮೇ 26ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಕಾರನ್ನು ಇನ್ನೂ ಅನಾವರಣ ಮಾಡಿಲ್ಲವಾಧರೂ ಬುಕಿಂಗ್ ಆರಂಭಗೊಂಡಿದೆ. 11,000 ರೂಪಾಯಿಗಳ ಪಾವತಿ ಮಾಡಿ ಕಾರನ್ನು ಕಾಯ್ದಿರಿಸಬಹುದು. ಇತರ ಸಣ್ಣ ಪುಟ್ಟ ಅಪ್​ಡೇಟ್​ಗಳ ಜತೆ ಮ್ಯಾಗ್ನೈಟ್ ಗೆಜಾ ಆವೃತ್ತಿಯ ದೊಡ್ಡ ಹೈಲೈಟ್ ಹೊಸ ಪ್ರೀಮಿಯಂ ಆಡಿಯೊ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಮ್.

ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಮಾತನಾಡಿ, ಬಿಗ್, ಬೋಲ್ಡ್, ಬ್ಯೂಟಿಫುಲ್ ನಿಸ್ಸಾನ್ ಮ್ಯಾಗ್ನೈಟ್ ಎಸ್​​ಯುವಿ, ತನ್ನ ಸಾಟಿಯಿಲ್ಲದ ಮೌಲ್ಯ, ಹೆಚ್ಚಿನ ಸುರಕ್ಷತಾ ಶ್ರೇಯಾಂಕ ಮತ್ತು ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಗೇಮ್ ಚೇಂಜರ್ ಆಗಿದೆ. ಸಮಕಾಲೀನ ವೈಶಿಷ್ಟ್ಯಗಳೊಂದಿಗೆ ಮ್ಯಾಗ್ನೈಟ್ ಗೆಜಾ ವಿಶೇಷ ಆವೃತ್ತಿ ಗ್ರಾಹಕರ ಮೌಲ್ಯ ಹೆಚ್ಚಿಸಲಿದೆ ಎಂದು ಹೇಳಿದರು.

ಜಪಾನ್ನ​​ ರಂಗಭೂಮಿ ಮತ್ತು ಅದರ ಅಭಿವ್ಯಕ್ತಿಶೀಲ ಸಂಗೀತ ವಿಷಯಗಳು ಮ್ಯಾಗ್ನೈಟ್ ಗೆಜಾ ವಿಶೇಷ ಆವೃತ್ತಿಗೆ ಸ್ಫೂರ್ತಿಯಾಗಿದೆ ಎಂದು ನಿಸ್ಸಾನ್ ಹೇಳಿದೆ. ಈ ಪರಿಕಲ್ಪನೆಯ ಆಧಾರದ ಮೇಲೆ, ಕಾರು ಜೆಬಿಎಲ್ ಸ್ಪೀಕರ್​ಗಳೊಂದಿಗೆ ಜೋಡಿಸಲಾದ 9 ಇಂಚಿನ ಹೈ-ರೆಸಲ್ಯೂಶನ್ ಟಚ್​ಸ್ಕ್ರೀನ್​ ಸೇರಿದಂತೆ ಸುಧಾರಿತ ಇನ್ಫೋಟೈನ್ಮೆಂಟ್ ಫೀಚರ್​​ಗಳನ್ನು ನೀಡಲಾಗಿದೆ. ವೈರ್ ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೋ, ಟ್ರ್ಯಾಜೆಕ್ಟರಿ ರಿಯರ್ ಕ್ಯಾಮೆರಾ, ಅಪ್ಲಿಕೇಶನ್ ಆಧಾರಿತ ಆಂಬಿಯೆಂಟ್ ಲೈಟಿಂಗ್, ಶಾರ್ಕ್ ಫಿನ್ ಆಂಟೆನಾ ಫೀಚರ್​ಗಳಿವೆ.

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ಪಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್ಎಸ್ಎ) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ನಂತಹ ಹೊಸ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಎಸ್ ಯುವಿ ಬರಲಿದೆ. ಮ್ಯಾಗ್ನೈಟ್ ಪ್ರಸ್ತುತ ಪ್ರಯಾಣಿಕರ ರಕ್ಷಣೆಗಾಗಿ ಗ್ಲೋಬಲ್ ಎನ್ಸಿಎಪಿಯಿಂದ 4-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಹ ಹೊಂದಿದೆ.

ನಿಸ್ಸಾನ್​ ಮ್ಯಾಗ್ನೈಟ್​ ಎಸ್ ಯುವಿ 1.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಮೋಟರ್ ಮತ್ತು 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದೆ. 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಟರ್ಬೊ ವೇರಿಯೆಂಟ್​ಗಳು ಸಿವಿಟಿ ಆಟೋಮ್ಯಾಟಿಕ್ ಗೇರ್​ಬಾಕ್ಸ್​ನೊಂದಿಗೆ ಲಭ್ಯವಿದೆ.

ಇದನ್ನೂ ಓದಿ : Hyundai Motor : ಜುಲೈನಲ್ಲಿ ಮಾರುಕಟ್ಟೆಗೆ ಎಂಟ್ರಿ ಪಡೆಯಲಿದೆ ಹೊಸ ಕಾರು; ಯಾವುದು ಅದು?

ಕಾಂಪಾಕ್ಟ್​​ ಎಸ್​​ಯುವಿ ವಿಭಾಗದಲ್ಲಿ ಭಾರತದ ಅತ್ಯಂತ ನೆಚ್ಚಿನ ಆಯ್ಕೆಯ ವಾಹನವಾಗಿದೆ ಮ್ಯಾಗ್ನೈಟ್. ಈ ಮಾದರಿಯ ವಾಹನವನ್ನು ಡಿಸೆಂಬರ್ 2020 ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಇದನ್ನು ಜಪಾನ್ ನಲ್ಲಿ ವಿನ್ಯಾಸಗೊಳಿಸಿ ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಈ ಮೂಲಕ ನಿಸಾನ್ ಮೋಟರ್ ಇಂಡಿಯಾದ ಉತ್ಪಾದನಾ ತತ್ತ್ವವಾದ `ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಅನ್ನು ಅನುಸರಿಸಲಾಗುತ್ತಿದೆ.

Exit mobile version