Site icon Vistara News

Nissan SUV X-TRAIL : ನಿಸ್ಸಾನ್ ನ ಹೊಚ್ಚ ಹೊಸ 4 ಜನರೇಷನ್ ಪ್ರೀಮಿಯಂ ಅರ್ಬನ್ ಎಸ್‌ಯುವಿ ಎಕ್ಸ್-ಟ್ರಯಲ್ ಬಿಡುಗಡೆ

Nissan SUV X-TRAIL

ಬೆಂಗಳೂರು: ನಿಸ್ಸಾನ್ ಮೋಟಾರ್ ಇಂಡಿಯಾ ಇಂದು ಹೊಚ್ಚ ಹೊಸ ಮೇಡ್ ಇನ್ ಜಪಾನ್ 4 ಜನರೇಷನ್ ಪ್ರೀಮಿಯಂ ಅರ್ಬನ್‌ ಎಸ್‌ಯುವಿ ನಿಸ್ಸಾನ್‌ ಎಕ್ಸ್-ಟ್ರಯಲ್ (Nissan SUV X-TRAIL) ಅನ್ನು ಬಿಡುಗಡೆ ಮಾಡಿದೆ. ಇದು 7 ಸೀಟರ್ ಎಸ್‌ಯುವಿ ಆಗಿದ್ದು, ಜುಲೈ 26ರಿಂದ ರೂ.1 ಲಕ್ಷ ನೀಡಿ ಬುಕ್ ಬುಕ್ ಮಾಡಬಹುದಾಗಿದೆ. ಆಗಸ್ಟ್ ನಲ್ಲಿ ಎಕ್ಸ್ ಟ್ರಯಲ್ ಡೆಲಿವರಿ ಆರಭವಾಗಲಿದೆ.

ನಿಸ್ಸಾನ್ ಈ ಎಸ್‌ಯುವಿ ಅನ್ನು ಈಗಾಗಲೇ ಜಾಗತಿಕವಾಗಿ ಬಿಡುಗಡೆ ಮಾಡಿದ್ದು, ನಿಸ್ಸಾನ್ ಎಕ್ಸ್-ಟ್ರಯಲ್ ಪ್ರಸ್ತುತ 150ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ವಿಶೇಷ ಎಂದರೆ ಈಗಾಗಲೇ ವಿಶ್ವದಾದ್ಯಂತ ಈ ಕಾರಿನ 7.8 ಮಿಲಿಯನ್ ಯುನಿಟ್ ಗಳು ಮಾರಾಟವಾಗಿವೆ. 2023ನೇ ವರ್ಷದಲ್ಲಿ ಜಾಗತಿಕವಾಗಿ ಮಾರಾಟವಾಗಿರುವ ಟಾಪ್ 5 ಎಸ್‌ಯುವಿಗಳಲ್ಲಿ ಇದೂ ಕೂಡ ಒಂದಾಗಿದೆ.

ನಿಸಾನ್ ತನ್ನ ಜಾಗತಿಕ ಉತ್ಪನ್ನಗಳನ್ನು ಮತ್ತು ತಂತ್ರಜ್ಞಾನವನ್ನು ಭಾರತಕ್ಕೆ ಒದಗಿಸುವ ಉದ್ದೇಶವನ್ನು ಹೊಂದಿದ್ದು, ಅದರ ಆರಂಭಿಕ ಹೆಜ್ಜೆಯಾಗಿ ಎಕ್ಸ್ ಟ್ರಯಲ್ ಬಿಡುಗಡೆ ಆಗಿದೆ. ಈ ಮೂಲಕ ಕಂಪನಿಯು ತನ್ನ ಸಿಬಿಯು ಬಿಸಿನೆಸ್ ಅನ್ನು ಮರು ಆರಂಭಿಸುವುದಾಗಿ ಘೋಷಿಸಿದೆ.

ಎಂಜಿನ್ ಪವರ್​

ಈ ಮೇಡ್ ಇನ್ ಜಪಾನ್ 4ನೇ ಜನರೇಷನ್ ನ ನಿಸ್ಸಾನ್‌ಎಕ್ಸ್-ಟ್ರಯಲ್ ವಿಶ್ವದ ಮೊತ್ತ ಮೊದಲ ಪ್ರೊಡಕ್ಷನ್ ವೇರಿಯೇಬಲ್ ಕಂಪ್ರೆಷನ್-ಟರ್ಬೊ ಎಂಜಿನ್‌ ಅನ್ನು ಹೊಂದಿದೆ. ಇದರ ಅತ್ಯಾಧುನಿಕ ಡಿಎನ್ಎ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದ್ದು, ಅದರಿಂದ ಟಾರ್ಕ್ ಅಸಿಸ್ಟ್, ಹೆಚ್ಚುವರಿ ಐಡಲ್-ಸ್ಟಾಪ್, ಕ್ವಿಕ್ ರೀಸ್ಟಾರ್ಟ್ ಮತ್ತು ಸುಧಾರಿತ ಮೈಲೇಜ್​ ಇತ್ಯಾದಿ ಸೌಕರ್ಯಗಳು ದೊರೆಯಲಿವೆ.

ಎಕ್ಸ್-ಟ್ರಯಲ್ 1.5ಲೀ ಪೆಟ್ರೋಲ್ ವೇರಿಯೇಬಲ್ ಕಂಪ್ರೆಷನ್- ಟರ್ಬೊ ಎಂಜಿನ್ ಹೊಂದಿದೆ. ಇದರ ಮೈಲ್ಡ್ ಹೈಬ್ರಿಡ್ 2ಡಬ್ಲ್ಯೂಡಿ ಎಂಜಿನ್‌ ಜೊತೆಗೆ 3 ಜೆನ್ ಎಕ್ಸ್‌ ಟ್ರಾನಿಕ್ ಸಿವಿಟಿ ಪವರ್‌ಟ್ರೇನ್‌ ಅನ್ನು ಸಂಯೋಜಿಸಲಾಗಿದೆ. ಈ ಎಂಜಿನ್ 163ಪಿಎಸ್ ಮತ್ತು 300ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಆಕರ್ಷಕ ಸೀಟ್​​​ಗಳು

ಎಕ್ಸ್-ಟ್ರಯಲ್ ವಿಶಾಲವಾದ ಜಾಗ ಹೊಂದಿದೆ. 7- ಸೀಟರ್ ವಿನ್ಯಾಸದಲ್ಲಿ ಲಭ್ಯವಿರುವ ಈ ಕಾರಿನ 2ನೇ ಮತ್ತು 3 ನೇ ಸಾಲಿನ ಆಸನಗಳಿಗೆ ಸುಲಭವಾಗಿ ಪ್ರವೇಶಿಸಲು/ಅಲ್ಲಿಂದ ಹೊರಹೋಗಲು ವಿಶೇಷವಾದ 85-ಡಿಗ್ರಿ ರೇರ್ ಡೋರ್ ಓಪನಿಂಗ್ ಅನುಕೂಲ ಒದಗಿಸಲಾಗಿದೆ. ಜಪಾನಿ ಶೈಲಿಯ ವಿನ್ಯಾಸ ಹೊಂದಿರುವ ಈ ಕಾರು ಸುಂದರವಾದ ಎಕ್ಸ್ ಟೀರಿಯರ್ ಮತ್ತು ಇಂಟೀರಿಯರ್ ಅನ್ನು ಹೊಂದಿದೆ. ಇ-ಶಿಫ್ಟರ್, ಡ್ರೈವ್ ಮೋಡ್ ಸೆಲೆಕ್ಟರ್ ಮತ್ತು ಟ್ವಿನ್ ಕಪ್ ಹೋಲ್ಡರ್‌ಗಳು, ಹಾಗೆಯೇ ಸ್ಮಾರ್ಟ್‌ಫೋನ್‌ಗಳಿಗಾಗಿ 15w ವೈರ್‌ಲೆಸ್ ಚಾರ್ಜ್ ಪ್ಯಾಡ್ ಅನ್ನು ಕಾರು ಒಳಗೊಂಡಿದೆ. ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಆರ್ಮ್​ರೆಸ್ಟ್​ ಇದೆ. ಬೆಲೆಬಾಳುವ ವಸ್ತುಗಳನ್ನು ಇಡಲು ಸ್ಟೋರೇಜ್ ಸ್ಪೇಸ್ ನೀಡಲಾಗಿದೆ. ಸೈಡಿನಲ್ಲಿ ಹಿಂದಿನ ಸೀಟಿನ ಪ್ರಯಾಣಿಕರಿಗೆ ವಸ್ತು ಗಳನ್ನು ಇಡಬಹುದಾದ ಸ್ಥಳಗಳನ್ನು ನೀಡಲಾಗಿದೆ. ಪ್ಯಾನೋರಮಿಕ್ ಸನ್‌ರೂಫ್ ಸೌಕರ್ಯ ಹೊಂದಿದ್ದು, ಇದರ 3ನೇ ಸಾಲಿನ ಸೀಟನ್ನು ಮಡಿಸಿದರೆ ಒಟ್ಟು 585 ಲೀಟರ್‌ಗಳಷ್ಟು ಸಾಮರ್ಥ್ಯದ ಲಗೇಜ್ ಜಾಗ ಸಿಗುತ್ತದೆ. ಎಕ್ಸ್‌ಟ್ರಯಲ್‌ ಹೈ-ಡೆಫಿನಿಷನ್, ಸಂಪೂರ್ಣ ಎಲೆಕ್ಟ್ರಾನಿಕ್ 31.2ಸೆಂಮೀನ ಟಿ ಎಫ್ ಟಿ ಮಲ್ಟಿ-ಇನ್ಫರ್ಮೇಷನ್ ಸ್ಕ್ರೀನ್ ಹೊಂದಿದೆ.

ಇದನ್ನೂ ಓದಿ: Honor 200 Series : ಒಂದೇ ದಿನ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್

7 ಏರ್‌ಬ್ಯಾಗ್‌ಗಳು, ಅರೌಂಡ್ ವ್ಯೂ ಮಾನಿಟರ್ (ಎವಿಎಂ) ಜೊತೆಗೆ ಮೂವಿಂಗ್ ಆಬ್ಜೆಕ್ಟ್ ಡಿಟೆಕ್ಷನ್ (ಎಂಓಡಿ), ಬ್ರೇಕ್ ಲಿಮಿಟೆಡ್ ಸ್ಲಿಪ್ ಡಿಫರೆನ್ಷಿಯಲ್ (ಬಿಎಲ್ಎಸ್ಡಿ(, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್‌ (ಇ ಎಸ್ ಸಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್(ಟಿಸಿಎಸ್), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್ಎಸ್ಎ), ಎಬಿಡಿ ಜೊತೆಗೆ ಎಬಿಎಸ್, ಫ್ರಂಟ್ ಆಂಡ್ ರೇರ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು 4 ವೀಲ್ ಡಿಸ್ಕ್ ಬ್ರೇಕ್ ಗಳು ಮುಂತಾದ ಹಲವಾರು ಸುರಕ್ಷತಾ ಫೀಚರ್ ಗಳಿವೆ.

ಹೊಸ ಎಕ್ಸ್-ಟ್ರಯಲ್ ನಲ್ಲಿ ಲಭ್ಯವಿರುವ 12ವಿ ಎಎಲ್ಐಎಸ್ (ಸುಧಾರಿತ ಲೀಥಿಯಂ ಐಯಾನ್ ಬ್ಯಾಟರಿ ಸಿಸ್ಟಮ್) ಮೈಲ್ಡ್ ಹೈಬ್ರಿಡ್ ಸಿಸ್ಟಮ್, ಟಾರ್ಕ್ ಅಸಿಸ್ಟ್, ಹೆಚ್ಚುವರಿ ಐಡಲ್ ಸ್ಟಾಪ್, ಕ್ವಿಕ್ ರೀಸ್ಟಾರ್ಟ್ ಮತ್ತು ಕೋಸ್ಟಿಂಗ್ ಸ್ಟಾಪ್ ಫೀಚರ್ ಒದಗಿಸುತ್ತದೆ.

ಎಕ್ಸ್-ಟ್ರಯಲ್ ಷಾಂಪೇನ್ ಸಿಲ್ವರ್, ಪರ್ಲ್ ವೈಟ್ ಮತ್ತು ಡೈಮಂಡ್ ಬ್ಲ್ಯಾಕ್ ಎಂಬ ಮೂರು ಸೊಗಸಾದ ಬಣ್ಣಗಳಲ್ಲಿ ಲಭ್ಯವಿದೆ. ಬುಕಿಂಗ್‌ಗಳು ಜುಲೈ 26 ರಂದು ರಾಷ್ಟ್ರಾದ್ಯಂತ ಇರುವ ನಿಸ್ಸಾನ್ ಡೀಲರ್‌ಶಿಪ್‌ಗಳು ಮತ್ತು ನಿಸ್ಸಾನ್‌ನ ವೆಬ್‌ಸೈಟ್ ನಲ್ಲಿ https://book.Nissan.in/ ನಲ್ಲಿ ಪ್ರಾರಂಭವಾಗುತ್ತಿದೆ. ಎಕ್ಸ್-ಟ್ರಯಲ್ ಗಾಗಿ ಬುಕಿಂಗ್ ಮೊತ್ತ ರೂ. 100,000 ಆಗಿದೆ ಮತ್ತು ವಾಹನದ ಡೆಲಿವರಿ 2024ರ ಆಗಸ್ಟ್ ನಲ್ಲಿ ರಿಂದ ಪ್ರಾರಂಭವಾಗುತ್ತದೆ.

ನಿಸ್ಸಾನ್ ಇಂಡಿಯಾ ಆಪರೇಷನ್ಸ್ ಪ್ರೆಸಿಡೆಂಟ್ ಮತ್ತು ಎಎಂಐಇಓ ರೀಜನ್ ಬಿಸಿನೆಸ್ ಟ್ರಾನ್ಸ್‌ ಫಾರ್ಮೇಶನ್ ನ ಡಿವಿಷನಲ್ ವೈಸ್ ಪ್ರೆಸಿಡೆಂಟ್ ಫ್ರಾಂಕ್ ಟೊರೆಸ್, ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸಾ ಹರ್ಷ ವ್ಯಕ್ತ ಪಡಿಸಿದ್ದಾರೆ.

Exit mobile version