ಬೆಂಗಳೂರು: ನಿಸಾನ್ ಮೋಟರ್ ಇಂಡಿಯಾ ತನ್ನ ಬಿಗ್, ಬೋಲ್ಡ್, ಬ್ಯೂಟಿಫುಲ್ ಎಸ್‌ಯುವಿ ನಿಸಾನ್ ಮ್ಯಾಗ್ನೈಟ್ GEZA ವಿಶೇಷ (Nissan Magnite) ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಅದರ ಬೆಲೆ 7,39,000 (ಎಕ್ಸ್ ಶೋರೂಂ ದೆಹಲಿ) ರೂಪಾಯಿಗಳಿಂದ ಆರಂಭವಾಗಲಿದೆ. ಈ ಮ್ಯಾಗ್ನೈಟ್ GEZA ದಲ್ಲಿ ಸುಧಾರಿತ ಇನ್ಫೋಟೇನ್ಮೆಂಟ್ ಸಿಸ್ಟಂ, ಪವರ್ ಪ್ಯಾಕ್ಡ್ ಪರ್ಮಾರ್ಫೆನ್ಸ್, ಸುಧಾರಿತ ವೈಶಿಷ್ಟ್ಯತೆಗಳು ಮತ್ತು ಸುರಕ್ಷತಾ ಸೌಲಭ್ಯಗಳಿವೆ. ಈ ಮೂಲಕ ಈ ಎಸ್‌ಯುವಿ ಭಾರತೀಯ ಗ್ರಾಹಕರ ಪ್ರಯಾಣವನ್ನು ಪುನರ್ ವ್ಯಾಖ್ಯಾನಿಸಲಿದೆ. ಈ ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯು ಜಪಾನ್ನ ಥಿಯೇಟರ್ ಮತ್ತು ಅದರ ಅತ್ಯುತ್ತಮವಾದ ಮ್ಯೂಸಿಕಲ್ ಥೀಮ್ಸ್ನಿಂದ ಪ್ರೇರಣೆ ಪಡೆದುಕೊಂಡಿದೆ.
ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯ ವಾಹನವು ಹತ್ತು ಹಲವಾರು ವಿಶೇಷ ವೈಶಿಷ್ಟ್ಯತೆಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ. ಹೈ ರೆಸಲ್ಯೂಶನ್ ನ 22.86 ಸೆಂ.ಮೀ(9 ಇಂಚು) ಅಳತೆಯ ಟಚ್ ಸ್ಕ್ರೀನ್. ವೈರ್ ಲೆಸ್ ಕನೆಕ್ಟಿವಿಟಿಯೊಂದಿಗೆ ಆ್ಯಂಡ್ರಾಯ್ಡ್ ಕಾರ್ ಪ್ಲೇ, ಪ್ರೀಮಿಯಂ ಜೆಬಿಎಲ್ ಸ್ಪೀಕರ್ಗಳು, ಟ್ರಾಜೆಕ್ಟರಿ ರಿಯರ್ ಕ್ಯಾಮೆರಾ, ಆ್ಯಪ್-ಆಧಾರಿತ ಕಂಟ್ರೋಲ್ಸ್ ನೊಂದಿಗೆ ಆಂಬಿಯೆಂಟ್ ಲೈಟಿಂಗ್, ಪ್ರೀಮಿಯಂ ಬ್ಯಾಗಿ ಕಲರ್ ಸೀಟ್, ಶಾರ್ಕ್ ಫಿನ್ ಆಂಟೆನಾ ಈ ಕಾರಿನ ಆಕರ್ಷಣೆಯಾಗಿದೆ.
ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಅವರು ಮಾತನಾಡಿ, “ನಿಸಾನ್ ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯು ಪ್ರೀಮಿಯಂ ಆಡಿಯೋ ಮತ್ತು ಇನ್ಫೋಟೇನ್ಮೆಂಟ್ ಅನುಭವದೊಂದಿಗೆ ಸರಿಸಾಟಿಯಿಲ್ಲದ ಮೌಲ್ಯವನ್ನು ನೀಡುತ್ತದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದ್ದು, ಶಕ್ತಿಯುತವಾದ ಸುರಕ್ಷತೆ ಮತ್ತು ಕಾರ್ಯದಕ್ಷತೆಯ ವೈಶಿಷ್ಟ್ಯತೆಗಳನ್ನು ಹೊಂದಿದೆ’’ ಎಂದರು.
ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯನ್ನು ಎಲ್ಲಾ ನಿಸಾನ್ ಶೋರೂಂಗಳಲ್ಲಿ 11,000 ರೂಪಾಯಿ ಪಾವತಿಸಿ ಮುಂಗಡ ಬುಕಿಂಗ್ ಮಾಡಲು ಅವಕಾಶವಿದೆ. ಮೊನೊಟೋನ್ ಬಣ್ಣಗಳ ಶ್ರೇಣಿಯಲ್ಲಿ ಲಭ್ಯವಿದ್ದು, ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ವ್ಯಾಪಕವಾದ ಶ್ರೇಣಿಯ ಆಯ್ಕೆಯನ್ನು ನೀಡಲಾಗಿದೆ.
ನಿಸಾನ್ ಮ್ಯಾಗ್ನೈಟ್ ಅತ್ಯುತ್ತಮ, ಅತ್ಯಂತ ಕಡಿಮೆ ನಿರ್ಹವಣಾ ವೆಚ್ಚದೊಂದಿಗೆ ರಸ್ತೆಗೆ ಇಳಿದಿದೆ. ಪ್ರತಿ ಒಂದು ಕಿಲೋಮೀಟರ್ ಗೆ ಕೇವಲ 35 ಪೈಸೆ (50,000 ಕಿಲೋಮೀಟರ್ ಗೆ) ವೆಚ್ಚವಾಗಲಿದೆ. ಅದೇ ರೀತಿ 2 ವರ್ಷಗಳವರೆಗೆ ವಾರಂಟಿ (50,000 ಕಿಮೀ)ಇರುವುದರೊಂದಿಗೆ ಗ್ರಾಹಕರಿಗೆ ಯಾವುದೇ ಚಿಂತೆ ಇರುವುದಿಲ್ಲ ಮತ್ತು ಈ ವಾರಂಟಿಯನ್ನು ಸುಲಭ ದರದಲ್ಲಿ 5 ವರ್ಷಗಳವರೆಗೆ (ಅಥವಾ ಒಂದು ಲಕ್ಷ ಕಿಮೀ) ವಿಸ್ತರಣೆ ಮಾಡಿಕೊಳ್ಳಬಹುದು.
ಇದನ್ನೂ ಓದಿ : Nissan Magnite | ನಿಸ್ಸಾನ್ ಕಂಪನಿಯ ಮ್ಯಾಗ್ನೈಟ್ ಎಸ್‌ಯುವಿ ಟಿ20 ವಿಶ್ವ ಕಪ್‌ಗೆ ಅಧಿಕೃತ ಕಾರು
ನಿಸಾನ್ ಸರ್ವೀಸ್ ಹಬ್ ಅಥವಾ ನಿಸಾನ್ ಕನೆಕ್ಟ್ ಮೂಲಕ ಆನ್ ಲೈನ್ ನಲ್ಲಿ ನಿಸಾನ್ ಸರ್ವೀಸ್ ಕಾಸ್ಟ್ ಕ್ಯಾಲ್ಕ್ಯುಲೇಟರ್ ನಲ್ಲಿ ಸರ್ವೀಸ್ ಅನ್ನು ಬುಕ್ ಮಾಡಬಹುದು ಮತ್ತು ವೆಚ್ಚವನ್ನು ಪರಿಶೀಲಿಸಬಹುದಾಗಿದೆ.
ಗ್ಲೋಬಲ್ ಅನ್ಕ್ಯಾಪ್ ನೀಡುವ ಅಡಲ್ಟ್ ಆಕ್ಯುಪೆಂಟ್ ಸೇಫ್ಟಿಯಲ್ಲಿ 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿರುವ ನಿಸಾನ್ ಮ್ಯಾಗ್ನೈಟ್ ಈ ಸೆಗ್ಮೆಂಟ್ ನಲ್ಲಿ ಅತ್ಯುತ್ತಮ ಸುರಕ್ಷತಾ ಗುಣಮಟ್ಟಗಳನ್ನು ಹೊಂದಿರುವ ವಾಹನ ಎನಿಸಿದೆ. ಇತ್ತೀಚೆಗೆ ನಿಸಾನ್ ತನ್ನ ಮ್ಯಾಗ್ನೈಟ್ ನ ಎಲ್ಲಾ ಶ್ರೇಣಿಯ ವಾಹನಗಳಲ್ಲಿ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಪರಿಚಯಿಸಲಾಗಿದೆ. ಇದಲ್ಲದೇ, ಬಿಎಸ್6 ಹಂತ 2 ನ್ನು ಪರಿಚಯಿಸಿದ್ದು, ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.
ನಿಸ್ಸಾನ್ ಮ್ಯಾಗ್ನೈಟ್ ಕಾರನ್ನು ಡಿಸೆಂಬರ್ 2020 ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದನ್ನು ಜಪಾನ್ ನಲ್ಲಿ ವಿನ್ಯಾಸಗೊಳಿಸಿ ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಈ ಮೂಲಕ ನಿಸಾನ್ ಮೋಟರ್ ಇಂಡಿಯಾದ ಉತ್ಪಾದನಾ ತತ್ತ್ವವಾದ ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಅನ್ನು ಅನುಸರಿಸಲಾಗುತ್ತಿದೆ
.